ಸದ್ಯ ಇಡೀ ಭಾರತೀಯ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಒಂದೇ ಒಂದು ಹೆಸರು ಅಂದರೆ ಅದು ಕನ್ನಡದ ಕಾಂತಾರ. ಹೌದು ಕನ್ನಡ ಅಷ್ಟೇ ಅಲ್ಲದೇ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಕಾಂತಾರ ಸದ್ದು ಜೋರಾಗುತ್ತಲೇ ಇದ್ದು ಸದ್ಯ ಬಾಕ್ಸ್ ಆಫೀಸ್ನಲ್ಲಿ ಕಾಂತಾರದ ನಾಗಾಲೋಟಕ್ಕೆ ಬ್ರೇಕ್ ಬೀಳುವ ಲಕ್ಷಣಗಳೂ ಇಲ್ಲ ಎನ್ನಬಹುದು.
ಸೂಪರ್ ಸ್ಟಾರ್ ರಜನಿಕಾಂತ್ ರವರು ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು ಕಾಂತಾರ ನೋಡಿ ಬಹಳಾನೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟ ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯಕ್ಕೆ ಸಲಾಂ ಎನ್ನುತ್ತಿದ್ದು ಆದರೆ ರಿಷಬ್ ನಿರ್ದೇಶನದ ಸಿನಿಮಾದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಸದ್ಯ ಇದೀಗ ನ್ಯಾಷನಲ್ ಕ್ರಶ್ ಆಗಿ ಬೆಳೆದಿರುವ ನಟಿ ರಶ್ಮಿಕಾ ಮಂದಣ್ಣ ಮಾತ್ರ ಇನ್ನೂ ಸಿನಿಮಾ ನೋಡಿಲ್ಲವಂತೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಾತನಾಡಿದ್ದು ಕಿರಿಕ್ ಬೆಡಗಿ ಮಾತಿಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಜೊತೆಗೆ ರಿಷಬ್ ಪತ್ನಿ ರಶ್ಮಿಕಾ ಬಣ್ಣ ಬಯಲು ಮಾಡಿದ್ದು ಏನೆಂದು ಪ್ರತಿಕ್ರಿಯಿಸಿದ್ದಾರೆ ಗೊತ್ತಾ?ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಾಂತಾರ ಸಿನಿಮಾದ ಕುರಿತಂತೆ ಮಾತನಾಡಿದ್ದು ಕನ್ನಡ ಹಿಂದಿ ತಮಿಳು ತೆಲುಗು ಮಲಯಾಳಂ ಬಂಗಾಳಿ ಮರಾಠಿ ಸೇರಿದಂತೆ ವಿವಿಧ ಭಾಷೆಯ ನಟರು ನಿರ್ದೇಶಕರು ನಿರ್ಮಾಪಕರು ತಂತ್ರಜ್ಞರು ಹಾಗೂ ಖ್ಯಾತ ನಾಮರು ಕಾಂತಾರ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದು ಆದರೆ ನಟಿ ರಶ್ಮಿಕಾ ಮಂದಣ್ಣ ಮಾತ್ರ ನಾ ಇನ್ನೂ ಕಾಂತಾರ ಸಿನಿಮಾ ನೋಡಿಲ್ಲ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ನಾನು ಕಾಂತಾರ ಸಿನಿಮಾ ಇನ್ನೂ ನೋಡಿಲ್ಲ ಎಂದಿರುವ ರಶ್ಮಿಕಾ ಮಂದಣ್ಣ ರವರು ತಮ್ಮ ಹೇಳಿಕೆಗೆ ಕಾರಣವನ್ನೂ ನೋಡಿದ್ದು ನಾನು ಕಾಂತಾರ ಸಿನಿಮಾ ನೋಡಿಲ್ಲ. ಹಾಗಂತ ನೋಡಬಾರದು ಅಂತಲ್ಲ. ಸದ್ಯ ಬೆಂಗಳೂರಿನಿಂದ ಹೊರಗಿದ್ದು ಬೆಂಗಳೂರಿಗೆ ಹೋದ ಮೇಲೆ ಕಾಂತಾರ ಸಿನಿಮಾ ನೋಡುತ್ತೇನೆ ಎಂದಿದ್ದಾರೆ.
