ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪ್ಪುವನ್ನು ದೇವರ ಸ್ಥಾನದಲ್ಲಿಟ್ಟು ಪೂಜೆ ಸಲ್ಲಿಸುತ್ತಿರುವ ಚಂದನವನದ ಆ ನಟ ಯಾರು ಗೊತ್ತಾ?

655
ಅಪ್ಪು ಬದುಕಿನ ಪಯಣವನ್ನು ಕೇವಲ ನಲವತ್ತಾರನೇ ವಯಸ್ಸಿನಲ್ಲಿ ಬದುಕಿನ ಪಯಣ ನಿಲ್ಲಿಸಿ ಬಿಟ್ಟಿದ್ದಾರೆ. ಅದಲ್ಲದೇ, ಆದರ್ಶಗಳನ್ನು ಅದೆಷ್ಟೋ ಅಭಿಮಾನಿಗಳು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡಿರುವುದು ನಿಜಕ್ಕೂ ಖುಷಿ ಪಡುವ ವಿಚಾರ. ಹೌದು, ಅಪ್ಪುವಿನದು ಯಾರಿಗೂ ನಿಲುಕದ ವ್ಯಕ್ತಿತ್ವ. ತಾನೊಬ್ಬ ಸ್ಟಾರ್ ನಟನಾದರೂ ಎಲ್ಲಿಗೂ ಕೂಡ ತೋರಿಸಿಕೊಳ್ಳದೇ, ಎಲ್ಲರೊಂದಿಗೂ ಬೆರೆಯುತ್ತಿದ್ದರು. ಅಭಿಮಾನಿಗಳಿಗೆ ಹಾಗೂ ಸೆಲೆಬ್ರಿಟಿಗಳ ಜೊತೆಗೂ ಉತ್ತಮ ಒಡನಾಟ  ಹೊಂದಿದ್ದ ವ್ಯಕ್ತಿ ಅಪ್ಪು. ಪವರ್ ಸ್ಟಾರ್ ಪಟ್ಟವನ್ನು ಮತ್ತೆ  ಯಾವ ನಟ ಬಂದರೂ ಕೂಡ ತುಂಬಲೂ ಸಾಧ್ಯವಿಲ್ಲ ಎನ್ನುವುದು ಮಾತ್ರ ನಿಜ.
ಇನ್ನು ಬದುಕಿದ್ದ ಅಷ್ಟು ದಿವಸ ಯಾರಿಗೂ ಗೊತ್ತಾಗದಂತೆ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿದ್ದ ಅಪ್ಪುವಿನ ಮತ್ತೊಂದು ಮುಖದ ಪರಿಚಯವಾದದ್ದು ಅವರು ದೈಹಿಕವಾಗಿ ಅಗಲಿದ ನಂತರ ಎನ್ನುವುದು ನಿಜಕ್ಕೂ ಬೇಸರದ ವಿಚಾರ. ಆದರೆ ಕನ್ನಡ ನಟರೊಬ್ಬರು ಅಪ್ಪುವನ್ನು ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ, ಆ ನಟ ಯಾರು ಎಂದು ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.
