ವಾರ್ತಾ ಮಂಜರಿ
Trending Stories, Viral News, Gossips & Everything in Kannada

Yash: ರಾಧಿಕಾ ಪಂಡಿತ್ ಜೊತೆ ನೆಲದ ಮೇಲೆ ಕುಳಿತು ಊಟ ಮಾಡಿದ ಯಶ್…ವಿಡಿಯೋ ವೈರಲ್

5,762

ಸದ್ಯ ಇದೀಗ ಅಂತರರಾಷ್ಟ್ರೀಯ  ನಟರಾಗಿ ಮೆರೆಯುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್ ರವರು  ಇದೀಗ ಎಲ್ಲರಿಗೂ ಕೂಡ ಚಿರಪರಿಚಿತರಾಗುರುವ ಹೆಸರಾಗಿದೆ. ಇನ್ನು ಒಂದಾನೊಂದು ಕಾಲದಲ್ಲಿ ತುಂಬಾನೇ ಕಷ್ಟಪಟ್ಟಿದ್ದ ಯಶ್ ಇಂದು ಇಡೀ ಪ್ರಪಂಚಕ್ಕೆ ತಾನು ಯಾರೆಂಬುದನ್ನ ತಿಳಿಸುವಂತೆ ಮಾಡಿದ್ದಾರೆ. ಹೌದು ಅವರ ವಿಶಿಷ್ಟ ಅಭಿನಯದ  ಮೂಲಕ ಇಡೀ ವಿಶ್ವಕ್ಕೆ ಯಶ್ ರವರು ಪರಿಚಯ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಯಶ್ ಸಿನಿಮಾರಂಗಕ್ಕೆ ಬರುವ ಮುನ್ನ ಅವರ ಜೀವನ ಹೇಗಿತ್ತು ಎಂದರೆ ಹೇಳತೀರದು.

ಯಾವ ರೀತಿ ಕಷ್ಟಗಳನ್ನು ಅವಮಾನಗಳನ್ನು ಎದುರಿಸಿ ಇಂದು ಇಂತಹ ಉನ್ನತ ಮಟ್ಟಕ್ಕೆ ಯಶ್  ರವರು ಬೆಳೆದಿದ್ದಾರೆ  ಎಂದರೆ ನಿಜಕ್ಕೂ ಅವರ ಜೀವನ ಅನ್ಯರಿಗೆ ಸ್ಪೂರ್ತಿ ಎನ್ನಬಹುದು. ಹೌದು ನಟ ಯಶ್ ಅವರು 1986 ರಲ್ಲಿ ನವೀನ್ ಎಂಬ ಹೆಸರಿನಲ್ಲಿ ಅವರ ತಾಯಿ ಹುಟ್ಟೂರಾದ ಹಾಸನ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸುತ್ತಾರೆ.ಇದಾದ ಬಳಿಕ ನಟ ಯಶ್ ರವರು  ಬೆಳೆದಿದ್ದು ಓದಿದ್ದು ಎಲ್ಲವೂ  ಕೂಡ ಸಾಂಕೃತಿಕ ನಗರಿ ಮೈಸೂರಿನಲ್ಲಿ. ಓದಿನಲ್ಲಿ ಗಮನ ಕೊಡುತಿದ್ದರೂ ಕೂಡ ಹೆಚ್ಚು ಆಸಕ್ತಿ ಇದ್ದಿದ್ದು ಮಾತ್ರ ಅಭಿನಯದ ಮೇಲೆ.

