ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಇಂದು ಅಪ್ಪು ಮನೆಗೆ ಯಾರು ಬಂದಿದ್ದಾರೆ ಗೊತ್ತಾ ಅಶ್ವಿನಿ ಮೇಡಂ ಫುಲ್ ಹ್ಯಾಪಿ..ನೋಡಿ ಒಮ್ಮೆ

3,194

ಸದ್ಯ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ ಗಂಧದ ಗುಡಿ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು ಅಕ್ಟೋಬರ್ 28ಕ್ಕೆ ತೆರೆಗೆ ಬಂದಿದ್ದ ಈ ಡಾಕ್ಯುಡ್ರಾಮಾ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪೇಯ್ಡ್ ಪ್ರೀಮಿಯರ್ ಶೋಗಳಿಂದ ಹೌಸ್‌ಫುಲ್ ಪ್ರದರ್ಶನ ಕಂಡಿದ್ದ ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆದಿದ್ದು ಕನ್ನಡನಾಡಿನ ಬಯಲುಸೀಮೆಯಿಂದ ಹಿಡಿದು ಕಡಲ ತೀರದವರೆಗೆ ಬರಡು ಭೂಮಿಯಿಂದ ಪಶ್ಚಿಮಘಟ್ಟಗಳವರೆಗೆ ಸುತ್ತಾಡಿ ಅಪ್ಪು- ಅಮೋಘವರ್ಷ ಈ ಡಾಕ್ಯುಮೆಂಟರಿ ಸಿನಿಮಾ ನಿರ್ಮಿಸಿದ್ದಾರೆ.

ಕರ್ನಾಟಕದ ಮಣ್ಣಿನ ಘಮವನ್ನು ಪ್ರಪಂಚಕ್ಕೆ ಪರಿಚಯಿಸುವ ಕನಸಿನೊಂದಿಗೆ ಪುನೀತ್ ರಾಜ್‌ಕುಮಾರ್‌ ಈ ಸಾಹಸಕ್ಕೆ ಕೈ ಹಾಕಿದ್ದು ಪ್ರೇಕ್ಷಕರು ಪುನೀತ್ ರಾಜ್‌ಕುಮಾರ್ ಜೊತೆಗೆ ಕರ್ನಾಟಕದ ಕಾಡು ನದಿ ಬೆಟ್ಟ ಜಲಪಾತವನ್ನು ನೋಡುತ್ತಾ ಬೆರಗಾಗಿದ್ದಾರೆ. ಮಕ್ಕಳನ್ನು ಕರೆದುಕೊಂಡು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಪದೇ ಪದೇ ಗಂಧದ ಗುಡಿ ಸಿನಿಮಾ ನೋಡುತ್ತಿರುವ ಅಭಿಮಾನಿಗಳು ಕೂಡ ಇದ್ದಾರೆ.

ಅಪ್ಪು ಇಲ್ಲದೇ ಇದ್ದರೂ ಅವರ ಕನಸು ಪ್ರಯತ್ನ ಸಾಕಾರವಾಗಿದ್ದು ಸರ್ಕಾರ ಕೂಡ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದೆ. ಕರ್ನಾಟಕದ ಅರಣ್ಯ ಸಂಪತ್ತು ವನ್ಯಜೀವಿ ಸಂಪತ್ತಿನ ಪರಿಚಯ ಮಾಡಿಸುವುದರ ಜೊತೆಗೆ ಅದರ ಉಳಿಸುವ ಬಗ್ಗೆ ಒಂದೊಳ್ಳೆ ಸಂದೇಶ ಇರುವ ಗಂಧದ ಗುಡಿ ಸಿನಿಮಾ ಎಲ್ಲರನ್ನು ತಲುಪಬೇಕಿದೆ. ಆ ಕೆಲಸ ಯಶಸ್ವಿಯಾಗಿ ನೆರವೇರಿದೆ ಎನ್ನಬಹುದು.

ಇನ್ನು ಪುನೀತ ಪರ್ವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದು ಆದರೆ ಈ ಬಗ್ಗೆ ಯಾವುದೇ ಆದೇಶ ಬಂದಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ಪ್ರೇಕ್ಷಕರು ಸಂಪೂರ್ಣ ಟಿಕೆಟ್ ಹಣ ತೆತ್ತು ಸಿನಿಮಾ ನೋಡುವಂತಾಗಿದೆ. ತೆರಿಗೆ ವಿನಾಯಿತಿ ಆಗಿದ್ದರು ಮತ್ತಷ್ಟು ಜನ ಈ ಸಂದೇಶಾತ್ಮಕ ಸಿನಿಮಾ ನೋಡಲು ಸಹಾಯಕವಾಗುತ್ತಿತ್ತು.

