ವಾರ್ತಾ ಮಂಜರಿ
Trending Stories, Viral News, Gossips & Everything in Kannada

Amulya: ಯುವ ದಸರಾದಲ್ಲಿ ಅಮೂಲ್ಯಾ ಮಾಡಿದ ಚಿಂದಿ ಡಾನ್ಸ್ ಹೇಗಿತ್ತು ನೋಡಿ…ವಿಡಿಯೋ

53,248

ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಎಂದು ನಟ ಗಣೇಶ್ ರವರು ಜನಪ್ರಿಯತೆ ಪಡೆದುಕೊಂಡರೆ ಇತ್ತ ನಟಿಮಣಿಯರಲ್ಲಿ ಗೋಲ್ಡನ್ ಕ್ವೀನ್ ಎಂದೇ ಖ್ಯಾತಿ ಗಳಿಸಿ ಬಹು ಬೇಡಿಕೆ ನಟಿಯಾಗಿದ್ದ ಚೆಲುವೆ ಎಂದರೆ ಅದು ಅಮೂಲ್ಯರವರು.   2001 ರಲ್ಲಿ  ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ  ಸಾಹಸಸಿಂಹ ವಿಷ್ಣುವರ್ಧನ್ ರವರ ಅಭಿನಯದ ಪರ್ವ  ಚಿತ್ರದ ಮೂಲಕ  ಬಾಲ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಅಮೂಲ್ಯ ದರ್ಶನ್ ರವರ ಜೊತೆ ಲಾಲಿಹಾಡು ಕಿಚ್ಚ ಸುದೀಪ್ ಜೊತೆ ಚೆಂದು ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಜೊತೆ ನಮ್ಮ ಬಸವ ಹೀಗೆ ಸಾಕಷ್ಟು  ಚಿತ್ರಗಳಲ್ಲಿ ಬಾಲ ನಟಿಯಾಗಿ ಅಭಿನಯಿಸುವ ಮೂಲಕ  ಕನ್ನಡಿಗರ ಮನೆಮಾತಗಿದ್ದರು.

ತದನಂತರ 2007 ರಲ್ಲಿ ಕಲಾಸಾಮ್ರಾಟ  ಎಸ್ ನಾರಾಯಣ್ ಅವರ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಸಿನಿಮಾದಲ್ಲಿ  ಕೇವಲ 13 ನೇ ವಯಸ್ಸಿನಲ್ಲಿರುವಾಗಲೇ ನಾಯಕಿಯಾಗಿ ನಟಿಸಿದ ಅಮೂಲ್ಯರವರು ಕನ್ನಡ ಸಿನಿ ರಸಿಕರ ಮನಸ್ಸನ್ನು ಕದಿಯುತ್ತಾರೆ. ಬಳಿಕ  ರಾಕಿಂಗ್ ಸ್ಟಾರ್ ಯಶ್  ಅಜಯ್ ರಾವ್ ಪ್ರೇಮ್ ಚಿರಂಜೀವಿ ಸರ್ಜಾ ಇನ್ನು ಮುಂತಾದ ಸ್ಟಾರ್ ನಟರ ಜೊತೆ ಅಮೂಲ್ಯ ರವರು ನಾಯಕಿಯಾಗಿ ಮಿಂಚಿದ್ದು ದೊಡ್ಡ ಜನಪ್ರಿಯತೆಯನ್ನೇ ಸಂಪಾದಿಸುಕೋಳ್ಳುತ್ತಾರೆ.

ಇನ್ನು ಅಮೂಲ್ಯರವರು  ಗೋಲ್ಡನ್ ಸ್ಟಾರ್ ಗಣೇಶ್ ರವರ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಂದ್ದು ಇವರಿಬ್ಬರ ಜೋಡಿಯನ್ನು ಸಿನಿ ರಸಿಕರು ಬಹಳಾನೇ ಮೆಚ್ಚಿಕೊಂಡಿದ್ದರು. ಹೌದು ಸೆಪ್ಟೆಂಬರ್ 14 ರ 1993 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನಟಿ ಅಮೂಲ್ಯ ಚಿಕ್ಕಂದಿನಿಂದಲೂ ಸಹ ಬಹಳ ಚೂಟಿಯಾಗಿದ್ದು ಇವರ ತಂದೆ ಬ್ಯುಸಿನೆಸ್ ಮ್ಯಾನ್ ಆಗಿದ್ದು ಅನಾರೋಗ್ಯ ಸಮಸ್ಯೆಯಿಂದ 2009 ರಲ್ಲಿ ದೈವಾಧೀನರಾದರು.

ಇನ್ನೂ ಅಮೂಲ್ಯ ಅವರ ಅಣ್ಣ ದೀಪಕ್ ಅರಸ್ ರವರು ಮನಸಾಲಜಿ ಎಂಬ ಕನ್ನಡ ಸಿನಿಮಾ ನಿರ್ದೇಶನವನ್ನು ಮಾಡಿದ್ದು ಅಮೂಲ್ಯ ರವರು ಚಿಕ್ಕಂದಿನಿಂದಲೂ  ಸಹ ನಟನೆ ಮಾತ್ರವಲ್ಲದೇ ಡ್ಯಾನ್ಸ್ ಕರಾಟೆ ಹೀಗೆ ಹಲವು ಚಟುವಟಿಕೆಗಳಲ್ಲಿಯೂ ಸಹ ಮುಂದಿದ್ದರು. ಅಷ್ಟೇ ಅಲ್ಲದೇ ನಟನೆಯಲ್ಲಿ ತೊಡಗಿಕೊಂಡೇ ಬಿಕಮ್ ಪದವಿಯನ್ನು ಸಹ ಸಂಪೂರ್ಣ  ಮಾಡಿದ್ದಾರೆ.

