ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅವಳಿ ಮಕ್ಕಳಿಗೆ ಇಡೀ ಭಾರತದಲ್ಲೇ ಯಾರು ಇಡದ ಅಪರೂಪದ ಹೆಸರಿಟ್ಟ ಅಮೂಲ್ಯ…ಚಿಂದಿ

147,448

ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ತಮ್ಮ ಪತಿ ಜಗದೀಶ್‌ ಚಂದ್ರ ತಾಯಿ ಮಾವ ಹಾಗೂ ಅವಳಿ ಮಕ್ಕಳೊಂದಿಗೆ ಆದಿ ಚುಂಚನಗಿರಿಗೆ ತೆರಳಿ ಶ್ರೀಗಳ ಆಶಿರ್ವಾದ ಪಡೆದಿದ್ದು ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮಿ ಅವರನ್ನು ಭೇಟಿ ಮಾಡಿದ್ದನ್ನು ಅಮೂಲ್ಯ ಪತಿ ಜಗದೀಶ್‌ ಚಂದ್ರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳೊಂದಿಗೆ ಹಂಚಿಕೊಂಡಿದ್ದರು.

ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರನ್ನು ಇಂದು ಕುಟುಂಬ ಸಮೇತರಾಗಿ ಭೇಟಿ ನೀಡಿ ಆಶೀರ್ವಾದ ಪಡೆಯಲಾಗಿದ್ದು ಈ ಸಂದರ್ಭದಲ್ಲಿ ಪೂಜನೀಯ ಸ್ವಾಮೀಜಿಯವರು ಮಕ್ಕಳೊಂದಿಗೆ ಅಕ್ಕರೆಯಿಂದ ಮಾತನಾಡಿ ಹರಸಿದರು. ಎಂದು ಜಗದೀಶ್‌ ಚಂದ್ರ ಬರೆದುಕೊಂಡಿದ್ದರು.

ಇದರ ಜೊತೆಗೆ ತಮ್ಮ ಮಕ್ಕಳ ನಾಮಕರಣ ಶಾಸ್ತ್ರವನ್ನು ಯಾವ ರೀತಿ ಮಾಡಬೇಕು ಹಾಗೂ ಯಾವ ಹೆಸರನ್ನು ಇಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದು ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಆದಿ ಚುಂಚನಗಿರಿ ಮಠದಲ್ಲಿಯೇ ನಟಿ ಅಮೂಲ್ಯ ಅವರ ನಾಮಕರಣ ಶಾಸ್ತ್ರ ನಡೆದು ಹೋಗಿದೆ ಅಂತ ಅಂದುಕೊಂಡಿದ್ದರು.

ಆದರೆ ನಿಜವಾಗಿ ಅದು ತಪ್ಪು ಕಲ್ಪನೆಯಾಗಿದ್ದು ಗುರುಗಳನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದು ಸ್ವಾಮಿಯವರ ಮಾರ್ಗ ದರ್ಶನದಂತೆ ಈ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡುವಂತೆ ಕುಟುಂಬದವರು ಬಯಸಿದ್ದರು. ಹೌದು ಈ ಕಾರಣಕ್ಕಾಗಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಹಾಗೂ ಇಬ್ಬರು ಅವಳಿ ಮಕ್ಕಳು ಮತ್ತು ಕುಟುಂಬಸ್ಥರೆಲ್ಲರೂ ಕೂಡ ಶ್ರೀಕಾಳ ಭೈರವೇಶ್ವರನ ದೇವಸ್ಥಾನಕ್ಕೂ ಕೂಡ ಹೋಗಿ ಪೂಜೆಯನ್ನು ಮಾಡಿ ಬಳಿಕ ಗುರೂಜಿಯವರನ್ನು ಭೇಟಿ ಮಾಡಿ ನಾಮಕರಣ ಶಾಸ್ತ್ರದ ಸಕಲ ಸಿದ್ಧತೆಯನ್ನು ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಾರೆ.

