ಸದ್ಯ ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹೌದು ದೇಶಾದ್ಯಂತ ಮಾತ್ರವಲ್ಲದೆ ವಿದೇಶದಲ್ಲಿಯೂ ಭಾರಿ ಹಿಟ್ ಆದ ಸಿನಿಮಾದ ನಟ ಅಂದರೆ ಈಗ ನಾರ್ತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸಖತ್ ಕ್ರೇಜ್.
ಹೌದು ಯಶ್ನನ್ನು ನೋಡಿ ಜನರು ಫಿದಾ ಆಗಿದ್ದು ಸ್ಯಾಂಡಲ್ವುಡ್ ನಟನ ಸ್ಟಾರ್ ರೇಂಜ್ ತೋರಿಸೋ ವಿಡಿಯೋ ಒಂದು ಈಗ ವೈರಲ್ ಆಗಿದೆ. ಸದ್ಯ ನಟ ಯಶ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದು ಮುಂಬೈನಲ್ಲಿ ಯಶ್ನನ್ನು ನೋಡಿದ ಜನ ಫುಲ್ ಖುಷಿಯಾಗಿ ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ನಟ ಯಶ್ ಸರಳತೆಯಿಂದ ಅಭಿಮಾನಿಗಳಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದು ದೇಶಾದ್ಯಂತ ಸದ್ದು ಮಾಡಿದ ಕೆಜಿಎಫ್ ಸಿನಿಮಾ ಹೀರೋ ಎದುರು ಬಂದ್ರೆ ಸುಮ್ನೇನಾ ಹೇಳಿ..
ಸಿನಿಮಾ ಸಂಬಂಧಿಸಿ ನಟ ಹೈದರಾಬಾದ್ ಹಾಗೂ ಮುಂಬೈಗೆ ಪ್ರಯಾಣಿಸುತ್ತಿದ್ದರು. ಕೆಜಿಎಫ್ ಶೂಟಿಂಗ್ ಕೂಡಾ ಹೈದರಾಬಾದ್ನಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ನಟ ಏರ್ಪೋಟ್ನಲ್ಲಿ ಕಾಣಿಸಿಕೊಂಡಾಗಲೂ ಅಭಿಮಾನಿಗಳು ಖುಷಿಯಾಗಿದ್ದರು. ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಇತ್ತೀಚಿಗೆ ಯಶ್ ಏರ್ಪೋರ್ಟ್ ಲುಕ್ ಹೊಸ ಕ್ರೇಜ್ ಕ್ರಿಯೇಟ್ ಮಾಡುತ್ತಿದೆ.
ಒಂದಷ್ಟು ಸಮಯದ ಹಿಂದೆ ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿತ್ತು. ಕ್ಯಾರವ್ಯಾನ್ನಿಂದ ಇಳಿಯುವಾಗ ಅಭಿಮಾನಿಗಳು ಸೆಲ್ಫಿಗಾಗಿ ಮುಗ್ಗಿ ಬಿದ್ದಿದ್ದರು.
ಯಶ್ ಜೊತೆ ಸಿನಿಮಾ ಮಾಡಬೇಕು ಎಂದು ಬಾಲಿವುಡ್ನಿಂದ ನಿರ್ಮಾಪಕರು ಬರುತ್ತಿದ್ದಾರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಯಶ್ ಸೈಲೆಂಟ್ ಆಗಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಯಾವ ಸದ್ಯ ಕಾಲ್ಶೀಟ್ ಫ್ರೀ ಇಲ್ಲ ಎಂದಿದ್ದಾರೆ. ಕಾಲ್ಶೀಟ್ ಇಲ್ಲ ಎಂದು ನಿರ್ಮಾಪಕರು ಮುಂಬೈಗೆ ವಾಪಸ್ ಆಗಿದ್ದಾರೆ ಅನ್ನೋದು ಸುದ್ದಿಯೂ ಕೇಳಿ ಬಂದಿತ್ತು.
ಇನ್ನು ಯಶ್ ಮುಂಬೈಗೆ ಹೋಗಿರುವುದು ಚಿತ್ರೀಕರಣಕ್ಕೆ. ಆದರೆ ಸಿನಿಮಾದ ಚಿತ್ರೀಕರಣಕ್ಕಾಗಿ ಅಲ್ಲ ಬದಲಿಗೆ ಜಾಹಿರಾತು ಚಿತ್ರೀಕರಣಕ್ಕೆ. ಮುಂಬೈನಲ್ಲಿ ದೊಡ್ಡ ಬ್ರ್ಯಾಂಡ್ ಒಂದರ ಜಾಹೀರಾತು ಚಿತ್ರೀಕರಣದಲ್ಲಿ ನಟ ಯಶ್ ಪಾಲ್ಗೊಂಡಿದ್ದಾರೆ.
ಜೊತೆಗೆ ಯಶ್ರ ಮುಂದಿನ ಸಿನಿಮಾದ ನಿರ್ಮಾಪಕರು ಮುಂಬೈ ಮೂಲದವರು ಎಂದು ಹೇಳಲಾಗುತ್ತಿದ್ದು ಜಾಹೀರಾತು ಚಿತ್ರೀಕರಣದ ಬಳಿಕ ತಮ್ಮ ಮುಂದಿನ ಸಿನಿಮಾದ ನಿರ್ಮಾಪಕರನ್ನು ಭೇಟಿಯಾಗಿ ಅಲ್ಲಿಯೇ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಯಶ್ ಗೊಲ್ಡನ್ ಮ್ಯಾನ್ ಜೊತೆ ಯಶ್ ಕಾಣಿಸಿಕೊಂಡಿದ್ದು ಈ ಪೋಸ್ಟ್ ಬಹಳ ವೈರಲ್ ಆಗುತ್ತಿದೆ. ಅರೆರೇ ಯಾರದು ಗೊಲ್ಡನ್ ಮ್ಯಾನ್ ಅಂತೀರ? ಕೆಳಗಿನ ವಿಡಿಯೋ ನೋಡಿ.