ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹೆಂಡತಿ ಜೊತೆ ರಿಷಬ್ ಶೆಟ್ಟಿ ಕಾಮಿಡಿ ನೋಡಿ..ಚಿಂದಿ ವಿಡಿಯೋ

2,200
Join WhatsApp
Google News
Join Telegram
Join Instagram

ಕನ್ನಡ ಚಿತ್ರರಂಗದ (KFI) ನಟ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಇತ್ತೀಚೆಗಷ್ಟೇ ಪತ್ನಿ ಹಾಗೂ ಮಕ್ಕಳೊಂದಿಗೆ ದುಬೈ (Dubai) ಪ್ರವಾಸಕ್ಕೆ (Tour) ತೆರಳಿದ್ದರು. ಹೌದು ಈ ಬಗ್ಗೆ ರಿಷಬ್ ಕೂಡಾ ಈ ಹಿಂದೆ ಸಂದರ್ಶನವೊಂದರಲ್ಲಿ ( Hindi Interview) ಮಾತನಾಡಿದ್ದರು. ಫ್ಯಾಮಿಲಿ ವೆಕೇಷನ್ (Family Vacation) ಬಗ್ಗೆ ಮಾತನಾಡಿ ಎಲ್ಲವನ್ನೂ ನನ್ನ ಪತ್ನಿಯೇ ಮ್ಯಾನೇಜ್ ಮಾಡುತ್ತಾರೆ. ಅವರು ಎಲ್ಲವನ್ನೂ ಕೂಡ ರೆಡಿ ಮಾಡುತ್ತಾರೆ ಎಂದು ಹೇಳಿದ್ದರು. ಸದ್ಯ ಇದೀಗಗ ಕಾಂತಾರದ (Kantara) ಹೀರೋ ರಿಷಬ್ ಅವರು ಪತ್ನಿ ಪ್ರಗತಿ ಶೆಟ್ಟಿ(Pragati Shetty) ಜೊತೆ ದುಬೈ ಸುತ್ತಾಡಿ ಬಂದಿದ್ದಾರೆ. ಅವರ ವೆಕೇಷನ್​ನಲ್ಲಿ ಸುತ್ತಾಡಿದ ವಿಡಿಯೋವನ್ನು (Video) ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದರು.

ಹೌದು ದುಬೈ (Dubai) ಸಾಟಿಯಿಲ್ಲದ ಅನುಭವ ಎಂದು ಕ್ಯಾಪ್ಶನ್ (Caption) ಕೊಟ್ಟು ಪ್ರಗತಿ ಶೆಟ್ಟಿ ಯವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಶೇರ್ ಮಾಡಿದ್ದಾರೆ. ಮೋಡಿಮಾಡುವ ಮೋಹಕವಾಗಿರುವ ಮತ್ತು ಚಿಕ್ಕ ಮಕ್ಕಳಿಗೆ ಕೆಲವೊಮ್ಮೆ ಆಶ್ಚರ್ಯಕರ ಎನಿಸುವ ದುಬೈ. ಅಲ್ಲಿನ ವಾತಾವರಣ ಹಾಗೂ ಆತಿಥ್ಯ ತುಂಬಾ ಚೆನ್ನಾಗಿದೆ. ಕುಟುಂಬದೊಂದಿಗೆ ಅದ್ಭುತ ಸಮಯವನ್ನು ಕಳೆದೆವು ಎಂದು ಬರೆದುಕೊಂಡಿದ್ದರು.

ಇದರಲ್ಲಿ ಪ್ರಗತಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮಕ್ಕಳೊಂದಿಗೆ ದುಬೈಗೆ ಹೊರಡುವಲ್ಲಿಂದ ಅಲ್ಲಿ ಎಂಜಾಯ್ (Enjoy) ಮಾಡಿದ ಪ್ರತಿ ಘಟನೆ ವಿಸಿಟ್ ಮಾಡಿದ ಸ್ಥಳ (Place) ಎಲ್ಲವನ್ನೂ ಸೇರಿಸಿ ವಿಡಿಯೋವನ್ನು ರೆಡಿ ಮಾಡಲಾಗಿದ್ದು ಟನಲ್ ಅಕ್ವೇರಿಯಂನಲ್ಲಿ (Tunnel Aquarium) ಪ್ರಗತಿ ಶೆಟ್ಟಿ ಅವರ ಮಗ ರಣ್ವಿತ್(Ranvith) ದೊಡ್ಡ ದೊಡ್ಡ ಮೀನುಗಳನ್ನು (Fish) ನೋಡಿ ಅಚ್ಚರಿಪಡುವಲ್ಲಿಂದ ತೊಡಗಿ ಡಾಲ್ಫಿನ್ ಶೋ (Dolphin show)ಕ್ರೂಸ್ ಟ್ರಿಪ್ ಕೆಲವು ಸಾಹಸಮಯ ಗೇಮ್​ಗಳನ್ನು ಕಾಣಬಹುದು.

ಇನ್ನು ಆಕಾಶದೆತ್ತರ ಹಾರುವ ಒಂದು ಗೇಮ್​ನಲ್ಲಿ ಅಂತೂ ರಣ್ವಿತ್ ಭಯದಲ್ಲಿ ಕಿರುಚುತ್ತಿದ್ದರೆ ರಿಷಬ್ ಶೆಟ್ಟಿ ಅವರು ಜೋರಾಗಿ ನಗುತ್ತಿದ್ದರು. ಪ್ರಗತಿ ಶೆಟ್ಟಿ ಅವರೂ ಈ ಎಲ್ಲ ಗೇಮ್ಸ್ ಮೊಮೆಂಟ್​ಗಳನ್ನು ಎಂಜಾಯ್ ಮಾಡಿದ್ದಾರೆ.ಮರಳುಗಾಡಿನಲ್ಲಿ ಸವಾರಿ ಮಾಡಿರುವ ಜೋಡಿ ಸಖತ್ ಎಂಜಾಯ್ ಮಾಡಿದ್ದು ದುಬೈನ ಮರಳಿನಲ್ಲಿ ವಿಶೇಷ ಗಾಡಿ ಓಡಿಸೋದನ್ನು ಪ್ರವಾಸಿಗರು ಮಿಸ್ ಮಾಡುವುದೇ ಇಲ್ಲ. ರಿಷಬ್ ಅವರು ಗಾಡಿ ಓಡಿಸಿದರೆ ರಣ್ವಿತ್ ಹಾಗೂ ಪ್ರಗತಿ ಶೆಟ್ಟಿ ಅವರಿಗೆ ಸಾಥ್ ಕೊಟ್ಟಿದ್ದಾರೆ.

ರಣ್ವಿತ್ ಶೆಟ್ಟಿ ದುಬೈ ಪ್ರವಾಸವನ್ನು ಸಖತ್ತಾಗಿ ಎಂಜಾಯ್ ಮಾಡಿದ್ದು ಎಲ್ಲವನ್ನೂ ಅಚ್ಚರಿಯಿಂದ ವೀಕ್ಷಿಸಿದ್ದು ಮುದ್ದಾಗಿ ವಿಡಿಯೋದಲ್ಲಿ ದಾಖಲಾಗಿದೆ. ಎಲ್ಲವನ್ನೂ ವಿಶೇಷ ಆಸಕ್ತಿಯಿಂದ ಕಣ್ಣರಳಿಸಿ ನೋಡಿ ಅಚ್ಚರಿಪಟ್ಟ ಪುಟ್ಟ ಮಗನನ್ನು ನೋಡಿ ರಿಷಬ್ ದಂಪತಿ ಕೂಡಾ ಖುಷ್ ಆಗಿದ್ದಾರೆ. ಈ ನಡುವೆ ಇದೀಗ ಮತ್ತೊಂದು ಕ್ಯೂಟ್ ವಿಡಿಯೋ ವೈರಲ್ ಆಗುತ್ತಿದ್ದು ರಿಷಬ್ ರವರು ಮಗಳು ಹಾಗೂ ಪತ್ನಿಯನ್ನು ಜೋಕಾಲಿಯಲ್ಲಿ ಮಲಗಿಸಿ ಹೇಗೆ ತೂಗಿತ್ತಿದ್ದಾರೆ ನೀವೆ ಕೆಳಗಿನ ವಿಡಿಯೋದಲ್ಲಿ ನೋಡಿ.