ಇನ್ನು ರಶ್ಮಿಕಾ ಮಂದಣ್ಣ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಶೆಟ್ಟಿ ಫ್ಯಾನ್ಸ್ ಹಾಗೂ ನೆಟ್ಟಿಗರು ಕಿಡಿ ಕಾರಿದ್ದು ತಮ್ಮ ಮೊದಲ ಸಿನಿಮಾ ನಿರ್ದೇಶಕನ ಚಿತ್ರ ಹೇಗಿದೆ ಎಂದು ಹೇಳುವ ನಿಯತ್ತು ಕೂಡ ಇಲ್ವಾ ಎಂದು ಫ್ಯಾನ್ಸ್ ರಶ್ಮಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸಿನಿಮಾರಂಗಕ್ಕೆ ಕರೆದುಕೊಂಡು ಬಂದವರನ್ನೇ ಕೆಲವರು ಮರೆತು ಬಿಟ್ಟಿದ್ದಾರೆ. ಅಂತವರ ಮನಸ್ಥಿತಿ ಹಾಗೂ ಅಸಲಿ ಬಣ್ಣ ಇದರಿಂದ ಬಯಲಾಗುತ್ತದೆ ಎಂದಿದ್ದು ನೇರವಾಗಿ ರಶ್ಮಿಕಾಗೆ ಟಾಂಗ್ ಕೊಟ್ಟಿದ್ದು ಮಾಧ್ಯಮದವರು ರಶ್ಮಿಕಾ ನಡೆ ಬಗ್ಗೆ ಕೇಳಿದಕ್ಕೆ ನೋ ಕಾಂಮೆಂಟ್ಸ್ ಎಂದು ಉತ್ತರಿಸಿದ್ದಾರೆ. ಒಟ್ಟಾರೆ ರಶ್ಮಿಕಾ ರವರ ನಡುವಳಿಕೆ ಪ್ರತಿ ಕನ್ನಡಿಗನಿಗೂ ಬೇಸರ ತರಿಸಿದೆ ಎನ್ನಬಹುದು.
ಇನ್ನು ಈ ಹಿಂದೆ ಸಂದರ್ಶನವೊಂದರಲ್ಲಿ ರಶ್ಮಿಕಾ ತಮ್ಮ ಚಿತ್ರರಂಗ ಪ್ರವೇಶದ ಬಗ್ಗೆ ಮಾತನಾಡಿದ್ದು ಕರ್ಲಿ ಟೇಲ್ಸ್ ಎನ್ನುವುದು ಫೇಮಸ್ ಶೋನಲ್ಲಿ ನಿರೂಪಕಿ ರಶ್ಮಿಕಾ ಅವರಲ್ಲಿ ಅವರ ಸಿನಿಮಾ ಎಂಟ್ರಿ ಆ ಜರ್ನಿ ಹೇಗೆ ಶುರುವಾಯಿತು ಎಂದು ಪ್ರಶ್ನಿಸಿದ್ದಾರೆ. ಹೌದು ಇದಕ್ಕೆ ಉತ್ತರಿಸಿದ ರಶ್ಮಿಕಾ ಫ್ರೆಶ್ ಫೇಸ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಇದರಲ್ಲಿ ಭಾಗವಹಿಸಲು ನನಗೆ ಮನಸಿರಲಿಲ್ಲ. ಶಿಕ್ಷಕರು ಹೇಳಿದ ಕಾರಣ ಸ್ಪರ್ಧಿಸಿದ್ದೆ. ನಂತರ ಇದರಲ್ಲಿ ವಿಜೇತೆಯಾಗಿ ಹೊರಹೊಮ್ಮಿದೆ. ಅದರಲ್ಲಿ ಲೆವೆಲ್ಗಳಿದ್ದವು.
ನಂತರ ನನ್ನ ಫೋಟೊ ಹಾಗೂ ಟೈಟಲ್ ಪೇಪರ್ನಲ್ಲಿ ಪ್ರಕಟಿಸಲಾಯಿತು ಎಂದಿದ್ದರು. ಟೈಮ್ಸ್ ಆಫ್ ಇಂಡಿಯಾದ ಮೊದಲ ಪುಟದಲ್ಲಿ ಇದನ್ನು ಪಬ್ಲಿಷ್ ಮಾಡಲಾಗಿದ್ದು ನಾನು ನಂತರ ನನ್ ಕಾಲೇಜು ಲೈಫ್ಗೆ ಹಿಂದಿರುಗಿದೆ. ಹಾಗೆಯೇ ಹೋಗುತ್ತಿತ್ತು. ಆಗ ನನಗೆ ಈ ಪ್ರೊಡಕ್ಷನ್ ಹೌಸ್ನಿಂದ ಕಾಲ್ ಬಂತು ಎಂದು ಹೇಳಿದ್ದು ಈ ಸಂದರ್ಭ ರಶ್ಮಿಕಾ ವ್ಯಂಗ್ಯವಾಗಿ ಎರಡು ಕೈಯನ್ನು ಎತ್ತಿ ವ್ಯಂಗ್ಯ ಸಿಂಬಲ್ ಕೊಟ್ಟಿದ್ದು ಭಾರೀ ಟೀಕೆಗೆ ಕಾರಣವಾಗಿತ್ತು.