ವಾರ್ತಾ ಮಂಜರಿ
Trending Stories, Viral News, Gossips & Everything in Kannada

Roopesh Rajanna: ಬಿಗ್ಬಾಸ್ ಮನೆಯಲ್ಲಿರುವ ನಿಷ್ಠಾವಂತ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣಗೆ ಸಿಗುತ್ತಿರುವ ಸಂಭಾವನೆ ಇಷ್ಟೊಂದಾ

ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭವಾಗಿ ಒಂದು ವಾರಹಳೇ ಕಳೆದು ಹೋಗಿದ್ದು ಮನೆಯ ಸ್ಪರ್ಧಿಗಳು ಎರಡನೇ ವಾರಕ್ಕೆ  ಈಗಾಗಲೇ ಕಾಲಿಟ್ಟಿದ್ದಾರೆ. ಮೊದಲ ವಾರ ಐಶ್ವರ್ಯ ಪಿಸ್ಸೆ ರವರು ಎಲಿಮಿನೇಟ್ ಆಗಿದ್ದು ಬಿಗ್ ಬಾಸ್ ಮನೆಯಲ್ಲಿ ಇದೀಗ 17 ಸ್ಪರ್ಧಿಗಳು ಉಳಿದಿದ್ದಾರೆ.

85

ಸದ್ಯ ಇತ್ತೀಚೆಗಷ್ಟೇ ಒಟಿಟಿ ಸೀಸನ್ ಮುಗಿದ ಬೆನ್ನಲ್ಲೇ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಕಾರ್ಯಕ್ರಮ  ಬಿಗ್ ಬಾಸ್‌ನ ಟಿವಿ ಸೀಸನ್ ಆರಂಭಗೊಂಡಿದ್ದು ಒಂದು ವಾರದ ಹಿಂದೆ  ಬಿಗ್ ಬಾಸ್ ಸೀಸನ್ 9 ರ ಮನೆಗೆ ಸದಸ್ಯರನ್ನು  ಕಲರ್ಸ್ ಕನ್ನಡ ಚಾನೆಲ್ ಕಳಿಹಿಸಿದೆ. ಇನ್ನು ಸೆಪ್ಟೆಂಬರ್ 24 ಸಂಜೆ 6 ಗಂಟೆಗೆ ಆರಂಭವಾದ ವರ್ಣರಂಜಿತ ಕಾರ್ಯಕ್ರಮದಲ್ಲಿ ನಟ ನಿರೂಪಕ ಕಿಚ್ಚ ಸುದೀಪ್ ರವರು  ಒಟ್ಟು ಹದಿನೆಂಟು ಜನರನ್ನು ಬಿಗ್ ಬಾಸ್ ಮನೆಯೊಳಕ್ಕೆ ಕಳುಹಿಸಿಕೊಟ್ಟಿದ್ದು ನೂರು ದಿನಗಳ ಈ ಬಿಗ್ ಬಾಸ್ ಆಟ ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

 

ಇನ್ನು 9ನೇ ಸೀಸನ್‌ನ ವಿಶೇಷವೇನೆಂದರೆ 9 ಹೊಸ ಸ್ಪರ್ಧಿಗಳ ಜೊತೆ 9 ಅನುಭವಿ ಸ್ಪರ್ಧಿಗಳೂ ಕಣದಲ್ಲಿದ್ದು ಇದನ್ನು ಪ್ರವೀಣರು ಮತ್ತು ನವೀನರ ಹಣಾಹಣಿ ಎಂದು ಚಾನೆಲ್ ಬಣ್ಣಿಸಿದೆ. ಇನ್ನು 9 ಅನುಭವಿ ಸ್ಪರ್ಧಿಗಳ ಪಟ್ಟಿಯಲ್ಲಿ ಒಟಿಟಿ ಸೀಸನ್‌ನ ಟಾಪ್ 4 ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ ರಾಕೇಶ್ ಅಡಿಗ ಆರ್ಯವರ್ಧನ್ ಹಾಗೂ ಸಾನ್ಯಾ ಅಯ್ಯರ್ ಇದ್ದು  ಜೊತೆಗೆ ಹಳೆಯ ಬಿಗ್ ಬಾಸ್ ಸೀಸನ್‌ಗಳಲ್ಲಿ ಆಡಿ ಜನಮೆಚ್ಚುಗೆ ಗಳಿಸಿದ ಐದು ಜನರೂ ಇರಲಿದ್ದಾರೆ. ಇವರ ಜೊತೆಗೆ ಮನೆ ಪ್ರವೇಶಿಸಲಿರುವ 9 ಜನ ನವೀನರು  ಕೂಡ ಸೇರ್ಪಡೆಯಾಗಿದ್ದು ಆ ಕೋಟದಲ್ಲಿ ಕನ್ನಡ ಪರ ಹೋರಟಗಾರ  Roopesh Rajanna  ಕೂಡ ಒಬ್ಬರು.

ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭವಾಗಿ ಒಂದು ವಾರ  ಕಳೆದು ಹೋಗಿದ್ದು ಮನೆಯ ಸ್ಪರ್ಧಿಗಳು ಎರಡನೇ ವಾರಕ್ಕೆ  ಈಗಾಗಲೇ ಕಾಲಿಟ್ಟಿದ್ದಾರೆ. ಮೊದಲ ವಾರ ಐಶ್ವರ್ಯ ಪಿಸ್ಸೆ ರವರು ಎಲಿಮಿನೇಟ್ ಆಗಿದ್ದು ಬಿಗ್ ಬಾಸ್ ಮನೆಯಲ್ಲಿ ಇದೀಗ 17 ಸ್ಪರ್ಧಿಗಳು ಉಳಿದಿದ್ದಾರೆ. ಇನ್ನು  ಮೊದಲ ವಾರ ಮನೆಯಲ್ಲಿ ಹೈಲೈಟ್ ಆಗಿರುವ ಸ್ಪರ್ಧಿಗಳಲ್ಲಿ  ರೂಪೇಶ್ ರಾಜಣ್ಣ ಕೂಡ ಒಬ್ಬರಾಗಿದ್ದು ಬಿಗ್ ಬಾಸ್ ಮನೆಯಲ್ಲಿ ಇವರನ್ನು ಕನ್ನಡದ ಕಂದ ಎಂದೇ ಕರೆಯುತ್ತಿದ್ದಾರೆ. ರೂಪೇಶ್ ರಾಜಣ್ಣ ಅವರು ಹೊರಗಿನ ಪ್ರಪಂಚದಲ್ಲಿ ಕನ್ನಡಪರ ಹೋರಾಟಗಾರನಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹಲವು ವಿಚಾರಗಳ ಬಗ್ಗೆ ಇವರು ಮಾತನಾಡಿದ್ದಾರೆ.

ಸದ್ಯ ಕಳೆದ ವಾರ ಕಳಪೆ ಪ್ರದರ್ಶನದ ವಿಚಾರಕ್ಕೆ ಮನೆಯೊಳಗೆ ದೀಪಿಕಾ ದಾಸ್  ಅನುಪಮಾ ಗೌಡ ಮತ್ತು ನೇಹಾ ಗೌಡ ಅವರೊಡನೆ ಜಗಳ ಮಾಡಿಕೊಂಡಿದ್ದು  ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ರವರು ರೂಪೇಶ್ ರಾಜಣ್ಣ ರವರ ಎಕ್ಸ್ ಪ್ರೆಷನ್ ಗಳ ಬಗ್ಗೆ ಕೂಡ ಮಾತನಾಡಿ ರಾಜಣ್ಣ ಅವರು ಸಹ ತಾವು ಕೊಡುವ ಎಸ್ಸೆಸ್ಸೆಲ್ಸಿ ಬಗ್ಗೆ ಮಾತನಾಡಿ ಎಲ್ಲರೂ ನಕ್ಕಿದ್ದರು. ಇಮ್ನು  ರೂಪೇಶ್ ರಾಜಣ್ಣ ಅವರು ಎರಡನೇ ವಾರ ನಾಮಿನೇಟ್ ಆಗಿದ್ದು  ಇದೀಗ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಚರ್ಚೆ ಶುರುವಾಗಿದ.  ಈಗ ಸಿಕ್ಕಿರುವ ಮಾಹಿತಿ ಪ್ರಕಾರ ರೂಪೇಶ್ ರಾಜಣ್ಣ ಅವರಿಗೆ ಒಂದು ವಾರಕ್ಕೆ 40 ಸಾವಿರ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರಂತೆ.