ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮೊಬೈಲ್ ಹಿಡಿದು ಅಪ್ಪು ಹೇಗೆ ಆಡುತ್ತಾರೆ ನೋಡಿ…ಚಿಂದಿ ವಿಡಿಯೋ

66
Join WhatsApp
Google News
Join Telegram
Join Instagram

ಕನ್ನಡ ಚಿತ್ರರಂಗದ(KFI) ಅಜಾತಶತ್ರು ಪುನೀತ್ ರಾಜ್ ಕುಮಾರ್ (Puneeth Rajkumar) ರವರು ಸರಳತೆಗೆ ಮತ್ತೊಂದು ಹೆಸರು ಎನ್ನುವಂತೆ ಬದುಕಿ ತೋರಿಸಿದ್ದಾರೆ ಎಂದು ಹೇಳಿದರೆ ಖಂಡಿತವಾಗಿಯೂ ತಪ್ಪಾಗಲಾರದು. ತಂದೆ ವರನಟ ಡಾ.ರಾಜ್ ಕುಮಾರ್ (Dr Rajkumar) ಅವರು ವಿಶ್ವಮಟ್ಟದಲ್ಲಿ ಹೆಸರು ಗಳಿಸಿದ್ದ ಶ್ರೇಷ್ಠ ನಟರಾಗಿದ್ದು ಎಷ್ಟು ಸರಳ ಸ್ವಭಾವದ ವ್ಯಕ್ತಿತ್ವ ಹೊಂದಿದ್ದರೋ ಮಗನಾದ (Son) ನಟ ಪುನೀತ್ ರಾಜ್ ಕುಮಾರ್ ರವರು ಕೂಡ ತಂದೆ ತಾಯಿಯ ಹಾಗೆ ಅತ್ಯಂತ ಸರಳ ಸ್ವಭಾವ ಹೊಂದಿದ್ದರು.

ಹೌದು ಅಪ್ಪು(Appu) ಅವರ ಒಳ್ಳೆಯತನದ ಬಗ್ಗೆ ಎಷ್ಟೇ ಪದಗಳಲ್ಲಿ ವರ್ಣಿಸುವ ಪ್ರಯತ್ನ ಮಾಡಿದರು ಕೂಡ ಅದು ನಿಜಕ್ಕೂ ಕಡಿಮೆಯೇ. ಅಪ್ಪು ಅವರು ಹಲವು ಸಾಮಾಜಿಕ(Social) ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಆದರೆ ಇದರ ಬಗ್ಗೆ ಎಲ್ಲಿಯೂ ಸಹ ಸುದ್ದಿಗಳು ಹೆಚ್ಚಾಗಿ ಹೊರಬರುತ್ತಿರಲಿಲ್ಲ. ಯಾಕೆಂದರೆ ಅಪ್ಪು ಅವರಿಗೆ ಪ್ರಚಾರ (Publicity) ಬೇಕಿರಲಿಲ್ಲ. ಅಂತಹ ಸರಳ ವ್ಯಕ್ತಿ ನಮ್ಮ ಅಪ್ಪು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿರುವ ಹಲವಾರು ಸಮಾಜ ಸೇವೆಗಳು ಇಂದಿನ ಯುವ ಪೀಳಿಗೆಗೆ (Youths) ಮಾದರಿಯಾಗಿದ್ದು ಅವರ ಸರಳ ವ್ಯಕ್ತಿತ್ವ ಕೂಡ ಪ್ರತಿಯೊಬ್ಬರಿಗೂ ಮಾದರಿ ಎನ್ನಬಹುದು.

