ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಿರಿಕ್ ಪಾರ್ಟಿ ಸಿನಿಮಾ ನಟ ಅಶ್ವಿನ್ ರಾವ್ ಮದುವೆ ನೋಡಿ…ಚಿಂದಿ ವಿಡಿಯೋ

378

ashwin rao marrige: ಕನ್ನಡ ಚಿತ್ರರಂಗದಲ್ಲಿ ನಟ ನಿರ್ದೇಶಕ ಹಾಗೂ ನಿರ್ಮಾಕರಾಗಿರುವ ಸಿಂಪ್ ಸ್ಟಾರ್  ರಕ್ಷಿತ್ ಶೆಟ್ಟಿ ಯವರು ತಮ್ಮ ವಿಭಿನ್ನ ಸ್ಕ್ರೀನ್ ಪ್ಲೇ ಮತ್ತು ನಟನೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ ಎನ್ನಬಹುದು. ನಮ್ ಏರಿಯಲ್ ಒಂದ್ ದಿನ ಎಂಬುವ ಚಿತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ ಅವರು ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ  ಚಿತ್ರದ ಮುಖಾಂತರ ಸಿಂಪಲ್ ಸ್ಟಾರ್ ಆಗಿ

ಹೊರಹುಮ್ಮಿದ್ದರು.  ತದನಂತರ 2014 ರಲ್ಲಿ ಉಳಿದವರು ಕಂಡಂತೆ ಎಂಬುವ ವಿಶೇಷ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಾನೂ ಒಬ್ಬ ಉತ್ತಮ ನಿರ್ದೇಶಕನೆಂದು  ಸಾಭೀತು ಮಾಡಿದರು.ಹೀಗೆ ಸಾಲುಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದ ಸಿಂಪಲ್ ಸ್ಟಾರ್ 2016 ರಲ್ಲಿ ಕಿರಿಕ್ ಪಾರ್ಟಿ ಎಂಬುವ ಕ್ಯಾಂಪಸ್ ರೊಮ್ಯಾಂಟಿಕ್ ಹಾಸ್ಯ ಚಿತ್ರವನ್ನು ನಿರ್ಮಿಸಿ ಮತ್ತು ಅಭಿನಯಿಸಿದರು.

ಈ ಸಿನಿಮಾ ರಾಜ್ಯಾದ್ಯಾಂತ 15 ಚಿತ್ರಮಂದಿರಗಳಲ್ಲಿ 250 ದಿನಗಳು ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ 365 ದಿನಗಳನ್ನು ಪೂರೈಸುವ ಮುಖಾಂತರ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ಸಿನಿಮಾದ ಮುಖ್ಯ ಆಕರ್ಷಣೆ ಎಂದರೆ ಸಾನ್ವಿ ಪಾತ್ರದಾರಿ ರಶ್ಮಿಕಾ ಮಂದಣ್ಣ ಎನ್ನಬಹುದು. ಈ ಸಿನಿಮಾ ಹಿಟ್ ಆಗಲು ಈ ಪಾತ್ರವೂ ಸಹ ಮುಖ್ಯ ಕಾರಣ ಎಂದರೆ ತಪ್ಪಾಗಲಾರದು.ಕಿರಿಕ್ ಪಾರ್ಟಿ ಸಿನಿಮಾದ ನಂತರ ರಕ್ಷಿತ್ ಮತ್ತು ರಶ್ಮಿಕಾ ವಿವಾಹವಾಗುತ್ತಿದ್ದೇವೇ ಎಂದು ಅನೌನ್ಸ್ ಮಾಡಿಕೊಂಡಿದ್ದರು. ಸುದ್ಧಿ ಕೇಳಿದ ಸಾಕಷ್ಟು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ತದನಂತರ ಎಂಗೇಜ್‍ಮೇಂಟ್ ಬ್ರೇಕಪ್ ಕಹಾನಿಗಳೆಲ್ಲವೂ ತಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.

 

ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ತಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದು ಅಲ್ಲದೇ ತಮಿಳು ಹಾಗೂ ಹಿಂದಿ ಸಿನಿಮಾದಲ್ಲೂ ಕೂಡ ಬ್ಯುಸಿಯಾಗಿದ್ದಾರೆ. ಸದ್ಯ ಈ ಜೋಡಿಗಳು ಒಂದಾಗುವುದಿರಲಿ ಇಲ್ಲಿಯ ಒಬ್ಬರನ್ನೊಬ್ಬರು ಬೇಟಿ ಕೂಡ ಮಾಡಿಲ್ಲ. ಆದರೆ ಮೂವತ್ತು ವರುಷ ದಾಟಿರುವ ರಕ್ಷಿತ್ ಶೆಟ್ಟಿಯವರ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಸದಾ ಕುತೂಹಲಗಳು ಕಾಡುತ್ತಲೇ ಇವೆ. ಇನ್ನು ಇತ್ತೀಚೆಗಷ್ಟೇ ಮೋಹಕ ತಾರೆ ರಮ್ಯಾ ಅವರು  ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಾಗ

ನೀವು ನಟ ರಕ್ಷಿತ್ ಶೆಟ್ಟಿ ಅವರನ್ನು ಮದುವೆಯಾಗಿ ಎಂದು ಸಲಹೆ ನೀಡಿದ್ದರು ಇದಕ್ಕೆ ಕೂಲ್ ಆಗಿ ಉತ್ತರಿಸಿದ ರಮ್ಯಾ ಮದುವೆ ಮದುವೆ ಮದುವೆ ಪದ ಕೇಳಿ ಕೇಳಿ ಇದೀಗ ಆ ಮಾತು ಕೇಳಿದರೆ ಫನ್ನಿ ಎನ್ನಿಸುತ್ತಿದೆ. ಮದುವೆ ಆಗದೇ ಜೀವನದಲ್ಲಿ ಸುಖವಾಗಿರಲು ಸಾಧ್ಯ ಇಲ್ಲವಾ? ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳಿ ಸುದ್ದಿಗಳಿಗೆ ಫುಲ್ ಸ್ಟಾಪ್ ಹಾಕಿದ್ದರು. ಸದ್ಯ ಇದೀಗ ಕಿರಿಕ್ ಪಾರ್ಟಿಯ ಫೇಮಸ್ ನಟರೊಬ್ಬರು ಮದುವೆಯಾಗಿ ಸುದ್ದಿಯಲ್ಲಿದ್ದಾರೆ.

 

ಸಿನಿಮಾರಂಗದವರು ಅವರಂತೆಯೇ ಚಿತ್ರರಂಗದಲ್ಲಿರುವವರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡರೆ ಜೀವನ ಚೆನ್ನಾಗಿರುತ್ತೆ ಹೊಂದಾಣಿಕೆ ಇರುತ್ತೆ ಎನ್ನುವ ಮಾತಿದೆ. ಅಷ್ಟೇ ಅಲ್ಲದೆ ಕೆಲವರು ಚಿತ್ರರಂಗಕ್ಕೆ ಬಂದ ಕೆಲವೇ ದಿನಗಳಲ್ಲಿ ತಮಗೆ ಸೂಟ್ ಆಗುವವರನ್ನು ಸೆಲೆಕ್ಟ್ ಮಾಡಿಕೊಂಡಿರುತ್ತಾರೆ. ಇನ್ನು ಚಂದನವನದಲ್ಲಿಯೂ ಸಾಕಷ್ಟು ತಾರಾ ಜೋಡಿಗಳು ಇದೆ. ಇತರರಿಗೆ ಸ್ಪೂರ್ತಿ ಆಗುವಂತೆ ಅಂಬರೀಶ್-ಸುಮಲತಾ ಭಾರತಿ-ವಿಷ್ಣುವರ್ಧನ್ ಯಶ್-ರಾಧಿಕಾ ಚಿರಂಜೀವಿ ಸರ್ಜಾ-ಮೇಘನಾ ರಾಜ್ ಇದೇ ರೀತಿಯಲ್ಲಿ ಮತ್ತೊಂದು ತಾರಾ ಜೋಡಿ ಸಪ್ತಪದಿ ತುಳಿದಿದೆ.

ಕನ್ನಡ ಸಿನಿಮಾರಂಗದಲ್ಲಿಯೇ ಗುರುತಿಸಿಕೊಂಡಿರುವ ಇವರಿಬ್ಬರು ಇನ್ನು ಕೆಲವೇ ದಿನಗಳಲ್ಲಿ ಸತಿ-ಪತಿಯರಾಗಲಿದ್ದಾರೆ. ಹಾಗಾದರೆ ಯಾರು ಆ ತಾರಾ ಜೋಡಿ?  ಅಶ್ವಿನ್ ರಾವ್ ಪಲ್ಲಕ್ಕಿ ನೆನಪಿದೆ ಅಲ್ಲವೇ? ಕನ್ನಡ ಚಿತ್ರರಂಗದ ಉದಯೋನ್ಮುಖ ನಟ.ಇವರು ಕಿರಿಕ್ ಪಾರ್ಟಿ ಕಾಲೇಜ್ ಕುಮಾರ್ ಕಥೆಯೊಂದು ಶುರುವಾಗಿದೆ  ರತ್ನನ್ ಪ್ರಪಂಚ ಮಾಯಾಕನ್ನಡಿ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಇದೀಹ ನಟ ವಿವಾಹವಾಗಿದ್ದು ಇವರ ದಾಂಪತ್ಯ ಜೀವನಕ್ಕೆ ಕಾಲಿರಿಸಿದವರು ಯಾರು ಗೊತ್ತಾ? ಕೆಳಗಿನ ವಿಡಿಯೋ ನೋಡಿ.