2017 ರಲ್ಲಿ ಬಿಡುಗಡೆಯಾದ ಒಂದು ಮೊಟ್ಟೆಯ ಕಥೆ ಚಿತ್ರವನ್ನು ಮರೆಯಲು ಸಾಧ್ಯವೇ? ಬೋಡು ತಲೆಯನ್ನು ಇಟ್ಟುಕೊಂಡು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ವಿಭಿನ್ನ ಶೈಲಿಯ ನಟನೆ ಮತ್ತು ಹಾಸ್ಯ ಪ್ರಜ್ಞೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ರಾಜ್ ಬಿ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ನಟ ನಿರ್ದೇಶಕ ಮತ್ತು ಚಿತ್ರ ಕಥೆಗಾರನಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ.
ಮೂಲತಃ ಮಂಗಳೂರಿನವರಾದ ರಾಜ್ ಬಿ ಶೆಟ್ಟಿ ತಮ್ಮ ವೃತ್ತಿ ಜೀವನವನ್ನು 92.7 ಬಿಗ್ ಎಫ್ ಎಮ್ ನಲ್ಲಿ ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸುತ್ತಾರೆ. ನಂತರ ಕೆಲವೊಂದು ನಾಟಕಗಳನ್ನು ಮಾಡುತ್ತಿದ್ದ ಇವರು ನಾಟಕದ ಜೊತೆಗೆ ಕಿರುಚಿತ್ರಗಳನ್ನು ಕೂಡ ಪ್ರಾರಂಭಿಸುತ್ತಾರೆ. ಹೀಗೆ ಒಮ್ಮೆ ಅವರ ಹೊಸ ಕಿರುಚಿತ್ರಕ್ಕಾಗಿ ತಯಾರಿ ನಡೆಸುತ್ತಿರುವಾಗ ನಿರ್ದೇಶಕ ಸುಹಾನ್ ಪ್ರಸಾದ್ ಅವರನ್ನು ಭೇಟಿಯಾಗಿ ತಮ್ಮ ಚಿತ್ರಕತೆಯನ್ನು ಅವರಿಗೆ ತಿಳಿಸುತ್ತಾರೆ.
ಹೌದು ಈ ಕಥೆಯನ್ನು ಕೇಳಿದ ಅವರು ಇದನ್ನು ಕಿರುಚಿತ್ರ ಮಾಡುವುದಕ್ಕಿಂತ ದೊಡ್ಡ ಚಿತ್ರವೇ ಮಾಡೋಣ ಚಿತ್ರಕ್ಕೆ ನಾನು ಬಂಡವಾಳ ಹೂಡುತ್ತೇನೆ ಎಂದು ಹೇಳುತ್ತಾರೆ. ಹೌದು ಒಂದು ಮೊಟ್ಟೆಯ ಕಥೆ ಸಿನಿಮಾವು ಮೊದಲು ಕಿರುಚಿತ್ರವಾಗಿ ತಯಾರಾಗಿತ್ತು ಆದರೆ ಈ ಕಥೆಯನ್ನು ಕೇಳಿದ ಸುಹಾನ್ ಪ್ರಸಾದ್ ಅವರು ಕತೆಯಿಂದ ಪ್ರಭಾವಿತರಾಗಿ ದೊಡ್ಡ ಸಿನಿಮಾವನ್ನೆ ಮಾಡೋಣ ಎಂದು ನಿರ್ಧರಿಸುತ್ತಾರೆ.
ನಂತರ ಸಿನಿಮಾ ಚಿತ್ರೀಕರಣ ಮುಗಿದ ಮೇಲೆ ಕನ್ನಡದ ಖ್ಯಾತ ನಿರ್ದೇಶಕ ಪವನ್ ಕುಮಾರ್ ಅವರು ಚಿತ್ರಕ್ಕೆ ಸಹಕರಿಸಿದ ನಂತರ ಈ ಚಿತ್ರವು ಹೊಸ ಆಕಾರವನ್ನು ಪಡೆದುಕೊಂಡು ವಿಶ್ವಾದ್ಯಂತ ಬಿಡುಗಡೆಯಾಗುತ್ತದೆ. ಈ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುವುದರ ಜೊತೆಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಫಿಲಂಫೇರ್ ಪ್ರಶಸ್ತಿ ಹಾಗೂ ರಾಜ್ ಬಿ ಶೆಟ್ಟಿ ಅವರಿಗೆ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಕೂಡ ದೊರೆಯುತ್ತದೆ.
ಒಬ್ಬ ನಟನಾಗಲು ದೇಹಾಕಾರ ಸೌಂದರ್ಯವಿರ ಬೇಕು ಎಂಬುದನ್ನು ಸುಳ್ಳು ಮಾಡಿದವರು ರಾಜ್ ಬಿ ಶೆಟ್ಟಿ. ಹೌದು ಒಂದು ಮೊಟ್ಟೆಯ ಕತೆ ಸಿನಿಮಾದ ನಂತರ ಕನ್ನಡದಲ್ಲಿ ಬಹುಬೇಡಿಕೆಯ ನಟರಾದ ಇವರು ಅಮ್ಮಾಚಿ ಎಂಬ ನೆನಪು ಮಹಿರಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಕಥಾ ಸಂಗಮ, ಮಾಯಾ ಬಜಾರ್ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶವನ್ನು ಗಿಟ್ಟಿಸಿಕೊಂಡು ಪ್ರೇಕ್ಷಕರನ್ನು ನಗೆಗಡಲಲ್ಲಿ ಸೇರಿಸುವಲ್ಲಿ ಯಶಸ್ವಿಯಾದರು ನಂತರ ಗರುಡ ಗಮನ ವೃಷಭ ವಾಹನ ಚಿತ್ರವನ್ನು ನಿರ್ದೇಶಿಸಿ ನಟಿಸಿ ಯಾವ ಮಟ್ಟಕ್ಕೆ ಸದ್ದು ಮಾಡದರು ಎಂಬುದು ತಮಗೆ ತಿಳಿದಿದೆ.
