ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಿತ್ಯಾನಂದನಿಗೆ ಆ ಕಾಯಿಲೆ ಇರುವುದು ಖಚಿತ , ಹೊರಬಿತ್ತು ಸತ್ಯ

712

ಆರೋಪ ಎದುರಿಸುತ್ತಿರುವ ನಿತ್ಯಾನಂದ ಅವರ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ನಿತ್ಯಾನಂದ ಸ್ವಾಮೀಜಿಯವರು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಹೌದು, ಭಾರತದಿಂದ ಸುಮಾರು 1600 ಕಿಲೋಮೀಟರ್ ದೂರದಲ್ಲಿ ತನ್ನದೇ ಆದ ದೇಶ ನಿರ್ಮಾಣ ಮಾಡಿದ್ದಾನೆ ಎನ್ನುವ ಮೂಲಕ ಸುದ್ದಿಯಾಗಿದ್ದರು. ಅಷ್ಟೇ ಅಲ್ಲದೇ, ಲ್ಯಾಟಿನ್ ಅಮೇರಿಕಾದ ಇಕ್ವೆಡಾರ್ ಹತ್ತಿರ ತನ್ನದೇ ಆದ ರಾಷ್ಟ್ರ ನಿರ್ಮಿಸಿದ್ದಾನೆ. ಸಂಸ್ಕ್ರತ, ಇಂಗ್ಲಿಷ್ ಹಾಗೂ ತಮಿಳು ಭಾಷೆ ಈ ದೇಶದ ಭಾಷೆಗಳಾಗಿವೆ.

 

ಹಾಗೂ ಈ ದೇಶಕ್ಕೆ ಕೈಲಾಸ ಎಂದು ಹೆಸರಿಡಲಾಗಿತ್ತು. ಇದಾದ ಬಳಿಕ ತನ್ನ ಹೊಸ ದೇಶದಲ್ಲಿ ರಿಸರ್ವ್ ಬ್ಯಾಂಕ್‌ ಸ್ಥಾಪಿಸಿರುವುದಾಗಿ ಘೋಷಿಸಿದ್ದರು. ಇನ್ನು, ಗಣೇಶ ಚತುರ್ಥಿಯಂದು ಕೈಲಾಸ ದೇಶದ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡುವುದಾಗಿಯೂ ಪ್ರಕಟಿಸಿದ್ದರು. ಆದರೆ ಇದೀಗ ನಿತ್ಯಾನಂದ ಸ್ವಾಮೀಜಿ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನಾ ಎನ್ನುವ ಅನುಮಾನ ಮೂಡಿದೆ. ಇದಕ್ಕೆ ಅಸಲಿ ಕಾರಣ ಇಲ್ಲಿದೆ.

ಆಧ್ಯಾತ್ಮಿಕವಾಗಿ ಹೆಸರು ಮಾಡಿದ್ದ ವ್ಯಕ್ತಿಯ ರಾಸಾ ಲೇಲೆಯ ಕುರಿತಾದ ವೈರಲ್ ಆಗಿದ್ದಾಗ ಇವರ ಅಸಲಿ ಮುಖ ಬೆಳಕಿಗೆ ಬಂದಿತ್ತು. ಆದರೂ ಕೂಡ ಇವರ ಅಭಿಮಾನಿಗಳು ಇವರನ್ನು ದೇವರೆನ್ನುವ ಹಾಗೇ ಇವತ್ತಿಗೂ ಪೂಜಿಸುತ್ತಿಸುತ್ತಾರೆ. ನಿತ್ಯಾನಂದ ಸ್ವಾಮಿಯವರಿಗೆ ಸಾಕಷ್ಟು ಸಂಖ್ಯೆಯ ಫಾಲ್ಲೋರ್ಸ್ ಇದ್ದಾರೆ. ಇವರು ಏನು ಹೇಳಿದರೂ ಕಣ್ಣು ಮುಚ್ಚಿ ನಂಬುವ ಜನರ ವರ್ಗವೊಂದಿದೆ. ಅಂದಹಾಗೆ, ಇವರ ಪ್ರವಚನ ವಿಡಿಯೋಗಳು ವೈರಲ್ ಆಗುತ್ತಿತ್ತು. ಅದರ ಜೊತೆಗೆ, ಭಾರತ ಸೇರಿದಂತೆ ಅಮೇರಿಕಾದಲ್ಲೂ ಇವರ ಆಶ್ರಮಗಳಿವೆ.