ಇಲ್ಲಿಯವರೆಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಬರೋಬ್ವರಿ 26 ಅನಾಥಾಶ್ರಮ (Orphanage) 46 ಉಚಿತ ಶಾಲೆಗಳು(Free Schools) 16 ವೃದ್ದಾಶ್ರಮಗಳು(old age home)19 ಗೋಶಾಲೆಗಳು (Goshalas)1800 ಮಕ್ಕಳ ಸಂಪೂರ್ಣ ಶಿಕ್ಷಣ ಜವಾಬ್ದಾರಿ (Educational Responsibility) ಹಾಗೂ ಮೈಸೂರಿನಲ್ಲಿ(Mysore) ಹೆಣ್ಣುಮಕ್ಳಳಿಗಾಗಿ ಶಿಕ್ಷಣ ವ್ಯವಸ್ಥೆ ವಸತಿಯನ್ನು ನೋಡಿಕೊಳ್ಳುತ್ತಿರುವ ಶಕ್ತಿಧಾಮ(Shakyidhama) ಸಂಸ್ಥೆ ಈ ಎಲ್ಲವನ್ನು ಕೂಡ ಅಪ್ಪು ಅವರು ನೋಡಿಕೊಳ್ಳುತ್ತಿದ್ದು ಸಮಾಜಕ್ಕೆ ಇಷ್ಟೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರು ಕೂಡ ಇವುಗಳ ಬಗ್ಗೆ ಒಂದು ದಿನವೂ ಹೇಳಿಕೊಂಡಿರಲಿಲ್ಲ.ಹೌದು ತಮ್ಮಿಂದ ಆಗುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಕೂಡ ಸದ್ದಿಲ್ಲದೆ ಮಾಡಿಕೊಂಡು ಹೋಗುತ್ತಿದ್ದ ಅಪ್ಪು ಇವುಗಳಷ್ಟೇ ಅಲ್ಲದೆ ಹಲವು ಜನರಿಗೆ ಸಹಾಯ ಕೂಡ ಮಾಡಿದ್ದಾರೆ. ದೊಡ್ಮನೆಯ ಬಳಿ ಸಹಾಯ ಕೇಳಿ ಹೋದವರು ಬರಿಗೈಯಲ್ಲಿ ಎಂದಿಗೂ ಕೂಡ ಹಿಂತಿರುಗಿರುವ ಇತಿಹಾಸವೇ ಇಲ್ಲ.

ಇನ್ನು ಅಪ್ಪು ಅವರನ್ನು ನೋಡುವ ಸಲುವಾಗಿ ಮನೆ ಹತ್ತಿರ ಹೋದ ಅಭಿಮಾನಿಗಳನ್ನು ಕೂಡ ಅಪ್ಪು ಅವರು ಮಾತನಾಡಿಸದೆ ಕಳಿಸಿಲ್ಲವಂತೆ.ಇನ್ನು ಅಭಿಮಾನಿಗಳ ಜೊತೆ ಸ್ನೇಹದಿಂದ ಪ್ರೀತಿಯಿಂದ ಇರುತ್ತಿದ್ದ ಅಪ್ಪು ಎಂದಿಗೂ ಕೂಡ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಹೌದು ಸ್ಟಾರ್ ನಟನ ಮಗ ತಾನು ಒಬ್ಬ ಸ್ಟಾರ್ ಎನ್ನುವ ಹಮ್ಮು ಬಿಮ್ಮು ಇಲ್ಲದೆ ಚಿತ್ರೀಕರಣ ಸ್ಥಳಕ್ಕೆ ನೋಡಲು ಬರುತ್ತಿದ್ದ ಪ್ರತಿ ಅಭಿಮಾನಿಯನ್ನು ಕೂಡ ಬಹಳ ಪ್ರೀತಿಯಿಂದ ಮಾತನಾಡಿಸಿ ಅವರು ತರುತ್ತಿದ್ದ ಉಡುಗೊರೆ ಳನ್ನು ಕೂಡ ಸ್ವೀಕರಿಸಿ ಫೋಟೋ ತೆಗೆಸಿಕೊಳ್ಳುತ್ತಿದ್ದರು ಅಭಿಮಾನಿಗಳ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು. ಹೌದು ಅಂತಹ ಸರಳತೆಯನ್ನು ಮತ್ತೊಮ್ಮೆ ಇನ್ಯಾರಲ್ಲಿಯೂ ನೋಡಲು ಸಾಧ್ಯವಿಲ್ಲ ಎನ್ನುವುದು ಅಕ್ಷರಶಃ ಸತ್ಯ. ಸದ್ಯ ಇಂತಹ ನಟನ ಅಪರೂಪದ ವಿಡಿಯೋವೊಂದು ವೈರಲ್ ಆಗುತ್ತಿದ್ದು ಇಲ್ಲಿ ಅಪ್ಪು ಏನುಮಾಡುತ್ತಿದ್ದಾರೆ ನೀವೆ ನೋಡಿ..