ವಾರ್ತಾ ಮಂಜರಿ
Trending Stories, Viral News, Gossips & Everything in Kannada

SSLC ಪರೀಕ್ಷೆಯಲ್ಲಿ ಡಾಲಿ ಧನಂಜಯ್ ತಗೆದ ಮಾರ್ಕ್ಸ್ ಎಷ್ಟು ಗೊತ್ತಾ… ದಾಖಲೆ

214,949

ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ ಹೆಡ್‌ ಬುಷ್ ಸಿನಿಮಾ ವಿವಾದದ ಕೇಂದ್ರಬಿಂದುವಾಗಿತ್ತು. ಹೆಡ್ ಬುಷ್ ಸಿನಿಮಾದಲ್ಲಿ ಕರಗಕ್ಕೆ ಹಾಗೂ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೌದು ಕರಗದ ಬಗ್ಗೆ ಹಾಗೂ ವೀರಗಾಸೆ ಕಲಾವಿದರ ಬಗ್ಗೆ ಇರುವ ಡೈಲಾಗ್‌ಗೆ ಕತ್ತರಿ ಹಾಕಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಇದೀಗ ಅದೇ ಡೈಲಾಗ್‌ಗೆ ಮ್ಯೂಟ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಆ ಮೂಲಕ ಹೆಡ್ ಬುಷ್ ವಿವಾದಕ್ಕೆ ಪೂರ್ಣ ವಿರಾಮ ಬಿದ್ದಿದೆ.

ಹೌದು ಕರಗದ ದೃಶ್ಯದಲ್ಲಿ ಬರುವ ಡೈಲಾಗ್ಅನ್ನು ಮ್ಯೂಟ್ ಮಾಡಲು ಹೆಡ್ ಬುಷ್ ಚಿತ್ರತಂಡ ತೀರ್ಮಾನಿಸಿದ್ದು ನಟ ಧನಂಜಯ್ ಕ್ಷಮೆ ಕೇಳಿದ್ದಾರೆ.ಕರಗದ ಬಗ್ಗೆ ಇದ್ದ ಡೈಲಾಗ್‌ಗೆ ಬೀಪ್ ಹಾಕಲು ನಿರ್ಧಾರ ಮಾಡಿದ್ದೇವೆ. ತಪ್ಪಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ವೀರಗಾಸೆ ಕಲಾವಿದರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಇದನ್ನ ಇಲ್ಲಿಗೇ ನಿಲ್ಲಿಸೋಣ. ಮತ್ತೆ ಕೆಲಸ ಮಾಡೋಣ ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ. ಸದ್ಯ ಧನಂಜಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಾಗ ಅವರ ಫೋಟೊ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದೀಗ ಆ ಫೋಟೊ ವೈರಲ್ ಆಗುತ್ತಿದೆ.

ಮೂಲತಃ ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೆನಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಧನಂಜಯ ಸೇಂಟ್ ಮೇರಿಸ್ ಹೈಸ್ಕೂಲ್‌ನಲ್ಲಿ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿದ್ದು 2001ನೇ ಇಸವಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಇಡೀ ಅರಸೀಕೆರೆಗೆ ಅತಿಹೆಚ್ಚು ಅಂಕ ಪಡೆದಿದ್ದರು.

ಹೌದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು ಭವಿಷ್ಯ ರೂಪಿಸುವ ನಿರ್ಣಾಯಕ ಹಂತ. 10ನೇ ತರಗತಿಯಲ್ಲಿ ಪಡೆಯುವ ಅಂಕಗಳು ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯಕವಾಗುತ್ತಿದ್ದು ಧನಂಜಯ 7ನೇ ತರಗತಿ ಎಸ್‌ಎಸ್‌ಎಲ್‌ಸಿ ಸೆಕೆಂಡ್ ಪಿಯುಸಿ ಇಂಜಿನಿಯರಿಂಗ್ ಎಲ್ಲದರಲ್ಲೂ ಒಳ್ಳೆ ಅಂಕ ಗಳಿಸಿದ್ದರು. ಹೌದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 95.52 ಅಂಕ ಪಡೆದಿದ್ದು ಅರಸೀಕರೆ ತಾಲೂಕಿನಲ್ಲಿ ಆ ವರ್ಷ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಎನಿಸಿಕೊಂಡಿದ್ದರು. ಅವರ ಫೋಟೊ ಕೂಡ ಪೇಪರ್‌ನಲ್ಲಿ ಪ್ರಕಟವಾಗಿತ್ತು.

ಇನ್ನು ಮೈಸೂರಿನ ಜಯಚಾಮರಾಜೆಂದ್ರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಧನಂಜಯ ಕೆಲ ದಿನ ಇನ್ಪೋಸಿಸ್‌ನಲ್ಲಿ ಕೆಲಸ ಮಾಡಿದ್ದು ತದನಂತರ ಕೆಲಸ ಬಿಟ್ಟು ರಂಗಭೂಮಿಯತ್ತ ಮುಖ ಮಾಡಿದ್ದರು. ಬೆಂಗಳೂರಿಗೆ ಬಂದ ಆರಂಭದಲ್ಲಿ ಜಯನಗರ 4th ಬ್ಲಾಕ್ ಎನ್ನುವ ಕಿರು ಚಿತ್ರದಲ್ಲಿ ನಟಿಸಿದ್ದು ನಂತರ ಗುರುಪ್ರಸಾದ್ ನಿರ್ದೇಶನದ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.

ಸದ್ಯ ಡಾಲಿ ಧನಂಜಯ ನಿರ್ಮಿಸಿ ನಟಿಸಿರುವ ಹೆಡ್‌ಬುಷ್ ಸಿನಿಮಾ 2ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಚಿತ್ರದಲ್ಲಿ ಬೆಂಗಳೂರು ಭೂಗತಲೋಕದ ಕಥೆಯನ್ನು ಹೇಳಲಾಗಿದ್ದು ಡಾನ್ ಜಯರಾಜ್ ಪಾತ್ರದಲ್ಲಿ ಧನು ಅಬ್ಬರಿಸಿದ್ದಾರೆ. ಇನ್ನು ಬಡವ ರಾಸ್ಕಲ್ ಸಿನಿಮಾ ಮೂಲಕ ಡಾಲಿ ನಿರ್ಮಾಪಕರು ಆಗಿದ್ದು ತಮ್ಮ ಬ್ಯಾನರ್‌ನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕೆಲಸ ಮಾಡುತ್ತಿದ್ದಾರೆ. ಶೂನ್ಯ ನಿರ್ದೇಶನದ ಈ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಚಿತ್ರಕಥೆ ಹೆಣೆದಿದ್ದಾರೆ.