ತದನಂತರ ಗುರುಗಳು ಇದೇ ಶುಭ ಗುರುವಾರದಂದು ಅವಳಿ ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದರೆ ತುಂಬಾ ಒಳ್ಳೆಯದು ಹಾಗೂ ಅವರು ಭವಿಷ್ಯದಲ್ಲಿ ಉನ್ನತ ಶಿಖರಕ್ಕೆ ಹೋಗುತ್ತಾರೆ ಎಂಬ ಆಶ್ವಾಸನೆಯನ್ನು ನೀಡಿದರು. ಸದ್ಯ ಅದರಂತಯೇ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ನಿನ್ನೆ ಬೆಂಗಳೂರಿನಲ್ಲಿ ಸರಳವಾಗಿ ನಾಮಕರಣ ಶಾಸ್ತ್ರವನ್ನು ಮುಗಿಸಿದ್ದು ನಾಮಕರಣ ಶಾಸ್ತ್ರ ಮಾಡುವ ಈ ವಿಡಿಯೋ ತುಣುಕುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಇದನ್ನು ನೋಡಿದಂತಹ ಗೋಲ್ಡನ್ ಗರ್ಲ್ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಇನ್ನು ನಟಿ ಅಮೂಲ್ಯ ಅವರು ತಮ್ಮ ಇಬ್ಬರೂ ಅವಳಿ ಮಕ್ಕಳಿಗೆ ಅಥರ್ವ ಮತ್ತು ಆಧವ್ ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಹೆಸರು ನಿಜವಾಗಿಯೂ ತುಂಬಾನೇ ಅರ್ಥಗರ್ಭಿತವಾಗಿದೆ ಮತ್ತು ಇದುವರೆಗೂ ಕೂಡ ಚಿತ್ರರಂಗದಲ್ಲಿ ಯಾರು ಕೂಡ ಇಂತಹ ಹೆಸರನ್ನು ಇಟ್ಟಿಲ್ಲ.

ಇನ್ನು ಕೆಲವು ಅಭಿಮಾನಿಗಳು ಅಮೂಲ್ಯ ಅವರಿಗೆ ಅವಳಿ ಮಕ್ಕಳು ಆಗಿರುವುದರಿಂದ ಲವ-ಕುಶ ಎಂದು ಇಡಬಹುದು ಎಂದು ಊಹೆ ಮಾಡಿದ್ದರು ಆದರೆ ಅಭಿಮಾನಿಗಳು ಊಹೆ ಇದೀಗ ಸುಳ್ಳಾಗಿದ್ದು ತಮ್ಮ ಮಕ್ಕಳಿಗೆ ವಿಭಿನ್ನವಾದ ಹೆಸರು ಮತ್ತು ಈ ಹೆಸರು ಇದುವರೆಗೂ ಕೂಡ ಚಿತ್ರರಂಗದಲ್ಲಿ ಯಾರು ಸಹ ಇಟ್ಟು ಕೊಂಡಿರಬಾರದು ಎಂದು ಜಗದೀಶ್ ಮತ್ತು ಅಮೂಲ್ಯ ಅವರು ಬಹಳಾನೇ ಯೋಚನೆ ಮಾಡಿ ಮಗು ಹುಟ್ಟಿದ ಸುಮಾರು ಆರು ತಿಂಗಳ ಬಳಿಕ ನಾಮಕರಣ ಶಾಸ್ತ್ರವನ್ನು ಮಾಡಿದ್ದಾರೆ.

ಇನ್ನು ತಮ್ಮ ಮುದ್ದು ಮಕ್ಕಳ ಜೊತೆಗೆ ನಟಿ ಅಮೂಲ್ಯ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು ಆಕಾಶ ನೀಲಿ ಬಣ್ಣದ ಬಟ್ಟೆಗಳನ್ನು ಮಕ್ಕಳಿಗೆ ತುದಿಸಿ ಅದಕ್ಕೆ ಮ್ಯಾಚ್ ಆಗುವಂತಹ ಸೀರೆಯನ್ನು ನಟಿ ಅಮೂಲ್ಯ ಅವರು ಧರಿಸಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.