ಸದ್ಯ ಕನ್ನಡ ಚಿತ್ರರಂಗದ ದೊಡ್ಮನೆ ಡಾ.ರಾಜ್ ಕುಮಾರ್ ರವರ ವಂಶದಿಂದ ಇದೀಗ ಹೊಸ ಚಿಗುರೊಂದು ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡುತ್ತಿದ್ದು ಅಭಿಮಾನಿಗಳು ಹಾರೈಸಿದ್ದಾರೆ. ಅದರಲ್ಲಿಯೂ ಕೆಜಿಎಫ್ ಸಿನಿಮಾ ನಿರ್ಮಾಣ ಮಾಡುವ ಮೂಲಕ ಪ್ರಪಂಚದಾದ್ಯಂತ ಹೆಸರು ಮಾಡಿದ ಹೊಂಬಾಳೆ ಫಿಲಂಸ್ ಸಂಸ್ಥೆಯ ಮೂಲಕ ಯುವ ರಾಜ್ ಕುಮಾರ್ ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿರುವುದು ಮತ್ತೊಂದು ಸಂತೋಷದ ವಿಚಾರವಾಗಿದೆ. ಹೌದು ಈಗಾಗಲೇ ಹೊಂಬಾಳೆ ಫಿಲಂಸ್ ಸಂಸ್ಥೆಯ ಕಡೆಯಿಂದ ಅಧಿಕೃತವಾಗಿ ಅಭಿಮಾನಿಗಳಿಗೆ ವಿಚಾರ ತಿಳಿಸಲಾಗಿದ್ದು ಈ ಬಗ್ಗೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು ಅದರಲ್ಲಿಯೂ ಕೂಡ ಸಿನಿಮಾ ಇಂಡಸ್ಟ್ರಿಯ ಸಾಕಷ್ಟು ಕಲಾವಿದರು ತಂತ್ರಜ್ಞರು ಯುವ ರಾಜ್ ಕುಮಾರ್ ಅವರಿಗೆ ಶುಭ ಹಾರೈಸಿದ್ದುಅಶ್ವಿನಿ ಪುನೀತ್ ಅವರೂ ಸಹ ಯುವನ ಸ್ಯಾಂಡಲ್ವುಡ್ ಎಂಟ್ರಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಎಲ್ಲರಿಗೂ ತಿಳಿದಿರುವಂತೆ ಪುನೀತ್ ರಾಜ್ ಕುಮಾರ್ ಅವರು ಅಗಲಿದ ನಂತರ ಸಾಕಷ್ಟು ಬದಲಾವಣೆಗಳಾಗಿದ್ದು ಅಶ್ವಿನಿ ಅವರ ಜೀವನ ಕೂಡ ಬದಲಾಯಿತು ಇತ್ತ ದೊಡ್ಮನೆಯಲ್ಲಿ ಎಂದೂ ಕಡಿಮೆಯಾಗದ ನೋವು ಆವರಿಸಿತು.ಅಭಿಮಾನಿಗಳಿಗೆ ಪ್ರೀತಿಯ ಅಪ್ಪು ಮತ್ತೆಂದೂ ಬಾರದ ನೋವು ಸಂಕಟ ಕೂಡ ಎದುರಾಯಿತು.
ಆದರೆ ಇದೆಲ್ಲದರ ನಡುವೆ ನಡೆಯಬೇಕಾದದ್ದು ನಡೆಯಲೇ ಬೇಕೆಂದು ಅತ್ತ ಅಶ್ವಿನಿ ಅವರೂ ಕೂಡ ಅಪ್ಪುವಿನ ಕನಸಿನ ಪಿಆರ್ ಕೆ ಪ್ರೊಡಕ್ಷನ್ಸ್ ನ ಸಿನಿಮಾಗಳ ಕೆಲಸಗಳಲ್ಲಿ ತೊಡಗಿಕೊಂಡಿದ್ದು ಇನ್ನೂ ಇತ್ತ ಯುವ ರಾಜ್ ಕುಮಾರ್ ನ ಸಿನಿಮಾ ಎಂಟ್ರಿ ನಿರ್ಧಾರವಾಯಿತು.
