ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಂಬರೀಷ್ ರಾಜಕೀಯಕ್ಕೆ ಬರಲು ನಿಜವಾದ ಕಾರಣ ತಿಳಿಸಿದ ಸುಮಲತಾ

177
ರೆಬೆಲ್ ಸ್ಟಾರ್ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ತನ್ನ ನಟನೆಯ ಕೇವಲ ನಟನಾಗಿ ಮಾತ್ರವಲ್ಲ, ರಾಜಕಾರಣಿಯಾಗಿ ಗುರುತಿಸಿಕೊಂಡವರು. ರೆಬಲ್ ಸ್ಟಾರ್ ಅಂಬರೀಶ್ ಎಂದೇ ಖ್ಯಾತಿ ಗಳಿಸಿರುವ ಇವರ ಪೂರ್ಣ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್  ಅಂಬಿ ಹೆಸರಿನಿಂದ ಖ್ಯಾತಿ ಗಳಿಸಿಕೊಂಡರು. ಅಂಬಿ  ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್ ಅವರೊಂದಿಗೆ  ಮೊದಲ ಬಾರಿಗೆ ಸಿನಿ ಪರದೆಯಲ್ಲಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ಅಂಬಿ ಅವರ ಡೈಲಾಗ್ ಮಾತ್ರ ಇಂದಿಗೂ ಎವರ್ ಗ್ರೀನ್ ಆಗಿದೆ. ಹೀಗೆ ಶುರುವಾದ ಅವರ ಜರ್ನಿಯೂ ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಹತ್ತಿರವಾಗಿಸಿತು.
ನಾಗರಹಾವು  ಚಿತ್ರದಿಂದ ವಿಷ್ಣುವರ್ಧನ್ ಎಂಬ ರೋಮ್ಯಾಂಟಿಕ್ ಹೀರೋ ಜೊತೆಗೆ ಅಂಬರೀಶ್ ಎಂಬ ರೆಬೆಲ್ ವಿಲನ್ ಚಿತ್ರರಂಗಕ್ಕೆ ಸಿಕ್ಕರು. ರಾಜಕೀಯದಲ್ಲಿಯೂ ಸಕ್ರಿಯರಾಗಿರುವ ಅಂಬರೀಶ್ ಅವರು,   ಈ ರಾಜಕೀಯರಂಗಕ್ಕೆ ಎಂಟ್ರಿ ಕೊಡಲು ಕಾರಣವೇನು ಎನ್ನುವುದನ್ನು ಸುಮಲತಾ ಅಂಬರೀಶ್ ಅವರು ರಿವೀಲ್ ಮಾಡಿದ್ದಾರೆ, ಅವರು ಹೇಳಿದ್ದೇನು ಎನ್ನುವ ಕುತೂಹಲವಿದ್ದರೆ ಈ ಸ್ಟೋರಿ ನೋಡಿ.
ಮಂಡ್ಯದ ಗಂಡು ಅಂಬರೀಶ್ ಅವರು ಭಾರತದಲ್ಲೇ ಅತಿ ಹೆಚ್ಚು ಮಲ್ಟಿಸ್ಟಾರ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.ರಾಜ್ ಕುಮಾರ್ ಜೊತೆ ಒಡಹುಟ್ಟಿದವರು, ವಿಷ್ಣು ಜೊತೆ ಸ್ನೇಹಿತರ ಸವಾಲ್, ಮಹಾ ಪ್ರಚಂಡರು, ಅವಳ ಹೆಜ್ಜೆ, ದಿಗ್ಗಜರು ಅಂತಹ ಹಿಟ್ ಸಿನಿಮಾ, ರಜನಿಕಾಂತ್, ರವಿಚಂದ್ರನ್, ಜಗ್ಗೇಶ್, ಉಪೇಂದ್ರ, ಶಂಕರ್ ನಾಗ್, ಅನಂತ್ ನಾಗ್, ದರ್ಶನ್, ಸುದೀಪ್, ಯಶ್, ಹೀಗೆ ಕನ್ನಡದ ಈಗಿನ ಬಹುತೇಕ ನಟರ ಜೊತೆಯಲ್ಲೂ ಬಣ್ಣಹಚ್ದಿದ್ದಾರೆ.ಅಂಬರೀಶ್ ಅವರ ಕೊನೆಯ ಸಿನಿಮಾ ‘ಅಂಬಿ ನಿಂಗ್ ವಯಸ್ಸಾಯ್ತು’. ಸುದೀಪ್ ಜೊತೆ ಅಭಿನಯಿಸಿದ್ದ ಈ ಸಿನಿಮಾವೇ ಕೊನೆಯ ಚಿತ್ರವಾಯಿತು.
ಅಂಬರೀಶ್ ಅವರು ನಿಧನರಾಗಿ ವರ್ಷಗಳು ಉರುಳಿದೆ. ಆದರೆ, ಇದೀಗ ಅವರ ಸ್ಮಾರಕದ ಕೆಲಸಕ್ಕೆ ಗುದ್ದಲಿ ಪೂಜೆ ಶುರುವಾಗಿದೆ. ಇತ್ತೀಚೆಗಷ್ಟೇ ಗುದ್ದಲಿ ಪೂಜೆ ನಡೆದಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ, ಎಂ.ಎಲ್.ಎ ಮತ್ತು ಅಂಬರೀಶ್ ಅವರ ಪತ್ನಿ ಸುಮಲತಾ, ಹಾಗೂ ಇನ್ನು ಅನೇಕ ಗಣ್ಯರು ಹಾಜರಿದ್ದರು. ಈ ಸಮಯದಲ್ಲಿ ಎಲ್ಲರೂ ವೇದಿಕೆ ಮೇಲೆ ಬಂದು, ಮಾಧ್ಯಮದವರ ಎದುರು ಅಂಬರೀಶ್ ಅವರ ಜೊತೆಗಿದ್ದ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ಸುಮಲತಾ ಅಂಬರೀಶ್ ಅವರು ಕೂಡ ಮಾತನಾಡಿ, ಅಂಬರೀಶ್ ಅವರು ಹಾಗೂ ಅಭಿಮಾನಿಗಳ ಬಗ್ಗೆ ಕೆಲವು ವಿಚಾರ ತಿಳಿಸಿದ್ದಾರೆ.  ಅಷ್ಟೇ ಅಲ್ಲದೇ ಅವರ ಬಗ್ಗೆ ಮಾತನಾಡುತ್ತಾ, “ಅವರ ಮಾತು ಒರಟಾಗಿ ಇದ್ದಿರಬಹುದು, ಅವರು ಎಲ್ಲರ ಜೊತೆ ಸ್ವಾತಂತ್ರ್ಯವಾಗಿ ಮಾತನಾಡುತ್ತಾ ಇದ್ರು.
ಯಾರನ್ನು ಗೌರವಯುತವಾಗಿ ಅವರು ಸಂಭೋದನೆ ಮಾಡಿದ್ದನ್ನ ನಾನು ಕೇಳಿಯೇ ಇಲ್ಲ, ಯಾಕಂದ್ರೆ ಅವರು ಅದನ್ನ ಪ್ರೀತಿಯಿಂದ ಮಾಡ್ತಾ ಇದ್ರು. ಅವರು ಬೈಯ್ಯದೆ ಹೋದರೆ ಬೇಸರ ಮಾಡಿಕೊಳ್ಳುತ್ತಾ ಇದ್ದ ಅಭಿಮಾನಿಗಳು ಕೂಡ ನನಗೆ ಗೊತ್ತು. ನಮ್ಮ ಮನೆಗೆ ಫೋನ್ ಮಾಡಿದಾಗ, ಸಾಧಾರಣವಾಗಿ ಸಾಫ್ಟ್ ಆಗಿ ಮಾತನಾಡಿದರೆ, ಏನಣ್ಣ ಹುಷಾರಿಲ್ವ ಅಂತ ಕೇಳೋರು, ಇದು ನೀವೇನಾ ಅಂತ ಅನುಮಾನ ಪಡೋರು. ಅವರ ಕೈಯಲ್ಲಿ ಬೈಸ್ಕೊಳ್ಳೋದನ್ನೇ ಆಶೀರ್ವಾದ ಅಂತ ಅಭಿಮಾನಿಗಳು ಸ್ವೀಕರಿಸುತ್ತಾ ಇದ್ರು. ಮಾಧ್ಯಮದವರ ಜೊತೆ ಕೂಡ ಅವರು ಎಷ್ಟು ಲಿಬರ್ಟಿ ತಗೊಂಡು ಮಾತಾಡ್ತಾ ಇದ್ರು ಅಂದ್ರೆ, ಯಾವ ದೊಡ್ಡ ನಾಯಕ ಕೂಡ ಅಂತಹ ಸಾಹಸ ಮಾಡೋದಕ್ಕೆ ಹೋಗಲ್ಲ..” ಎಂದಿದ್ದಾರೆ ಸುಮಲತಾ ಅಂಬರೀಶ್.