ಇನ್ನು ತಮ್ಮೆಲ್ಲರಿಗೂ ತಿಳಿದಿರುವ ಹಾಗೆ 2017 ರಲ್ಲಿ ರಾಜಕಾರಣಿಯವರ ಜಗದೀಶ್ ಅವರ ಜೊತೆ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸದ್ಯ ಅಮೂಲ್ಯ ಅವರು ತನ್ನ ಸಂಸಾರದ ಜವಾಬ್ದಾರಿ ಜೊತೆ ತನ್ನ ಪತಿಯ ರಾಜಕೀಯ ಕೆಲಸಗಳಲ್ಲಿಯೂ ಕೂಡ  Amulya ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು 9 ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸಿದ ಅಮೂಲ್ಯ ಅವರು ಸ್ಟಾರ್ ನಟಿಯಾಗಿ 14 ಚಿತ್ರಗಳಲ್ಲಿ ನಟಿಸಿದ್ದು  ಇವರ ಚೆಲುವಿನ ಚಿತ್ತಾರ ಸಿನಿಮಾದಲ್ಲಿನ ಅತ್ಯುತ್ತಮ ನಟನೆಗೆ ಉದಯ ಅವಾರ್ಡ್ ಅನ್ನು ಕೂಡ ಗೆದ್ದುಕೊಂಡಿದ್ದಾರೆ.

ಮದುವೆಯ ಬಳಿಜ ಅಮೂಲ್ಯ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ ಅತಿ ಹೆಚ್ಚು ರಾಜಕೀಯ ಕೆಲಸಗಳಲ್ಲಿ ನಿರತರಾಗಿದ್ದು  ಸದ್ಯ ಇದೀಗ ಅಮೂಲ್ಯ ವಿವಾಹವಾಗಿ ಐದು ವರುಷ ಕಳೆದಿದ್ದು ಅವಳಿ ಮಕ್ಕಳಿನ ತಾಯಿ ಕೂಡ ಆಗಿದ್ದಾರೆ.ಮಾಸ್ತಿಗುಡಿ ಮತ್ತು ಮುಗುಳುನಗೆ ಚಿತ್ರಗಳಲ್ಲಿ ನಟಿಸಿದ ಬಳಿಕ ಮತ್ಯಾವ ಚಿತ್ರಗಳಲ್ಲಿಯೂ ಕೂಡ ಅಮೂಲ್ಯ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಅಮೂಲ್ಯ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡುತಚತಿದ್ದು ಆದಷ್ಟು ಬೇಗ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು ಈ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿರುವ ನಟಿ ಅಮೂಲ್ಯ ರವರು 2023 ಕ್ಕೆ ಸಿನಿಮಾ ರಂಗಕ್ಕೆ ಮರಳಿ ಬರಲಿದ್ದಾರರೆ. ಅಮೂಲ್ಯರವರಿಗೆ ಡಿ ಬಾಸ್ ಅವರ ಜೊತೆ ಸಿನಿಮಾದಲ್ಲಿ ಅಭಿನಯಿಸುವ ಆಸೆ ಇದ್ದು  ಈಗ ಡಿ ಬಾಸ್ ರವರ ಜೊತೆ ತಂಗಿಯ ಪಾತ್ರದಲ್ಲಿ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸೋ ಆಸೆ ಇದ್ದರೂ ಎಲ್ಲೂ ಹೇಳಿಕೊಳ್ಳದ ಅಮೂಲ್ಯ ಈವರೆಗೂ ಸಾಕಷ್ಟು ಕಥೆಗಳನ್ನ ಕೇಳಿದ್ದಾರೆ.

ಅವುಗಳ ಪೈಕಿ ಒಂದು ಕಥೆ ಅವರಿಗೆ ತುಂಬಾ ಇಷ್ಟವಾಗಿದೆಯಂತೆ. ಆ ಕತೆಯಲ್ಲಿ ನಟಿಸುವುದಾಗಿಯೂ ಅಮೂಲ್ಯ ಒಪ್ಪಿಕೊಂಡಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಈ ಚಿತ್ರ ಮುಂದಿನ ಆಗಸ್ಟ್‌ ನಲ್ಲಿ ಸೆಟ್ಟೇರಲಿದೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು ಪುನೀತ್ ರಾಜ್ ಕುಮಾರ್ ರವರ ಮುಂದೆ ಸೈಮಾ ಅವಾರ್ಡ್ ನಲ್ಲಿ ಅಮೂಲ್ಯ ರವರು ಎಷ್ಟು ಕ್ಯೂಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ ನೀವೆ ನೋಡಿ.