ವಾರ್ತಾ ಮಂಜರಿ
Trending Stories, Viral News, Gossips & Everything in Kannada

60ರ ವಯಸ್ಸಲ್ಲಿ ಶಿವಣ್ಣನ ಡಾನ್ಸ್ ನೋಡಿ…ಚಿಂದಿ ವಿಡಿಯೋ

1,911

ನಟ ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾ ಅದ್ಧೂರಿಯಾಗಿಯೂ ಹಾಗೂ ಭಿನ್ನವಾಗಿಯೂ ರಗಡ್ ಆಗಿಯೂ ಇರಲಿದೆ ಎಂಬುದು ಅಭಿಮಾನಿಗಳಿಗೆ ಖಾತ್ರಿಯಾಗಿದೆ. ಸದ್ಯ ಈಗಾಗಲೇ ವೇದಾ ಸಿನಿಮಾದ ವೆಪನ್ಸ್ ಆಫ್ ವೇದಾ ಹೆಸರಿನ ಟೀಸರ್ ಬಿಡುಗಡೆ ಆಗಿತ್ತು.

ಇನ್ನು ಸಿನಿಮಾದಲ್ಲಿ ಡೆಡ್ಲಿ ಆಯುಧಗಳು ಝಳಪಿಸಲಿವೆ ಎಂಬುದನ್ನು ಆ ಟೀಸರ್ ಹೇಳಿದ್ದು ಬಳಿಕ ವೇದಾ ಸಿನಿಮಾದ ಹಾಡೊಂದು ಬಿಡುಗಡೆ ಆಗಿ ಮೆಚ್ಚುಗೆ ಗಳಿಸಿತ್ತು. ಸದ್ಯ ಇದೀಗ ಹೊಸದೊಂದು ಟೀಸರ್ ಬಿಡುಗಡೆ ಆಗಿದೆ. ವೇದ ಸಿನಿಮಾದ ಎರಡನೇ ಟೀಸರ್ ಇದಾಗಿದ್ದು ಇನ್ನು ವೇದ ಸಿನಿಮಾ ಭಿನ್ನವಾಗಿಯೂ ಕತೆ ಭೀಕರವಾಗಿಯೂ ಶಿವಣ್ಣ ರಗಡ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಈ ಟೀಸರ್ ನೋಡಿದರೆ ತಿಳಿಯುತ್ತದೆ.

ಇನ್ನು ಈ ಟೀಸರ್ ಅಭಿಮಾನಿಗಳನ್ನು ತುಸು ಗೊಂದಲಕ್ಕೂ ನೂಕಿದ್ದು ವೇದ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆದಾಗ ಇದೊಂದು ರಿವೇಂಜ್ ಕತೆಯುಳ್ಳ ಸಿನಿಮಾ ಎಂದುಕೊಂಡಿದ್ದರು. ಹೌದು ಆದರೆ ಈಗ ಬಿಡುಗಡೆ ಆಗಿರುವ ಟೀಸರ್‌ನಿಂದ ವೇದ ಅತಿಮಾನುಷ ಕತೆಯುಳ್ಳ ಸಿನಿಮಾ ಇರಬಹುದೆಂಬ ಅನುಮಾನ ಮೂಡಿದ್ದು ವೆಪನ್ಸ್ ಆಫ್ ವೇದ ಟೀಸರ್ ಬಿಡುಗಡೆ ಆಗಿದ್ದಾಗ ಈ ಸಿನಿಮಾದ ಮೇಲೆ ತಮಿಳಿನ ಅಸುರನ್ ಸಿನಿಮಾದ ಛಾಯೆ ಇರುವುದಾಗಿ ಕೆಲವರು ಅನಿಸಿಕೆ ವ್ಯಕ್ತಪಡಿಸಿದ್ದರು.

ಹೌದು ಆದರೆ ಈ ಹೊಸ ಟೀಸರ್ ಬಿಡುಗಡೆ ಆದ ಬಳಿಕ ಅದು ಸುಳ್ಳಾಗಿದ್ದು ಸದ್ಯ ಇದೀಗ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದ್ದು ಸಿನಿಮಾವು ಡಿಸೆಂಬರ್ 23 ರಂದು ರಾಜ್ಯದಾದ್ಯಂತ ತೆರೆಗೆ ಬರಲಿದೆ.

ಇನ್ನು ವೇದ ಸಿನಿಮಾ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು ಇದು ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾ ಆಗಿದ್ದು ಸಿನಿಮಾವನ್ನು ಶಿವರಾಜ್ ಕುಮಾರ್ ಅವರ ಹೋಂ ಪ್ರೊಡಕ್ಷನ್‌ನ ಮೊದಲ ಸಿನಿಮಾವಾಗಿದೆ. ವೇದ ಸಿನಿಮಾವನ್ನು ಗೀತಾ ಪ್ರೊಡಕ್ಷನ್ ವತಿಯಿಂದ ನಿರ್ಮಾಣ ಮಾಡಲಾಗುತ್ತಿದ್ದು ಸಿನಿಮಾಕ್ಕೆ ಶಿವಣ್ಣನ ನಂಬಿಕಸ್ಥ ನಿರ್ದೇಶಕರಲ್ಲೊಬ್ಬರಾದ ಹರ್ಷಾ ನಿರ್ದೇಶನ ಮಾಡಿದ್ದಾರೆ.

ಇನ್ನು ವೇದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಗಾನವಿ ಲಕ್ಷ್ಮಿ ನಟಿ ಉಮಾಶ್ರೀ ಶ್ವೇತಾ ಚೆಂಗಪ್ಪ ಅದಿತಿ ಸಾಗರ್ ವೀಣಾ ಪೊನ್ನಪ್ಪ ಸಾಗರ್ ಶಿವಮೊಗ್ಗ ಇನ್ನಿತರರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಸದ್ಯ ಸಿನಿಮಾದ ಟೀಸರ್ ರಿಲೀಸ್ ಈವೆಂಟ್ ನಲ್ಲಿ ಶಿವಣ್ಣನ ಎನರ್ಜಿ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಹೌದು ಯುವರಾಜ ಚಿತ್ರದ ಮಿಸ್ಸಮ್ಮ ಹಾಡನ್ನು ಹಾಡುತ್ತ ಶಿವಣ್ಣ ಕುಣಿದಿದ್ದು ಈ ವಯ್ಯಸ್ಸಿನಲ್ಲೂ ಅವರ ಎನರ್ಜಿ ನೋಡಿ ಯುವಕರು ನಾಚಬೇಕು ಎನ್ನಬಹುದು.