ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬಿಗ್ಬಾಸ್ ಮನೆಯಲ್ಲಿ ಅತಿಹೆಚ್ಚು ಆಸ್ತಿ ಇರುವುದೇ ಆರ್ಯವರ್ಧನ್ ಗುರೂಜಿ ಬಳಿ, ನೋಡಿ ಮೌಲ್ಯ

411

ಕನ್ನಡ ಕಿರುತೆರೆ ಲೋಕದಲ್ಲಿ ಪ್ರೇಕ್ಷಕ ವರ್ಗಕ್ಕೆ ಬಹುದೊಡ್ಡ ಮಟ್ಟದಲ್ಲಿ ಮನೋರಂಜನೆಯನ್ನು ಉಣಬಡಿಸುತ್ತಿರುವ ಶೋ ಈ ಬಿಗ್ ಬಾಸ್. ಈ ಬಾರಿಯ ಬಿಗ್ ಬಾಸ್’ ಕನ್ನಡ ಒಟಿಟಿ ಕಾರ್ಯಕ್ರಮವು ಬಾರಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಬಿಗ್ ಬಾಸ್ ಕನ್ನಡ ಒಟಿಟಿ ಕಾರ್ಯಕ್ರಮಕ್ಕೆ ಆಗಸ್ಟ್ 6 ರಂದು ಸಂಜೆ ಭರ್ಜರಿ ಓಪನಿಂಗ್ ಸಿಕ್ಕಿತು. ಬಿಗ್ ಬಾಸ್ ಮನೆಗೆ ಒಟ್ಟು 16 ಸ್ಪರ್ಧಿಗಳು ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯ ಹೆಸರನ್ನು ರಿವೀಲ್​ ಮಾಡಲಾಗಿತ್ತು. ಹೌದು, ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್​ ಗುರೂಜಿ ಅವರು ದೊಡ್ಮನೆ ಸೇರಿದ್ದರು.

ಈ ಬಗ್ಗೆ ವೂಟ್​ ಕಡೆಯಿಂದ ಅಧಿಕೃತ ಘೋಷಣೆ ಆಗಿತ್ತು. ಅಷ್ಟೇ ಅಲ್ಲದೇ ಬಿಗ್ ಬಾಸ್ ಆರಂಭವಾಗಿ ನಾಲ್ಕು ವಾರಗಳು ಆಗಿದ್ದು, ಪ್ರೇಕ್ಷಕ ವರ್ಗಕ್ಕೆ ಮನೋರಂಜನೆ ನೂರಕ್ಕೆ ನೂರರಷ್ಟು ಸಿಗುತ್ತಿದೆ. ಕೆಲವು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಕೂಡ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ಸ್ಪರ್ಧಿಗಳ ಬಗ್ಗೆ ಪ್ರೇಕ್ಷಕರಿಗೆ ತಿಳಿಸುವ ಪ್ರಯತ್ನವನ್ನು ಮಾಡಿತ್ತು. ಈ ವೇಳೆ ಆರ್ಯವರ್ಧನ್ ಅವರು ತಮ್ಮ ಆಸ್ತಿಯ ಕುರಿತು ರಿವೀಲ್ ಮಾಡಿದ್ದರು. ಹಾಗಾದರೆ ಆರ್ಯವರ್ಧನ್ ಗುರೂಜಿಯವರ ಬಳಿ ಇರುವ ಆಸ್ತಿಯ ಕುರಿತು ಕುತೂಹಲವಿರಬಹುದು, ಅದಕ್ಕೆ ಇಲ್ಲಿದೆ ಉತ್ತರ.

ಆರ್ಯವರ್ಧನ್ ಗುರೂಜಿಯವರ ಅವರ ಬಗ್ಗೆ ಹೇಳುವುದಾದರೆ, ಐಪಿಎಲ್ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ತೆರಳಿ ಯಾವ ತಂಡ ಗೆಲ್ಲುತ್ತದೆ, ಯಾವ ತಂಡ ಸೋಲುತ್ತದೆ ಎಂಬುದನ್ನು ಊಹಿಸುತ್ತಿದ್ದರು. ಈ ಮೂಲಕ ಬಾರಿ ಸುದ್ದಿಯಾಗಿದ್ದರು. ಅದಲ್ಲದೇ, ಯಾವ ಆಟಗಾರ ಹೆಚ್ಚು ರನ್ ಬಾರಿಸುತ್ತಾರೆ, ಯಾರು ಹೆಚ್ಚು ವಿಕೆಟ್ ಕೀಳುತ್ತಾರೆ ಎಂಬುದನ್ನೂ ತಿಳಿಸುತ್ತಿದರು. ಆದರೆ ಅವರು ಮಾಡುತ್ತಿದ್ದ ಊಹೆ ಅನೇಕ ಸಲ ತಪ್ಪಾಗಿತ್ತು. ಈ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡ ಆಗಿದ್ದ ಆರ್ಯವರ್ಧನ್ ಗುರೂಜಿಯವರು ಫೇಮಸ್ ಆಗಿದ್ದರು.

