ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಕೊನೆಗೂ ಪ್ರತಿಕ್ರಿಯೆ ಕೊಟ್ಟ ಧ್ರುವ..ಹೇಳಿದ್ದೆ ಬೇರೆ

2,706
ಮೇಘನಾ ರಾಜ್ ರವರು ಬಹುಭಾಷೆಯಲ್ಲಿ ನಟಿಸಿ ಹೆಸರು ಮಾಡಿರುವ ನಟಿಯಾಗಿದ್ದು ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಿಂದ ಸೈಕಾಲಜಿ ಪದವಿ ಪಡೆದವರು. ಚಿರಂಜೀವ ಸರ್ಜಾ ಅವರ ಜೊತೆಗೆ ಮೇಘನಾ ಅವರದು ಪ್ರೇಮ ವಿವಾಹವಾಗಿದ್ದು ಅವರು ಮದುವೆಯಾಗಿ ಕೇವಲ ಎರಡು ವರ್ಷಗಳಾಗಿತ್ತು ಅಷ್ಟೇ. ಚಿರಂಜೀವಿ ಮತ್ತು ಮೇಘನಾ ಬಹಳ ಕಾಲ ಅಂದರೆ ಸುಮಾರು ಎಂಟು ವರ್ಷಗಳ ಕಾಲ ಪರಸ್ಪರ ಪ್ರೇಮಿಸಿ ಮನೆಮಂದಿಯನ್ನೆಲ್ಲ ಒಪ್ಪಿಸಿ ಮದುವೆ ಆದವರು. ಮದುವೆಯಾದ ಎರಡು ವರ್ಷಗಳಲ್ಲೇ ಮೇಘನಾ ಪತಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಗಲಿದ್ದು ರಾಜ್ಯಕ್ಕೆ ರಾಜ್ಯವೇ ಚಿರು ಅವರ ಅಗಲಿಕೆಗೆ ಕಣ್ಣೀರುಗರೆಯಿತು.
ಆಗ ಮೇಘನಾ ಐದು ತಿಂಗಳ ಗರ್ಭಿಣಿ. ಚಿರುವಿನ ನೆನಪನ್ನೇ ಜೀವಂತವಾಗಿಟ್ಟು ಅವರು ರಾಯನ್ ರಾಜ್ ಸರ್ಜಾ ಅವರಿಗೆ ಜನ್ಮ ನೀಡಿದ್ದು ಮಗ ರಾಯನ್‌ಗಾಗಿ ಒಂದಿಷ್ಟು ಸಮಯ ಮುಡಿಪಾಗಿಟ್ಟು ಬಳಿಕ ಮನರಂಜನಾ ಮಾಧ್ಯಮಕ್ಕೆ ಮರಳಿದ್ದಾರೆ. ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಅವರ ಇತ್ತೀಚಿನ ಚಿತ್ರ. ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದು  ಚಿತ್ರದಲ್ಲೂ ನಟನೆ ಮುಂದುವರಿಸಿದ್ದಾರೆ. ಇಷ್ಟೆಲ್ಲ ಆಗುವ ಹೊತ್ತಿಗೆ ಅವರ ಮರು ಮದುವೆಯ ವಿಚಾರ ಸುದ್ದಿಯಲ್ಲಿದೆ. ಈ ಬಗ್ಗೆ ಮೇಘನಾ ರಾಜ್ ಅವರೇ ಬಾಲಿವುಡ್ ಬಬಲ್ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.