 

ಕೆಲವು ವರ್ಷಗಳ ಹಿಂದೆ ಆಶ್ರಮದ ರೂಮಿನಲ್ಲಿ ಇಬ್ಬರು ಹೆಣ್ಣುಮಕ್ಕಳ ಜೊತೆ ಇದ್ದ ವಿಡಿಯೋ ಸಖತ್ ಸುದ್ದಿ ಮಾಡಿತ್ತು. ನಿತ್ಯಾನಂದರ ಕಾರು ಚಾಲಕ ವಿಡಿಯೋ ಚಿತ್ರೀಕರಣ ಮಾಡಿದ್ದರು ಎನ್ನಲಾಗಿತ್ತು. ಆ ವಿಡಿಯೋದಲ್ಲಿದ್ದ ನಟಿ ರಂಜಿತಾ ಎಂದು ಕೂಡ ಗುರುತಿಸಲಾಗಿತ್ತು. ಈ ವಿಡಿಯೋವನ್ನು ಸನ್ ಟಿವಿಯೊಂದು ಪ್ರಸಾರ ಮಾಡುವ ಮೂಲಕ ನಿತ್ಯಾನಂದರವರ ನಿಜ ಬಣ್ಣವನ್ನು ಬಟಾ ಬಯಲು ಮಾಡಿತ್ತು. ನಿಜ ಸ್ವರೂಪವನ್ನು ಬಯಲು ಮಾಡಿದ್ದರೂ ಕೂಡ ನಿತ್ಯಾನಂದರಿಗೆ ಇರುವ ಅಭಿಮಾನಿಗಳ ಸಂಖ್ಯೆ ಕೊಂಚವೂ ಕಡಿಮೆಯಾಗಿಲ್ಲ.

ಆದರೆ ನಿತ್ಯಾನಂದನವರಿಗೆ ಆರೋಗ್ಯ ಸಮಸ್ಯೆಯಿದೆ ಎನ್ನುವ ಅನುಮಾನಕ್ಕೆ ಕಾರಣವಾಗಿರುವುದು ಕೈಲಾಸದ ವಿದೇಶಾಂಗ ಸಚಿವ ಎಂದು ಹೇಳಿಕೊಳ್ಳುವ ನಿತ್ಯ ಪ್ರೇಮಾತ್ಮ ಆನಂದ ಸ್ವಾಮಿಯವರು ಬರೆದಿರುವ ಪತ್ರ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಅವರಿಗೆ ಆಗಸ್ಟ್ 7ರಂದು ಈ ಪತ್ರ ಬರೆಯಲಾಗಿದ್ದು ಇದರಲ್ಲಿ, ನಿತ್ಯಾನಂದ ಸ್ವಾಮೀಜಿಯವರಿಗೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

 

ಹೀಗಾಗಿ ಅವರಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದು, ಹೀಗಾಗಿ ಅವರಿಗೆ ರಾಜಕೀಯ ಆಶ್ರಯ ನೀಡಿದರೆ ಏರ್ ಆಂಬುಲೆನ್ಸ್ ಮೂಲಕ ಶ್ರೀಲಂಕಾಕ್ಕೆ ಕರೆದುಕೊಂಡು ಬರುತ್ತೇವೆ ಎನ್ನಲಾಗಿದೆ. ಅಷ್ಟೇ ಅಲ್ಲದೇ, ಚಿಕಿತ್ಸೆ ಹಾಗೂ ಅದಕ್ಕೆ ಬೇಕಾದ ಎಲ್ಲ ಉಪಕರಣಗಳ ವೆಚ್ಚವನ್ನು ಭರಿಸಲು ತಮ್ಮ ಸರ್ಕಾರ ಸಿದ್ದ ಎಂದು ಕೈಲಾಸ ದೇಶದ ವಿದೇಶಾಂಗ ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ. ಚಿಕಿತ್ಸೆಯೂ ಪೂರ್ಣಗೊಂಡ ಬಳಿಕ ಕೋಟ್ಯಾಂತರ ರೂಪಾಯಿ ಬೆಲೆ ಬೀಳುವ ಈ ಉಪಕರಣಗಳನ್ನು ಅಲ್ಲಿಯೇ ಬಿಡುವುದಾಗಿ ಹೇಳಲಾಗಿದೆ. ಜೊತೆಗೆ ಆಶ್ರಯ ನೀಡಿದರೆ ಶ್ರೀಲಂಕಾದಲ್ಲಿ ಭಾರಿ ಹೂಡಿಕೆ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. ಇವರು ಶ್ರೀಲಂಕಾಕ್ಕೆ ಬರೆದಿರುವ ಪತ್ರವು ಈ ಎಲ್ಲಾ ಅನುಮಾನಗಳಿಗೆ ಕಾರಣವಾಗಿದೆ ಎನ್ನ ಬಹುದು.