ಸದ್ಯ ಇಡೀ ಜಗತ್ತೇ ನಮ್ಮ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಚಿತ್ರದ ನಿರ್ಮಾಪಕರಾದ ವಿಜಯ್ ಕುಮಾರ್ ಕಿರಗಂದೂರು ರವರ ನಿರ್ಮಾಣದ ಮತ್ತೊಂದು ಸಿನಿಮಾ Kantara ಕಳೆದ ಶುಕ್ರವಾರ (ಸೆ. 30) ಬಿಡುಗಡೆಯಾಗಿದೆ. ದಕ್ಷಿಣ ಕನ್ನಡದ ವಿಶಿಷ್ಟ ಸಂಸ್ಕೃತಿಯನ್ನು ಪರಿಚಯಿಸುವ ಈ ಚಿತ್ರವನ್ನು ರಿಷಭ್ ಶೆಟ್ಟಿ ರವರು ಬರೆದು ನಿರ್ದೇಶನ ಮಾಡಿದ್ದು ಕಾಂತಾರ ಮನುಷ್ಯ ಹಾಗೂ ಪ್ರಕೃತಿಯ ನಡುವಿನ ಸಂಘರ್ಷದ ಕಥೆ.
ನಾನು ಊರಿನಲ್ಲಿ ಇದ್ದಾಗ ಕೆಲವು ಘಟನೆಗಳನ್ನು ನೋಡಿದ್ದು ಅರಣ್ಯ ಇಲಾಖೆ ಭೂಮಿ ಒತ್ತುವರಿ ಹೀಗೆ ಹಲವು ವಿಷಯಗಳ ಸುತ್ತ ಈ ಚಿತ್ರ ಸುತ್ತುತ್ತದೆ ಎಂದಿರುವ ರಿಷಬ್ ದಕ್ಷಿಣ ಕನ್ನಡದಲ್ಲಿ ಭೂಮಿ ಎಂದರೆ ಅದು ಬರೀ ಭೂಮಿಯಲ್ಲ ಅದೊಂದು ಸಂಸ್ಕೃತಿ. ಅಲ್ಲಿನ ದೈವ ಕಂಬಳ ಭೂತಕೋಲ ಎಲ್ಲವೂ ಕೂಡ ಬಹಳ ಮುಖ್ಯವಾಗುತ್ತದೆ. ಈ ಎಲ್ಲದರ ಕುರಿತು ಚಿತ್ರದಲ್ಲಿ ಹೇಳಿದ್ದೇವೆ ಎನ್ನುತ್ತಾರೆ ಅವರು.
ಇನ್ನು ಪರಭಾಷೆಯಲ್ಲಿ ನೇಟಿವಿಟಿ ಸಿನಿಮಾಗಳನ್ನು ಅದ್ಭುತವಾಗಿ ಕಟ್ಟಿಕೊಡುತ್ತಾರೆ ಹಾಗೂ ನಮ್ಮ ಕನ್ನಡದಲ್ಲಿ ಯಾಕೆ ಆ ತರಹದ ಪ್ರಯತ್ನ ಮಾಡಲ್ಲ ಎಂದು ಆಗಾಗ ಕನ್ನಡ ಚಿತ್ರಗಳನ್ನು ಕುಟುಕುವವರಿಗೆ ಖಡಕ್ ಉತ್ತರ ನೀಡುವ ಸಿನಿಮಾ ಕಾಂತಾರ. ಹೌದು ರಿಷಭ್ ಶೆಟ್ಟಿ ಈ ಬಾರಿವಕಾಂತಾರದಲ್ಲಿ ಆಯ್ಕೆ ಮಾಡಿಕೊಂಡಿರೋದು ಕರಾವಳಿ ಸಂಸ್ಕೃತಿಗಳಲ್ಲೊಂದಾದ ಭೂತಾರಾಧನೆ. ಇನ್ನು ಭೂತಕೋಲ ನೇಮ ಕರಾವಳಿ ಜನರ ಭಾವನೆಗಳಲ್ಲಿ ಇಂದಿಗೂ ಹಾಸು ಹೊಕ್ಕಾಗಿದ್ದು ತಮ್ಮ ಜಮೀನನ್ನು ಕುಟುಂಬವನ್ನು ದೈವ ಕಾಯುತ್ತದೆ ಎಂಬ ನಂಬಿಕೆಯೊಂದಿಗೆ ವರ್ಷಂಪ್ರತಿ ವಿಜೃಂಬಣೆಯಿಂದ ನಂಬಿದ ದೈವಕ್ಕೆ ನೇಮ ಕೋಲ ನೀಡುತ್ತಾರೆ.