 

ಹಿಂದಿನಿಂದಲೂ ಆರ್ಯವರ್ಧನ್ ಅವರು ‘ರಾಯಲ್​ ಚಾಲೆಂಜರ್ಸ್ ಬೆಂಗಳೂರು’ ತಂಡವನ್ನು ಸಪೋರ್ಟ್ ಮಾಡುತ್ತಾ ಬರುತ್ತಿದ್ದಾರೆ. ಈ ಕಾರಣದಿಂದಲೂ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅದಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಆರ್ಯವರ್ಧನ್ ವಿಡಿಯೋಗಳು, ಅವರ ಹೇಳಿಕೆಗಳು ಸಾಕಷ್ಟು ಮನರಂಜನೆ ನೀಡಿವೆ. ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿದ್ದಾರೆ.

ಹೌದು ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ಸ್ಪರ್ಧಿಗಳ ಅಸಲಿ ಸತ್ಯ ಬಯಲು ಮಾಡಲಾಗಿತ್ತು. ಮನೆಗೆ ಬಂದ ಎರಡನೇ ದಿನವೇ, ಸ್ಪರ್ಧಿಗಳ ಬಗ್ಗೆ ಸ್ಪರ್ಧಿಗಳಿಗೆ ಮತ್ತು ವೀಕ್ಷಕರಿಗೆ ತಿಳಿಸುವ ನಿರ್ಧಾರ ಮಾಡಿದ ಬಿಗ್ ಬಾಸ್, ನಾನು ಯಾರು ಎನ್ನುವ ಟಾಸ್ಕ್ ಒಂದನ್ನು ನೀಡಿದ್ದರು. ಆ ಟಾಸ್ಕ್ ನ ಪ್ರಕಾರ, ಸ್ಪರ್ದಿಗಳಿಗೆ ಸಂಬಂಧಿಸಿದ ಒಂದೆರಡು ವಿಷಯಗಳು ಲೆಟರ್ ನಲ್ಲಿತ್ತು. ಅದನ್ನು ಓದಿ ಅವುಗಳ ಬಗ್ಗೆ ಅವರು ಮಾತನಾಡಬೇಕಾಗಿತ್ತು. ಅದೇ ರೀತಿ ಕುಟುಂಬದ ವಿಚಾರದಲ್ಲಿ ನೋವು, ಬಾಯ್ ಫ್ರೆಂಡ್, ಬ್ರೇಕಪ್, ಕೆಲಸದ ವಿಚಾರ ಹಂಚಿಕೊಂಡಿದ್ದರು.

 

ಸಾನ್ಯಾ ಅಯ್ಯರ್, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸೋಮಣ್ಣ ಮಾಚಿಮಾಡ ತಮ್ಮ ಮನದ ನೋವನ್ನು ತಿಳಿಸಿದ್ದರು. ಆದರೆ ಆರ್ಯವರ್ಧನ್ ಗುರೂಜಿ ಈ ವಿಚಾರದಲ್ಲಿ ಸಹ ಬೇರೆ ರೀತಿಯೇ ಮಾತನಾಡಿದ್ದರು. ಹೌದು, ಎಲ್ಲಾ ಸ್ಪರ್ಧಿಗಳು ನೋವಿನ ವಿಚಾರಗಳನ್ನು ಹೇಳಿಕೊಳ್ಳುವಾಗ, ಕಹಿ ಘಟನೆಗಳು ಎಲ್ಲರ ಜೀವನದಲ್ಲೂ ನಡೆಯುತ್ತದೆ. ಅದನ್ನೆಲ್ಲಾ ಮರೆತು ಮುಂದಕ್ಕೆ ಸಾಗಬೇಕು ಎಂದಿದ್ದರು. ಅದರ ಜೊತೆಗೆ ಸಿಂಪತಿ ಗಿಟ್ಟಿಸಿಕೊಳ್ಳುವ ವಿಚಾರಗಳನ್ನು ಹೆಚ್ಚಾಗಿ ಮಾತನಾಡಬಾರದು ಎಂದು ಕೂಡ ಹೇಳಿದ್ದರು.

 

ಅಷ್ಟೇ ಅಲ್ಲದೇ ತಮ್ಮ ಬಗ್ಗೆ ಮಾತನಾಡಿದ ಆರ್ಯವರ್ಧನ್ ಗುರೂಜಿ, ತಾವು ಮೂಲತಃ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು, ಹಾಸನದ ಕಡೆಯವರು, ತಾವು ಯಾವುದೇ ರೀತಿಯ ಕಷ್ಟವನ್ನು ನೋಡಿಲ್ಲ, ಸುಖವಾಗಿಯೇ ಹುಟ್ಟಿ ಬೆಳೆದವರು. ತಮ್ಮ ಹಿರಿಯರ ಆಸ್ತಿಯೇ 5 ಸಾವಿರ ಕೋಟಿಗಿಂತ ಹೆಚ್ಚಾಗಿದೆ. ಕಷ್ಟದಲ್ಲಿ ತಾವು ಹುಟ್ಟಿಲ್ಲ, ಸುಖವಾಗಿ ಬೆಳೆದು ಅನೇಕರಿಗೆ ಸಹಾಯ ಮಾಡಿದ್ದೇನೆ ಎಂದಿದ್ದರು. ಚಿತ್ರರಂಗದಲ್ಲಿ ಇರುವವರಿಗೆ ಸಾಲ ಕೊಟ್ಟಿದ್ದೇನೆ ಎನ್ನುವ ಮಾತನ್ನು ಹೇಳಿದ್ದರು. ಒಟ್ಟಿನಲ್ಲಿ ಇವರ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದರು.