ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಟಿ ಹರಿಪ್ರಿಯಾ ನಿಶ್ಚಿತಾರ್ಥದಲ್ಲಿ ದೊಡ್ಡ ಯಡವಟ್ಟು ನೋಡಿ…ವಿಡಿಯೋ

48,283

ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ರವರು ಮದುವೆಯಾಗಲಿದ್ದಾರೆ ಅದಾಗಲೇ ಮದುವೆಯಾಗಿ ಬಿಟ್ಟಿದ್ದಾರೆ ಇಲ್ಲ ಸ್ವಾಮಿ ನಿಶ್ಚಿತಾರ್ಥ ಮಾತ್ರ ಅಂತೆ. ಅಯ್ಯೋ ಅದೆಲ್ಲ ಏನೂ ಇಲ್ಲ ರೀ.. ಕೇವಲ ಫ್ರೆಂಡ್ಸ್ ಅಂತೆ ಹೀಗೆ ಕಳೆದೊಂದು ವಾರದಿಂದಲೂ ಅಂತೆ-ಕಂತೆಗಳೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು.

ಇನ್ನು ಸಿಂಹವೊಂದು ಕೈಯಲ್ಲಿ ಹೆಣ್ಣು ಮಗುವನ್ನು ಹಿಡಿದುಕೊಂಡಿರುವ ಚಿತ್ರವನ್ನು ನಟಿ ಹರಿಪ್ರಿಯಾ ರವರು ನಿನ್ನೆಯಷ್ಟೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದು ಇನ್ನಷ್ಟು ಗೊಂದಲಗಳಿಗೆ ಕಾರಣವಾಗಿತ್ತು. ಆದರೆ ಬಹುತೇಕರಿಗೆ ಇವರಿಬ್ಬರೂ ಪ್ರೀತಿಯಲ್ಲಿರುವ ವಿಷಯವಂತೂ ಪಕ್ಕಾ ಖಾತ್ರಿಯಾಗಿತ್ತು. ಸದ್ಯ ಇದೀಗ ಇವರಿಬ್ಬರ ನಿಶ್ಚಿತಾರ್ಥದ ಚಿತ್ರಗಳು ಕೂಡ ಹೊರಬಿದ್ದಿದ್ದು ಅಲ್ಲಿಗೆ ವಂದಂತಿಗಳಿಗೆಲ್ಲ ಪೂರ್ಣವಿರಾಮವಿಟ್ಟು ತಮ್ಮ ಪ್ರೇಮವನ್ನು ಬಹಿರಂಗ ಪಡಿಸಿದೆ ಈ ಸ್ಟಾರ್ ಜೋಡಿ.

ಹೌದು ಸರಳ ಕಾರ್ಯಕ್ರಮದಲ್ಲಿ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಉಂಗುರ ಬದಲಾಯಿಸಿಕೊಂಡಿದ್ದು ಇವರ ನಿಶ್ಚಿತಾರ್ಥದ ಚಿತ್ರಗಳು ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳಾನೇ ವೈರಲ್ ಆಗಿವೆ. ಹೌದು ಹಿಂದೂ ಸಂಪ್ರದಾಯದಂತೆ ನಿಶ್ಚಿತಾರ್ಥ ನಡೆದಿರುವುದು ಚಿತ್ರಗಳಿಂದ ತಿಳಿದು ಬರುತ್ತಿದ್ದು
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆಡೆದಿದೆ.

ಹೌದು ಸಿನಿಮಾ ರಂಗದ ಗೆಳೆಯರಿಗೂ ಕೂಡ ಈ ಕಾರ್ಯಕ್ರಮಕ್ಕೆ ಆಹ್ವಾನವಿರಲಿಲ್ಲ ಎನ್ನಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಜೋಡಿ ವಿವಾಹ ಬಂಧಕ್ಕೆ ಒಳಗಾಗಲಿದ್ದು ಆದರೆ ವಿವಾಹದ ದಿನಾಂಕ ಬಹಿರಂಗವಾಗಿಲ್ಲ. ಶ್ರುತಿ ಚಂದ್ರಸೇನಾ ಅಲಿಯಾಸ್ ಹರಿಪ್ರಿಯಾ ಜನಿಸಿದ್ದು ಚಿಕ್ಕಬಳ್ಳಾಪುರದಲ್ಲಿ. ಇನ್ನು 2007 ರಲ್ಲಿ ತುಳು ಸಿನಿಮಾ ಮೂಲಕ ನಟನೆಗೆ ಕಾಲಿರಿಸಿದ ಹರಿಪ್ರಿಯಾ 2008 ರಲ್ಲಿ ಮನಸುಗಳ ಮಾತು ಮಧುರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಈವರೆಗೆ ಹಲವು ಸಿನಿಮಾಗಳಲ್ಲಿ ಹರಿಪ್ರಿಯಾ ನಟಿಸಿದ್ದು ಕೆಲ ಪರಭಾಷೆಯ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ.

