ವಾರ್ತಾ ಮಂಜರಿ
Trending Stories, Viral News, Gossips & Everything in Kannada

Prabhas: ಆದಿಪುರುಷ್ ಟೀಸರ್ ಬಿಡುಗಡೆಯಾದ 24 ಘಂಟೆಯಲ್ಲೇ ಪ್ರಭಾಸ್ ಗೆ ಆಘಾತ…

ಭಾಸ್ ಅಭಿನಯದ ಆದಿಪುರುಷ್ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಕುರಿತು ಸಾಕಷ್ಟು ಅನಿಸಿಕೆ ಅಭಿಪ್ರಾಯಗಳು ಇದೀಗ ಮೂಡಿಬಂದಿದೆ.

46,542

ತೆಲುಗು ಚಿತ್ರರಂಗದ ಖ್ಯಾತ ನಟ ಪ್ರಭಾಸ್‌ ರವರಿಗೆ ವಿಶ್ವಾದ್ಯಂತ ಜನಪ್ರಿಯತೆ ತಂದುಕೊಟ್ಟ ಸಿನಿಮಾ ಎಂದರೆ ಬಾಹುಬಲಿ. ಹೌದು ಈ ಸಿನಿಮಾ ಎರಡು ಭಾಗಗಳಾಗಿ ಬಂದಿದದ್ದು ದೊಡ್ಡ ಯಶಸ್ಸು ಗಳಿಸಿದ್ದಲ್ಲದೇ Prabhas ರವರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಬಿರುದನ್ನು ಕೂಡ ತಂದುಕೊಟ್ಟಿತು. ಇನ್ನು ಬಾಹುಬಲಿ ಚಿತ್ರದ ಬಗ್ಗೆ ಮಾತನಾಡಿದ ಪ್ರಭಾಸ್ ಬಾಹುಬಲಿ ಸಿನಿಮಾ ನನ್ನ ವೃತ್ತಿಜೀವನದ ಗೇಮ್ ಚೇಂಜರ್ ಎಂದು ಸಾಕಷ್ಟು ಬಾರಿ ಹೇಳಿದ್ದಾರೆ.

ವಿಶ್ವವೇ ತೆಲುಗು ರಂಗದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ ಯವರ ಬಾಹುಬಲಿ ಚಿತ್ರ ಹೊಸ ಇತಿಹಾಸವನ್ನೇ ಬರೆದಿತ್ತು. ಹೌದು ಬಾಹುಬಲಿ: ದಿ ಬಿಗಿನಿಂಗ್ 2015ರಲ್ಲಿ ಬಿಡುಗಡೆಯಾಗಿದ್ದು ಭಾರತೀಯ ಮಹಾಕಾವ್ಯ ಆ್ಯಕ್ಷನ್ ಡ್ರಾಮಾ ಚಲನಚಿತ್ರವನ್ನು ಎಸ್.ಎಸ್. ರಾಜಮೌಳಿ ನಿರ್ದೇಶಿಸಿದ್ದರು. ಇದರಲ್ಲಿ ರಾಣಾ ದಗ್ಗುಬಾಟಿ ಅನುಷ್ಕಾ ಶೆಟ್ಟಿ ತಮನ್ನಾ ರಮ್ಯ ಕೃಷ್ಣ ಸತ್ಯರಾಜ್ ಮತ್ತು ನಾಸರ್ ಸೇರಿ ಕಲಾವಿದರ ದಂಡೇ ಇತ್ತು. ಬಾಹುಬಲಿಯಲ್ಲಿ ಅಮರೇಂದ್ರ ಬಾಹುಬಲಿಯನ್ನು, ಮಾಹಿಷ್ಮತಿ ಸಾಮ್ರಾಜ್ಯವನ್ನು ಕಟ್ಟಿಕೊಟ್ಟ ರಾಜಮೌಳಿಯ ಈ ಸಿನಿಮಾ ಎರಡು ಭಾಗಗಳಲ್ಲಿ ಬಂದಿತ್ತು.

