ಡಿ ಬಾಸ್ ಖ್ಯಾತಿಯಾ ದರ್ಶನ್ (Darshan) ರವರು 1977 ಫೆಬ್ರವರಿ 19 ಶಿವರಾತ್ರಿ (Maha Shivaratri) ಹಬ್ಬದ ದಿನದಂದು ಪೊನ್ನಂಪೇಟೆಯ ರಾಮಕೃಷ್ಣ ಆಸ್ಪತ್ರೆಯಲ್ಲಿ ಜನಿಸಿದರು. ಇನ್ನು ದರ್ಶನ್ ಅವರ ಹುಟ್ಟಿನ ಹೆಸರು ಹೇಮಂತ್ ಕುಮಾರ್ (Hemanth Kumar) ಎಂಬುದಾಗಿದ್ದು ನಂತರದ ದಿನದಲ್ಲಿ ದರ್ಶನ್ ಎಂಬುದಾಗಿ ಹೆಸರು ಬದಲಾಯಿಸಿ ಕೊಳ್ಳುತ್ತಾರೆ. ಇನ್ನೂ ಇವರ ತಂದೆ ತೂಗುದೀಪ ಶ್ರೀನಿವಾಸ್ (Toogudeepa Srinivs) ತಾಯಿ ಮೀನಾ ಇವರ ತಂದೆ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ಖಳನಾಯಕರಲ್ಲಿ ಒಬ್ಬರಾಗಿದ್ದರು.
ಹೌದು ತೂಗುದೀಪ ಶ್ರೀನಿವಾಸ್ ಅವರು ಸಿನಿಮಾದಲ್ಲಿ ಅಭಿನಯಿಸಿ ಅಲ್ಲಿಂದ ಬಂದ ಹಣದಿಂದ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು. ಇನ್ನು ಪ್ರಾರಂಭದಲ್ಲಿ ಇವರ ಕುಟುಂಬ ಸುಂದರವಾಗಿತ್ತು ಆದರೆ ತೂಗುದೀಪ ಶ್ರೀನಿವಾಸ್ ಅವರಿಗೆ ಇದ್ದಕಿದ್ದ ಹಾಗೆ ಕಿಡ್ನಿ (Kidney) ವೈಫಲ್ಯವಾಗುತ್ತದೆ. ಹೌದು ಈ ಕಾರಣದಿಂದ ಹಾಸಿಗೆ ಹಿಡಿದರು ತೂಗುದೀಪ ಶ್ರೀನಿವಾಸ್ ರವರು ಚಿಕಿತ್ಸೆಗಾಗಿ ದರ್ಶನ್ ರವರ ತಾಯಿ ಮನೆ ಒಂದನ್ನು ಬಿಟ್ಟು ಬೇರೆ ಎಲ್ಲವನ್ನೂ ಸಹ ಕಳೆದುಕೊಂಡರು.
ಇನ್ನು ಈ ಸಂಧರ್ಭದಲ್ಲಿ ದರ್ಶನ್ ಅವರ ಕುಟುಂಬಸ್ಥರು ಎಷ್ಟು ಕಷ್ಟ ಅನುಭವಿಸಿದ್ದರು ಅಂದರೆ ದಿನದ ಮೂರು ಹೊತ್ತಿನ ಊಟಕ್ಕೂ ಸಹ ಬಹಳಾನೇ ಪರದಾಡುವಂತಾಯಿತು. ಬಳಿಕ ತೂಗುದೀಪ ಶ್ರೀನಿವಾಸ್ ಅವರು 1995 ರಲ್ಲಿ ತಮ್ಮ 52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅಗಲಿದರು. ಬಳಿಕ ದರ್ಶನ್ ರವರು ಬಗಳ ಕಷ್ಟದಾಯಕವಾದ ಜೀವನವನ್ನು ಸಾಗಿಸಲು ಆರಂಭಿಸಿದ್ದು ದರ್ಶನ್ ಅವರ ತಾಯಿ ಮೇಸ್ ನಡೆಸುತ್ತಿದ್ದರು. ಇತ್ತು ದರ್ಶನ್ ಒಂದು ಹಸುವನ್ನು (Cow) ಸಾಕಿ ಹಾಲನ್ನು(Milk) ಮಾರಿ ಜೀವನ ಸಾಗಿಸುತ್ತಿದ್ದರು. ಇನ್ನು ದರ್ಶನ್ ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ಸೇರಿ ಜೀವನ ನಡೆಸಲಿ ಚಿತ್ರರಂಗದ ಏಳು ಬೀಳಿನ ಕಷ್ಟವನ್ನು ಮಗ ಅನುಭವಿಸಬಾರದು ಎಂಬುದು ತಂದೆ ತೂಗುದೀಪ ಶ್ರೀನಿವಾಸ್ ಅವರ ಆಶಯವಾಗಿತ್ತು. ಹಾಗಾಗಿ ದರ್ಶನ್ ರವರು ನೀನಾಸಂ ಗೆ (Ninasam) ಸೇರುವುದು ತಂದೆಗೆ ಸ್ವಲ್ಪವೂ ಇಷ್ಟವಿರಲಿಲ್ಲ
