ನಮ್ಮ ಕನ್ನಡ ಚಿತ್ರರಂಗದ ಜನಪ್ರಿಯ ಹಾಗೂ ಖ್ಯಾತ ನಟರಲ್ಲಿ ನಟ ಶ್ರೀಮುರಳಿ (Sri Muruli) ಅವರು ಕೂಡ ಒಬ್ಬರಾಗಿದ್ದು ಅನೇಕ ಏಳು ಬೀಳುಗಳನ್ನ ಕಂಡಂತಹ ನಟ ಇದೀಗ ಕಷ್ಟದ ದಿನಗಳನೆಲ್ಲ ದೂರ ಮಾಡಿಕೊಂಡು ಟಾಪ್ ನಟರಾಗಿ ರಾರಾಜಿಸುತ್ತಿದ್ದಾರೆ. ಸದ್ಯ ತಮ್ಮ ತಾಯಿ ದೇವರಿಗೆ ಪೂಜೆ ಮಾಡುತ್ತಿರುವಂತಹ ಸಮಯದಲ್ಲಿ ಅವರ ತಾಯಿಯ ವೀಡಿಯೋವನ್ನು ತೆಗೆಯುತ್ತಾ ಏನೋ ತಮಾಷೆಗೆ ರೇಗಿಸಿದ್ದು ಇದಕ್ಕೆ ಅವರ ತಾಯಿ ಎಷ್ಟು ಚೆನ್ನಾಗಿ ಬೈದಿದ್ದಾರೆ ಗೊತ್ತಾ? ತಮ್ಮ ತಾಯಿಯ ಆ ಮುದ್ದಾದ ಬೈಗುಳದ ವೀಡಿಯೋವನ್ನು ನಟ ಶ್ರೀಮುರಳಿ ರವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇದನ್ನು ನೋಡಿದ ಅಭಿಮಾನಿಗಳು ಸಹ ನಕ್ಕಿದ್ದಾರೆ.
ಸದ್ಯ ನಮ್ಮ ಕನ್ನಡ ಚಿತ್ರರಂಗದಲ್ಲಿಯರುವಂತಹ ಪ್ರತಿಯೊಬ್ಬ ನಟರೂ ಕೂಡ ತಮ್ಮ ನಟನೆಯಿಂದ ಸಾಕಷ್ಟು ಬಿರುದುಗಳನ್ನು ಪಡೆದುಕೊಂಡಿದ್ದು ಅದನ್ನ ತಮ್ಮ ಹೆಸರಿನ ಜೊತೆಗೆ ಕೂಡ ಸೇರಿಸಿಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ರೋರಿಂಗ್ ಸ್ಟಾರ್ ಎಂದೇ ಹೆಸರುವಾಸಿಯಾಗಿರುವ ನಾಯಕ ನಟ ಶ್ರೀ ಮುರುಳಿಯರು ಚಿತ್ರರಂಗದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ರವರ ಸಹೋದರ ಹಾಗೂ ನಿರ್ಮಾಪಕರು ಆಗಿರುವ ಚೆನ್ನೆಗೌಡರ ಪುತ್ರರಾಗಿದ್ದಾರೆ.
ಇವರ ಸಹೋದರ ಕೂಡ ಒಬ್ಬ ಪ್ರಖ್ಯಾತ ನಟ ವಿಜಯ ರಾಘವೇಂದ್ರ. ಶ್ರೀ ಮುರುಳಿಯವರು ತನ್ನ ಕಲಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಕುಟುಂಬದಲ್ಲಿ ಬೆಳೆದಿದ್ದು ಬಾಲ್ಯದಿಂದಲೂ ಸಹ ಚಿತ್ರರಂಗದಲ್ಲಿ ಪರಿಚಯ ಇದ್ದ ಕಾರಣ ಮಾಜಿ ಮುಖ್ಯಮಂತ್ರಿಗಳಾದಂತಹ ಎಚ್ ಡಿ ಕುಮಾರಸ್ವಾಮಿಯವರ ನಿರ್ಮಾಣದ ಚಂದ್ರ ಚಕೋರಿ ಎಂಬ ಸಿನಿಮಾದಲ್ಲಿ ನಟಿಸಿದ್ದರು.ಇದು ಅವರ ಮೊದಲ ಚಿತ್ರವಾಗಿದ್ದು ಸಾಕಷ್ಟು ಹೆಸರು ಕೂಡ ತಂದು ಕೊಟ್ಟ ಚಿತ್ರ ಕೂಡ ಇದ್ದಾಗಿತ್ತು. ಇನ್ನು ಮೊದಲ ಸಿನಿಮಾದಲ್ಲೇ ಜನರ ಮನ ಗೆದ್ದು ಬಿಟ್ಟಿದ್ದು ಈ ಸಿನಿಮಾ ಅಲ್ಲಿ ಅವರ ನಟನೆ ಮತ್ತು ತನ್ನ ಪ್ರೇಯಸಿಗೆ ಕೊಟ್ಟ ಮಾತಿಗೆ ತನ್ನ ಪೂರ್ಣ ಜೀವನ ಮೂಕನಾಗಿ ಬದುಕುವ ಅಭಿನಯ ಜನರ ಮನಸ್ಸು ಗೆದ್ದಿದ್ದು ಸಿನಿಮಾ 500 ದಿನ ಗಳ ಕಾಲ ಪ್ರದರ್ಶನ ಕಂಡು ದಾಖಲೆ ಬರೆಯುತ್ತದೆ.
