ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬೇರೆ ಲೆವೆಲ್ ಇರಲಿದೆ…ಅಪ್ಪು ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಕೊಟ್ಟ ಅಶ್ವಿನಿ ಚಿಂದಿ

14,495

ಸದ್ಯ ಪುನೀತ್ ರಾಜ್ ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಬಿಡುಗಡೆ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು ಈ ಡಾಕ್ಯು-ಡ್ರಾಮಾದಲ್ಲಿ ಕರ್ನಾಟಕದ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ನಾಡಿನ ಪ್ರಕೃತಿ ಸೊಬಗನ್ನು ನದಿ-ಅರಣ್ಯದ ಮಹತ್ವವನ್ನು ಸಾರಲಾಗಿದೆ.

ಇನ್ನು ಒಂದೂವರೆ ಗಂಟೆಯ ಈ ಸಿನಿಮಾವನ್ನು ಲಕ್ಷಾಂತರ ಮಂದಿ ಈಗಾಗಲೇ ವೀಕ್ಷಿಸಿ ಮೆಚ್ಚಿದ್ದು ಈ ಸಿನಿಮಾವನ್ನು ವಿದ್ಯಾರ್ಥಿಗಳಿಗೆ ತೋರಿಸಿ ಎಂಬ ಒತ್ತಾಯ ಹೆಚ್ಚಾಗಿದೆ. ಇನ್ನು ಸರ್ಕಾರವೇ ಕಾಳಜಿ‌ ವಹಿಸಿ ನಾಡಿನ ಮಕ್ಕಳಿಗೆ ಈ ಸಿನಿಮಾವನ್ನು ಉಚಿತವಾಗಿ ತೋರಿಸಲಿ ಎಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದ್ದು ನಾಡಿನ ಹಲವರು ಇದಕ್ಕೆ ದನಿಗೂಡಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಮಂಸೋರೆ ರವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದು ಕರ್ನಾಟಕದ ಪ್ರತೀ ಶಾಲೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ #ಗಂಧದಗುಡಿ ಸಿನೆಮಾ ತೋರಿಸಲಿ. ಹೌದು ಕರ್ನಾಟಕದ ಭೌಗೋಳಿಕ ವೈಭವ ಮುಂದಿನ ಪೀಳಿಗೆ ಅರಿಯುವಂತಾಗಲಿ. ಹತ್ತಾರು ಪುಸ್ತಕ ಓದುವುದಕ್ಕಿಂತ ಹೆಚ್ಚುಪರಿಣಾಮಕಾರಿಯಾಗಿ ಸಿನೆಮಾ ವಿಧ್ಯಾರ್ಥಿಗಳಿಗೆ ಅರ್ಥವಾಗುತ್ತದೆ ಎಂದಿದ್ದು

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ‌ ಸೂಲಿಬೆಲೆ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು ಚಿತ್ರದ ವಸ್ತು ಭವಿಷ್ಯದ ಪೀಳಿಗೆಗೆ ಪ್ರಕೃತಿ  ವನ್ಯ ಜೀವಿಗಳ ಕುರಿತಂತೆ ಆಸಕ್ತಿ  ಪ್ರೀತಿ ಹುಟ್ಟಿಸುವಂಥದ್ದಾಗಿದೆ. ಅದನ್ನೇಕೆ ಶಾಲಾ ಮಕ್ಕಳಿಗೆ ತೋರಿಸುವ ವ್ಯವಸ್ಥೆ ಆಗಬಾರದು? ಹೌದು ಸರ್ಕಾರವೇ ಎಲ್ಲೆಡೆ ಈ ಪ್ರಯತ್ನಕ್ಕೆ ಮುಂದಾದರೆ ಪುನೀತ್ ರಾಜಕುಮಾರರ ನೆನಪು ಮತ್ತು ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ ಎಂದು ಶಿಕ್ಷಣ ಸಚಿವ ನಾಗೇಶ್ ಗೆ ಮನವಿ ಮಾಡಿದ್ದಾರೆ.

ಇನ್ನು ರಾಜ್ಯ ಸರ್ಕಾರ ಈಗಾಗಲೇ ಗಂಧದ ಗುಡಿ ಡಾಕ್ಯು-ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ್ದು ಈಗ ವಿದ್ಯಾರ್ಥಿಗಳಿಗೆ ಸಿನಿಮಾವನ್ನು ಉಚಿತವಾಗಿ ತೋರಿಸಿದಲ್ಲಿ ಇನ್ನಷ್ಟು ಹೊರೆ ಆಗುವ ಸಾಧ್ಯತೆ ಇದೆ. ಆದರೆ ನಾಡಿನ ಪ್ರಾಕೃತಿಕ ಹಿರಿಮೆಯನ್ನು ಸಾರುವ ಸಿನಿಮಾ ಗಂಧದ ಗುಡಿ ಆಗಿದ್ದು ಅದರಲ್ಲಿಯೂ ಮಕ್ಕಳ ಮೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಇದಾಗಿದೆ. ಮಕ್ಕಳು ಈ ಸಿನಿಮಾವನ್ನು ನೋಡಬೇಕು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಅಪ್ಪು ರವರ ಕೊನೆಯ ಸಿನಿಮಾ ಇದಾಗಿದ್ದು