ಇನ್ನು ಕನ್ನಡ ಸಿನಿಮಾಗಳು ಈಗ ಕರ್ನಾಟಕದಲ್ಲಿ ಮಾತ್ರ ಅಲ್ಲ. ವಿಶ್ವವೇ ಮಾತನಾಡುವಂತೆ ಆಗಿದೆ. ಅದರಲ್ಲೂ KGF 2 ಭರ್ಜರಿ ಹವಾ ಸೃಷ್ಟಿಸಿತ್ತು. ಎಲ್ಲೆಡೆ ಅದರ ಬಗ್ಗೆಯೇ ಮಾತನಾಡುತ್ತಿದ್ರು. ಆ ರೀತಿ ಮಟ್ಟಿಗೆ ಕನ್ನಡ ಸಿನಿಮಾಗಳು ಬೆಳೆಯುತ್ತಿವೆ. 2022 ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದ್ದು ತೆಲುಗು ತಮಿಳು ಕನ್ನಡ ಮತ್ತು ಮಲಯಾಳಂ ಚಲನಚಿತ್ರೋದ್ಯಮಗಳಲ್ಲಿ ಅತ್ಯುತ್ತಮವಾದದ್ದಕ್ಕೆ ಪ್ರಶಸ್ತಿಗಳು ಲಭಿಸಿವೆ. ಅದರಲ್ಲೂ ಕಾಂತರ ಸಿನಿಮಾ ಬಗ್ಗೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಹಿಟ್ ಚಿತ್ರಗಳ ನಿರ್ದೇಶನದ ಸರದಾರ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರು ಕಾಂತಾರ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದಾರೆ. ಎಲ್ಲಿ ನೋಡಿದ್ರೂ ಹೌಸ್ ಪುಲ್ ಪ್ರದರ್ಶನ್ ಕಾಣ್ತಿದೆ. ರಿಷಬ್ ಶೆಟ್ಟಿ ನಟನೆಗೆ ಕನ್ನಡ ಮಂದಿ ಮಾತ್ರವಲ್ಲದೇ ದೇಶವೇ ಜೈ ಅಂದಿದೆ.
ಇನ್ನು ರಾಜ್ ಬಿ ಶೆಟ್ಟಿ ಕಾಂತಾರದಲ್ಲಿಯೂ ಭೂತಾರಾಧನೆಯ ದೃಶ್ಯಗಳಿಗೆ ಆಕ್ಷನ್ ಕಟ್ ಹೇಳಿದ್ದು ಈ ದೃಶ್ಯದ ಕುರಿತು ವಿಶೇಷವಾಗಿ ಮಾತನಾಡುತ್ತಿರುವ ನೆಟ್ಟಿಗರು ಇಂಥ ಕಠಿಣ ದೃಶ್ಯಗಳಲ್ಲಿ ರಿಷಬ್ ನಟನೆಯನ್ನೂ ಮಾಡಿ ನಿರ್ದೇಶನವನ್ನೂ ಮಾಡುವುದು ಕಷ್ಟ ಎನಿಸಿ ರಾಜ್ ಬಿ ಶೆಟ್ಟಿ ಸಹಾಯ ಪಡೆದಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ ಹಾಗೂ ಗರುಡ ಗಮನ ನಂತರ ಮತ್ತೆ ಈ ಜೋಡಿ ಒಂದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜ್ ಬಿ ಶೆಟ್ಟಿ ಡೈರೆಕ್ಷನ್ ಡಿಪಾರ್ಟ್ಮೆಂಟ್ ನಲ್ಲೂ ಕೂಡ ಕೆಲಸ ಮಾಡಿದ್ದು ಕಾಂತರ ಎಂಬ ಶೀರ್ಷಿಕೆ ಕೂಡ ನೀಡಿದ್ದು ಅವರೇ. ಇಷ್ಟೆಲ್ಲಾ ಪಾತ್ರ ನಿರ್ವಹಿಸಿರುವ ರಾಜ್ ಬಿ ಶೆಟ್ಟಿ ಯಾವುದೇ ಸಂಭಾವನೆ ಪಡೆಯದೆ ರಿಷಬ್ ರವರ ಗೆಳತನಕ್ಕಾಗಿ ಹಾಗೂ ಸಿನಿಮಾ ಚೆನ್ನಾಗಿ ಮೂಡಿ ಬರಲಿ ಎಂದು ಕೆಲಸ ಮಾಡಿದ್ದರು.ಆದರೆ ಇದೀಗ ಸಿನಿಮಾ ಸಕ್ಸಸ್ ಆಗಿರುವ ಕಾರಣ ಹೊಂಬಾಳೆ ಪ್ರೊಡಕ್ಷನ್ಸ್ ರಾಜ್ ಬಿ ಶೆಟ್ಟಿಗೆ ಒಂದು ಕೋಟಿ ಸಂಭಾವನೆ ನೀಡಿರುವುದಾಗಿ ವರದಿಯಾಗಿದೆ.