ಈ ರೀತಿಯಾದ ಒಂದು ಸೂಕ್ಷ್ಮ ವಿಚಾರವನ್ನು ನಟ ನಿರ್ದೇಶಜ ರಿಷಭ್ ರವರು ಕಾಂತಾರ ಚಿತ್ರದಲ್ಲಿ ಹೇಳಿದ್ದು ಹಾಗಂತ ಇದು ಭೂತ ದೈವದ ಕುರಿತ ಡಾಕ್ಯುಮೆಂಟರಿಯಲ್ಲ. ಆ ಅರಿವು ರಿಷಭ್ ರವರಿಗೆ ಚೆನ್ನಾಗಿಯೇ ಇದ್ದಿದ್ದರಿಂದಲೇ ಭೂತಾರಾಧನೆಯನ್ನು ಮೂಲವಾಗಿಟ್ಟುಕೊಂಡು ಉಳಿದಂತೆ ಅದರ ಸುತ್ತ ಹಲವು ಅಂಶಗಳನ್ನು ಹೇಳುತ್ತಾ ಹೋಗಿದ್ದಾರೆ. ಹೌದು ಒಂದು ಕಮರ್ಷಿಯಲ್ ಸಿನಿಮಾವನ್ನು ಕಟ್ಟಿಕೊಡುವಾಗ ಯಾವ ರೀತಿಯ ಅಂಶಗಳು ಮುಖ್ಯವಾಗುತ್ತವೋ ಆ ಎಲ್ಲಾ ಅಂಶಗಳು ಸಹ ಈ ಚಿತ್ರದಲ್ಲಿದೆ. ಹಾಗೆಂದು ಅವ್ಯಾವುವು ರೆಗ್ಯುಲರ್ ಶೈಲಿಯಲ್ಲಿ ಇಲ್ಲ. ಅದೇ ಈ ಸಿನಿಮಾದ ಪ್ಲಸ್ ಪಾಯಿಂಟ್.
ಆದರೆ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಆಗಿಲ್ಲ ಎಂಬ ಪ್ರಶ್ನೆ ಹಲವರಲ್ಲಿದೆ. ಸದ್ಯ ಈ ಕುರಿತು ರಿಷಭ್ ಮಾತನಾಡಿದ್ದು ಟೀಸರ್ ರಿಲೀಸ್ ಆದಾಗ ಎಲ್ಲರೂ ಕೂಡ ಕೇಳಿದ್ದರು ಪ್ಯಾನ್ ಇಂಡಿಯಾ ಮಾಡೋದಿಲ್ವಾ ಎಂದು. ವಿಜಯ್ ಕಿರಗಂದೂರು ಪ್ಯಾನ್ ಇಂಡಿಯಾ ರಿಲೀಸ್ ಮಾಡುವುದರಲ್ಲಿ ಶಕ್ತರಾಗಿದ್ದು ಆದರೆ ಕನ್ನಡದಲ್ಲೇ ಪ್ರಪಂಚದಾದ್ಯಂತ ಹೋಗಬೇಕು ಎಂಬುದು ನನ್ನ ಆಸೆ. ಎಲ್ಲಾ ಕಡೆ ಒಟ್ಟಿಗೆ ರಿಲೀಸ್ ಆಗಬೇಕು ಎಂದು ಒಂದು ಯೋಚನೆ ಇದ್ದಾಗ ಅದನ್ನು ಶಕ್ತವಾಗಿ ಎಲ್ಲರಿಗೂ ತಲುಪಿಸಿದ್ದಾರೆ. ಇವತ್ತು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಪ್ರತಿದಿನ ಶೋಗಳ ಸಂಖ್ಯೆ ಹೆಚ್ಚಾಗುತ್ತಿದ್ದು ನಾವು ಕನ್ನಡದಲ್ಲಿಯೇ ಮೊದಲು ಬಿಡುಗಡೆ ಆಗಬೇಕು ಎಂದು ಬಿಡುಗಡೆ ಮಾಡಿದ್ವಿ.
ಬೇರೆ ಭಾಷೆಗಳಲ್ಲಿ ತುಂಬಾನೇ ಡಿಮ್ಯಾಂಡ್ ಬರುತ್ತಿದ್ದು ಹಿಂದಿ ತೆಲುಗು ತಮಿಳುನಾಡಿನ ಮಲಯಾಳಂ ಬೇರೆ ಭಾಷೆಗಳಿಗೆ ಡಬ್ ಮಾಡಿ ಸಿನಿಮಾ ಬಿಡುಗಡೆ ಮಾಡಿ ಅಲ್ಲಿನ ಜನರಿಗೆ ಸಬ್ ಟೈಟಲ್ ನೋಡುವುದಕ್ಕಿಂತ ಆ ಭಾಷೆಯಲ್ಲೇ ನಮಗೆ ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ ಎನ್ನುತ್ತಿದ್ದಾರೆ. ಈಗಾಗಲೇ ಬಹಳಷ್ಟು ಮಂದಿ ಡಿಸ್ಟ್ರಿಬ್ಯೂಟರ್ಗಳು ನಿರ್ಮಾಪಕರನ್ನು ಸಂಪರ್ಕ ಮಾಡಿದ್ದು ಬೇರೆ ಭಾಷೆಯಲ್ಲಿ ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿದ್ದಾರೆ ಎಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಇನ್ನು ಸಿನಿಮಾಗೆ ಬೇರೆ ಬೇರೆ ಭಾಷೆಯಿಂದ ಬೇಡಿಕೆ ಬರುತ್ತಿದ್ದು ಇನ್ನೆರಡೇ ದಿನಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಸಿಹಿ ಸುದ್ದಿಯನ್ನು ನೀಡಲಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಮಾಹಿತಿಯನ್ನು ನೀಡಲಿದ್ದು ಇನ್ನು ಎರಡು ದಿನಗಳಲ್ಲಿ ಅದು ಹೇಗೆ? ಯಾವಾಗ? ಎಂದು ನಮ್ಮ ಪ್ರೊಡಕ್ಷನ್ ಹೌಸ್ ಅನೌನ್ಸ್ ಮಾಡುತ್ತಾರೆ ಎಂದಿದ್ದಾರೆ.