ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾದ ಟ್ರೇಲರ್ ಈಗಾಗಲೇ ರಿಲೀಸ್ ಆಗಿದ್ದು ಮಾಸ್ ಜೊತೆಗೆ ಸೆಂಟಿಮೆಂಟ್ ಕಥೆಯೂ ಸಿನಿಮಾದಲ್ಲಿ ಹೈಲೈಟ್ ಆಗಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. 2.27 ನಿಮಿಷದ ಟ್ರೇಲರ್ನಲ್ಲಿ ರಶ್ಮಿಕಾ ಮಂದಣ್ಣ ಅವರು ಕೆಲವೇ ಸೆಕೆಂಡ್ಗಳ ದೃಶ್ಯಕ್ಕೆ ಸೀಮಿತ ಆಗಿದ್ದು ಬೀಸ್ಟ್ಚಿತ್ರದಲ್ಲಿ ಪೂಜಾ ಹೆಗ್ಡೆಗೆ ಆದ ಕಥೆಯೇ ರಶ್ಮಿಕಾ ಮಂದಣ್ಣಗೂ ರಿಪೀಟ್ ಆಗುತ್ತಾ ಎಂಬುದು ಸದ್ಯದ ಕುತೂಹಲವಾಗಿದೆ.
ವಾರಿಸು ಸಿನಿಮಾ ರಶ್ಮಿಕಾ ಮಂದಣ್ಣ ಪಾಲಿಗೆ ತುಂಬಾನೇ ವಿಶೇಷವಾಗಿದ್ದು ದಳಪತಿ ವಿಜಯ್ ಜತೆ ನಟಿಸಬೇಕು ಎಂಬುದು ಅವರ ಕನಸಾಗಿತ್ತು. ಹೌದು ಆ ಕನಸು ಈ ಚಿತ್ರದ ಮೂಲಕ ಈಡೇರಿದೆ. ಹೀಗಾಗಿ ಅವರು ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು ಅವರ ಫ್ಯಾನ್ಸ್ ಕೂಡ ಈ ಸಿನಿಮಾಗಾಗಿ ಕಾದಿದ್ದಾರೆ. ಸದ್ಯ ಟ್ರೇಲರ್ ನೋಡಿದ ರಶ್ಮಿಕಾ ಫ್ಯಾನ್ಸ್ಗೆ ಬೇಸರ ಆಗಿದ್ದು ಕೆಲವೇ ಸೆಕೆಂಡ್ಗಳ ಗ್ಲಾಮರ್ ದೃಶ್ಯಕ್ಕೆ ರಶ್ಮಿಕಾ ಅವರನ್ನು ಸೀಮಿತ ಮಾಡಲಾಗಿದೆ.
ಕಳೆದ ವರ್ಷ ಏಪ್ರಿಲ್ 13ರಂದು ತೆರೆಗೆ ಬಂದ ದಳಪತಿ ವಿಜಯ್ ಸಿನಿಮಾ ಬೀಸ್ಟ್ ಗೆ ಪೂಜಾ ಹೆಗ್ಡೆ ನಾಯಕಿ ಆಗಿದ್ದರು. ಅವರನ್ನು ಸಿನಿಮಾದಲ್ಲಿ ಕೆಲವೇ ದೃಶ್ಯಗಳಿಗೆ ಸಿಮೀತ ಮಾಡಲಾಗಿದ್ದು ಟ್ರೇಲರ್ನಲ್ಲೂ ಅವರು ಕಾಣಿಸಿಕೊಂಡಿದ್ದು ಒಂದೇ ಒಂದು ದೃಶ್ಯದಲ್ಲಿ ಮಾತ್ರ.
ಈ ಕಾರಣಕ್ಕೆ ರಶ್ಮಿಕಾ ಫ್ಯಾನ್ಸ್ಗೆ ಈ ವಿಚಾರದಲ್ಲಿ ಆತಂಕ ಶುರುವಾಗಿದ್ದು ಸಿನಿಮಾದಲ್ಲಿ ಕೆಲವೇ ಕೆಲವು ನಿಮಿಷ ಮಾತ್ರ ರಶ್ಮಿಕಾ ಕಾಣಿಸಿಕೊಂಡರೆ ಗತಿಯೇನು ಎಂಬ ಪ್ರಶ್ನೆ ಮೂಡಿದೆ.ರಶ್ಮಿಕಾ ಮಂದಣ್ಣ ಅವರು ಸದ್ಯ ಸಾಕಷ್ಟು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. ವಾರಿಸು ಚಿತ್ರದಲ್ಲಿ ಅವರನ್ನು ಕೆಲವೇ ನಿಮಿಷಗಳ ದೃಶ್ಯಕ್ಕೆ ಸೀಮಿತ ಮಾಡಿದರೂ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ಸಿಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.