ಚಿರಂಜೀವಿ ಸರ್ಜಾ ಸಿನಿಮಾವನ್ನು ಗೆಲ್ಲಿಸದಿದ್ದರೂ ಅವರ ಪರ್ಸನಲ್ ಲೈಫ್‌ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಕಮೆಂಟ್ ಮಾಡೋದನ್ನು ಜನ ಬಿಟ್ಟಿಲ್ಲ. ಹೌದು ಮೇಘನಾ ಅವರ ಮಾನ ಹಾನಿಯಾಗುವಂಥಾ ಮನಸ್ಸಿಗೆ ಘಾಸಿ ನೀಡುವಂಥಾ ಕಮೆಂಟ್‌ಗಳನ್ನೂ ಹಾಕುತ್ತಿದ್ದು ಒರಿಜಿನಲ್ ಹೆಸರು ಮರೆ ಮಾಚಿ ಹೀಗೆಲ್ಲ ಕಮೆಂಟ್ ಮಾಡುವವರ ವಿರುದ್ಧ ಮೇಘನಾ ನಿರ್ಲಕ್ಷ್ಯ ಮಾಡಿದ್ದಾರೆ. ಹೌದು ಕೆಸರಿಗೆ ಕೈ ಹಾಕುವುದಕ್ಕಿಂತ ಅದನ್ನು ಆವಾಯ್ಡ್ ಮಾಡಿ ಮುಂದೆ ಹೋಗೋದು ಬೆಟರ್ ಅನ್ನೋ ಅವರ ನಿರ್ಧಾರವನ್ನು ಅವರ ಹಿತೈಷಿಗಳು ಸ್ವಾಗತಿಸಿದ್ದಾರೆ. ಇದೀಗ ಮೇಘನಾ ತಮ್ಮ ಮರು ಮದುವೆಯ ಬಗ್ಗೆ ಇಂಗ್ಲೀಷ್ ವೆಬ್‌ಸೈಟ್ ಒಂದರ ಸಂದರ್ಶನದಲ್ಲಿ ಮಾತನಾಡಿದ್ದು ನಾನು ನಮ್ಮ ಸಮಾಜದ ಮೈಂಡ್‌ಸೆಟ್ ಬಗ್ಗೆ ಯೋಚಿಸುತ್ತಿರುತ್ತೇನೆ ಇಲ್ಲಿ ಕೆಲವರು ನನಗೆ ಮರು ವಿವಾಹವಾಗುವಂತೆ ಸಲಹೆ ನೀಡ್ತಾರೆ.
ಇನ್ನೂ ಕೆಲವರು ನಿಮ್ಮ ಮಗನ ಜೊತೆಗೆ ಸಂತೋಷದಿಂದಿರಿ. ಮರು ಮದುವೆ ಯೋಚನೆ ಬೇಡ ಅಂತಿದ್ದಾರೆ. ಸೋ ನಾನು ಯಾರು ಮಾತು ಕೇಳಲಿ? ಎಂದು ಮೇಘನಾ ಹೇಳಿದ್ದಾರೆ. ಆದರೆ ಮೇಘನಾ ಅವರೇ ಹೇಳಿದಂತೆ ಅವರಿನ್ನೂ ಮರು ವಿವಾಹದ ಬಗ್ಗೆ ಯೋಚನೆ ಮಾಡಿಲ್ಲ. ಚಿರು ನನ್ನ ಜೊತೆಗೆ ಅವರ ಯೋಚನಾ ಕ್ರಮವನ್ನು ಬಿಟ್ಟು ಹೋಗಿದ್ದಾರೆ. ಅವರೇ ಹೇಳಿದಂತೆ ನಾಳೆ ಏನಾಗುತ್ತೆ ಅನ್ನೋದರ ಬಗ್ಗೆ ಆಗಲೀ ಇನ್ನೊಂದಿಷ್ಟು ದಿನಗಳಾದ ಮೇಲೆ ನನ್ನ ಬದುಕು ಏನಾಗಬಹುದು ಅನ್ನೋದರ ಬಗೆಗಾಗಲಿ ತಲೆ ಕೆಡಿಸಿಕೊಳಲ್ಲ. ನಾನು ಈ ಕ್ಷಣದಲ್ಲಿ ಜೀವಿಸುವವಳು. ಕೆಲವರೆಲ್ಲ ನೀವು ಇತ್ತೀಚೆಗೆ ಚಿರು ಅವರ ಫೋಟೋ ಪೋಸ್ಟ್ ಮಾಡ್ತಿಲ್ಲ ಅವರನ್ನ ಮರೀತಿದ್ದೀರಿ ಅನ್ನೋ ಮಾತುಗಳನ್ನೆಲ್ಲ ಹೇಳುತ್ತಿದ್ದಾರೆ.
