Nagarjuna: ಅಂದು ಅಣ್ಣಾವ್ರ ಮನೆಗೆ ನಿಟ್ಟುಸಿರು ಬಿಟ್ಟು ಓಡಿಬಂದಿದ್ದ ತೆಲುಗು ನಟ ನಾಗಾರ್ಜುನ…ಅವತ್ತು ನಡೆದಿದ್ದೇ ಬೇರೆ
ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದ ಅಭಿನಯವಿಲ್ಲ. ಹೌದು ನಮ್ಮ ಕನ್ನಡ ಚಿತ್ರರಂಗದ ಕಂಡಂತಹ ಹಾಗೂ ಇಡೀ ಭಾರತ ಚಿತ್ರರಂಗವೇ ಪ್ರೀತಿಸುವ ಮುಟ್ಟುವ ಅಭಿಮಾನಿಗಳ ಆರಾಧ್ಯದೈವ ವರನಟ ಡಾ ರಾಜ್ ಕುಮಾರ್ ರವರು ಜೀವನ ಪ್ರತಿಯೊಬ್ಬರಿಗೂ ಕೂಡ ಮಾದರಿ ಅಂತಾನೇ ಹೇಳಬಹುದು. ಹೌದು ಅವರ ಸಿನಿಮಾ ಜೀವನ ಒಂದು ಮೈಲಿಗಲ್ಲಾದರೇ ಅವರ ನಿಜ ಜೀವನ ಹಾಗೂ ವ್ಯಕ್ತಿತ್ವ ಇಡೀ ವಿಶ್ವಕ್ಕೆ ಸ್ಪೂರ್ತಿ. ಕನ್ನಡ ಚಿತ್ರರಂಗದಲ್ಲಿ ಸುವರ್ಣಾಕ್ಷರದಲ್ಲಿ ಬರೆಯಬೇಕಾದ ಹೆಸರು ಅಪ್ಪಾಜಿ ಅವರದ್ದು.
ಬೇಡರ ಕಣ್ಣಪ್ಪ ಸಿನಿಮಾ ದಿಂದ ಹಿಡಿದು ಶಬ್ಧವೇದಿ ಸಿನಿಮಾ ವರೆಗೂ ಕೂಡ ದಾಖಲೆಗಳನ್ನೆ ಬರೆದಿರುವ ಅಣ್ಣಾವ್ರು ಮನಮೋಹಕ ನಟನೆ ಕೋಗಿಲೆಯ ಕಂಠ ನೀತಿ ಪಾಠ ಸಾಮಾಜಿಕಕ್ಕೆ ಸಂದೇಶವನ್ನೇ ನೀಡುತ್ತಾ ಬಂದಿದ್ದು ಯಾವುದೇ ಸಿನಿಮಾದಲ್ಲೂ ಕೂಡ ಮ ಧ್ಯ ಪಾನ ಹಾಗೂ ಧೂಮಪಾನ ಮಾಡುವ ಒಂದೇ ಒಂದು ದೃಶ್ಯದಲ್ಲೂ ಕೂಡ ಅಭಿನಯಿಸಿಲ್ಲ. ಇನ್ನು ಐತಿಹಾಸಿಕ ಸಿನಿಮಾದಲ್ಲಿ ಅಣ್ಣಾವ್ರನ್ನ ನೋಡುವುದೇ ಒಂದು ಹಬ್ಬ. ಇನ್ನು ಭಕ್ತಿ ಪ್ರಧಾನ ಸಿನಿಮಾ ನೋಡಿದರಂತು ಕೈ ಎತ್ತಿ ಮುಗಿಯ ಬೇಕು ಎನಿಸುತ್ತದೆ.
