ಪ್ರೇಮ ಕುರುಡೋ? ಪ್ರೇಮಿ ಕುರುಡೋ? ಎಂಬುದನ್ನು ಆ ದೇವರು ಕೂಡ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನಬಹುದು. ಹೌದು ಈ ಪ್ರೀತಿ ಮಾಡಿದವರಿಗೆ ಅವರ ಕಣ್ಣ ಮುಂದೆ ಯಾವ ಜಾತಿಯೂ ಹಾಗೂ ಯಾವ ಧರ್ಮಗಳು ಕಾಣುವುದಿಲ್ಲ ಅಷ್ಟೇ ಯಾಕೆ ಹೆತ್ತ ತಂದೆ ತಾಯಿಯೂ ಕೂಡ ಲೆಕ್ಕಕ್ಕೆ ಇರುವುದಿಲ್ಲ. ಅವರಿಗೆ ಮುಂದೇ ಹೇಗೆ ಬದುಕುಬೇಕು ಎಂಬುದರ ಯೋಚನೆ ಇಲ್ಲದೆ ಮದುವೆಯಾದರೇ ಸಾಕು ಎಂದು ಹುಚ್ಚು ಕನಸನ್ನು ಇಟ್ಟುಕೊಂಡು ಪ್ರಪಂಚವನ್ನೇ ಎದುರು ಹಾಕಿಕೊಳ್ಳುತ್ತಾರೆ ಎನ್ನಬಹುದು
ಅಂತೆಯೇ ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಹೌದು ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್ ಎನ್ನಬಹುದು. ತಮಗೆಲ್ಲರಿಗೂ ತಿಳೆದಿರುವ ಹಾಗೆ ಪ್ರೀತಿ ಎಂಬುದು ಯಾವಾಗ ಯಾರಿಗೆ ಯಾವ ಜಾಗದಲ್ಲಿ ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ. ಯಾವ ರೂಪದಲ್ಲಿ ಯಾರ ಮೇಲಾದರೂ ಸಹ ಪ್ರೀತಿ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ಸುಂದರಿ ಕುರೂಪಿ ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ ಬೇಕಾದರೂ ಆಗಬಹುದು.
ಆದರೆ ಪ್ರೀತಿ ಮಾಡುವುದು ದೊಡ್ಡ ವಿಚಾರವಲ್ಲ. ಪ್ರೀತಿ ಮಾಡಿ ವಿವಾಹವಾಗಿ ಬದುಕಿ ಬಾಳಿ ತೋರಿಸಿದರೆ ನಮ್ಮ ಪ್ರೀತಿ ಮತ್ತು ಜೀವನಕ್ಕೆ ಒಂದು ಅರ್ಥ ಸಿಗುತ್ತದೆ. ಸದ್ಯ ಹೀಗೆ ಪ್ರೀತಿಸಿ ಮದುವೆಯಾದ ಜೋಡಿಯಿಂದು ತಿಂಗಳಿಂದ ಭಾರೀ ಸದ್ದು ಮಾಡುತ್ತಿದೆ.ಸದ್ಯ ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ಕಳೆದ ಒಂದು ತಿಂಗಳಿಂದ ಟ್ರೆಂಡಿಂಗ್ ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಜೋಡಿಯ ಕುರಿತು ಇದೀಗ ಹೊಸ ಸುದ್ದಿಯೊಂದು ಹೊರ ಬಂದಿದ್ದು ಮನುಷ್ಯನ ಜೀವನವೇ ಇಷ್ಟ ಯಾವ ಸಮಯದಲ್ಲಿ ಯಾರು ಜೊತೆಯಾಗುವರೋ ಯಾವ ಸಮಯದಲ್ಲಿ ಯಾರು ಬಿಟ್ಟು ಹೋಗುವರೋ ಎಂಬುದನ್ನ ತಿಳಿಯಲಾಗುವುದಿಲ್ಲ.
ಅದೇ ರೀತಿಯಾಗಿ ಕಳೆದ ಕೆಲ ದಿನಗಳಿಂದ ನಟಿಯೊಬ್ಬರು ಐವತ್ತೆರೆಡು ವರ್ಷದ ನಿರ್ಮಾಪಕನ ಜೊತೆ ಎರಡನೇ ಮದುವೆಯಾಗಿದ್ದು ಬಾರೀ ಸುದ್ದಿಯಾಗಿದ್ದು ಆದರೆ ಇದೀಗ ಮದುವೆಯಾದ ಒಂದೇ ತಿಂಗಳಲ್ಲಿ ಇಬ್ಬರೂ ಸಹ ದೂರಾಗಬೇಕಾದ ಪರಿಸ್ಥಿತಿ ಎದುರಾಗಿದ್ದು ಮಹಾಲಕ್ಷ್ಮಿ ರವರು ಬಹಳಾನೇ ಬೇಸರದಲ್ಲಿರೋದಂತು ಸತ್ಯ.ಟಿವಿ ನಿರೂಪಕಿ ಮಹಾಲಕ್ಷ್ಮಿಯವರು ನಿರ್ಮಾಪಕ ರವೀದ್ರನ್ ಚಂದ್ರಶೇಖರನ್ ಅವರಿಗಿಂತ ಬರೋಬ್ವರಿ 20 ವರ್ಷ ಚಿಕ್ಕವರಾಗಿದ್ದು ಆದರೂ ಪ್ರೀತಿಯಲ್ಲಿ ಯಾವುದೇ ವಯಸ್ಸಿನ ಮಿತಿಯಿಲ್ಲ ಎನ್ನುದನ್ನು ಈ ಜೋಡಿ ಸಾಬೀತು ಮಾಡಿದ್ದಾರೆ.
ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿದ್ದು ಮದುವೆಯಾಗಲು ಅಸಲಿ ಕಾರಣ ಏನು ಅನ್ನೋದರ ಬಗ್ಗೆಯೂ ಕೂಡ ಚರ್ಚೆಯಾಗುತ್ತಿದ್ದು Mahalakshmi ಯವರು ಈಗಾಗಲೇ ಮದುವೆಯಾಗಿದ್ದು ಎಂಟು ವರ್ಷದ ಮಗ ಕೂಡ ಇದ್ದಾನೆ. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಾಲಕ್ಷ್ಮಿಯವರು ಕೆಲ ವರುಷಗಳ ಕಾಲ ಒಂಟಿ ಜೀವನ ನಡೆಸಿದ್ದು ಸದ್ಯ ಇದೀಗ ನಿರ್ಮಾಪಕ ರವೀಂದ್ರನ್ ಚಂದ್ರಶೇಖರನ್ ಅವರನ್ನು ವಿವಾಹವಾದ ಬಳಿಕ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ನಟ ಅನಿಲ್ ಕುಮಾರ್ ಅವರನ್ನು ಈ ಹಿಂದೆ ಮದುವೆಯಾಗಿದ್ದರು ಎಂದು ತಿಳಿದಿದ್ದು 2019 ರಲ್ಲಿ ಇಬ್ಬರೂ ಬೇರೆಯಾದರು.
ಇನ್ನು ಮಹಾಲಕ್ಷ್ಮಿ ಮತ್ತು ರವೀಂದ್ರನ್ ಅವರು ವಿಡುಂ ವರೈ ಕಾತಿರು ಚಿತ್ರದ ಸೆಟ್ನಲ್ಲಿ ಭೇಟಿಯಾಗಿದ್ದು ನಂತರ ಪ್ರೀತಿಯಾಗಿ ಮದುವೆಗೆ ತಿರುಗಿತು. ಇಬ್ಬರು ಮದುವೆಯಾಗಿ ಜೀವನವನ್ನು ಬಹಳ ಚೆನ್ನಾಗಿಯೇ ಎಂಜಾಯ್ ಮಾಡುತ್ತಿದ್ದು ಆದರೆ ಸದ್ಯ ಇದೀಗ ಈ ಜೋಡಿ ದೂರಾಗುವ ಸಂದರ್ಭ ಎದುರಾಗಿದೆ.
ಹೌದು ವಿವಾಹವಾದ ತಿಂಗಳಲ್ಲಿಯೇ ನಿರ್ಮಾಪಕ ರವೀಂದರ್ ರವರು ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುತ್ತಿದ್ದ ತಮಿಳಿನ ಬಿಗ್ ಬಾಸ್ ಸೀಸನ್ ಆರು ಇದೇ ಅಕ್ಟೋಬರ್ ಒಂಭತ್ತರಿಂದ ಆರಂಭವಾಗುತ್ತಿದ್ದು ಈ ಸೀಸನ್ ನಲ್ಲಿ ನಿರ್ಮಾಪಕ ರವೀಂದರ್ ಕೂಡ ಭಾಗವಹಿಸುತ್ತಿದ್ದಾರಂತೆ.
ಇನ್ನು ಒಂದು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದ ಜೋಡಿ ಇನ್ನು ಮುಂದೆ ಬಿಗ್ ಬಾಸ್ ಮನೆಯೊಳಗೆ ಸುದ್ದಿ ಮಾಡಬಹುದಾಗಿದ್ದು ಇತ್ತ ಒಟ್ಟಿಗೆ ದೀಪಾವಳಿ ಆಚರಣೆ ಮಾಡಬೇಕು ಎಂದುಕೊಂಡಿದ್ದ ಮಹಾಲಕ್ಷ್ಮಿ ಅವರಿಗೆ ನಿರಾಸೆ ಮೂಡಿದೆಯಂತೆ. ಸದ್ಯ ಪತಿಯನ್ನು ಬಿಗ್ ಬಾಸ್ ಗೆ ಕಳುಹಿಸಿ ಕೊಡುತ್ತಿದ್ದಾರೆ.