ಕಿರುತೆರೆ ಲೋಕ ಹಾಗೂ ಬೆಳ್ಳಿತೆರೆಯಲ್ಲಿ ಸಹಕಲಾವಿದರನ್ನು ಪ್ರೀತಿಸಿ ಮದುವೆಯಾಗುವುದು ಸರ್ವೇ ಸಾಮಾನ್ಯವಾಗಿದೆ. ಈಗಾಗಲೇ ಸಾಕಷ್ಟು ನಟ ನಟಿಯರು ತಮ್ಮ ಜೊತೆಗೆ ನಟಿಸುತ್ತಿದ್ದ ಸಹ ಕಲಾವಿದರನ್ನು ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಆದರೆ ಕಳೆದ ಕೆಲ ದಿನಗಳ ಹಿಂದೆ, ಈ ಜೋಡಿಯ ಮದುವೆಯು ಸಖತ್ ಸುದ್ದಿಯಾಗಿತ್ತು. ತಮಿಳು ಸಿನಿಮಾ ಹಾಗೂ ಕಿರುತೆರೆಯ ಮೂಲಕ ಹೆಸರು ಮಾಡಿರುವ ನಟಿ ಹಾಗೂ ನಿರೂಪಕಿ ಮಹಾಲಕ್ಷ್ಮಿರವರು ನಿರ್ಮಾಪಕ ರವೀಂದರ್ ಅವರ ಜೊತೆಗೆ ಮದುವೆಯಾಗಿದ್ದಾರೆ.
ಮಹಾಲಕ್ಷ್ಮಿಯವರ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ, ನಿರೂಪಕಿಯಾಗಿ ಮಾತ್ರವಲ್ಲದೆ, ನಟಿಯಾಗಿಯೂ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಾಲಕ್ಷ್ಮಿಯವರು ರವೀಂದರ್ ಚಂದ್ರಶೇಖರ್ ನಿರ್ಮಿಸಿದ್ದ ‘ವಿಡಿಯುಮ್ ವಾರೈ ಕಾಥಿರು’ ಸಿನಿಮಾದಲ್ಲೂ ನಟಿಸಿದ್ದರು. ಕಿರುತೆರೆ ಲೋಕದಲ್ಲಿಯು ಮಹಾಲಕ್ಷ್ಮೀ ನಿರೂಪಕಿಯಾಗಿ ಜನಪ್ರಿಯತೆ ಗಳಿಕೊಂಡಿದ್ದಾರೆ.
ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ. ಅಂದಹಾಗೆ, ರವೀಂದರ್ ಚಂದ್ರಶೇಖರನ್ ಅವರು ನಟ್ಪುನ ಎನ್ನಡು ಥೆರಿಯುಮ, ಮುರುಂಗೈಕೈ ಚಿಪ್ಸ್, ವಿಡಿಯುಮ್ ವಾರೈ ಕಾಥಿರು ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ಕೂಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಈ ಜೋಡಿಯ ಮದುವೆಯೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಾಗಾದರೆ, ಇಲ್ಲಿದೆ ನೋಡಿ ಅಸಲಿ ಸತ್ಯ.