ಹೀಗೆ ಯಾವುದೇ ಪಾತ್ರ ನೀಡಿದರು ಕೂಡ ಜೀವ ತುಂಬುತ್ತಿದ್ದ ಶ್ರೇಷ್ಠ ನಟ ಅಣ್ಣಾವ್ರು. ಇದು ಸಿನಿ ಜೀವನವಾದರೆ ಅವರ ವಯಕ್ತಿಕ ಜೀವನ ಮತ್ತೊಂದು ಮೈಲಿಗಲ್ಲೂ. ಬಹಳ ಸಿಂಪಲ್ ಲೈಫ್ ಲೀಡ್ ಮಾಡುತ್ತಿದ್ದ ಅಣ್ಣಾವ್ರು ಎಂದಿಗೂ ಹಣದ ಮದ ಏರಿಸಿಕೊಂಡವರಲ್ಲ. ಹಿರಿಯರಲ್ಲಿ ಹಿರಿಯರಾಗಿ ಕಿರಿಯರಲ್ಲಿ ಕಿರಿಯರಾಗಿ ಯುವ ಪೀಳಿಗೆಗೆ ಸ್ಪೂರ್ತಿ ಆಗಿದ್ದ ಅಪ್ಪಾಜಿಯ ಆ ನಿಸ್ವಾರ್ಥ ನಗು ನಿಜಕ್ಕೂ ಅದ್ಬುತ ಅತ್ಯದ್ಭುತ. ಇನ್ನು ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರ ಬಾಷೆಯ ನಟರ ಜೊತೆಯೂ ಉತ್ತಮ ಬಾಂದವ್ಯ ಹೊಂದಿದ್ದರು ಅಣ್ಣಾವ್ರು.
ತಿಂಗಳಿಗೊಮ್ಮೆಯಾದರು ರಾಜಣ್ಣನ್ನು ನೋಡಲ ಪರಭಾಷಿಗರು ಬರುತ್ತಿದ್ದರು. ಅಂತೆಯೇ ತೆಲುಗಿನ ಸೂಪರ್ ಸ್ಟಾರ್ ಅಕಿನೇನಿ ನಾಗಾರ್ಜುನ ರವರು ಅದೊಂದು ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ಅವರಬಳಿ ಬಂದು ತಮ್ಮ ಸಿನಿಮಾವನ್ನು ನೋಡಬೇಕೆಂದು ಹಠ ಹಿಡಿದಿದ್ದರು ಅಲ್ಲದೇ ಸ್ವತಃ ಅಣ್ಣಾವ್ರ ಮನೆಗೆ ಹೋಗಿ ನಾಗಾರ್ಜುನ ಮಾಡಿದಂತಹ ಆ ಕೆಲಸವನ್ನು ಕಂಡು ಅಣ್ಣಾವ್ರು ಕೂಡ ನಿಬ್ಬೆರಗಾಗಿ ಹೋದಗಿದ್ದರು. ಬರೋಬ್ಬರಿ 10 ವರ್ಷಗಳ ಕಾಲ ಕೇವಲ ಮಾಸ್ ಸಿನಿಮಾಗಳನ್ನೇ ನೀಡುತ್ತಾ ಸ್ಟಾರ್ ಪಟಕ್ಕೆ ಏರಿದಂತಹ Nagarjuna ರವರಿಗೆ ಅನ್ನಮಯ್ಯ ಎಂಬ ಚಿತ್ರದ ಅವಕಾಶ ದೊರಕುತ್ತದೆ.