ಆದರೆ ಅಪ್ಪು ಮಾಡಬೇಕಾಗಿದ್ದ ಮತ್ತಷ್ಟು ಸಿನಿಮಾಗಳು ಹಾಗೆ ಇದೆ. ಅವುಗಳಲ್ಲಿ ಪ್ರಮುಖವಾಗಿ ಪವನ್ ನಿರ್ದೇಶನದ ದ್ವಿತ್ವಾ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇತ್ತು. ಪ್ರಿ ಪ್ರೊಡಕ್ಷನ್ ಕೆಲಸವು ಆರಂಭವಾಗಿದ್ದು ಆದರೆ ಸಿನಿಮಾದ ಮುಂದಿನ ಸ್ಥಿತಿ ಎನ್ನುವುದರ ಬಗ್ಗೆ ಇನ್ನು ಯಾವುದೇ ಮಾಹಿತಿಯನ್ನು ತಂಡ ಬಿಟ್ಟು ಕೊಟ್ಟಿಲ್ಲ. ರಾಜಕುಮಾರ ಮತ್ತು ಯುವರತ್ನ ರೀತಿಯಲ್ಲಿ ಮತ್ತೊಂದು ಸಿನಿಮಾವನ್ನು ಮಾಡುವುದಾಗಿ ಸಂತೋಷ್ ಆನಂದ್ ರಾಮ್ ಅವರು ಹೇಳಿಕೊಂಡಿದ್ದರು ಆದರೆ ಅದು ಕೂಡ ಸಾಧ್ಯವಾಗಲಿಲ್ಲ.

ಕಾಂತರಾ ಸಿನಿಮಾವನ್ನು ಅಪ್ಪು ಅವರೇ ಮಾಡಬೇಕಿತ್ತು ಎಂದು ರಿಷಭ್ ಅವರೇ ಹೇಳಿದ್ದಾರೆ. ಡೇಟ್ಸ್ ಕೊರತೆಯಿಂದ ಅದನ್ನು ಅಪ್ಪು ಕೈಬಿಟ್ಟಿದ್ದು ಮುಂದೊಂದು ದಿನ ಒಟ್ಟಿಗೆ ಕೆಲಸ ಮಾಡೋಣ ಎಂದು ರಿಷಬ್ ಗೆ ಹೇಳಿದ್ದರಂತೆ. ತೂಗುದೀಪ್ ಪ್ರೊಡಕ್ಷನ್ ಜೊತೆ ಅಪ್ಪು ಸಿನಿಮಾ ಆಗಬೇಕಿತ್ತು ಅದೂ ಸಾಧ್ಯವಾಗಲಿಲ್ಲ ಮತ್ತು ಮನ್ಸೂರೆ ಅವರು ಅಪ್ಪುಗಾಗಿ ಕೊಲಂಬಸ್ ಎನ್ನುವ ಸಿನಿಮಾ ಕಥೆಯನ್ನು ರೆಡಿ ಮಾಡುತ್ತಿದ್ದರಂತೆ.

ಹೀಗೆ ಅಪ್ಪು ಸಿನಿಮಾ ನೋಡಲು ಅಭಿಮಾನಿಗಳು ಹೇಗೆ ಕಾಯುತ್ತಿದ್ದರು ನಿರ್ದೇಶಕರು ಕೂಡ ಅವರಿಗೆ ನಿರ್ದೇಶನ ಮಾಡಲು ಅದೇ ರೀತಿ ಕಾಯುತ್ತಿದ್ದರು. ಹೌದು ಇವರೆಲ್ಲರ ಆಸೆ ಈಡೇರುವ ಮುನ್ನ  ದೇವರೇ ಮೋಸ ಮಾಡಿದ್ದಾನೆ. ಹಾಗಾದರೆ ಅಪ್ಪು ಸಿನಿಮಾ ಇನ್ನು ಬರುವುದಿಲ್ಲವಾ ಎಂದರೆ ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಅಪ್ಪುವಿನ ಸಿನಿಮಾ ತರಲು ಪ್ರಯತ್ನ ನಡೆಯುತ್ತಿದ್ದೆಯಂತೆ. ಹೌದು ಇದರ ಬಗ್ಗೆ ಅಧಿಕೃತವಾಗಿ ಅನೌನ್ಸ್ ಆಗದಿದ್ದರೂ ಕೂಡ ಈ ಬಗ್ಗೆ ಸುದ್ದಿಗಳು ಓಡಾಡುತ್ತಿವೆ. ಇದು ಸಾಧ್ಯವಾದರೆ ಮತ್ತೆ ಅಪ್ಪು ಅನ್ನು ತೆರೆ ಮೇಲೆ ನೋಡುವ ಅದೃಷ್ಟ ಸಿಗುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನ ಕಾಮೆಂಟ್ ಮೂಲಕ ತಿಳಿಸಿ.