ಇನ್ನು ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕು ಅನ್ನೋದು ಕನ್ನಡಿಗರ ಬೇಡಿಕೆಯಾಗಿದ್ದು ಅದರಂತೆ ನವೆಂಬರ್ 1 ರಂದುಬಅಪ್ಪುಗೆ ಕರ್ನಾಟಕ ಪ್ರಶಸ್ತಿಯನ್ನು ನೀಡಲಾಗಿದೆ. ಈ ವಿಶೇಷ ಸಂದರ್ಭದಂದು ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಯಂಗ್ ಟೈಗರ್ ಜೂ.ಎನ್‌ಟಿಆರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಇಬ್ಬರು ಗಣ್ಯರ ಸಮ್ಮುಖದಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲಾಗಿದೆ.

ಹೌದು ವಿಧಾನ ಸಭೆಯ ಮುಂಭಾಗದಲ್ಲಿ ಈ ಸಮಾರಂಭವನ್ನು ನಡೆಸಲಾಗಿದ್ದು ರಾಜ್ಯ ಶೇಷ್ಠ ಪ್ರಶಸ್ತಿಯನ್ನು ಸಿನಿಮಾ ಹಾಗೂ ಸಮಾಜಸೇವೆಯಲ್ಲಿ ಸಾಧನೆ ಮಾಡಿದ್ದ ಪುನೀತ್‌ ರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತಿಯನ್ನು ಕಳೆದುಕೊಂಡ ನೋವಿನಲ್ಲೂ ಕರ್ನಾಟಕ ಸರ್ಕಾರ ನೀಡಿದ ಈ ಗೌರವವನ್ನು ಗಣ್ಯರ ಸಮ್ಮುಖದಲ್ಲಿ ಸ್ವೀಕರಿಸಿದ್ದಾರೆ.

ಈ ನಡುವೆ ಅಶ್ವಿನಿ ಅವರ ಮನೆಗೆ ಓರ್ವ ವಿಶೇಷ ವ್ಯಕ್ತಿ ಬಂದಿದ್ದು ಅವರ ತಂದ ಉಡುಗೊರೆಯಿಂದ ಅಶ್ವಿನಿ ಮೇಡಂ ಬಹಳ ಖುಷಿಯಾಗಿದ್ದಾರೆ. ಹೌದು ಅಪ್ಪು ಅವರ ಅಪ್ಪಟ ಮಹಿಳಾ ಅಭಿಮಾನಿಯೊಬ್ಬರು ತಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಬಂದ ಕಾರಣ ಅಶ್ವಿನಿ ಅವರ ಮನೆಗೆ ಹೋಗಿ ಅಶ್ವಿನಿ ಅವರಿಗೆ ಶುಭಾಷಯ ತಿಳಿಸುವುದರ ಜೊತೆಗೆ ತಮ್ಮ ಕೈಯಾರೆ ಬಿಡಿಸಿರುವ ಅಪ್ಪು ಅವರ ಪೇಂಟಿಂಗ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನು ನೋಡಿದ ಅಶ್ವಿನಿಯವರು ಬಹಳ ಸಂತಸ ಪಟ್ಟಿದ್ದು ಈ ಫೋಟೋವನ್ನು ತಮ್ಮ ಮನೆಯಲ್ಲಿ ಅಪ್ಪು ಅವರ ಫೋಟೋ ಇಟ್ಟಿದ್ದ ಬಳಿಯೇ ಈ ಫೋಟೋವನ್ನ ಇಟ್ಟಿದ್ದಾರೆ. ಅಲ್ಲದೆ ಕೊನೆಯವರೆಗೂ ಈ ಫೋಟೋ ಇಲ್ಲಿಯೇ ಇರುತ್ತದೆ ಎಂದು ಮಹಿಳಾ ಅಭಿಮಾನಿಗೆ ತಿಳಿಸಿದ ಅಶ್ವಿನಿ ಅವರು ಆ ಅಭಿಮಾನಿಗೆ ಆತಿಥ್ಯವನ್ನು ನೀಡಿ ಕಳುಹಿಸಿದ್ದಾರೆ.