ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಜರ್ಮನಿಯಿಂದ ನೇರವಾಗಿ ಸಮಾಧಿ ಬಳಿ ಬಂದ ಅಪ್ಪು ಮಗಳು…ವಿಡಿಯೋ

19,391

ನಮ್ಮ ಚೆಂದನವನದ ಪವರ್ ಎಂದರೆ ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಎನ್ನಬಹುದು. ಇನ್ನು ಇವರನ್ನು ಯೂತ್ ಐಕಾನ್ ಎಂದು ಕೂಡ ಕರೆಯಾಗುತ್ತಿತ್ತು. ಹೌದು ಅವರ ತಂದೆ ವರನಟ ರಾಜಕುಮಾರ್ ಅವರಂತೆಯೇ ಒಳ್ಳೆಯ ಹೃದಯವಂತರು ಕೂಡ ಆಗಿ ತಮ್ಮ ವ್ಯಕ್ತಿತ್ವದಿಂದ ಎಲ್ಲರ ಗಮನ ಸೆಳೆದಿದ್ದರು. ಇನ್ನು ಇತರರನ್ನು ಪ್ರೋತ್ಸಾಹ ನೀಡಿ ಬೆಳೆಸುವ ಗುಣ ಒಳ್ಳೆಯ ವಿಷಯಕ್ಕೆ ಕೂಡ ಪ್ರೋತ್ಸಾಹ ನೀಡುತ್ತಿದ್ದ ದೊಡ್ಮನೆ ಹುಡುಗನ ಈ ವ್ಯಕ್ತಿತ್ವಕ್ಕೆ ಪ್ರತಿಯೊಬ್ಬರು ಕೂಡ ಫಿದಾ ಆಗಿದ್ದರು ಎನ್ನಬಹುದು.

ಇನ್ನು ಪುನೀತ್ ರಾಜಕುಮಾರ್ ರವರು ತಮ್ಮ ಪತ್ನಿಯನ್ನು ಮೊದಲೇ ಪ್ರೀತಿಸುವ ವಿಷಯವನ್ನೂ ಮನೆಯಲ್ಲಿ ಹೇಳಲು ಬಹಳ ಕಷ್ಟ ಪಟ್ಟಿದ್ದು ಬಳಿಕ ಹೇಗೋ ಬಹಳ ಧೈರ್ಯ ಮಾಡಿ ಮನೆಯಲ್ಲಿ ತಂದೆ ರಾಜಕುಮಾರ್ ಅವರ ಬಳಿ ಹೇಳಿದ್ದಾರೆ. ಅದಕ್ಕೆ ರಾಜಕುಮಾರ್ ಅವರು ಆಯಿತು ನಿನ್ನ ತಾಯಿಯ ಬಳಿ ಹೇಳು ಎಂದು ಸೂಚನೆ ನೀಡಿದ್ದು ಬಳಿಕ ಪುನೀತ್ ರಾಜಕುಮಾರ್ ಅವರು ಭಯದಿಂದಲೇ ತಮ್ಮ ತಾಯಿ ಪಾರ್ವತಮ್ಮ ಅವರ ಬಳಿ ಕೂಡಾ ಹೇಳಿ ಅವರ ಒಪ್ಪಿಗೆ ಪಡೆದ ಬಳಿಕ ಡಿಸೆಂಬರ್ 1 1999 ರಲ್ಲಿ ಅಶ್ವಿನಿ ಅವರ ಜೊತೆಗೆ ವಿವಾಹವಾಗುತ್ತಾರೆ.

ದಾಂಪತ್ಯ ಜೀವನದಲ್ಲಿ ಬಹಳ ನೆಮ್ಮದಿಯಾಗಿದ್ದ ಅಪ್ಪು ಇದೀಗ ಪತ್ನಿ ಮಕ್ಕಳನ್ನು ಒಬ್ಬಂಟಿ ಮಾಡಿ ಹೊರಟು ಹೋಗಿದ್ದಾರೆ. ಇನ್ನು ಅಪ್ಪು ರವರಿಗೆ ಇಬ್ಬರೂ ಹೆಣ್ಣು ಮಕ್ಕಳಿದ್ದು ಮೊದಲ ಮಗಳ ಹೆಸರು ಧೃತಿ ಹಾಗೂ ಎರಡನೇ ಮಗಳ ಹೆಸರು ವಂದಿತ. ದೊಡ್ಡ ಸ್ಟಾರ್ ನಟರ ಮಕ್ಕಳು ಎಂಬ ಮನೋಭಾವ ಇಲ್ಲದೆಯೇ ತುಂಬಾ ಶಿಸ್ತಿನಿಂದ ತಮ್ಮ ಮಕ್ಕಳನ್ನು ಪುನೀತ್ ಅಶ್ವಿನಿ ಅವರು ಬೆಳೆಸಿದ್ದು ಸಾಮಾನ್ಯವಾಗಿ ಪುನೀತ್ ರಾಜಕುಮಾರ್ ಅವರ ಇಬ್ಬರೂ ಹೆಣ್ಣು ಮಕ್ಕಳು ಕೂಡ ಕ್ಯಾಮೆರಾ ಕಣ್ಣಿಗೆ ಬೀಳುವುದು ಬಹಳ ಅಪರೂಪ.

ಥೇಟ್ ತಮ್ಮ ತಾಯಿ ಅಶ್ವಿನಿ ಅವರ ಹಾಗೇಯೇ ಎನ್ನಬಹುದು. ಇನ್ನು ಓದಿನ ಕಡೆಗೆ ಹೆಚ್ಚು ಗಮನ ನೀಡುತ್ತಿರುವ ದೃತಿ ಹಾಗೂ ವಂದಿತ ಗೆ ರಾಘವೇಂದ್ರ ರಾಜ್ ಕುಮಾರ್ ರವರ ಮಗ ವಿನಯ್ ರಾಜಕುಮಾರ್ ಎಂದರೆ ತುಂಬಾ ಬಹಳ ಪ್ರೀತಿ. ಸದ್ಯ ಧೃತಿ ಹಾಗೂ ವಿನಯ್ ರಾಜ್ ಕುಮಾರ್ ರವರ ನಡುವಿನ ಭಾಂಧವ್ಯ ಸಾರುವ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ.

ರಾಜನಿಲ್ಲದ ರಾಜ್ಯಕ್ಕೆ ಒಂದು ವರುಷ. ಅಪ್ಪು ಅವರನ್ನು ನಾವು ಕಳೆದುಕೊಂಡು ಒಂದು ವರುಷ ಆಗಿದೆ. ನಿಜಕ್ಕೂ ಕೂಡ ಯಾರಿಂದಲೂ ಊಹೆ ಮಾಡುವುದಕ್ಕೂ ಸಹ ಸಾಧ್ಯವಾಗುತ್ತಿಲ್ಲ ಅಪ್ಪು ಅವರನ್ನು ಕಳೆದುಕೊಂಡು ನಾವು ಒಂದು ವರುಷ ಆಯ್ತಾ ಎಂದು. ನೆನ್ನೆ ಮೊನ್ನೆ ಅಷ್ಟೇ ಅವರನ್ನು ಕಳೆದುಕೊಂಡವೇನೋ ಎಂಬ ರೀತಿಯಲ್ಲಿ ನಮ್ಮ ಮನಸ್ಸಿಗೆ ಭಾಸವಾಗುತ್ತದೆ ಎನ್ನಬಹುದು.

ಹೌದು ಅಪ್ಪು ಅವರು ನಮ್ಮನ್ನು ಶಾರೀರಿಕವಾಗಿ ಮಾತ್ರ ಬಿಟ್ಟು ಹೋಗಿದ್ದಾರೆ ಎಂದನಿಸುತ್ತದೆ. ಇನ್ನು ಎಷ್ಟೋ ಕ್ಷಣದಲ್ಲಿ ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಬದಲಿಗೆ ನಮ್ಮೊಟ್ಟಿಗೆ ಇದ್ದಾರೆ ಅನಿಸುತ್ತದೆ. ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಆಗಿರಬಹುದು ಸಾರ್ವಜನಿಕ ಸ್ಥಳ ಆಗಿರಬಹುದು ಧಾರ್ಮಿಕ ಕ್ಷೇತ್ರ ಆಗಿರಬಹುದು ಎಲ್ಲಾ ಕಡೆಯಲ್ಲೂ ಸಹ ಅಪ್ಪು ಅವರ ಫೋಟೋಗಳು ರಾರಾಜಿಸುತ್ತಿವೆ.

ಇದನ್ನು ನೋಡುದರೆ ಅಪ್ಪು ಅವರು ಯಾವುದೋ ಪ್ರಚಾರ ಮಾಡುತ್ತಿದ್ದಾರೆ ಅಥವಾ ಅಪ್ಪು ಅವರ ಯಾವುದೋ ಸಿನಿಮಾ ಪ್ರಸಾರವಾಗುತ್ತಿದೆ ಎಂಬ ರೀತಿಯಲ್ಲಿ ನಮಗೆ ಅನಿಸುತ್ತದೆ ಅಲ್ಲವೇ? ಹೌದು ನಿಜಕ್ಕೂ ಕೂಡ ಇದು ಭಾವಪೂರ್ಣ ಶ್ರದ್ಧಾಂಜಲಿಯ ಫೋಟೋ ಎಂದು ಅನಿಸುವುದಿಲ್ಲ ಬದಲಾಗಿ ಅಪ್ಪು ಅವರನ್ನು ನಾವು ಸ್ವಾಗತ ಮಾಡುತ್ತಿದ್ದೇನೆ ಎಂಬ ರೀತಿಯಲ್ಲಿ ಅನಿಸುತ್ತದೆ.

ಆದರೂ ಕೂಡ ಅಪ್ಪು ಶಾರೀರಿಕವಾಗಿ ನಮ್ಮ ಜೊತೆ ಇಲ್ಲ ಎಂಬ ವಾಸ್ತವವನ್ನು ನಾವು ಅರಿತುಕೊಳ್ಳಲೇಬೇಕು. ಸದ್ಯ ಅಪ್ಪು ಆಗಲಿ ಒಂದು ವರುಷ ಆಗಿದ್ದು ಈ ಕಾರಣಕ್ಕಾಗಿ ದೊಡ್ಡ ಮನೆಯ ಸದಸ್ಯರೆಲ್ಲರೂ ಕೂಡ ಕಂಠೀರವ ಸ್ಟುಡಿಯೋಗೆ ಹೋಗಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಬಂದಿದ್ದಾರೆ. ಸದ್ಯ ಈ ವೇಳೆ ಧೃತಿ ಭಾವುಕರಾಗಿ ಮಾತನಾಡಿಕೊಂಡಿರುವ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕೆಳಗಿನ ವಿಡಿಯೋದಲ್ಲಿ ನೀವೆ ನೋಡಿ.