ಇನ್ನು ಈ ಸಿನಿಮಾವನ್ನು ನಾಗರ್ಜುನವರು ಮಾಡುತ್ತಿದ್ದಾರೆ ಎಂದಾಗ ಸಾಕಷ್ಟು ನೆಗೆಟಿವ್ ಕಾಮೆಂಟ್ಗಳು ಕೂಡ ಕೇಳಿ ಬಂದವು. ಇದು ನಿಜವಾಗಲೂ ನಾಗಾರ್ಜುನ ಅವರಿಗೆ ಸೂಕ್ತವಾಗುವುದಿಲ್ಲ. ಇಂತಹ ಪಾತ್ರವನ್ನು ಅವರು ಮಾಡಲು ಸಾಧ್ಯವೇ ಇಲ್ಲ ಎಂದು ಸಾಕಷ್ಟು ಜನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇನ್ನು ಇದನ್ನೇ ಚಾಲೆಂಜ್ ಆಗಿ ತೆಗೆದುಕೊಂಡಂತಹ ನಾಗಾರ್ಜುನ ರವರು ಅನ್ನಮಯ್ಯ ಚಿತ್ರಕ್ಕೆ ತಮ್ಮ ಸಂಪೂರ್ಣ ಶ್ರದ್ಧೆಯನ್ನು ವಹಿಸಿ ಚಿತ್ರೀಕರಣ ಮುಗಿಸುತ್ತಾರೆ.
ಆದರೆ ಚಿತ್ರ ಬಿಡುಗಡೆ ಆಗಲು ಸಜ್ಜದಾಗ ತಾವು ಅಭಿನಯಿಸಿದ ಚಿತ್ರವನ್ನು ನಾಗರ್ಜುನ ಅವರಿಗೆ ನೋಡಲು ಸಾಧ್ಯವಾಗಲಿಲ್ಲ. ನನ್ನ ಅಭಿನಯದ ಕುರಿತು ಯಾರಾದರೂ ಒಬ್ಬರು ತಮ್ಮ ಭಾವನೆಯನ್ನು ಹೊರ ಹಾಕಿದರೆ ಮಾತ್ರ ನಾನು ಸಿನಿಮಾವನ್ನು ನೋಡುತ್ತೇನೆ ಎಂದು ನಾಗರ್ಜುನ ರವರು ತಮ್ಮ ತಂದೆಯ ಬಳಿ ಹೋಗಿ ಹೇಳಿದಾಗ ನಾಗಾರ್ಜುನ ರವರ ತಂದೆ ಡಾಕ್ಟರ್ ರಾಜಕುಮಾರ್ ಅವರನ್ನು ಭೇಟಿ ಮಾಡಿ ಈ ಕುರಿತಾಗಿ ಚರ್ಚಿಸುವಂತೆ ಹೇಳಿದ್ದು ನಾಗಾರ್ಜುನ ರವರು ನೇರವಾಗಿ ಆಂಧ್ರಪ್ರದೇಶದಿಂದ ಬೆಂಗಳೂರಿನ ಸದಾಶಿವನಗರದ ರಾಜಣ್ಣನ ಮನೆಗೆ ಬಂದು ನಿಮಗಾಗಿ ಪಲ್ಲವಿ ಚಿತ್ರಮಂದಿರ ಒಂದರಲ್ಲಿ ಸಿನಿಮಾವನ್ನು ಆಯೋಜಿಸಲಾಗುತ್ತದೆ.
ದಯಮಾಡಿ ಬಂದು ಸಿನಿಮಾ ನೋಡಿ ಮತ್ತು ನನ್ನ ಸಿನಿಮಾದ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಳಿದಾಗ ಅಣ್ಣಾವ್ರು ಯಾವುದೇ ಯೋಚನೆ ಮಾಡದೆ ತಮ್ಮ ಸಕುಟಂಬ ತಮ್ಮ ಸಮೇತವಾಗಿ ಸಿನಿಮಾ ನೋಡುತ್ತಾರೆ ಹಾಗೂ ನಾಗಾರ್ಜುನ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡಿದರು. ನಂತರ ನಾಗಾರ್ಜುನ ರವರಿಗೆ ಪಾಸಿಟಿವ್ ಎನರ್ಜಿ ಬಂದಿದ್ದು ಸಿನಿಮಾ ಬಿಡುಗಡೆ ಮಾಡುತ್ತಾರೆ. ಇದು ನಮ್ಮ ಅಣ್ಣಾವ್ರ ಗತ್ತು ಎನ್ನಬಹುದು.