ಆದರೂ ಸಹ ದರ್ಶನ್ ಅವರ ತಾಯಿಯ ಸಹಾಯದೊಂದಿಗೆ ನೀನಾಸಂ ಗೆ ಸೇರಿ ನಟನೆಯ ತರಬೇತಿ ಪಡೆದಿದ್ದು ನೀನಾಸಂನಲ್ಲಿ ಅಭಿನಯ ತರಬೇತಿ ಪಡೆದ ಬಳಿಕ ಅವಕಾಶಗಳನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋದರು. ಆದರೆ ಅವರಿಗೆ ಅಲ್ಲಿ ಅವಕಾಶಗಳು ದೊರೆಯುವುದಿಲ್ಲ ಬಳಿಕ ಹೇಗಾದರೂ ಮಾಡಿ ಚಿತ್ರರಂಗದಲ್ಲಿ ಉಳಿಯಬೇಕು ಎಂದು ನಿರ್ಧರಿಸಿ ಮೊದಲ ಬಾರಿಗೆ ಲೈಟ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡರು. ಹೌದು ಈ ವೃತ್ತಿಯಿಂದ ದರ್ಶನ್ ರವರು ತಮ್ಮ ಸಿನಿ ಜೀವನವನ್ನು ಆರಂಭಿಸಿದ್ದು ಒಂದು ಬಾರಿ ದರ್ಶನ್ ಅವರು ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿರುವಾಗ ದರ್ಶನ್ ಅವರು ಕುಳಿತಿರುವ ಕುರ್ಚಿಯನ್ನು ಒದ್ದು ಅವರಿಗೆ ಅವಮಾನ ಮಾಡಿದರು. ಆದರೆ ಈಗ ದರ್ಶನ್ ಬಂದರೆ ಸಾಕು ಅವರಿಗೆ ಕುರ್ಚಿ ಹಾಕಿ ಸನ್ಮಾನ ಮಾಡುವಷ್ಟು ಎತ್ತರಕ್ಕೆ ಬೆಳೆದಿರುವುದು ವಿಶೇಷ.
ಇನ್ನು ಕನ್ನಡದಲ್ಲಿ ಟಾಪ್ ನಂಬರ್ ಒನ್ ನಟ ಅಂದರೂ ಕೂಡ ತಪ್ಪಾಗಲಾರದು. ಒಮ್ಮೆ ಶೂಟಿಂಗ್ ಸೆಟ್ ನಲ್ಲಿ ದರ್ಶನ್ ರವರು ಅಭಿನಯಿಸಬೇಕಾದರೆ ಅಲ್ಲಿ ಕೆಲಸ ಮಾಡುತ್ತಿರುವ ಲೈಟ್ ಬಾಯ್ (Light Boy) ಅನ್ನು ನೋಡಿ ದರ್ಶನ್ ಅವರು ಮೂಕ ವಿಸ್ಮಿತರಾಗುತ್ತಾರೆ. ಅಷ್ಟೇ ಅಲ್ಲದೆ ತಾವು ಹಿಂದೆ ಪಟ್ಟಂತಹ ಕಷ್ಟದ ದಿನವನ್ನು ನೆನೆಸಿಕೊಂಡು ಒಂದು ಕ್ಷಣ ಮರುಗುತ್ತಾರೆ.
ಈ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Social Media)bಸಕ್ಕತ್ ವೈರಲ್ ಆಗಿತ್ತು. ಇದರ ಜೊತೆಗೆ ದರ್ಶನ್ ಒಬ್ಬ ಮಾದರಿ ಮನುಷ್ಯ ಅಂತಾನೇ ಹೇಳಬಹುದು ಏಕೆಂದರೆ ಒಬ್ಬ ಮನುಷ್ಯ ತಾನು ಎಷ್ಟೇ ಎತ್ತರಕ್ಕೆ ಬೆಳೆದರು ಕೂಡ ತಾನು ಬೆಳೆದು ಬಂದ ಹಾದಿಯನ್ನು ಮರೆಯಬಾರದು ಎಂಬುದಕ್ಕೆ ದರ್ಶನ್ ಅವರು ನೈಜಾ ಸಾಕ್ಷಿಯಾಗಿದ್ದಾರೆ. ಇನ್ನು ದರ್ಶನ್ ರವರಿಗೆ ಆಕ್ಷನ್ ಸೀನ್ ಗಳೆಂದರೆ ಬಹಳ ಇಷ್ಟ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ದರ್ಶನ್ ಹೆಲಿಕಾಪ್ಟರ್ ನಿಂದ ಇಳಿಯುವ ದೃಶ್ಯದಲ್ಲಿ ಹೇಗೆ ನೈಜವಾಗಿ ನಟಿಸಿದ್ದಾರೆ ನೀವೆ ನೋಡಿ.