ಹೌದು ಚಿಕ್ಕಂದಿನಲ್ಲೇ ನಾಟಕ ನೃತ್ಯ ಅಭಿನಯ ಹೀಗೆ ಎಲ್ಲಾ ವಿಭಾಗದಲ್ಲಿಯೂ ಶಾಲಾ ಕಾಲೇಜು ದಿನಗಳಲ್ಲಿ ಪರಿಣಿತರಾಗಿದ್ದರು ನಮ್ಮ ಯಶ್. ಬಳಿಕ ತಂದೆ ತಾಯಿಯನ್ನು ಒಪ್ಪಿಸಿ ಬೆಂಗಳೂರಿಗೆ ಬಂದ ಅವರು ಆರಂಭದಲ್ಲಿ ಮೆಜೆಸ್ಟಿಕ್ ನೋಡಿದ ಬಳಿಕವೇ ತುಂಬಾನೇ ಬೆರಗಾಗಿದ್ದರು.   ಬೃಹತ್ ಬೆಂಗಳೂರಿನಲ್ಲಿ ನಾನು ಹೇಗೆ ಸಿನಿಮಾರಂಗದಲ್ಲಿ ನಟನೆ ಮಾಡುವುದು ಎಂದು ಒಂದು ಕ್ಷಣ ಶಾಕ್ ಆಗಿದ್ದು ಹಾಗೆಯೇ ಅವರ ಮನಸ್ಥಿತಿ ಕೂಡ ಮೆಜೆಸ್ಟಿಕ್ ನೋಡಿ ಕುಗ್ಗಿತ್ತು ಎನ್ನಲಾಗಿದೆ. ಇರಲು ಜಾಗ ಇಲ್ಲದೆ ಮೆಜೆಸ್ಟಿಕ್ ನಲ್ಲಿಯೂ ಸಹ ಮಲಗಿದ್ದರು ಎನ್ನಲಾಗಿ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇನ್ನು  ನಟ ಯಶ್ ರವರು ತನ್ನ  ಸ್ನೇಹಿತನ ಸಹಾಯದ ಮೂಲಕ ಮೊದಲಿಗೆ ಬೆನಕ ಎಂಬ ಒಂದು ಸಣ್ಣ ನಾಟಕದಲ್ಲಿ ಅಭಿನಯ ಮಾಡುವ  ಅವಕಾಶ ಗಿಟ್ಟಿಸಿಕೊಂಡಿದ್ದು ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ರವರಿಂದ ಈ ಮೂಲಕ ಶಭಾಷ್  ಎನಿಸಿಕೊಂಡಿದ್ದರಂತೆ. ನಂತರ ಉತ್ತರಾಯಣ ಎಂಬ ಧಾರಾವಾಹಿಯಲ್ಲಿ ಕೂಡ ನಟನೆ ಆರಂಭಮಾಡಿದ್ದು ಬಳಿಕ ಸಿಲ್ಲಿ ಲಲ್ಲಿ ನಂದಗೋಕುಲ ಸೀರಿಯಲಲ್ಲಿ ಹೆಚ್ಚು ಗುರುತಿಸಿಕೊಂಡರು ಯಶ್ ರವರು. ಇದಾದ ನಂತರ  ಯಶ್ ಅವರು ಮೊದಲ ಬಾರಿಗೆ ಚಿತ್ರದಲ್ಲಿ ಪೋಷಕ ಪಾತ್ರ ಮಾಡಿದ್ದು ಮುಂದೆ ಹೋಗುತ್ತ ಯಶ್ ಅವರ ಸಿನಿಮಾ ಹೆಸರು ಸಹ ನೇಮಕ ಆಗಿತ್ತಂತೆ. ಹೌದು ಆದರೆ ಅವರನ್ನು ಕರೆಸಿ ಅವಮಾನ ಕೂಡ ಮಾಡಲಾಗಿದ್ದು ಅಪಮಾನ ಮಾಡಿ ಅವರನ್ನು ಅಭಿನಯದ ಅವಕಾಶ ಕೊಡದೆ ಹಿಂದೆ ಸರಿಯುವಂತೆ ಹೇಳಿದ್ದುಂಟು.

 

ಆದರೆ ನಂತರ  ಅದೇ ನಿರ್ದೇಶಕ ಮತ್ತೆ ಮರಳಿ ಬಂದು ಮೊಗ್ಗಿನ ಮನಸ್ಸು ಸಿನಿಮಾಲ್ಲಿ ನಟನೆ ಮಾಡಲು ಹೇಳಿದ್ದರಂತೆ.  ಹೌದು ಒಮ್ಮೆ ಮೊಗ್ಗಿನ ಮನಸ್ಸು ಸಿನಿಮಾ ಹಿಟ್ ಆಗುತ್ತಿದ್ದಂತೆ ಯಶ್ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಅವರ ಅದ್ಬುತ  ನಟನೆಯ ಮೂಲಕ ಒಂದರ ಮೇಲೊಂದರಂತೆ ಮೊದಲಾಸಲ ರಾಜಧಾನಿ ಕಿರಾತಕ ಗೂಗ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮಾಸ್ಟರ್ಪೀಸ ಸಂತು ಸ್ಟ್ರೈಟ್ ಫಾರ್ವರ್ಡ್ ಹೀಗೆ ಇನ್ನೂ ಸಾಕಷ್ಟು ಸಿನಿಮಾಗಳು ಹಿಟ್ ಆಗಿದ್ದು ಈಗ ಕೆಜಿಎಫ್ ಹಂತಕ್ಕೆ ಬಂದು ನಿಂತಿದೆ.

ಇಡೀ ವಿಶ್ವಕ್ಕೆ ಪರಿಚಯ ಆಗಿದ್ದಾರೆ ಯಶ್ ಎನ್ನಬಹುದು. ಹೌದು ಒಂದಾನೊಂದು ಕಾಲದಲ್ಲಿ ಮೆಜೆಸ್ಟಿಕ್ ನಲ್ಲಿ ಮಲಗಿ ತಂದೆ-ತಾಯಿಗೆ ಜನರು ಆಡುತ್ತಿದ್ದ ನೋವಿನ ಮಾತನ್ನು ನೆನೆದು ಕಣ್ಣೀರಿಡುತ್ತಲೇ ನೋವನ್ನು ಅನುಭವಿಸಿ ಕಷ್ಟಪಟ್ಟು ಶ್ರದ್ಧೆಯಿಂದ ಚಿತ್ರರಂಗದಲ್ಲಿ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ನಮ್ಮ ರಾಕಿಂಗ್ ಸ್ಟಾರ್ ಯಶ್. ಸದ್ಯ ಯಶ್ ರವರ ಫ್ಯಾಮಿಲಿ ಬಗ್ಗೆ ಪ್ರತ್ಯೇಕವಾಗಿ ಹೇಳ ಬೇಕಾಗಿಲ್ಲ. ಸದ್ಯ ತಮ್ಮ ಮನೆಯಲಿ ಪತ್ನಿ ಹಾಗೂ ಮಕ್ಕಳ ಜೊತೆ ಊಟ ಸವಿಯುವ ವಿಡಿಯೋವೊಂದು ವೈರಲ್ ಆಗಿದ್ದು ಯಶ್ ಫ್ಯಾಮಿಲಿ ಹಬ್ಬದ ಊಟ ಹೇಗೆ ಸವಿದಿದೆ ನೀವೆ ನೋಡಿ.