ಇನ್ನು, ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಅವರಿಗೆ ಇದು ಎರಡನೇ ಮದುವೆಯಾಗಿದೆ. ಈಗಾಗಲೇ ಇಬ್ಬರಿಗೂ ಕೂಡ ಒಂದು ಮದುವೆಯಾಗಿದೆ. ರವೀಂದರ್ ನಿರ್ಮಾಣದ ಸಿನಿಮಾದಲ್ಲಿ ಮಹಾಲಕ್ಷ್ಮಿ ನಟಿಸಿದ್ದರು. ಆ ಸಿನಿಮಾದಿಂದ ಇವರಿಬ್ಬರಿಗೂ ಸ್ನೇಹ ಸಂಬಂಧವಿತ್ತು. ಕಳೆದ ಕೆಲ ದಿನಗಳ ಹಿಂದೆ ಮದುವೆ ಬಂಧನಕ್ಕೆ ಒಳಪಟ್ಟಿದ್ದಾರೆ. ಈ ಹೊಸ ಜೋಡಿ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮಹಾಲಕ್ಷ್ಮೀಯವರು ‘ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆಯಲು ನಾನು ತುಂಬ ಅದೃಷ್ಟ ಮಾಡಿದ್ದೇನೆ. ಬೆಚ್ಚನೆಯ ಪ್ರೀತಿಯಿಂದ ನೀವು ನನ್ನ ಬದುಕನ್ನು ಪರಿಪೂರ್ಣಗೊಳಿಸಿದ್ದೀರಿ. ಲವ್ ಯೂ ಅಮ್ಮು..’ ಎಂದು ಬರೆದುಕೊಂಡಿದ್ದಾರೆ. ಅದರ ಜೊತೆಗೆ, ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಮದುವೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ‘ಮಹಾಲಕ್ಷ್ಮಿ ತರ ಒಂದು ಹೆಣ್ಣು ಸಿಕ್ಕರೆ, ಜೀವನ ಚೆನ್ನಾಗಿರುತ್ತೆ ಅಂತ ಹೇಳ್ತಾರೆ, ಆದರೆ ಮಹಾಲಕ್ಷ್ಮಿಯೇ ಜೀವನವಾಗಿ ಸಿಕ್ಕರೆ. ಕಮಿಂಗ್ ಸೂನ್ ಲೈವ್ ಇನ್ ಫ್ಯಾಟ್ ಮಾನ್ ಫ್ಯಾಕ್ಟ್ .
ಸ್ಮಾಲ್ ಸ್ಟೋರಿ ವಿಥ್ ಮೈ ವೈಫ್ ‘ಎಂದು ಬರೆದುಕೊಂಡಿದ್ಧಾರೆ. ಈ ಸೆಲೆಬ್ರಿಟಿ ಜೋಡಿಗಳ ಮದುವೆಯ ಫೋಟೋಗಳು ವೈರಲ್ ಆಗಿದ್ದು, ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯದ್ದೆ ಸುದ್ದಿಯಾಗಿದ್ದು, ಕೆಲವರು ಈ ಜೋಡಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಕೆಲವರು ಇದು ನಿಜ ಮದುವೆಯಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಜೋಡಿಯ ವಯಸ್ಸಿನ ಅಂತರ ಕೇಳಿದರೆ ಅಚ್ಚರಿಯಾಗುವುದು ಪಕ್ಕಾ.. ಹೌದು, ಕೇವಲ ರೂಪದಲ್ಲಿ ಮಾತ್ರವಲ್ಲದೆ ವಯಸ್ಸಿನಲ್ಲಿಯೂ ಕೂಡ ಬಹಳಷ್ಟು ವ್ಯತ್ಯಾಸವಿದೆ. ಹೌದು ಮಹಾಲಕ್ಷ್ಮಿ ಹಾಗೂ ರವೀಂದ್ರನ್ ನಡುವೆ ಬರೋಬ್ಬರಿ 20 ವರ್ಷಗಳ ವಯಸ್ಸಿನ ಅಂತರವಿದೆ. ಮಹಾಲಕ್ಷ್ಮಿ 21 ಮಾರ್ಚ್ 1990 ರಂದು ಜನಿಸಿದ್ದು, ಅವರ ವಯಸ್ಸು 32 ವರ್ಷ. ಆದರೆ ಅವರ ಎರಡನೇ ಪತಿ ರವೀಂದ್ರನ್ ಚಂದ್ರಶೇಖರನ್ 1 ಜೂನ್ 1970 ರಂದು ಜನಿಸಿದ್ದು, ಅವರಿಗೆ 52 ವರ್ಷ. ವಯಸ್ಸಿನ ಅಂತರವು ಬಹಳಷ್ಟು ಇದ್ದು, ಹಣದ ಮುಂದೆ ಸೌಂದರ್ಯ ವಯಸ್ಸು ಆಸ್ತಿ ಅಂತಸ್ತು ಇದ್ಯಾವುದೂ ಕೂಡ ಲೆಕ್ಕಕ್ಕೆ ಬರುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.