ಸದ್ಯ ಇದೀಗ ಕನ್ನಡ ಚಿತ್ರರಂಗದಲ್ಲಿ RRR ಹಾವಳಿ ಸಿಕ್ಕಾಪಟ್ಟೆ ಜೋರಾಗಿದೆ ಅಂತಾನೆ ಕೇಳಬಹುದು. ಏನಪ್ಪಾ..ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ? ಖಂಡಿತ ಇಲ್ಲ ನಾವು ಹೇಳುತ್ತಿರುವುದು ಕನ್ನಡ ನಟರ ಬಗ್ಗೆಯೇ. RRR ಎಂದರೆ ರಕ್ಷಿತ್ ಶೆಟ್ಟಿ ರಿಶಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ. ಸದ್ಯ ಈ ಮೂವರು ನಟರು ಕೂಡ ಬಹುಮುಖ ಪ್ರತಿಭೆಯಾಗಿದ್ದು ನಟನೆಯ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡು ಅತ್ಯದ್ಭುತ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಿದ್ದಾರೆ.
ಹೌದು ರಾಜ್ ಬಿ ಶೆಟ್ಟಿ ಯವರು ಗರುಡಗಮನ ವೃಷಭವಾಹನ ಎಂಬ ಸಿನಿಮಾ ಮಾಡುವ ಮೂಲಕ ದಕ್ಷಿಣ ಭಾರತ ಚಿತ್ರರಂಗದ ಸಿನಿ ರಸಿಕರ ಗಮನ ಸೆಳೆದಿದ್ದರೆ ಚಾರ್ಲಿ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಇವರು ಪ್ಯಾನ್ ಇಂಡಿಯಾ ಸ್ಟಾರ್ ಆದರೂ. ಸದ್ಯ ಇದೀಗ ರಿಷಬ್ ಶೆಟ್ಟಿ ಯವರ ಹೊಸ ಯುಗ ಪ್ರಾರಂಭವಾಗಿದೆ. ಹೌದು ಇಷ್ಟು ದಿನ ನಿರ್ದೇಶಕರಾಗಿ ಎಲ್ಲರ ಗಮನ ಸೆಳೆದಿದ್ದ ರಿಷಬ್ ಶೆಟ್ಟಿ ಇದೀಗ ಪರಿಪೂರ್ಣ ನಟರಾಗಿ ತಾನೂ ಕೂಡ ನಟ ರಾಕ್ಷಸ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಈ ಹಿಂದೆ ಎಷ್ಟೋ ಸಿನಿಮಾಗಳಲ್ಲಿ ನಟ ರಿಷಬ್ ಶೆಟ್ಟಿ ಅಭಿನಯಿಸಿರಬಹುದು ಆದರೆ ಇದೀಗ ತೆರೆಕಂಡಿರುವ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿಯವರ ಅಭಿನಯ ನೋಡಿ ಪ್ರತಿಯೊಬ್ಬರು ಕೂಡ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಹೌದು ಇದೀಗ ಕಾಂತಾರ ದಂತಕಥೆಯಾಗಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿದೆ.
ದೈವದ ಪ್ರೇರಣೆಯಿಂದ Kantara ಸಿನಿಮಾ ಯಶಸ್ಸು ಕಂಡಿದ್ದು ಸಾಧ್ಯವಾದರೆ ನೀವೂ ಪ್ರಾರ್ಥನೆ ಮಾಡಿ. ನಿಮಗೂ ಕೂಡ ಒಳ್ಳೆಯದಾಗುತ್ತದೆ. ಅದರೆ ಅನುಕರಣೆ ಮಾಡುವಂತಹ ಭರದಲ್ಲಿ ಅದನ್ನು ಹಾಳು ಮಾಡಬೇಡಿ ಎಂದು ರಿಷಬ್ ಶೆಟ್ಟಿ ಯವರು ಮನವಿ ಮಾಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಸಿಸಿ ನಟಿಸಿರುವ ಕಾಂತಾರ ಸಿನಿಮಾಗೆ ಎಲ್ಲಾ ಕಡೆಯಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಚಿತ್ರತಂಡ ಸಿನಿಮಾ ಗೆದ್ದ ಖುಷಿಯಲ್ಲಿದೆ. ಎಲ್ಲಿ ನೋಡಿದರೂ ಕೂಡ ಕಾಂತಾರ ಚಿತ್ರದ ಬಗ್ಗೆಯೇ ಮಾತಿದ್ದು ಯಾರ ಬಳಿ ಕೇಳಿದರೂ ಕ್ಲೈಮಾಕ್ಸ್ ವಿಚಾರವೇ. ರಿಷಬ್ ಶೆಟ್ಟಿ ಅಭಿನಯಕ್ಕೆ ಪರಭಾಷೆ ನಟರಿಂದ ಸಹ ಮೆಚ್ಚುಗೆ ವ್ಯಕ್ತವಾಗಿರುವುದು ವಿಶೇಷ.