ಈ ಮುನ್ನ ಪುನೀತ್ ರಾಜ್ ಕುಮಾರ್ ಅವರಿಗಾಗಿ ಸಂತೋಷ್ ಆನಂದರಾಮ್ ಅವರು ಮಾಡಿದ ಕತೆಯ ಮೂಲಕವೇ ಇದೀಗ ಯುವ ರಾಜ್ ಕುಮಾರ್ ಸಿನಿಮಾ ಗೆ ಎಂಟ್ರಿ ನೀಡುತ್ತಿದ್ದು ಈ ಹಿಂದೆ ಯುವ ರಣಧೀರ ಕಂಠೀರವ ಸಿನಿಮಾ ಘೋಷಣೆಯಾಗಿತ್ತಾದರೂ ಆ ಸಿನಿಮಾ ಅಲ್ಲಿಗೆ ಬಿಟ್ಟು ಇದೀಗ ಹೊಸ ಸಿನಿಮಾ ಮೂಲಕ ಯುವ ಸ್ಯಾಂಡಲ್ವುಡ್ ಗೆ ಎಂಟ್ರಿಯಾಗುತ್ತಿದ್ದಾರೆ. ಈ ನಡುವೆ ಇದೀಗ ಮತ್ತೊಂದು ಸಿಹಿಯಾದ ಸುದ್ದಿ ಹೊರ ಬಂದಿದ್ದು ಈ ವಿಚಾರ ಬಹುಶಃ ಕನ್ನಡ ಚಿತ್ರರಂಗದ ಪ್ರತಿಯೊಬ್ಬರಿಗೂ ಕೂಡ ಸಂತೋಷ ತರಲಿದೆ.
ಹೌದು ಇದೀಗ ಅಚ್ಚರಿಯ ವಿಚಾರ ಒಂದು ಕನ್ನಡ ಹಾಗೂ ತೆಲುಗು ಚಿತ್ರರಂಗದ ಅಂಗಳದಲ್ಲಿ ಹರಿದಾಡುತ್ತಿದ್ದು ನಟ ಯುವರಾಜ್ ಕುಮಾರ್ ರವರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜ ಮೌಳಿ ಅವರ ಜೊತೆ ಸಿನಿಮಾ ಮಾಡಲಿದ್ದಾರಂತೆ.
ಈ ಕುರಿತು ಸ್ಪಷ್ಟ ಮಾಹಿತಿ ದೊರೆತಿಲ್ಲವಾದರೂ ಕೂಡ ಇತ್ತೀಚಿಗಷ್ಟೇ ರಾಜಮೌಳಿಯವರು ಯುವ ರಾಜ್ ಕುಮಾರ್ ಅವರನ್ನ ಭೇಟಿ ಮಾಡಿದ್ದು ಈ ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ರಾಜಮೌಳಿ ಅವರ ಸಿನಿಮಾದಲ್ಲಿ ಸಂಪೂರ್ಣ ನಾಯಕರಾಗಿ ಕಾಣಿಸಿಕೊಳ್ಳುತ್ತಾರಾ ಅಥವಾ ಅವರ ಸಿನಿಮಾದಲ್ಲಿ ವಿಶೇಷ ಪಾತ್ರವನ್ನು ನಿರ್ವಹಿಸುತ್ತಾರ ಎಂಬುದನ್ನ ಕಾದು ನೋಡಬೇಕಿದೆ. ಒಟ್ಟಾರೆ ಈ ಸುದ್ದಿ ಏನಾದರೂ ನಿಜವಾದರೆ ದೊಡ್ಡಮನೆ ಕುಟುಂಬದಿಂದ ಮತ್ತೊಬ್ಬ ನಾಯಕ ನಟ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿದ್ದು ಕನ್ನಡ ಸಿನಿ ರಸಿಕರಿಗೆ ಸಂತೋಷ ಹೆಚ್ಚಲಿದೆ ಎನ್ನಬಹುದು.