ಸದ್ಯ ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಪತಿಯ ಹಾಗೆ ಸಿನಿಮಾ ಕಾರ್ಯಕ್ರಮಗಳಿಗೆ ಭಾಗಿಯಾಗಿ ಶುಭಹಾರೈಸುತ್ತಿದ್ದಾರೆ. ಈ ವೇಳೆ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ. ಬಿಗ್ ಬಾಸ್ (Bigg Boss) ಖ್ಯಾತಿಯ ನಟ ಪ್ರಥಮ್ (Pratham) ಅಭಿನಯದ ನಟ ಭಯಂಕರ (Nata Bhayankara) ಸಿನಿಮಾದ ಆಡಿಯೋ ಬಿಡುಗಡೆ(Audio Release) ಸಮಾರಂಭಕ್ಕೆ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Rajkumar) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಹೌದು ನಟ ಭಯಂಕರ ಚಿತ್ರಕ್ಕೆ ಪ್ರಥಮ್ (Pratham) ನಿರ್ದೇಶನ (Direction) ಮಾಡುವುದರ ಜೊತೆಗೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು ತಮ್ಮ ತಂಡಕ್ಕೆ ಅಶ್ವಿನಿ ಮೇಡಂ ನೀಡಿದ ಬೆಂಬಲ ಎಂಥದ್ದು ಎಂಬುದನ್ನು ವೇದಿಕೆಯಲ್ಲಿ (Stage) ಎಲ್ಲರ ಎದುರು ಪ್ರಥಮ್ ವಿವರಿಸಿದ್ದು ದೊಡ್ಮನೆಯ ಗುಣಗಾನವನ್ನು ಅವರು ಮಾಡಿದ್ದರು. ಇಡೀ ತಂಡಕ್ಕೆ (Team) ಶುಭವಾಗಲಿ ಎಂದು ಅಶ್ವಿನಿ ಪುನೀತ್ ರಾಜ್‍ಕುಮಾರ್(Ashwini Puneeth Rajkumar)ಅವರು ಹಾರೈಸಿದ್ದರು. ಇನ್ನು ಈ ವೇಳೆ ಪ್ರಥಮ್ ರವರ ಮಾತು ಕೇಳಿ ಅಶ್ವಿನಿ ಯವರು ಬಿಕ್ಕಿ ಬಿಕ್ಕಿ ನಕ್ಕ ಪ್ರಸಂಗ ಕ್ಯಾಮೆರದಲ್ಲಿ(Camera) ಸೆರೆಯಾಗಿದ್ದು ಅಷ್ಟಕ್ಕೂ ಪ್ರಥಮ್ ಏನು ಹೇಳಿದರು ಎಂದು ತಿಳಿಯಲು ಲೇಖನಿ ಕೆಳಗಿನ ವಿಡಿಯೋ ನೋಡಿ.
ನಟ ಪ್ರಥಮ್ ಅವರು ಮೊದಲ ಬಾರಿಗೆ ನಿರ್ದೇಶಿಸಿರುವ ಸಿನಿಮಾ ನಟಭಯಂಕರ. ಈ ಚಿತ್ರ ಫೆಬ್ರವರಿ 3ಕ್ಕೆ ಬಿಡುಗಡೆ (Release)ಆಗಿದ್ದು ಉತ್ತಮ ಒಪನಿಂಗ್ ಪಡೆದುಕೊಂಡಿತ್ತು. ಹೌದು ತುಂಬ ಅಹಂಕಾರವಿರುವ ಮನುಷ್ಯ ಒಬ್ಬರಿಗೆ ಮಾತು ಕೊಟ್ಟಾಗ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಕಥಾವಸ್ತುವಾಗಿದ್ದು ಇನ್ನೊಂದು ಕಡೆ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ನಡುವೆ ನಡೆಯುವ ಕಥೆ ಕೂಡ ಇದಾಗಿತ್ತು.
ಇನ್ನು ತನ್ನ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಟ ಪ್ರಥಮ್ ರವರು ಪುನೀತ್ ರಾಜ್‍ಕುಮಾರ್(Puneeth Rajkumar) ಅವರನ್ನು ನೆನೆದಿದ್ದು ಇವತ್ತು ನೀವಿರಬೇಕಿತ್ತು ಬಾಸ್ ಇಷ್ಟು ಖುಷಿಯಾಗಿದ್ದನ್ನ ನೋಡೋದೇ ಪುಣ್ಯ. ಜನ ಪ್ರಾಮಾಣಿಕವಾಗಿ ತೋರಿದ ಬೆಂಬಲ ನೋಡಿ ಹರಸುತ್ತಾ ಇದ್ರಿ ಎಂದು ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ಹಂಚಿಕೊಂಡಿದ್ದರು.
ಒಳ್ಳೆಯದಾಗಲಿ ಆಲ್ ದಿ ಬೆಸ್ಟ್. ಗಾಡ್ ಬ್ಲೆಸ್ ಯು. ಆದಷ್ಟು ಬೇಗ ಸಿನಿಮಾ ಮಾಡಿ. ನಮ್ಮ ಹುಡುಗ ಇವನು. ಒಳ್ಳೆಯದಾಗಲಿ ಎಂದಿದ್ದರು. ಆಗ ಪ್ರಥಮ್ ನೀವು ಮತ್ತು ಶಿವಣ್ಣ (Shivarajkumar) ಹೇಗೆ ಅಂದ್ರೆ ನೀವು ಬ್ರೇನ್ ಇದ್ದಾಗೆ ಶಿವಣ್ಣ ಹಾರ್ಟ್ ಇದ್ದಾಗೆ. ಎರಡೂ ಕರೆಕ್ಟ್ ಆಗಿದ್ರೆ ಮಾತ್ರ ಮನುಷ್ಯ ಚೆನ್ನಾಗಿರ್ತಾನೆ. ಆದ್ದರಿಂದ ನಿಮ್ಮ ಆಶೀರ್ವಾದ ಯಾವಾಗಲೂ ಇರಬೇಕು ಎಂದು ಪ್ರಥಮ್ ಹೇಳ್ತಾರೆ.ಒಬ್ಬ ಕಲಾವಿದ ಊಟ ಮಾಡದೇ ಒಂದು ವಾರ ಇರ್ತಾನೆ. ನೀರು ಕುಡಿಯದೇ ಒಂದು ದಿನ ಇರ್ತಾನೆ. ಪ್ರಾಣಯಾಮ ಮಾಡಿ ಉಸಿರಾಡದೇ ಅಣ್ಣವರ ತರ ಅರ್ಧ ಗಂಟೆ ಇರ್ತಾರೆ. ಆದ್ರೆ ನಿಮ್ಮ ಬ್ಲೆಸ್ಸಿಂಗ್ ಇಲ್ಲದೇ ಯಾವ ಕಲಾವಿದರೂ ಒಂದು ನಿಮಿಷ ಇರಲ್ಲ ಎಂದು ಪ್ರಥಮ್ ಪುನೀತ್ ಗೆ ಹೇಳಿರುತ್ತಾರೆ.