ಸಾಮಾನ್ಯವಾಗಿ ಇನ್ನು ಯಾವುದೇ ಸಿನಿಮಾಗಳ ಡೈಲಾಗ್ ಹಾಗೂ ಹಾಡುಗಳ ವೈರಲ್ ಆದರೆ ಸಾಕು ಅದರ ರೀಲ್ಸ್ ಮಾಡುವ ಎಷ್ಟೋ ಉದಾಹರಣೆಗಳಿವೆ. ಕಾಂತಾರ ಸಿನಿಮಾದಲ್ಲಿ ದೈವ ಆವಾಹನೆಯಾದಾಗ ದೈವ ನರ್ತಕರು ಕೂಗುವ ಶಬ್ಧವನ್ನು ಚಿತ್ರದಲ್ಲಿ ತೋರಿಸಲಾಗಿದ್ದು ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಅನುಕರಣೆ ಮಾಡಲಾಗುತ್ತಿದೆ. ಹೌದು ಕೆಲವರು ಅದೇ ರೀತಿ ಕೂಗುವಂತೆ ರೀಲ್ಸ್ ಮಾಡಿ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದು ಇದು ರಿಷಬ್ ಶೆಟ್ಟಿ ಗಮನಕ್ಕೂ ಕೂಡ ಬಂದಿದೆ. ಇದೇ ವಿಚಾರವಾಗಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಚಿತ್ರದ ಸಕ್ಸಸ್ ಮೀಟ್ನಲ್ಲಿ ರಿಷಬ್ ಶೆಟ್ಟಿ ಯವರು ಮಾತನಾಡಿದ್ದಾರೆ.
ಈ ವಿಚಾರದ ಬಗ್ಗೆ ನಾನು ಹೇಳಲೇಬೇಕು ಎಂದಿರುವ ರಿಷಬ್ ಶೆಟ್ಟಿ ದೈವ ಆವಾಹನೆಯಾದಾಗ ಕೂಗುವ ದೃಶ್ಯವನ್ನು ನೋಡಿದ ಹಲವರಿಗೆ ಅದರ ಪ್ರಾಮುಖ್ಯತೆ ಎಷ್ಟು ಎಂಬುದು ನನ್ನ ಪ್ರಕಾರ ಗೊತ್ತಾಗುವುದಿಲ್ಲ. ಅದನ್ನು ಅನುಕರಣೆ ಮಾಡಿ ವಿಡಿಯೋ ಮಾಡುತ್ತಾರೆ. ಅದು ಖುಷಿಗೆ ಮಾಡಬಹುದು ಹಾಗೂ ಎಕ್ಸೈಟ್ಮೆಂಟ್ಗೆ ಮಾಡಬಹುದು. ನಾನೂ ಈಗಾಗಲೇ ಇದರ ಬಗ್ಗೆ ಮನವಿ ಮಾಡಿದ್ದು ಈಗಲೂ ಮಾಡಿದ್ದೇನೆ ದಯವಿಟ್ಟು ಆ ಆಚರಣೆಯ ಭಾವನೆಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಿ.
ಹೌದು ಚಿತ್ರೀಕರಣದ ಸಮಯದಲ್ಲಿ ನಮಗೆ ಕೆಲವೊಂದು ಅನುಭವಗಳಾಗಿದ್ದು ದೈವದ ಪ್ರೇರಣೆಯಿಂದ ಸಿನಿಮಾ ಯಶಸ್ಸು ಕಂಡಿದೆ ಸಾಧ್ಯವಾದರೆ ನೀವೂ ಪ್ರಾರ್ಥನೆ ಮಾಡಿ. ನಿಮಗೂ ಕೂಡ ಒಳ್ಳೆಯದಾಗುತ್ತದೆ. ಅದರೆ ಅನುಕರಣೆ ಮಾಡುವ ಭರದಲ್ಲಿ ಅದನ್ನು ಹಾಳು ಮಾಡಬೇಡಿ ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಬೇರೆ ದೃಶ್ಯಗಳಿಗಿಂತ ರಿಷಬ್ ಶೆಟ್ಟಿಯವರ ದೈವ ನರ್ತಕನ ಪಾತ್ರದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದ್ದು ಚಿತ್ರದ ಪ್ರೀಮಿಯರ್ ಶೋನಲ್ಲಿ ರಕ್ಷಿತ್ ಶೆಟ್ಟಿ ಸಹ ಈ ವಿಚಾರವಾಗಿ ಮಾತನಾಡಿದ್ದು ಪ್ರಮೋದ್ ಶೆಟ್ಟಿ ಕೂಡಾ ಚಿತ್ರದ ಕ್ಲೈಮಾಕ್ಸ್ನಲ್ಲಿ ರಿಷಬ್ ಶೆಟ್ಟಿ ಅವರಾಗಿರಲಿಲ್ಲ ಅವರ ಮೇಲೆ ನಿಜವಾಗಿಯೂ ದೈವ ಬಂದಿದ್ದು ಅದರ ಪ್ರೇರಣೆಯಿಂದಲೇ ಅವರು ಅಷ್ಟು ಅದ್ಭುತವಾಗಿ ನಟಿಸಿದ್ದು. ಈ ಸಿನಿಮಾದಲ್ಲಿ ನಟಿಸಿದ್ದು ನನ್ನ ಅದೃಷ್ಟ ಎಂದು ಹೇಳಿದ್ದರು. ಅಷ್ಟರ ಮಟ್ಟಿಗೆ ಈ ಚಿತ್ರವು ಎಲ್ಲರನ್ನೂ ಸೆಳೆದಿದೆ ಎನ್ನಬಹುದು.