ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಎರಡನೇ ಮದುವೆ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ತನ್ನ ಲವರ್ ಹೆಸರು ಹೇಳಿದ ಪ್ರೇಮಾ…ನೋಡಿ

10,696

ಜೀವನದಲ್ಲಿ ಕೆಲವೊಂದು ವಯಕ್ತಿಕ ಕಾರಣಗಳಿಂದಾಗಿ ಚಿತ್ರರಂಗದ ಖ್ಯಾತ ನಟಿ ಪ್ರೇಮಾ ರವರು ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಉಳಿದು ಬಿಟ್ಟರು. ಆದರೆ ಇದೀಗ ಹೊಸ ಸಿನಿಮಾ ಒಂದರ ಮೂಲಕ ಮತ್ತೆ ನಟನಾರಂಗಕ್ಕೆ ಕಂಬ್ಯಾಕ್ ಮಾಡಿದ್ದು ಒಂದು ವಿಭಿನ್ನವಾದ ಪಾತ್ರವನ್ನು ವಿಭಿನ್ನವಾದ ಕಥೆ ಇರುವ ಚಿತ್ರದಲ್ಲಿ ನಿಭಾಯಿಸುತ್ತಿದ್ದಾರೆ ನಟಿ ಪ್ರೇಮ

. ಹೌದು ಆ ಸಿನಿಮಾ ಹೆಸರು ವೆಡ್ಡಿಂಗ್ ಗಿಫ್ಟ್. ಇನ್ನು ಕನ್ನಡ ಸಿನಿಮಾರಂಗದಲ್ಲಿ ನಟಿ ಪ್ರೇಮ ಅಂದರೆ ಯಾರಿಗೂ ಗೊತ್ತಿರದೆ ಇರಲು ಸಾಧ್ಯವೇ ಇಲ್ಲ. ಹೌದು ಒಂದು ಕಾಲದಲ್ಲಿ ತನ್ನದೇ ಆದ ಅಮೋಘ ನಟನೆಯ ಮೂಲಕ ಕನ್ನಡ ಸಿನಿಮಾರಂಗದಲ್ಲಿ ತನ್ನ ಛಾಪನ್ನು ಮೂಡಿಸಿದ ನಟಿ ಇವರಾಗಿದ್ದು ಓಂ ಸಿನಿಮಾದಿಂದ ಹಿಡಿದು ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ ನಟಿ ಪ್ರೇಮಾ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಚಿತ್ರರಂಗದಿಂದ ದೂರ ಸರಿದು ಬಿಟ್ಟರು. ಇದು ಅವರ ಅಭಿಮಾನಿಗಳಿಗೆ ಬಹಳ ಬೇಸರವನ್ನು ತಂದಿದ್ದ ಸಂಗತಿಯಾಯಿತು ಎನ್ನಬಹುದು.

ಇನ್ನು ನಟಿ ಪ್ರೇಮ ರವರು ಮತ್ತೆ ತೆರೆಯ ಮೇಲೆ ಬರಬೇಕು ಮತ್ತೆ ಅಭಿನಯಿಸಬೇಕು ಎಂದು ಅವರ ಅಭಿಮಾನಿಗಳಿಗೆ ಯಾವಾಗಿನಿಂದಲೂ ಕೂಡ ಆಸೆ ಇದ್ದೇ ಇತ್ತು. ಸದ್ಯ ಹಾಗೆಯೇ ವೆಡ್ಡಿಂಗ್ ಗಿಫ್ಟ್ ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿದ್ದು ವೆಡ್ಡಿಂಗ್ ಗಿಫ್ಟ್ ಸಿನಿಮಾ ಈಗಾಗಲೇ ಸಿಕ್ಕಾಪಟ್ಟೆ ಬಜ್ ಕ್ರಿಯೇಟ್ ಮಾಡಿದೆ ಎನ್ನಬಹುದು. ಹೌದು ಈ ಸಿನಿಮಾವನ್ನು ವಿಕ್ರಂ ಕೆ ಪ್ರಭು ಎಂಬುವವರು ನಿರ್ಮಾಣ ಮಾಡಿ ನಿರ್ದೇಶನವನ್ನು ಕೂಡ ಮಾಡಿದ್ದಾರೆ ಹಾಗೆ ಕಥೆಯನ್ನು ಕೂಡ ಅವರೇ ಬರೆದಿದ್ದಾರೆ.

