ವಾರ್ತಾ ಮಂಜರಿ
Trending Stories, Viral News, Gossips & Everything in Kannada

Sushma: 10 ವರ್ಷಗಳ ಬಳಿಕ ಮುಂದಿನ ಜೀವನದ ಬಗ್ಗೆ ಸಿಹಿಸುದ್ದಿ ಕೊಟ್ಟ ನಟಿ ಸುಷ್ಮಾ

92

ನಮ್ಮ ಕನ್ನಡ ಕಿರುತೆರೆಯ ನಿರೂಪಕಿಯರಲ್ಲಿ ಹೆಚ್ಚಾಗಿ ಕೇಳಿಬರುವುದು ಎರಡು ಅಥವಾ ಮೂರು ಜನರ ಹೆಸರು ಎನ್ನಬಹುದು. ಹೌದು ಅದರಲ್ಲಿ  ಜೀ ವಾಹಿನಿಯಲ್ಲಿ ಬರುತ್ತಿದ್ದ ಜೀನ್ಸ್ ಕಾರ್ಯಕ್ರಮದ ನಿರೂಪಕಿ ಸುಷ್ಮಾ ಸಹ ಒಬ್ಬರಾಗಿದ್ದು ನಮ್ಮ  ಕನ್ನಡ ಕಿರುತೆರೆಗೆ ಅತ್ಯಂತ ಚಿರಪರಿಚಿತರು ನಟಿ ಹಾಗೂ ನಿರೂಪಕಿ ಸುಷ್ಮಾ ಎನ್ನಬಹುದು.ಅಚ್ಚ ಹಾಗೂ ಸ್ವಚ್ಛ ಕನ್ನಡದ ಮಾತಿನ ಶೈಲಿಯಿಂದಲೇ ಇವರ ನಿರೂಪಣೆಗೆ ಒಂದು ಸಿಂಧೂರ ಎನ್ನಬಹುದು.

ಮೊದಲು ಧಾರಾವಾಹಿಯ ನಟಿಯಾಗಿ ಗಮನ ಸೆಳೆದು  sushma  ಬಳಿಕ  ನಿರೂಪಣೆಗೆ ಕಾಲಿಟ್ಟಿದ್ದು  ಗುಪ್ತಗಾಮಿನಿ ಧಾರಾವಾಹಿಯಲ್ಲಿ ಭಾವನಾ ಪಾತ್ರಧಾರಿಯಾಗಿ ಗಮನ ಸೆಳೆದಿದ್ದು ಮೊದ ಮೊದಲು ನಟಿಯಾಗಿ ಗುರುತಿಸಿಕೊಂಡರು.  ಅದ್ಭುತ ಅಭಿನಯದ ಮೂಲಕ ಸೈ ಎನಿಸಿಕೊಂಡು ಗುಪ್ತಗಾಮಿನಿ ಧಾರಾವಾಹಿಯ ಪಾತ್ರಕ್ಕೆ ಕರ್ನಾಟಕ ಶ್ರೇಷ್ಠ ಕಿರುತೆರೆ ನಟಿ ಪ್ರಶಸ್ತಿ ಸಹ   ಮುಡಿಗೇರಿಸಿಕೊಂಡಿರುವುದು ವಿಶೇಷವಾಗಿದೆ. ಇನ್ನು ಸುಷ್ಮಾ ಅವರು ಅದ್ಭುತವಾದ ಭರತನಾಟ್ಯ ಕಲಾವಿದೆಯಾಗಿ ಕೂಡ ಗುರುತಿಸಿಕೊಂಡಿದ್ದು  ಖ್ಯಾತ ನೃತ್ಯಗಾರ್ತಿ ವೈಜಯಂತಿಕಾಶಿಯವರ ಹೆಮ್ಮೆಯ ಶಿಷ್ಯರಲ್ಲಿ ಇವರು ಸಹ ಒಬ್ಬರು ಎನ್ನವುದು ವಿಶೇಷ.

ಕೆಲವು ವರ್ಷಗಳ ಕಾಲ ಕಿರುತೆರೆ ಜೀವನಕ್ಕೆ ಬ್ರೇಕ್ ಕೊಟ್ಟಿದ್ದ ನಟಿ ಸುಷ್ಮಾ ರವರು  ಸದ್ಯ ಇದೀಗ ಸಾಕಷ್ಟು ವಾಹಿನಿಯಲ್ಲಿ ನಿರೂಪಣೆ ಮಾಡುತ್ತಿದ್ದಾರೆ.ಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾದ ಸುಷ್ಮಾ ರವರಿ  ಕೆಎಲ್ಈ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿದ್ದು ಅಲ್ಲದೇ  ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕೂಡ ಹಿಂದಿ ಭಾಷೆಯಲ್ಲಿ ಪದವಿ ಪಡೆದಿದ್ದು  ಖ್ಯಾತ ನೃತ್ಯಗಾರ್ತಿ ವೈಜಯಂತಿಯವರಿಂದ ಭರತನಾಟ್ಯ ತರಬೇತಿ ಪಡೆದಿದ್ದು ನವದೆಹಲಿ ಜೈಪುರ  ತಿರುವನಂಪುರ ಹಾಗೂ ಹಂಪಿ ಉತ್ಸವದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.