ಇನ್ನು ಮೊದಲನೆಯದು ಶಿವುಡು ತನ್ನ ಪ್ರೀತಿಯ ಅವಂತಿಕಾಗೆ ಸಹಾಯ ಮಾಡುವ ಸಾಹಸಿ ಯುವಕನ ಕಥೆ ಹೆಣೆದರೆ ಮಾಹಿಷ್ಮತಿಯ ಮಾಜಿ ರಾಣಿ ದೇವಸೇನಾ ರಾಜ ಭಲ್ಲಾಳದೇವನ ದಬ್ಬಾಳಿಕೆಯ ಆಳ್ವಿಕೆಯಲ್ಲಿ ಸೆರೆಯಾಳಾಗಿದ್ದರು ಈ ಕಥೆಯು 2017ರ ಏಪ್ರಿಲ್‌ನಲ್ಲಿ ತೆರೆಕಂಡ ಬಾಹುಬಲಿಯ ಎರಡನೇ ಭಾಗ ಬಾಹುಬಲಿ 2: ದಿ ಕನ್ಕ್ಲೂಶನ್ ನಲ್ಲಿ ಮುಕ್ತಾಯಗೊಳ್ಳುತ್ತಿದ್ದು ಬಾಹುಬಲಿ ಚಿತ್ರವು ಪ್ರಭಾಸ್ ಮತ್ತು ರಾಜಮೌಳಿ ಇಬ್ಬರಿಗೂ ಪ್ಯಾನ್ ಇಂಡಿಯಾ ನಾಯಕ ಮತ್ತು ನಿರ್ದೇಶಕ ಪಟ್ಟವನ್ನು ನೀಡಿತ್ತು. ಆದರೆ ಬಾಹುಬಲಿ ಸರಣಿ ನಂತರ ಪ್ರಬಾಸ್ ಯಶಸ್ಸನ್ನೆ ಕಾಣುತ್ತಿಲ್ಲ.

ಹೌದು ಬಾಹುಬಲಿ ನಂತರ ಬಂದ ಸಾಹೋ ಸೋಲು ಅನುಭವಿಸದರೆ ಇತ್ತೀಚಿಗೆ ಬಿಡುಗಡೆಯಾದ ರಾಧೆ ಶ್ಯಾಮ್ ಅಷ್ಟೇನೂ ಸುದ್ದಿ ಮಾಡಿಲ್ಲ. ಹೌದು ಒಬ್ಬ ವ್ಯಕ್ತಿಯ ಭೂತಕಾಲ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಹಸ್ತಸಾಮುದ್ರಿಕ ಕಥೆಯಾಗಿದ್ದು ರಾಧೆ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಕಥೆಯು ಭವಿಷ್ಯ ಹೇಳುವವರು ಮತ್ತು ರಾಜಕುಮಾರಿಯ ಸುತ್ತ ಸುತ್ತುತ್ತದೆ. ಯೂರೋಪ್ ಹಿನ್ನೆಲೆಯಾಗಿಟ್ಟುಕೊಂಡು ರೆಟ್ರೋ ಲವ್ ಸ್ಟೋರಿಯೊಂದನ್ನು ನಿರ್ದೇಶಕ ರಾಧಾಕೃಷ್ಣ ಕುಮಾರ್ ರಾಧೆ ಶ್ಯಾಮ್ ಮೂಲಕ ಹೇಳಿದ್ದು ಒಂದೂ ಫೈಟ್ ಇಲ್ಲದ ಪ್ರಭಾಸ್ ಅವರ ಮೊದಲ ಸಿನಿಮಾ ಇದಾಗಿತ್ತು. ಈ ಸಿನಿಮಾ ಹಟ್ಟರ್ ಫ್ಲಾಪ್ ಹಿಟ್ ಸೇರಿದೆ. ಸದ್ಯ ಇದೀಗ ಮುಂಬರುವ ಆದಿಪುರುಷ ಸಿನಿಮಾ ಕುರಿತು ಕೂಡ ಸಾಮಾಜಿಕ ಜಾಲತಾಣದಲ್ಲಿ ಗೇಲಿ ನಡೆಯುತ್ತಿದೆ.