ಇನ್ನು ಉದಯ ಲೀಲಾ ಅವರ ಛಾಯಾಗ್ರಾಹಣ ಈ ಸಿನಿಮಾಕ್ಕೆ ಇದ್ದು ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಹೌದು ನಿಶಾನ್ ಸೋನು ಗೌಡ ನಟಿ ಪ್ರೇಮಾ ಪವಿತ್ರ ಲೋಕೇಶ್ ಬಾಬು ಹಿರಣ್ಣಯ್ಯ ಮೊದಲಾದ ದೊಡ್ಡ ತಾರಾ ಬೆಳಗವೇ ಈ ಸಿನಿಮಾದಲ್ಲಿದು ಹಾಗೆಯೇ ಈ ಸಿನಿಮಾದಲ್ಲಿ ನಟಿ ಪ್ರೇಮ ಅವರದ್ದು ಲಾಯರ್ ಪಾತ್ರ. ಮದುವೆ ಎನ್ನುವ ಸಂಬಂಧದ ಸುತ್ತ ಹೆಣೆದಿರುವ ಕಥೆಯೇ ಈ ವೆಡ್ಡಿಂಗ್ ಗಿಫ್ಟ್.

ಇನ್ನು ಇಷ್ಟು ದಿನ ಸಿನಿಮಾ ರಂಗದಿಂದ ದೂರ ಉಳಿದಿದ್ದು ಯಾಕೆ ಅಂತ ಹಲವರು ಅವರನ್ನ ಕೇಳುತ್ತಿದ್ದು ಸದ್ಯ ಈ ಪ್ರಶ್ನೆಗೆ ನಟಿ ಪ್ರೇಮ ಅವರದ್ದು ಒಂದೇ ಉತ್ತರ. ನನಗೆ ಇಷ್ಟವಾಗುವಂತಹ ಪಾತ್ರ ಸಿಕ್ಕಿರಲಿಲ್ಲ. ನಾನು ಮಾಡುವ ಪಾತ್ರ ನನಗೆ ತೃಪ್ತಿ ನೀಡಬೇಕು ಎಂದು ಪಾತ್ರಗಳನ್ನು ನಾನು ಇದುವರೆಗೆ ಆಯ್ಕೆ ಮಾಡಿಕೊಂಡು ಬಂದಿದ್ದು. ಹೌದು ವೆಡ್ಡಿಂಗ್ ಗಿಫ್ಟ್ ನನಗೆ ಒಂದು ಒಳ್ಳೆ ಪಾತ್ರವನ್ನು ನಿರ್ಮಿಸಿಕೊಟ್ಟಿದ್ದು
ಈ ಕಾರಣದಿಂದಾಗಿ ಈ ಸಿನಿಮಾದಲ್ಲಿ ನಾನು ಮತ್ತೆ ಅಭಿನಯಿಸಿದ್ದೇನೆ ಎಂದು ಹೇಳಿಕೊಂಡಿದ್ದರು.

ಇನ್ನು ಮಾಧ್ಯಮದ ಜೊತೆಗೆ ಮಾತನಾಡುವಾಗ ತನ್ನ ಲವರ್ ಯಾರು ಅನ್ನುವುದನ್ನ ಬಹಿರಂಗಪಡಿಸಿದ್ದಾರೆ ನಟಿ ಪ್ರೇಮ. ಹೌದು ಬಹಳಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ಪಳಗಿದವರು ನಟಿ ಪ್ರೇಮ. ಹೀಗಾಗಿ ಅವರಿಗೆ ಕ್ಯಾಮರಾ ಎದುರಿಸುವುದು ಅಥವಾ ಸ್ಟೇಜ್ ಫಿಯರ್ ಅನ್ನುವುದು ಇಲ್ಲವೇ ಇಲ್ಲ.ಕ್ಯಾ

ಮರಾ ಎದುರು ನಿಂತಾಗ ಕ್ಯಾಮರವನ್ನೇ ಪ್ರೇಕ್ಷಕರು ಎಂದು ಭಾವಿಸಿ ಆ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುವ ನಟಿ ಪ್ರೇಮ ನನ್ನ ಲವ್ವರ್ ಯಾರು ಅಂತ ಕೇಳಿದರೆ ಕ್ಯಾಮರಾವೆ ನನ್ನ ಲವರ್ ಎಂದು ಹೇಳಿದ್ದಾರೆ. ಹೌದು ವೆಡ್ಡಿಂಗ್ ಗಿಫ್ಟ್ ಸಿನಿಮಾದ ಸಕ್ಸೆಸ್ ಹಿನ್ನೆಲೆಯಲ್ಲಿ ನಟಿ ಪ್ರೇಮ ಇನ್ಮುಂದೆ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆಯಂತೂ ಎದ್ದು ಕಾಣಿಸುತ್ತಿದೆ ಎನ್ನಬಹುದು.