1997 ರಲ್ಲಿ ಭರತನಾಟ್ಯ  ನೃತ್ಯಕ್ಕಾಗಿ ಆರ್ಯಭಟ ಪ್ರಶಸ್ತಿಯನ್ನು ಕೂಡ ಪಡೆದಿದ್ದು ನಟ ವಿಜಯ್ ಕಾಶಿಯವರ ಒತ್ತಾಯದ ಮೇರೆಗೆ ಕಿರುತೆರೆ ಪ್ರವೇಶಿಸಿದ ಸುಷ್ಮಾ  ಅವರು ಮೊದಲು ಭಾಗೀರಥಿ ಧಾರಾವಾಹಿಯಲ್ಲಿ ಅಭಿನಯಿಸಿದರು. ತದ ನಂತರ ಸ್ವಾತಿ ಮುತ್ತು ಬಿದಿಗೆ ಚಂದ್ರಮ ಯಾವ ಜನ್ಮದ ಮೈತ್ರಿ ಸೊಸೆ ತಂದ ಸೌಭಾಗ್ಯ ಮತ್ತು ಗುಪ್ತಗಾಮಿನಿ ಮುಂತಾದ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದು ಗುಪ್ತಗಾಮಿನಿ ಧಾರವಾಹಿಯ ಭಾವನಾ ಪಾತ್ರ ಬಹಳ ಫೇಮಸ್ ಆಗಿದ್ದು  ಇದರ ಅಭಿನಯಕ್ಕಾಗಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಇಂದ ಅತ್ಯುತ್ತಮ ನಟಿ ಎಂದು ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು 2012 ರಲ್ಲಿ ಸೊಸೆ ತಂದ ಸೌಭಾಗ್ಯ ಧಾರಾವಾಹಿಯ ಕೀರ್ತಿ ಪಾತ್ರದ ನಟನೆಗಾಗಿ ಕನ್ನಡದ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಪಡೆದಿದ್ದಾರೆ.

ಸದ್ಯ ಇದೀಗ ಸುಮಾರು 10 ವರುಷಗಳ ಬಳಿಕ ಮತ್ತೆ ಸುಷ್ಮಾ ಕಿರುತೆರೆಗೆ ವಾಪಸ್‌ ಆಗಿದ್ದು ಕಲರ್ಸ್ ವಾಹಿನಿಯಲ್ಲಿ ಭಾಗ್ಯಲಕ್ಷ್ಮಿ ಎಂಬ ಧಾರಾವಾಹಿಯಲ್ಲಿ ‍ಅಭಿನಯಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ ಸುಷ್ಮಾ ನಾವು ಪ್ರೇಕ್ಷಕರಿಗೂ ಸಮಯ ಕೊಡಬೇಕಿದ್ದು ನಾವು ಒಂದಾದ ಮೇಲೊಂದು ಧಾರಾವಾಹಿ ಮಾಡಿಕೊಂಡು ಹೋದರೆ ನಾವು ಮುಂದೆ ಏನು ಮಾಡುತ್ತೇವೆ ಎಂದು ಅವರೇ ಗೆಸ್‌ ಮಾಡುತ್ತಾರೆ. ಪ್ರೇಕ್ಷಕರಿಗೂ ಸಲ್ಪ ಸಮಯ ಕೊಟ್ಟು ಹೊಸದಾಗಿ ಜರ್ನಿ ಪ್ರಾರಂಭ ಮಾಡುವುದರಲ್ಲಿ ಅರ್ಥವಿದೆ.

ಹಾಗಾಗಿ ಇಷ್ಟು ವರ್ಷಗಳ ಬಳಿಕ ಕಂಬ್ಯಾಕ್‌ ಮಾಡುತ್ತಿದ್ದೇನೆ ಎಂದಿದ್ದಾರೆ. ಇನ್ನು ಯಾವುದೇ ಒಂದು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೇವೆ ಎಂದರೆ ನಮಗೆ ಅದು ಮಾನಸಿಕವಾಗಿ ದೈಹಿಕವಾಗಿ ಸವಾಲಾಗಿರುತ್ತದೆ. ನಾನು ಈ ಹಿಂದೆ ಧಾರಾವಾಹಿ ಮಾಡುವಾಗ ನನ್ನ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದು ಅನಾರೋಗ್ಯ ಸಮಯದಲ್ಲೂ ನಟನೆ ಮಾಡಿದ್ದೆ, ನಮ್ಮ ತಂದೆ ತೀರಿ ಹೋದಾಗಲೂ ಶೂಟಿಂಗ್‌ಗೆ ಹೋಗಿದ್ದೆ ಅಮ್ಮನಿಗೆ ಬ್ರೈನ್ ಟ್ಯೂಮರ್‌ ಆಗಿತ್ತು. ಆಗಲೂ ಆಯಕ್ಟಿಂಗ್‌ಗೆ ಹೋಗಬೇಕಾಗಿತ್ತು. ಇನ್ಯಾವ ಕೆಲಸ ಆದರೂ ಕೂಡ ಅವತ್ತಿನ ದಿನಕ್ಕೆ ಮತ್ಯಾರೋ ಬಂದು ಮಾಡಬಹುದು ಆದರೆ ನಟನೆ ಹಾಗಲ್ಲ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ 10 ವರುಷಗಳ ಬಳಿಕ ನಟಿ ಸುಷ್ಮಾ ಮತ್ತೆ ತಮ್ಮ ನಟನಾ ಜರ್ನಿ ಆರಂಭಿಸಿರುವುದು ಪ್ರೇಕ್ಷಕರಿಗೆ ಸಂತಸ ತಂದಿದೆ.