Yash Mother Pushpa Interview: ಸ್ಯಾಂಡಲ್ವುಡ್ ಕ್ಯೂಟ್ ಕಪಲ್ಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಕೂಡ ಒಬ್ಬರು. ಮದುವೆಯಾದ ಬಳಿಕ ಸಿನಿಮಾರಂಗದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್ ಸದ್ಯ ಮಕ್ಕಳ ಪಾಲನೆ, ಪೋಷಣೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಸಂಸಾದ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಸೊಸೆ ರಾಧಿಕಾ ಪಂಡಿತ್ ಬಗ್ಗೆ ಯಶ್ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ ಹಾಡಿ ಹೊಗಳಿದ್ದಾರೆ. ಅದೇ ರೀತಿ ಖಾಸಗಿ ವಾಹಿನಿಯೊಂದರಲ್ಲಿ ನನ್ನ ಮಗನಿಗೆ ಈಗಲು ನಾನು ಪ್ರಶ್ನೆ ಮಾಡುತ್ತೇನೆ ಎಂದು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ವೀಡಿಯೋ ಸದ್ಯ ವೈರಲ್ ಆಗಿದೆ.
ಈ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಯಶ್ ತಾಯಿ, ನಮ್ಮ ಮನೆಗೆ ಮೊದಲಿಂದಲೂ ಬಂದು ಹೋಗುತ್ತಿದ್ದರಿಂದ ರಾಧಿಕಾ ನಮಗೆ ತುಂಬಾ ಇಷ್ಟ. ಯಶ್ ಹಾಗೂ ರಾಧಿಕಾ ಇಬ್ಬರೂ ಯಾವಾಗಲೂ ಸ್ನೇಹಿತರಂತೆ ಇರುತ್ತಾರೆ. ರಾಧಿಕಾ ಕೂಡ ಬಹಳ ಹೊಂದಿಕೊಂಡು ಹೋಗುವಂತಹ ಹುಡುಗಿ, ನಮ್ಮ ಮಗಳು ನಂದಿನಿಗಿಂತ ರಾಧಿಕಾ ಬಹಳ ಸಾಫ್ಟ್ ಸ್ವಭಾವದವರಾಗಿದ್ದಾರೆ.
ಪ್ರಶ್ನಿಸುವುದು ತಪ್ಪಲ್ಲ
ಅದೇ ರೀತಿ ಇತ್ತೀಚೆಗೆ ಯಶ್ ತಾಯಿಯನ್ನು ಖಾಸಗಿ ಸುದ್ದಿವಾಹಿನಿಯವರು ಸಂದರ್ಶನ ಮಾಡಿದ್ದಾಗ ನಿಮ್ಮ ಮಗ ಈ ಮಟ್ಟದ ಸಾಧನೆಗೆ ನೀವು ಪ್ರೇರಣೆಯೆಎಂದಿದಕ್ಕೆ ಪ್ರೇರಣೆ ಅಂತ ಏನಿಲ್ಲ.ಅವನಿಗೆ ನಮ್ಮ ಮೇಲೆ ಪ್ರೀತಿ ಗೌರವ ಇದೆ. ಹಾಗಾಗಿ ನಮ್ಮಮಾತನ್ನು ಕೇಳುತ್ತಾನೆ. ಅವನಿಗೆ ಹೆಂಡತಿ ಮಕ್ಕಳು ಇದ್ದಾರೆ ಹಾಗೆಂದು ನಾನು ಈಗ ಅವನು ರಾತ್ರಿ ತಡವಾಗಿಬಂದರೆ ಪ್ರಶ್ನೆ ಮಾಡಬಾರದು ಅಂದುಕೊಂಡಿಲ್ಲ.
ಪ್ರಶ್ನೆ ಮಾಡುವುದು ನನ್ನ ಕರ್ತವ್ಯ ಯಾಕೆ ತಡ ಬಂದೆ ಎಂದು ಕೇಳುತ್ತೇನೆ. ತಮ್ಮ ಮಗನಿಗೆ ಈಗಲೂ ನಾನು ಪ್ರಶ್ನೆ ಮಾಡುತ್ತೇನೆ. ಈಗ ಅವನು ಉನ್ನತ ಸ್ಥಾನದಲ್ಲಿದ್ದಾನೆ ಅಪಾರ ಅಭಿಮಾನಿಗಳು ಅವರನ್ನೆ ನಂಬಿಸ ಸಿನೆಮಾ ರಂಗ, ಕೆಲಸದವರಿದ್ದಾರೆ ಅವರೆಲ್ಲರ ಪರವಾಗಿ ನನ್ನ ಮಗನನ್ನು ಒಂದು ಪ್ರಶ್ನಿಸುವ ಮನೋಭಾವನೆ ನನಗಿದೆ ಇದು ತಪ್ಪಲ್ಲ ಎಂದಿದ್ದಾರೆ ಯಶ್ ತಾಯಿ ಪುಷ್ಪ ಅವರು. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.