ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮದುವೆ ಖುಷಿಗೆ ಹರಿಪ್ರಿಯಾ ಚಿಂದಿ ಡಾನ್ಸ್ ನೋಡಿ …ವಿಡಿಯೋ

21,474

ನಮ್ಮ ಕನ್ನಡ ಚಿತ್ರರಂಗದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಹರಿಪ್ರಿಯಾ ತಮ್ಮ ಭಿನ್ನ ಪಾತ್ರಗಳ ಮೂಲಕ ತಮಗೆ ತಾವೇ ಸ್ಪರ್ಧೆಯನ್ನೊಡ್ಡಿಕೊಂಡು ಸಿನಿಮಾದಿಂದ ಸಿನಿಮಾಕ್ಕೆ ಪ್ರಬುದ್ಧವಾಗಿದ್ದಾರೆ ಎಂದರೆ ಖಂಡಿತ ತಪ್ಪಾಗಲಾರದು. ಮೂಲತಃ ಚಿಕ್ಕಬಳ್ಳಾಪುರದಲ್ಲಿ ಜನಿಸಿದ ಈ ಮೂಗುತಿ ಚೆಲುವೆ ತಾವು ಪ್ರಥಮ ಪಿಯುಸಿಯಲ್ಲಿ ವ್ಯಾಸಾಂಗ ಮಾಡುವಗಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಉಗ್ರಂ ನೀರ್‌ ದೋಸೆ ಸೂಜಿದಾರಾ ಬೆಲ್‌ ಬಾಟಮ್ ಕಥಾ ಸಂಗಮ ಡಾಟರ್ ಆಫ್ ಪಾರ್ವತಮ್ಮ ಹೀಗೆ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿದ್ದಾರೆ ಹರಿಪ್ರಿಯಾರವರು.

ನಟಿ ಹರಿಪ್ರಿಯಾ ರವರು ಮೊದಲು ನಟಿಸಿದ್ದು ತುಳುವಿನ ಬಡಿ ಎಂಬ ಸಿನಿಮಾದಲ್ಲಿ. ಹೌದು ಆ ಸಿನಿಮಾದಲ್ಲಿ ಆಕೆಯ ಹೆಸರು ಶ್ರುತಿ ಅಂತ ಇದ್ದು ಆದರೆ ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಿಂದ ಆಫರ್‌ ಬರುತ್ತದೆ. ತಮೆಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಶ್ರುತಿ ಹೆಸರಿನ ನಾಯಕಿ ಖ್ಯಾತರಾಗಿದ್ದು ಹಾಗಾಗಿ ತುಳು ಸಿನಿಮಾದ ನಿರ್ದೇಶಕರು ಹೆಸರು ಬದಲಾಯಿಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದು 12 ವರ್ಷಗಳ ಹಿಂದೆ ಇರದೇ ಇದ್ದ ಹರಿಪ್ರಿಯಾ ಈಗಿದ್ದಾಳೆ. ಸದ್ಯ ಹೊರ ಜಗತ್ತಿಗೆ ಹರಿಪ್ರಿಯಾ ಗೊತ್ತು ಆದರೆ ಶ್ರುತಿ ನನ್ನ ಮನದ ಮೂಲೆಯಲ್ಲಿ ಜೀವಂತವಾಗಿದ್ದಾಳೆ ಎಂದು ಹರಿಪ್ರಿಯಾ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದು ತಮ್ಮ ಮನೆಯವರು ಬಿಟ್ಟು ಇನ್ಯಾರೂ ಶ್ರುತಿ ಎಂದು ಕರೆಯುವುದಿಲ್ಲವಂತೆ. ಈ ಕೊರಗು ಅವರ ಮನದಲ್ಲಿ ಸದಾ ಕಾಡುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಉತ್ತಮ ಅಭಿನಯದ ಮೂಲಕವಾಗಿ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದ್ದಾರೆ ನಟಿ ಹರಿಪ್ರಿಯಾ. ಸದ್ಯ ಇದೀಗ ಇತ್ತೀಚಿನ ದಿನಗಳಲ್ಲಿ ಹರಿಪ್ರಿಯಾ ಅಭಿನಯದ ಸಿನಿಮಾ ತೆರೆಕಂಡಿಲ್ಲ. ಬೆಲ್ ಬಾಟಮ್ 2 ಅಮೃತಮತಿ ಸೇರಿದಂತೆ ಅನೇಕ ಸಿನಿಮಾಗಳು ಮುಂದಿನ ದಿನಗಳಲ್ಲಿ ಬರಲಿದ್ದು ಇನ್ನು ಹರಿಪ್ರಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿದ್ದು ಇತ್ತೀಚೆಗೆ ಹೊಸ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿದ್ದಾರೆ.

ಹಳ್ಳಿ ಹುಡುಗಿಯ ಹಾಗೆ ಲಂಗಾ ದಾವಣಿ ಧರಿಸಿ ಹಳ್ಳಿಯಲ್ಲಿ ಗದ್ದೆ ನಡುವೆ ಎತ್ತಿನ ಗಾಡಿಯ ಮೇಲೆ ಫೋಟೋಶೂಟ್ ಮಾಡಿಸಿದ್ದು ಈ ಹೊಸ ಲುಕ್ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ. ಇನ್ನು ಇದರ ಜೊತೆಗೆ ಸಾಕಷ್ಟು ವಿಡಿಯೋಗಳನ್ನು ಕೂಡ ಹರಿ ಬಿಡುತ್ತಾ ತಮ್ಮ ಅಭಿಮಾನಿಗಳಿಗೆ ಸಂತಸ ನೀಡುತ್ತಿರುತ್ತಾರೆ.

ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡುವ ಮೂಲಕವಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಹರಿಪ್ರಿಯಾ ಅವರಿಗೆ ಈಗ 30 ವರ್ಷ ವಯಸ್ಸಾಗಿದ್ದು ಸಾಕಷ್ಟು ಸಿನೆಮಾ ಸಂದರ್ಶನದಲ್ಲಿ ಭಾಗವಹಿಸಿದ್ದಾರೆ. ಆದರೆ ಎಲ್ಲಿಯೂ ಕೂಡ ಅವರು ತಮ್ಮ ಮದುವೆಯ ವಿಷಯವನ್ನು ಪ್ರಸ್ತಾಪ ಮಾಡಿದ್ದು ಕಂಡು ಬಂದಿರಲಿಲ್ಲ.

ಹೌದು ಈ ಮೋಹಕ ಬೆಡಗಿಗೆ ಮದುವೆಯ ಮೇಲೆ ಆಸಕ್ತಿ ಇಲ್ಲವಾ ಅಥವಾ ಯಾರನ್ನಾದರೂ ಪ್ರೀತಿ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಓಡಾಡಿದ್ದು ಕಂಡಿತಾ. ಇದೀಗ ನಟ ವಸಿಷ್ಠಸಿಂಹ ಅವರನ್ನು ವಿವಾಹ ಆಗುವ ಮೂಲಕ ಶಾಕ್ ಕೊಟ್ಟಿದ್ದು ಮುಂದಿನ ವರುಷ ಜನವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ನಡುವೆ ಆಕೆಯ ವೈಯರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಸೀರೆಯಲ್ಲಿ ಹರಿಪ್ರಿಯಾ ಎಷ್ಟು ಅದ್ಬುತವಾಗಿ ಡ್ಯಾನ್ಸ್ ಮಾಡಿದ್ದಾರೆಂದು ನೀವೆ ನೋಡಿ.