ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ನಟ ದರ್ಶನ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಐಷರಾಮಿ ಮನೆಯನ್ನ ಹೊಂದಿದ್ದು ಮೈಸೂರಿನ ಬಳಿ ಪಾರ್ಮ್ ಹೌಸ್ ಒಂದನ್ನ ಹೊಂದಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದಲ್ಲಿ ಯಾವ ಸ್ಟಾರ್ ಗಳ ಬಳಿಯೂ ಇದರಂತಹ ಬಹು ಕೋಟಿ ಬೆಲೆ ಬಾಳುವ ಐಷರಾಮಿ ಕಾರುಗಳನ್ನು ಕೂಡ ಹೊಂದಿದ್ದು ದರ್ಶನ್ ಅವರಿಗೆ ಕಾರು ಮತ್ತು ಪ್ರಾಣಿ ಪಕ್ಷಿಗಳ ಮೇಲೆ ಸಿಕ್ಕಾಪಟ್ಟೆ ಕ್ರೇಜ್. ಈ ಕಾರಣಕ್ಕಾಗಿಯೇ ತಮ್ಮ ಪಾರ್ಮ್ ಹೌಸ್ ನಲ್ಲಿ ಹಲವಾರು ಜಾತಿಯ ಪ್ರಾಣಿ ಪಕ್ಷಿಗಳನ್ನ ಸಾಕಿದ್ದು ಹಾಗು ಸುಮಾರು 10 ರಿಂದ 12 ಕಾರುಗಳನ್ನ ಖರೀದಿ ಮಾಡಿದ್ದಾರೆ.
ಇನ್ನು ಇದೆಲ್ಲದರ ಜೊತೆ ಹಲವಾರು ಉದ್ಯಮ ಮತ್ತು ರಿಯಲ್ ಎಸ್ಟೇಟ್ ನಲ್ಲೂ ಕೂಡ ಹಣವನ್ನು ಹೂಡಿಕೆ ಮಾಡಿದ್ದಾರೆ ಅಂಥ ಹೇಳಲಾಗುತ್ತಿದ್ದು ಇನ್ನೂ ದರ್ಶನ್ ಅವರು ಒಂದು ಸಿನಿಮಾದಲ್ಲಿ ನಟಿಸಲು 10 ರಿಂದ 12 ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ.ಒಂದು ಮೂಲದ ಪ್ರಕಾರ ದರ್ಶನ್ ಅವರು ಸುಮಾರು 150 ರಿಂದ 200 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ಹೇಳಲಾಗಿದ್ದು ಆದರೂ ಕೂಡ ದರ್ಶನ್ ಅವರು ಬಹಳ ಸರಳ ಜೀವನ ನಡೆಸುತ್ತಿದ್ದು ಪ್ರತೀ ವರ್ಷ 2 ರಿಂದ 3 ಕೋಟಿಯವರೆಗೆ ಅನಾಥ ಆಶ್ರಮ ವೃದ್ಧಾಶ್ರಮಗಳಿಗೆ ಹಾಗು ಬಡ ಮಕ್ಕಳಿಗೆ ದಾನ ಮಾಡುತ್ತಿದ್ದಾರೆ.
ಇನ್ನು ನಟ ದರ್ಶನ್ ರವರು ಒಂದು ದಿನಕ್ಕೆ ಬರೋಬ್ಬರಿ ಒಂದುವರೆ ಲಕ್ಷ ಹಣವನ್ನು ಖರ್ಚು ಮಾಡುತ್ತಾರೆ. ಒಂದು ತಿಂಗಳಿಗೆ 45 ಲಕ್ಷಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರಂತೆ.ಇನ್ನು ನಟ ದರ್ಶನ್ ಇಷ್ಟು ಹಣವನ್ನು ಸುಮ್ಮನೆ ಅನಾವಶ್ಯಕವಾಗಿ ಖರ್ಚು ಮಾಡುವುದಿಲ್ಲ ತಾವು ಸಾಕಿರುವ ಪ್ರಾಣಿ ಪಕ್ಷಿಗಳ ಆಹಾರಕ್ಕಾಗಿ ಖರ್ಚು ಮಾಡುತ್ತಾರೆ. ಅಷ್ಟೇ ಅಲ್ಲದೆ ಅನಾಥಾಶ್ರಮದ ಮಕ್ಕಳಿಗೂ ಸಹ ಈ ದುಡ್ಡಿನಲ್ಲಿ ಮೀಸಲಿಟ್ಟಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಚಂದನವನದ ಬಹು ಬೇಡಿಕೆಯ ನಟರಾಗಿದ್ದಾರೆ.
ಇನ್ನು ಸಿನಿಮಾ ಹೊರತುಪಡಿಸಿ ಸಾಕಷ್ಟು ವಿಚಾರಗಳಲ್ಲಿ ಆಗಾಗ ಸುದ್ದಿಯಾಗುವ ದರ್ಶನ್ ರವರಿಗೆ ಅಪರಿಮಿತ ಅಭಿಮಾನಿಗಳ ಸಾಗರವಿದ್ದು ದರ್ಶನ್ ರವರ ಕೈಯಲ್ಲಿ ಇದೀಗ ಕ್ರಾಂತಿ ಹಾಗೂ ಡಿ-56 ಸಿನಿಮಾಗಳಿವೆ. ಸದ್ಯ ಈಗಾಗಲೇ ಕ್ರಾಂತಿ ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿ ಬಿಡುಗಡೆಗೆ ಸಿದ್ಧವಾಗಿದ್ದು ಸದ್ಯದಲ್ಲೇ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮವಾಗಿ ಹೊರಹೊಮ್ಮಲಿದೆ.
ಈ ನಡುವೆ ತರುಣ್ ಸುದೀಪ್ ನಿರ್ದೇಶನದ ಡಿ-56 ಸಿನಿಮಾದಲ್ಲೂ ದರ್ಶನ್ ನಟಿಸುತ್ತಿದ್ದು ಇತ್ತೀಚಿಗಷ್ಟೇ ಈ ಸಿನಿಮಾದ ಮುಹೂರ್ತವು ನೆರವೇರಿದ್ದು ಸದ್ಯ ಡಿ-56 ಸಿನಿಮಾದಲ್ಲಿ ನಟಿ ಮಾಲಾಶ್ರೀಯ ಪುತ್ರಿ ರಾಧನರಾಮ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಹೌದು ಪ್ಯಾನ್ ಇಂಡಿಯಾ ಸಿನಿಮವಾದ ಕ್ರಾಂತಿ ಚಿತ್ರದ ಬಗ್ಗೆ ದೀಪಾವಳಿ ಹಬ್ಬದಂದು ಡಿ ಬಾಸ್ ಗುಡ್ ನ್ಯೂಸ್ ನೀಡಿದ್ದು ಆದರೆ ಈ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ಡಿ ಬಾಸ್ ಅಭಿಮಾನಿಗಳು ಕ್ರಾಂತಿ ಸಿನಿಮಾದ ಅಪ್ಡೇಟ್ಗಳಿಗಾಗಿ ಕಾದು ಕುಳಿತಿದ್ದಾರೆ.