ಇನ್ನು ವಸಿಷ್ಠ ಸಿಂಹ ರವರು ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯ ನಟನಾಗಿ ಪೋಷಕ ನಟನಾಗಿ ವಿಲನ್‌ ಆಗಿ ನಟಿಸುತ್ತಿದ್ದವರು. ಸದ್ಯ ಈಗ ನಾಯಕ ನಟನಾಗಿ ನಟಿಸಲು ಆರಂಭಿಸಿದ್ದು ಚಿತ್ರರಂಗದಲ್ಲಿ ಅವರದ್ದು ಸ್ಪೂರ್ತಿದಾಯಕ ಪಯಣ ಎನ್ನಬಹುದು.

ಈ ಇಬ್ಬರೂ ಒಟ್ಟಿಗೆ ತೆಲುಗು ಸಿನಿಮಾ ಎವರು ನಲ್ಲಿ ಒಟ್ಟಿಗೆ ನಟಿಸಿದ್ದು ಆಗಲೇ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದೆ ಎನ್ನಲಾಗುತ್ತಿದೆ. ಇನ್ನು ಹರಿಪ್ರಿಯಾ ಅವರ ಏಳು ಸಿನಿಮಾಗಳು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಆಗಲಿದ್ದು ಅಮೃತಮತಿ ತಾಯಿ ಕಸ್ತೂರಿ ಗಾಂಧಿ ಯದಾ ಯಧಾಹಿ ಬೆಲ್ ಬಾಟಮ್ 2 ಹ್ಯಾಪಿ ಎಂಡಿಂಗ್ ಲಗಾಮು ನಿರ್ದೇಶಕ ಶಶಾಂಕ್‌ರ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದು ಇನ್ನು ವಸಿಷ್ಠ ಸಿಂಹ ಕನ್ನಡ ಸೇರಿದಂತೆ ಪರಭಾಷೆಯ ಸಿನಿಮಾಗಳಲ್ಲಿಯೂ ಕೂಡ ಬ್ಯುಸಿಯಾಗಿದ್ದಾರೆ.

ಇನ್ನು ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ದಿನ ಹರಿಪ್ರಿಯಾ ಅವರು ವಸಿಷ್ಠ ಸಿಂಹ ಜೊತೆಗೆ ಡ್ಯಾನ್ಸ್ ಮಾಡಿರುವ ಒಂದು ವಿಡಿಯೋವನ್ನು ಹರಿಪ್ರಿಯಾ ಹಂಚಿಕೊಂಡಿದ್ದು ಹುಟ್ಟುಹಬ್ಬದ ಶುಭಾಶಯಗಳು ಪಾರ್ಟ್ನರ್ ಎಂದು ಬರೆದುಕೊಂಡಿದ್ದರು. ಅದಕ್ಕೆ ವಸಿಷ್ಠ ಸಿಂಹ ಥ್ಯಾಂಕ್ಯೂ ಪಾರ್ಟ್ನರ್ ಎಂದು ರಿಪ್ಲೈ ಮಾಡಿದ್ದರು. ಅದೇ ರೀತಿ ಹರಿಪ್ರಿಯಾ ಹುಟ್ಟುಹಬ್ಬದಂದು ವಸಿಷ್ಠ ಕೂಡ ಹುಟ್ಟುಹಬ್ಬದ ಶುಭಾಶಯಗಳು ಪಾರ್ಟ್ನರ್ ಎಂದೇ ಪೋಸ್ಟ್ ಹಾಕಿದ್ದಾರೆ. ಥ್ಯಾಂಕ್ ಯೂ ಪಾರ್ಟ್ನರ್ ಎಂದು ಅದಕ್ಕೆ ಹರಿಪ್ರಿಯಾ ಕಾಮೆಂಟ್ ಹಾಕಿದ್ದರು.

ಇದನ್ನು ನೋಡಿದವರು ಇವರಿಬ್ಬರು ಲವ್ ಮಾಡುತ್ತಿದ್ದಾರಾ ಎಂದು ಅನುಮಾನಪಟ್ಟಿದ್ದರು. ಅದೀಗ ನಿಜವಾಗಿದೆ. ಇನ್ನು ಇವರಿಬ್ಬರು ಲವ್ ಮಾಡುತ್ತಿದ್ದಾರೆ ಎಂದು ಅನುಮಾನ ಶುರುವಾದಗಲೇ ಈ ಜೋಡಿ ದುಬೈನಲ್ಲಿರುವ ಫೋಟೋಗಳು ವೈರಲ್ ಆಗಿದ್ದು ಹರಿಪ್ರಿಯಾ ಅವರ ಕೈಹಿಡಿದು ವಸಿಷ್ಠ ಸಿಂಹ ದುಬೈ ನಗರದಲ್ಲಿ ಓಡಾಡಿದ ಫೋಟೋಗಳು ವೈರಲ್ ಆಗಿತ್ತು. ನಿಶ್ಚಿತಾರ್ಥ ಮದುವೆ ಮಧ್ಯೆ ಇವರಿಬ್ಬರು ಸಿನಿಮಾವೊಂದರಲ್ಲಿ ಒಟ್ಟಾಗಿ ನಟಿಸಿದ್ದು ಆ ಸಿನಿಮಾ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.