ನನಗೆ ಚಿರುವಿನ ಮೇಲಿರುವ ಪ್ರೀತಿಯನ್ನು ನಾನು ಫೋಟೋ ಹಾಕುವ ಮೂಲಕ ಪ್ರೂವ್ ಮಾಡಬೇಕಿಲ್ಲ. ನಾನು ಆತನ ಬಗ್ಗೆ ಯಾವಾಗ ಯೋಚಿಸುತ್ತೇನೆ ಅನ್ನೋದನ್ನೂ ಹೇಳಬೇಕಿಲ್ಲ. ಇದು ಸಂಪೂರ್ಣವಾಗಿ ನನ್ನೊಬ್ಬಳಿಗೇ ಸಂಬಂಧಿಸಿದ್ದು. ನನ್ನ ಬದುಕಿನ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಸ್ಟ್ರೆಂಥ್ ನನ್ನಲ್ಲಿದೆ. ಆದರೆ ನಾನು ನನ್ನ ಬದುಕಿನ ಬಗ್ಗೆ ಏನೇ ನಿರ್ಧಾರ ತೆಗೆದುಕೊಂಡರೂ ಅದರ ಹಿಂದೆ ಚಿರು ಇರ್ತಾರೆ. ನಿನ್ನ ಮನಸ್ಸಿನ ಮಾತನ್ನಷ್ಟೇ ಕೇಳಬೇಕು ಅನ್ನೋದನ್ನೇ ನಾನು ಬದುಕಿನ ಕೊನೆಯವರೆಗೂ ಪಾಲಿಸಿಕೊಂಡು ಬರುತ್ತೇನೆ ಎಂಬ ಮಾತುಗಳನ್ನೂ ಮೇಘನಾ ಹೇಳಿದ್ದಾರೆ.ಸದ್ಯ ಈಗ ಮೇಘನ ರಾಜ್ ರವರ ಎರಡನೇ ಮದುವೆ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದ್ದಂತೆಯೇ ಧ್ರುವ ಸರ್ಜಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹೌದು ಈ ಕುರಿತು ಮಾತನಾಡಿರುವ ಧ್ರುವ ಸರ್ಜಾ ಅವರು ಇದು ಅತ್ತಿಗೆಯ ವೈಯಕ್ತಿಕ ವಿಚಾರ. ಈ ವಿಚಾರದ ಕುರಿತು ಮಾತನಾಡಲು ನಾನು ಇಚ್ಛಿಸುವುದಿಲ್ಲ. ಈ ರೀತಿಯ  ಸುಳ್ಳು ಸುದ್ದಿ ಹಬ್ಬಿಸಬೇಡಿ. ನಾವು ರಾಯನ್ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದು ಅವನ ಭವಿಷ್ಯ ಬಹಳ ಚೆನ್ನಾಗಿರಬೇಕು ಅದೇ ನಮ್ಮ ಗುರಿ. ಎಂದಿದ್ದಾರೆ ಧ್ರುವ ಸರ್ಜಾ. ಸದ್ಯ ಧ್ರುವ ರವರ ಮಾತನ್ನು ಕೇಳಿ ಅತ್ತಿಗೆ ಮೇಘನಾ ಕಣ್ಣೀರು ಹಾಕಿದ್ದಾರೆ. ಇನ್ನು ಮೇಘನಾ ಮಗನನ್ನು ಬಹಳ ಅಕ್ಕರೆಯಿಂದ ಪೋಷಿಸುತ್ತಿದ್ದು ಇತ್ತೀಚೆಗೆ ರಾಯನ್ ಸರ್ಜಾ ಅಮ್ಮ ಅನ್ನುವ ಬದಲು ಅಪ್ಪಾ ಅಂತ ಕರೆದಿದ್ದ ವೀಡಿಯೋ ವೈರಲ್ ಆಗಿತ್ತು. ಜೊತೆಗೆ ರಾಷ್ಟ್ರ ಧ್ವಜದ ಜೊತೆಗೆ ರಾಯನ್ ಇರುವ ಫೋಟೋಗೂ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.