ವೈಯುಕ್ತಿಕ ಬದುಕಿನಲ್ಲಿ ಹಾಗೂ ಸಿನಿಮಾ ಬದುಕಿನಲ್ಲಿ ಯಾರೊಂದಿಗೂ ಮನಸ್ತಾಪವನ್ನು ಮಾಡಿಕೊಳ್ಳದ ಮಹಾನುಭಾವ.  ಅದರ ಜೊತೆಗೆ, ಸಮಾಜ ಮುಖಿ ಕೆಲಸಗಳನ್ನು ಮಾಡಿದರೂ ಎಂದಿಗೂ ಪ್ರಚಾರವನ್ನು ಇಷ್ಟ ಪಟ್ಟವರಲ್ಲ. ಇವರು ಮಾಡುತ್ತಿದ್ದ ಕೆಲಸಗಳು ಬೆಳಕಿಗೆ ಬಂದದ್ದು ಅಪ್ಪು ಅಗಲಿದ ನಂತರವೇ ಎಂಬುದು ಮಾತ್ರ ಸತ್ಯ. ಅಪ್ಪು ಒಬ್ಬ ಸ್ಟಾರ್ ನಟ ಮಾತ್ರವಲ್ಲ, ಅದಕ್ಕಿಂತ ಮಿಗಿಲಾಗಿ ಹೃದಯವಂತ ವ್ಯಕ್ತಿ. ಯಾವುದೇ ಸ್ವಾರ್ಥವನ್ನು ಇಟ್ಟು ಕೊಳ್ಳದೇ ಮಾಡಿದ ಸೇವೆ ಮಾಡಿದ್ದಾರೆ. ಇವತ್ತಿಗೂ ಅಪ್ಪುವಿನ ಗುಣವನ್ನು ಹೊಗಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಸಂಬಂಧವೇ ಇಲ್ಲದ ಅಭಿಮಾನಿಗಳಿಗೆ ಈ ಪರಿಸ್ಥಿತಿ ಹೀಗಾಗದರೆ ನಲವತ್ತೇಳು ವರ್ಷ ಜೊತೆಯಲ್ಲಿ ಬೆಳೆದ ಅಣ್ಣಂದಿರು ಅಕ್ಕಂದಿರು, ಇಪ್ಪತ್ತೆರೆಡು ವರ್ಷ ಜೊತೆಯಾಗಿ ಸಂಸಾರ ಮಾಡಿದ ಮಡದಿ ಅಶ್ವಿನಿ,
ಇನ್ನು, ಅಪ್ಪವನ್ನು  ಕೆಳೆದುಕೊಂಡ ಮಕ್ಕಳ ಪರಿಸ್ಥಿತಿಯನ್ನು ಇವತ್ತಿಗೂ ಊಹಿಸುವುದು ಕಷ್ಟವೇ. ಅಷ್ಟೇ ಅಲ್ಲದೇ, ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಬಳಿ ಬರುತ್ತಿರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅಷ್ಟೇ ಅಲ್ಲದೇ, ಪುನೀತ್ ರಾಜ್ ಕುಮಾರ್ ಅವರು ಅಗಲಿದ ನಂತರ  ಫೋಟೋ ಹಾಗೂ ವಿಡಿಯೋಗಳು ಆಗಾಗ ವೈರಲ್ ಆಗುತ್ತಿದೆ.ಇಡೀ ಕರ್ನಾಟಕ ಇಂದು ತಮ್ಮ ಮನೆ ಮಗನನ್ನು ಕಳೆದುಕೊಂಡ ದುಃಖದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಕರ್ನಾಟಕ ಚಲನಚಿತ್ರ ಮಂಡಳಿಯ ಅಪ್ಪು ಅವರ ಕುರಿತಾದ ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ತಮಿಳು ತೆಲುಗು ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ಕಲಾವಿದರು ಆಗಮಿಸಿದ್ದರು ಮತ್ತು ಕರ್ನಾಟಕದ ರಾಜಕೀಯ ಮುಖಂಡರುಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅಷ್ಟೇ ಅಲ್ಲದೇ, ಕನ್ನಡದ ಸ್ಟಾರ್ ನಟರು ಕೂಡ ಅಪ್ಪುವನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ.  ಅಪ್ಪುವಿನ ಆದರ್ಶಗಳನ್ನು ತಮ್ಮ ಜೀವನದ ಉದ್ದಕ್ಕೂ ಅಳವಡಿಸಿಕೊಂಡು ಒಳ್ಳೆಯ ಕೆಲಸಗಳಲ್ಲಿ ಅನೇಕ ಸ್ಟಾರ್ ನಟರು ಸೇರಿಕೊಂಡಿದ್ದಾರೆ. ಅಂದಹಾಗೆ, ಚಂದನವನದ ನಟ ನಿನಾಸಂ ಸತೀಶ್ ಕೂಡ ಅಪ್ಪುವಿನ ಆಪ್ತ ಸ್ನೇಹಿತರಾಗಿದ್ದರು. ಪ್ರತಿಯೊಂದು ಹೆಜ್ಜೆಯಲ್ಲಿಯೂ ಅಪ್ಪುವಿನ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆಯುತ್ತಿದ್ದರು. ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡು ದುಃಖದಲ್ಲಿರುವ ನಿನಾಸಂ ಸತೀಶ್ ಅವರು ಅಪ್ಪುವನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಅದರ ಜೊತೆಗೆ, ಅಪ್ಪುವಿನ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ವೈರಲ್ ಆಗಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಸತೀಶ್ ಅವರು ಅಪ್ಪುವನ್ನು ದೇವರಾಗಿ ಕಾಣುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.