ಈ ಸಿನಿಮಾ ಬಳಿಕ ಕಂಠಿ ಸಿನಿಮಾ ಕೂಡ ಬರ್ಜರಿ ಹಿಟ್ ಆಗಿದ್ದು ನಂತರ ದಿನಗಳಲ್ಲಿ ಅದ್ಯಾಕೋ ಅವರ ಸಿನಿಮಾಗಳು ಯಾವುದೂ ಕೂಡ ಅಷ್ಟೊಂದು ಯಶಸ್ಸು ಕಾಣಲಿಲ್ಲ. ತನ್ನ ಸಹೋದರ ವಿಜಯ ರಾಘವೇಂದ್ರ ರವರ ಜೊತೆ ಮಿಂಚಿನ ಓಟ ಸಿನಿಮಾದಲ್ಲಿ ನಟಿಸಿದ್ದು ಅದು ಕೂಡ ಹೇಳಿ ಕೊಳ್ಳುವಂತಹ ಹೆಸರು ಗಳಿಸಲಿಲ್ಲ. ಇನ್ನು ಶ್ರೀ ಮುರಳಿ ಅವರಿಗೆ ಬ್ರೆಕ್ ನೀಡಿದ ಸಿನಿಮಾ ಉಗ್ರಂ ಚಿತ್ರವು ಅವರ ಸಿನಿ ಬದುಕನ್ನೆ ಬದಲಿಸಿ ಬಿಟ್ಟಿತು. ಅಷ್ಟೊಂದು ಸಿನಿಮಾ ಭರ್ಜರಿ ಯಶಸ್ಸು ಕಂಡ ಸಿನಿಮಾವಾಗಿದೆ.
ಈ ಸಿನಿಮಾ ಬಳಿಕ ಸುಮಾರು 67 ಸಿನಿಮಾವನ್ನು ಮುರುಳಿ ಅವರು ನಿರಾಕರಿಸಿದ್ದರು ಹಾಗೂ ಆ ನಂತರ ರಥಾವರ ಹಾಗೂ ಮಫ್ತಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಎರಡು ಚಿತ್ರಗಳು ಕೂಡ ಸಿನಿಮಾ ರಂಗದಲ್ಲಿ ಭರ್ಜರಿ ಹಿಟ್ ಹಾಗೂ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ .ಮಫ್ತಿಯಲ್ಲಿ ತನ್ನ ಮಾವನಾದ ಶಿವರಾಜ್ ಕುಮಾರ್ ಅವರ ಜೊತೆ ನಟಿಸಿದ್ದು ಶಿವರಾಜ್ ಕುಮಾರ್ ಅವರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ .ನಂತರ ಮುರುಳಿ ಅವರು ಭರಾಟೆ ಹಾಗೂ ಮಧಗಜ ಅಲ್ಲಿ ಕೂಡ ನಾಯಕ ನಟನಾಗಿ ಅಭಿನಯ ಮಾಡಿದ್ದಾರೆ. ಇನ್ನು ಮುರಿಳಿ ಅಮ್ಮನ ಕೈಯಲ್ಲಿ ಹೇಗೆ ಬೈಸಿಕೊಂಡಿದ್ದಾರೆ ನೀವೆ ನೋಡಿ.