ರಂಗಶಂಕರ ನಾಟಕೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಅರುಂಧತಿ ನಾಗ್ ಕಾರ್ಯಕ್ರಮದ ಕುರಿತು ಮಾತನಾಡಿದ ಬಳೀ ಅದೇ ದಿನ ನಡೆಯುತ್ತಿದ್ದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನದ ಕುರಿತು ಮಾತನಾಡಿ ಎಂದು ಪತ್ರಕರ್ತರೋರ್ವರು ಪ್ರಶ್ನೆಯನ್ನು ಇಟ್ಟಿದ್ದು ಈ ಕುರಿತು ನಗುಮೊಗದಿಂದ ಉತ್ತರಿಸಿದ ಅರುಂಧತಿ ನಾಗ್ ತುಂಬಾ ಸಂತೋಷವಾಗುತ್ತಿದೆ ಅಪ್ಪು ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ಆತ ಅತ್ಯದ್ಭುತ ವ್ಯಕ್ತಿ. ಯುವಕರಲ್ಲಿ ಚೈತನ್ಯ ತುಂಬಿದ್ದಂತಹ ಅಪ್ಪು ಚಿಕ್ಕ ವಯಸ್ಸಿನಲ್ಲಿಯೇ ದೂರವಾದದ್ದು ಮೋಸ ಎನಿಸುತ್ತೆ ಎಂದರು.
ಪುನೀತ್ ರಾಜ್ ಕುಮಾರ್ ಹಾಗೂ ಶಂಕರ್ ನಾಗ್ ಅವರು ಕಿರಿಯ ವಯಸ್ಸಿನಲ್ಲಿಯೇ ಅಗಲಿಕೆ ಹೊಂದಿದ್ದರ ಕುರಿತು ಬೇಸರ ವ್ಯಕ್ತಪಡಿಸಿದರು. ಪುನೀತ್ ಆಗಲಿ ಹಾಗೂ ಶಂಕರ್ ನಾಗ್ ಆಗಲಿ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನು ಬಿಟ್ಟು ಹೋದರು ಹಾಗೂ ಅದು ಶಾಪ ಎಂದು ಅರುಂಧತಿ ನಾಗ್ ಹೇಳಿದರು. ಈ ವೇಳೆ ಪತಿಯನ್ನು ನೆನಪಿಸಿಕೊಂಡ ಅವರು ಶಂಕರ್ ನೆನಪಿನಲ್ಲಿ ನಾನು ರಂಗ ಶಂಕರ ಎನ್ನುವ ಥಿಯೇಟರ್ ಕಟ್ಟಿದ್ದು ನಾನು ನಾಟಕದವಳು ಶಂಕರ್ ಸಿನಿಮಾಗಳನ್ನು ಹೆಚ್ಚು ಮಾಡಿದವನು.
ಹೌದು ಕರ್ನಾಟಕಕ್ಕೆ ಕನ್ನಡ ಸಿನಿಮಾ ರಂಗಕ್ಕೆ ತುಂಬಾ ದೊಡ್ಡ ಕೊಡುಗೆ ಕೊಟ್ಟು ಹೋಗಿದ್ದು ಅವನು ಬದುಕಿದ್ದ ಚಿಕ್ಕ ಕಾಲವಧಿಯಲ್ಲಿ ಕನ್ನಡ ಇಂಡಸ್ಟ್ರಿ ಸೇವೆ ಮಾಡಿದ್ದಾನೆ. ಹೌದಯ ಅವನು ಹೋದಾಗ ಅವನಿಗೆ 36 ವರ್ಷ ಕೂಡ ತುಂಬಿರಲಿಲ್ಲ. ಕರ್ನಾಟಕಕ್ಕಾಗಿ ತುಂಬಾ ಕನಸುಗಳನ್ನು ಇಟ್ಟುಕೊಂಡಿದ್ದ. ನನಗೆ ನೆನಪಿದೆ. ಮೆಟ್ರೋ ರೈಲು ಮಾಡ್ಬೇಕು ಎನ್ನುವ ಕನಸಿದ್ದು ಅದಕ್ಕಾಗಿ ಅವನು ಆ ಕಾಲಕ್ಕೆ ಎಸ್ ಆರ್ ಬೊಮ್ಮಾಯಿ ಜೊತೆಗೆ ಮೆಟ್ರೋ ರೈಲು ಅವರ ಜೊತೆಗೆ ಮಾತನಾಡಿಲಿಕ್ಕೆ ಲಂಡನ್ ಗೆ ಕೂಡ ಹೋದ.
ಆ ಸಮಯದಲ್ಲಿ ಸ್ವತಃ ಖರ್ಚು ಮಾಡಿಕೊಂಡು ಹೋಗಿದ್ದು ನಾನು ಆಗ ಅವನ ಹತ್ತಿರ ಕೇಳಿದ್ದೆ ನಿನ್ನ ಹತ್ರ ಹಣ ಜಾಸ್ತಿ ಆಗಿದ್ಯಾ? ನೀನು ಯಾಕೆ ಖರ್ಚು ಮಾಡಿಕೊಂಡು ಹೋಗ್ತಿಯಾ. ಅದಕ್ಕೆ ಅವನು ನನಗೆ ಒಂದೇ ಉತ್ತರ ಕೊಟ್ಟಿದ್ದು ನಾನು ಸಂಪಾದನೆ ಮಾಡಿರುವ ಹೆಸರು ನಾನಿವತ್ತು ಏನಿದೆನೋ ಅದು ಈ ಕನ್ನಡ ನಾಡಿನಿಂದ ಈ ಸಿನಿಮಾ ಇಂಡಸ್ಟ್ರಿಯಿಂದ ಕರ್ನಾಟಕದಿಂದ ಕರ್ನಾಟಕಕೋಸ್ಕರ ಬೆಂಗಳೂರಿಗೋಸ್ಕರ ನಾನು ಇಷ್ಟು ಮಾಡುವುದಕ್ಕೆ ಆಗಲ್ವಾ? ಸ್ವಂತ ಟಿಕೆಟ್ ಕೊಂಡು ಲಂಡನ್ ಗೆ ಹೋಗುವುದಕ್ಕೆ ಆಗಲ್ವಾ ಅಂತ ಒಂದು ಮಾತು ಹೇಳಿದ್ದ ಎಂದು ಅರುಂಧತಿ ನಾಗ್ ಹೇಳಿದ್ದಾರೆ.
ಆ ರೀತಿಯ ಚಿಂತನೆ ಹಾಗೂ ಬುದ್ದಿ ಇದ್ದ ಹುಡುಗ ಈಗ ನಮ್ಮಲಿಲ್ಲ. ಹೌದು ಅಷ್ಟೇ ಅವನು ಕೇಳಿಕೊಂಡು ಬಂದಿದ್ದು ನಾವು ಅಷ್ಟೇ ಕೇಳಿಕೊಂಡು ಬಂದಿದ್ದು. ಆದರೆ ಇವತ್ತಿನ ಯುವ ಪೀಳಿಗೆಗೆ ಅವನು ಮಾದರಿಯಾಗಿದ್ದಯ ಯುವ ಪೀಳಿಗೆಗೆ ನಾನು ಹೇಳುವುದು ಒಂದೇ ಅವನನ್ನು ನೆನಪಿನಲ್ಲಿಟ್ಟು ಕೊಂಡು ಕೆಲಸ ಮಾಡಿ. ಹೌದು ಕರ್ನಾಟಕಕ್ಕಾಗಿ ಕೆಲಸ ಮಾಡಿ ಏನೇ ಮಾಡಿದರು ಕೂಡ ಅದನ್ನು ಅಚ್ಚುಕಟ್ಟಾಗಿ ಮಾಡಿ. ಕರ್ನಾಟಕದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀವು ಮಾಡಿರುವ ಕೆಲಸಕ್ಕೆ ಗುರುತು ಬಿಟ್ಟು ಹೋಗಿ ಅಷ್ಟೇ.
ಮನುಷ್ಯನ ಜೀವನ ಅಷ್ಟೇ ಎಂದಿದ್ದಾರೆ ಅರುಂಧತಿ ನಾಗ್. ಕೊನೆಗೆ ಅಪ್ಪುವಿನ ಬಗ್ಗೆ ಮಾತನಾಡಿದ್ದು ಪುನೀತ್ ನನ್ನ ಕಣ್ಮುಂದೆ ಬೆಳೆದ ಹುಡುಗ. ಚಿಕ್ಕ ವಯಸ್ಸಿನಲ್ಲಿ ಅವರನ್ನು ಕಳೆದುಕೊಂಡಿದ್ದು ಸಹಿಸಲು ಕಷ್ಟವಾಗುತ್ತದೆ. ಪುನೀತ್ ಶಂಕರ್ ಸೇರಿದಂತೆ ಅನೇಕರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದ್ದು ಇದು ಶಾಪ ಎಂದು ಹೇಳಿದರು. ಅವರಿಗೆ ಕರ್ನಾಟಕ ರತ್ನ ನೀಡುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಕೂಡ ಹೇಳಿದ್ದಾರೆ.