ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಾರಿನಲ್ಲಿ ಅಳುತ್ತ ತವರು ಮನೆಗೆ ಹೊರಟ ಅಮೂಲ್ಯ…ಕ್ಯೂಟ್ ವಿಡಿಯೋ ನೋಡಿ

3,016

ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಜಗದೀಶ್ ರವರು ಹೊಸ ವರ್ಷವನ್ನು ವಿಶೇಷವಾಗಿ ಬರ ಮಾಡಿಕೊಂಡಿದ್ದು 2022 ಹೇಗಿತ್ತು ಎಂದು ಕೂಡ ಹೇಳಿಕೊಂಡಿದ್ದಾರೆ. 2022 ಇದು ಅದ್ಭುತವಾದ ವರ್ಷವಾಗಿದ್ದು ಈ ವರ್ಷವು ಸಂತೋಷ ನೋವು ಒತ್ತಡ ಆತ್ಮವಿಶ್ವಾಸ ಭಯ ಶಕ್ತಿ ಪ್ರೀತಿಯ ಪರಿಪೂರ್ಣ ಮಿಶ್ರಣವಾಗಿದೆ ಎಂದು ಅಮೂಲ್ಯ ರವರು ಹೇಳಿಕೊಂಡಿದ್ದಾರೆ.

2022 ತುಂಬಾ ಕಲಿಸಿದೆ.ಈ ಎಲ್ಲಾ ಕಲಿಕೆಗಳೊಂದಿಗೆ 2023 ನನ್ನ ಮುಂದಿನ ಆವೃತ್ತಿಯನ್ನು ಶುರು ಮಾಡುತ್ತೇನೆ ಎಂದು ನಟಿ ಅಮೂಲ್ಯ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ತಮ್ಮ 2022ರ ಅನುಭವ ಹಂಚಿಕೊಂಡಿದ್ದಾರೆ. ಹೊಸ ವರ್ಷಕ್ಕೆ ಅದೆಲ್ಲಾ ಪಾಠ ಎಂದಿದ್ದು ಅಮೂಲ್ಯ ಪೋಸ್ಟ್ ಎಲ್ಲೆರೆ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು ಅವಳಿ ಮಕ್ಕಳಾದರೂ ಅದ್ಭುತವಾಗಿ ಕಾಣ್ತಿದ್ದಾರೆ ಈ ಮಮ್ಮಿ ಸೂಪರ್ ಎಂದಿದ್ದಾರೆ ಜನ. ಹೌದು ನಿಮ್ಮ ಸೌಂದರ್ಯದ ಗುಟ್ಟೇನು ಎಂದು ಅಭಿಮಾನಿಗಳು ಪ್ರಶ್ನಿಸಿದ್ದು ನಟಿ ಅಮೂಲ್ಯ ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಹೌದು ಅ ದಿಂದಲೇ ಹೆಸರಿಟ್ಟಿದ್ದಾರೆ.

ತಮ್ಮ ಅಮೂಲ್ಯ ಎಂಬ ಹೆಸರಿನಿಂದ ಅ ತೆಗೆದುಕೊಂಡು ಅ ಯಿಂದ ಹೆಸರಿಟ್ಟಿದ್ದಾರೆ.ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಅಮೂಲ್ಯ ಅವರು ಸದ್ಯ ಬ್ಯುಸಿ ಇದ್ದು ಮುದ್ದು ಮಕ್ಕಳನ್ನು ಸಾಕುತ್ತಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಹಂಚಿಕೊಳ್ತಾರೆ.

ಚೆಲುವಿನ ಚಿತ್ತಾರ ಸೇರಿ ಹಲವು ಹಿಟ್ ಸಿನಿಮಾ ಮಾಡಿದ್ದ ಅಮೂಲ್ಯ ಜಗದೀಶ್ ಅವರ ಜೊತೆ ಮದುವೆ ಆದಾಗಿನಿಂದ ಸಿನಿಮಾದಿಂದ ದೂರು ಉಳಿದಿದ್ದಾರೆ. 2023ರಲ್ಲಿಯಾದ್ರೂ ಸಿನಿಮಾ ಮಾಡ್ತಾರಾ ನೋಡಬೇಕು. ಈ ನಡುವೆ ಅಮೂಲ್ಯ ತವರು ಮನೆಗೆ ತೆರಳುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು ಯಾರ ಜೊತೆ ಹೋಗುತ್ತಿದ್ದಾರೆ ಎಂದು ಲೇಖನಿಯ ಕೆಳಗಿನ ವಿಡಿಯೋದಲ್ಲಿ ನೀವೆ ನೋಡಿ.

ನಟಿ ಅಮೂಲ್ಯ ಅವರು ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಸದ್ಯ ಕುಟುಂಬದ ಕಡೆಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಸೆಪ್ಟೆಂಬರ್ 14 ಅಮೂಲ್ಯ ಅವರ ಜನ್ಮದಿನ. ಇದರ ಜತೆಗೆ ಅವರ ಮಕ್ಕಳಿಗೆ ಆರು ತಿಂಗಳು ತುಂಬಿದ್ದು ಅಮೂಲ್ಯಗೆ ಅದು ವಿಶೇಷ ದಿನ. ತಮ್ಮ ಬರ್ತ್​​ಡೇ ಸಂಭ್ರಮದ ಜತೆಗೆ ಅವಳಿ ಮಕ್ಕಳಿಗೆ ಆರು ತಿಂಗಳು ತುಂಬಿದ ಖುಷಿಯಲ್ಲಿದ್ದರು.

ಈ ಎಲ್ಲಾ ಕಾರಣದಿಂದ ಅಮೂಲ್ಯ ಸಂಭ್ರಮಿಸಿದ್ದು ಇನ್​​ಸ್ಟಾಗ್ರಾಮ್​ನಲ್ಲಿ ಅಮೂಲ್ಯ ಅವರು ಮಕ್ಕಳ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಖುಷಿಯಾಗಿದ್ದಾರೆ.2017ರಲ್ಲಿ ಬಂದ ಮುಗುಳು ನಗೆ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ ಬಳಿಕ ಅಮೂಲ್ಯ ಅವರು ಬೇರೆ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. ಮತ್ತೆ ಅವರನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂದು ಅಭಿಮಾನಿಗಳು ಕಾದಿದ್ದಾರೆ.