Courtesy: OPIndia

ಹೌದು ಓಂ ರಾವುತ್ ನಿರ್ದೇಶನದ ಆದಿಪುರುಷ್ ಟೀಸರ್ ಸದ್ಯ ಬಿಡುಗಡೆಯಾದ ಬಳಿಕ ಟ್ವಿಟರ್ ಬಳಕೆದಾರರು ಟೀಸರ್ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಪ್ರಾಮಾಣಿಕವಾಗಿಯೇ ತಮ್ಮ ಅನಿಸಿಕೆಗಳನ್ನು ತಿಳಿಸುತ್ತಿದ್ದಾರೆ. ಹೌದು ಅವರ ಪ್ರಕಾರ ಟೀಸರ್ ನಿರೀಕ್ಷಿಸಿರುವಂತೆ ಉತ್ತಮವಾಗಿಲ್ಲ ಎಂದಿದ್ದು ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಕುರಿತು ಸಾಕಷ್ಟು ಅನಿಸಿಕೆ ಅಭಿಪ್ರಾಯಗಳು ಇದೀಗ ಮೂಡಿಬಂದಿದೆ. ಚಿತ್ರದ ಮೊದಲ ನೋಟಕ್ಕೆ ಉತ್ತಮ ಪ್ರತಿಕ್ರಿಯೆಗಳು ಮೂಡಿಬಂದಿದ್ದರೂ ಕೂಡ ಚಿತ್ರದ ಸಿಜಿಐ ಹಾಗೂ ವಿಎಫ್‌ಎಕ್ಸ್ ಅಷ್ಟೊಂದು ತೃಪ್ತಿದಾಯಕವಾಗಿಲ್ಲ ಎಂಬ ಕಾಮೆಂಟ್‌ಗಳೂ ಕೂಡ ಕೇಳಿಬಂದಿದೆ.

ಇನ್ನು ಟ್ವಿಟರ್‌ನಲ್ಲಿ ಅನೇಕರು ಟೀಸರ್ ದೃಶ್ಯಗಳನ್ನು ಹಾಲಿವುಡ್ ಚಿತ್ರಗಳಾದ ಮಾರ್ವೆಲ್ಸ್ ಅವೆಂಜರ್ ಸೀರೀಸ್ಬಗೇಮ್ ಆಫ್ ಥ್ರೋನ್ಸ್ ಹಾಗೂ ಇನ್ನಿತರ ಚಿತ್ರಗಳೊಂದಿಗೆ ಬಣ್ಣಿಸಿದ್ದು ಭಾರತದ ಸಂಸ್ಕೃತಿಯನ್ನು ಬಣ್ಣಿಸಬೇಕಾದ ಚಿತ್ರವು ಹಾಲಿವುಡ್ ಸಿನಿಮಾಗಳ ರೀತಿಯಲ್ಲಿಯೇ ಮೂಡಿಬಂದಿದೆ ಎಂಬುದು ಬಳಕೆದಾರರ ಅಭಿಮತವಾಗಿ ಬಿಟ್ಟಿದೆ. 30 ವರ್ಷಗಳಷ್ಟು ಪುರಾತನ ಅನಿಮೇಟೆಡ್ ರಾಮಾಯಣವು ಇದೀಗ ನಿರ್ಮಿಸಿರುವ ಅನಿಮೇಟೆಡ್ ಆದಿಪುರುಷ್‌ಗಿಂತ ಅತ್ಯುತ್ತಮವಾಗಿದೆ.

ಆದಿಪುರುಷ್ ಸಿನಿಮಾ ನೋಡುವುದಕ್ಕಿಂತಲೂ ಈ ಚಿತ್ರವನ್ನು ವೀಕ್ಷಿಸಿ ಎಂದು ವಿನಂತಿಸುತ್ತೇವೆ ಎಂದು ನೆಟೆಗಿರೊಬ್ಬರು ಹೇಳಿದ್ದು ಜಪಾನೀ ಜನರು ಓಂರಾವತ್‌ ಅವರ ಆದಿಪುರುಷ್‌ಗಿಂತ ಉತ್ತಮವಾದ ಸಿನಿಮಾ ಮಾಡುತ್ತಾರೆ. ಇದು ಅತಿದೊಡ್ಡ ಸ್ಕ್ಯಾಮ್ ಆಗಿದೆ ಎಂಬುದು ಬಳಕೆದಾರರೊಬ್ಬರ ಅಭಿಪ್ರಾಯವಾಗಿದೆ. ಆದಿಪುರುಷ್ ಅನಿಮೇಶನ್ ಕಾರ್ಟೂನ್‌ನಂತೆ ಕಂಡುಬಂದಿದೆ ಎಂಬುದು ಬಳಕೆದಾರರ ಅಭಿಪ್ರಾಯವಾಗಿದೆ.