ದರ್ಶನ್ ರವರ ಮೇಲೆ ಚಪ್ಪಲಿ ಎಸೆತದ ವಿಡಿಯೋ ಸಖ್ಖತ್ ವೈರಲ್ ಆಗುತ್ತಿದ್ದು ಸ್ಯಾಂಡಲ್ವುಡ್ ನ ನಟಿ ನಟಿಯರು ಇದನ್ನು ಖಂಡಿಸುತ್ತಿದ್ದಾರೆ. ಹೌದು ದರ್ಶನ್ ಅವರ ಮೇಲೆ ನಡೆದ ಈ ಘಟನೆಯಿಂದ ಚೆಂದನವನದ ನಟ ನಟಿಯರು ಬಹಳ ಬೇಸರಗೊಂಡಿದ್ದು ಅಭಿಮಾನಿಗಳಿಗೂ ಕೂಡ ಈ ಸಂಗತಿಯಿಂದ ಭಾರಿ ನೋವುಂಟಾಗಿದೆ ಎಂಬುದಾಗಿ ಬರೆದುಕೊಂಡಿದ್ದಾರೆ.
ಇನ್ನು ಹಿರಿಯ ನಟ ಜಗ್ಗೇಶ್ ಕೂಡ ಈ ಘಟನೆಯ ಬಗ್ಗೆ ಟ್ವೀಟ್ ಮಾಡುದರ ಮೂಲಕ ಪ್ರತಿಕ್ರಿಯಿಸಿದ್ದು ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದ ಘಟನೆಗೆ ಕನ್ನಡ ನಟ ನಟಿಯರು ಭಾರಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
ನಟ ದರ್ಶನ್ ಬೆಂಬಲಿಸಿ ಚಪ್ಪಲಿ ಎಸೆದವರ ವಿರುದ್ಧ ಶಿವರಾಜ್ ಕುಮಾರ್ ನಟಿ ನಿಶ್ಮಿಕಾ ನಾಯ್ಡು ನಟ ಧನ್ವಿರ್ ಕಿಚ್ಚ ಸುದೀಪ್ ಹಿರಿಯ ನಟ ಜಗ್ಗೇಶ್ ಶ್ರೀಮುರುಳಿ ಅಮೂಲ್ಯ ವಸಿಷ್ಠ ಸಿಂಹ ಸೇರಿದಂತೆ ಹಲವು ಸ್ಟಾರ್ ನಟರು ಬೇಸರ ವ್ಯಕ್ತ ಪಡಿಸಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದ ಕ್ರಾಂತಿ ಸಿನಿಮಾದ ಬೋಂಬೆ ಬೋಂಬೆ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ವೇಧಿಕೆಯ ಮೇಲೆ ದರ್ಶನ್ ರವರ ಮೇಲೆ ಚಪ್ಪಲಿ ಎಸಯಲಾಗಿದ್ದು ಆದರೆ ದರ್ಶನ್ ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ್ದರು. ಈ ಘಟನೆಯ ಬಗ್ಗೆ ಬೇಸರ ಗೊಂಡ ದರ್ಶನ್ ಅಭಿಮಾನಿಗಳು ದೊಡ್ಡ ಅಭಿಯಾನವನ್ನೇ ಶುರು ಮಾಡಿದ್ದಾರೆ.
ನಟ ಜಗ್ಗೇಶ್ ಕೂಡ ತಮ್ಮ ಸಹ ನಟ ಸಹೋದ್ಯೋಗಿಗೆ ಆಗಿರುವ ಅಪಮಾನವನ್ನು ಖಂಡಿಸಿ ಟ್ವೀಟ್ ಮಾಡಿದ್ದು ಹಾಗೂ ತಾವು ಕಾಲವಿದನಿಗೆ ಬೆಂಬಲವಾಗಿ ನಿಂತುಕೊಳ್ಳುದಾಗಿ ಹೇಳಿದ್ದಾರೆ ದಯವಿಟ್ಟು ಕಾಲವಿದರನ್ನ ಹೀಗೆ ಅವಮಾನ ಮಾಡದಿರಿ. ಕಾಲವಿದರಿಗೆ ಗೊತ್ತಿರುವುದು ಕಲಾಪ್ರೇಮಿಗಳನ್ನು ಸಂತೋಷ ಪಡಿಸುವ ಕಾಯಕ ಮಾತ್ರ.
ಎಲ್ಲ ಕಲಾವಿದರು ಶಾರದೆಯ ಮಕ್ಕಳು ಅವರ ಮೇಲೆ ಪ್ರೀತಿ ಇರಲಿ ದ್ವೇಷ ಬೇಡ ನನ್ನ ವಿನಂತಿ. ದರ್ಶನ್ ಸ್ವಲ್ಪ ನೇರನುಡಿ ಮನಸ್ಸು ಮಗುವಂತೆ. ಧನ್ಯವಾದ ಎಂದು ನಟ ಜಗ್ಗೇಶ್ ದರ್ಶನ್ ಪರ ಟ್ವೀಟ್ ಮಾಡಿದ್ದು ತಮ್ಮೊಂದಿಗೆ ನಡೆದ ಕಹಿ ಘಟನೆಯನ್ನು ಮರೆತು ಜಗ್ಗೇಶ್ ದರ್ಶನ್ ಗೆ ಬೆಂಬಲ ನೀಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಈ ನಡುವೆ ಜಗ್ಗೇಶ್ ರವರು ನಟ ದರ್ಶನ್ ರವರಿಗೆ ಚಪ್ಪಲಿ ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅಷ್ಟಕ್ಕೂ ಜಗ್ಗೇಶ್ ಹೀಗೆ ಮಾಡಿದ್ದೇಕೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.