ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದು ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಂತೆ ಬ್ಯಾಕ್ ಟು ಬ್ಯಾಕ್ ಸೆಲ್ಫೀ ಶೇರ್ ಮಾಡಿಕೊಳ್ಳುತ್ತಾರೆ ಎನ್ನಬಹುದು.
ಹೌದು ರಚ್ಚು ಇನ್ಸ್ಟಾಗ್ರಾಂ ಖಾತೆಯಲ್ಲಿ ನೀವು ಗಮನಿಸಿದರೆ ಸೆಲ್ಫಿ ಫೋಟೋ ಹೆಚ್ಚಿರುತ್ತದೆ ಇಲ್ಲವಾದರೆ ಸಾಯಿ ಬಾಬ ಫೋಟೋಗಳು ಇರುತ್ತವೆ. ಇನ್ನು
ಸೆಲ್ಫೀ ಮಾತ್ರವಲ್ಲ ಅದೆಷ್ಟೋ ಮಿರರ್ ಫೋಟೋ ಮತ್ತು ಹಾಡುಗಳಿಗೆ ರಚ್ಚು ಹೆಜ್ಜೆ ಹಾಕಿದ್ದಾರೆ. ಪ್ರತಿಯೊಂದು ಫೋಟೋದಲ್ಲೂ ಡಿಫರೆಂಟ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಕಳೆದ ವರುಷ ನಡೆದ ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ರಚಿತಾ ರಾಮ್ ರವರು ಆಯುಷ್ಮಾನ್ ಭವ ಚಿತ್ರಕ್ಕೆ ಬೆಸ್ಟ್ ನಟಿ 2019 ಪ್ರಶಸ್ತಿ ಗೆದ್ದಿದ್ದಾರೆ. ಮಾನ್ಸೂನ್ ರಾಗ ವೀರಂ ಲವ್ ಯು ರಚ್ಚು ಏಪ್ರಿಲ್ ಲಿಲ್ಲಿ ಬ್ಯಾಡ್ ಮ್ಯಾನರ್ಸ್ ಶಬರಿ ಸರ್ಚಿಂಗ್ ಫಾರ್ ರಾವಣ ಲವ್ ಮಿ ಆರ್ ಹೇಟ್ ಮಿ ಪಂಕಜ ಕಸ್ತೂರಿ ಸೇರಿದಂತೆ ಇನ್ನೂ ಹೆಸರಿಡದ ಸಿನಿಮಾಗಳ ಚಿತ್ರೀಕರಣ ಮಾಡುತ್ತಿದ್ದಾರೆ. ಇನ್ನು ನಟಿ ರಚಿತಾ ರಾಮ್ ಅಂದಾಕ್ಷಣ ನೆನಪಾಗೋದು ಆ ಡಿಂಪಲ್ ಕೆನ್ನೆ ಕ್ಯೂಟ್ ಸ್ಮೈಲ್. ಹೌದು ಈ ಮುದ್ದು ಮುಖದ ಚೆಲುವೆ ಸದ್ಯ ಸಿನಿಮಾ ಮಾತ್ರವಲ್ಲದೇ ಕಿರುತೆರೆ ಲೋಕದಲ್ಲಿಯೂ ಮಿಂಚುತ್ತಿದ್ದಾರೆ.
ಸದ್ಯ ರಿಯಾಲಿಟಿ ಶೋಗಳಲ್ಲಿ ನಟಿ ರಚಿತಾ ರಾಮ್ ಫುಲ್ ಬ್ಯುಸಿಯಾಗಿದ್ದು ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ರವರ ಕೈ ತುಂಬಾ ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದು ಫುಲ್ ಬ್ಯುಸಿಯಾಗಿರುವ ನಟಿ ಎನ್ನಬಹುದು. ಇನ್ನು ಈ ವರ್ಷ ರಚಿತಾ ಅವರ ನಟನೆಯ ಹಲವು ಸಿನಿಮಾಗಳು ತೆರೆಕಾಣಲಿದ್ದು ಮಾನ್ಸೂನ್ ರಾಗ ಸಿನಿಮಾದ ಇದೀಗ ಎಲ್ಲರ ಮನಗೆದ್ದಿದ್ದಾರೆ.
ಸ್ಟಾರ್ ನಟರ ಜೊತೆ ಅಭಿನಯಿಸಿರುವ ರಚಿತಾ ರಾಮ್ ಅವರ ಬಹುತೇಕ ಸಿನಿಮಾಗಳು ಹಿಟ್ ಆಗಿದ್ದು ರಚ್ಚು ಲುಕ್ಗೆ ಫಿದಾ ಆಗದವರಿಲ್ಲ ಎನ್ನಬಹುದು. ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುವ ರಚಿತಾ ರಾಮ್ ರವರು ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿರುವ ನಟಿಯಾಗಿದ್ದಾರೆ.
ಮಜಾಭಾರತ ಡ್ಯಾನ್ಸ್ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ನಲ್ಲಿ ಜಡ್ಜ್ ಆಗಿರುವ ರಚಿತಾ ಟ್ರೆಡಿಷನಲ್ ಲುಕ್ನಲ್ಲಿ ಮದುಮಗಳಂತೆ ಕಾಣುತ್ತಿದ್ದು ಇತ್ತೀಚೆಗಷ್ಟೇ ಕೆಂಪು ರೇಷ್ಮೆ ಸೀರೆಯುಟ್ಟು ಮದುಮಗಳಂತೆ ರಚ್ಚು ಮಿಂಚಿದ್ದು ರಚಿತಾ ರಾಮ್ ಅವರ ಈ ಸುಂದರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.
ಈ ನಡುವೆ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಇಲ್ಲಿ ರಚಿತಾ ವಿಶೇಷ ಹಾಡಿಗೆ ನೃತ್ಯ ಮಾಡಿದ್ದಾರೆ. ಹೌದು ಮಾನ್ಸೂನ್ ರಾಗ ಸಮಯದಲ್ಲಿ ಸೀರೆಯುಟ್ಟು ರಚಿತಾ ನೃತ್ಯ ಮಾಡಿದ್ದು ಇದೀಗ ವೈರಲ್ ಆಗುತ್ತಿದೆ. ಸದ್ಯ ವಿಡಿಯೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ.