ವಾರ್ತಾ ಮಂಜರಿ
Trending Stories, Viral News, Gossips & Everything in Kannada

Jote Joteyali: ಕೆರೆ ಪಕ್ಕ ಶೂಟಿಂಗ್ ಮಾಡುವಾಗ ಜೊತೆ ಜೊತೆಯಲಿ ಮೇಘಾ ಶೆಟ್ಟಿಗೆ ಆಘಾತ….

338

ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ Jote Joteyali ಯಾರಿಗೆ ತಾನೆ ಗೊತ್ತಿಲ್ಲಾ ಹೇಳಿ? ಪ್ರತಿಯೊಬ್ಬರ ಮನೆಯಲ್ಲಿ ನೋಡುತ್ತಿರುವ ಫೇಮಸ್​ ಧಾರಾವಾಹಿ ಅಂದರೂ ಕೂಡ ತಪ್ಪಾಗಲಾರಾದು. ಹೌದು ಅದರಲ್ಲಿಯೂ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅನು ಸಿರಿಮನೆ ಎಂದರೆ ಎಲ್ಲಾ ಹೆಂಗಳೆಯರ ಅಚ್ಚುಮೆಚ್ಚಾಗಿದ್ದು ಅಸಲಿಗೆ ಈ ಪಾತ್ರದಲ್ಲಿ ನಟಿಸುತ್ತಿರುವ ನಟಿಯೇ ಮೇಘಾ ಶೆಟ್ಟಿ. ಹೌದು ಮೇಘಾ ಶೆಟ್ಟಿ ಕೇವಲ ಧಾರಾವಾಹಿ ಅಷ್ಟೇ ಅಲ್ಲ ಸದ್ಯ ಇದೀಗ ಸ್ಯಾಂಡಲ್‌ವುಡ್‌ ನಲ್ಲಿಯೂ ಇತ್ತಿಚ್ಚಿನ ದಿನಗಳಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಇವರು ಮೂಲತಃ ಕರಾವಳಿಯ ಬೆಡಗಿ ಮಂಗಳೂರಿನವರಾಗಿದ್ದಾರೆ.

ನಟಿ ಮೇಘಾ ಶೆಟ್ಟಿರವರು 1998 ರಲ್ಲಿ ತುಳುನಾಡಿನ ಮಂಗಳೂರಿನಲ್ಲಿ ಬಂಟ್ ಕುಟುಂಬದಲ್ಲಿ ಜನಿಸಿದ್ದು ಬೆಂಗಳೂರಿನಲ್ಲಿ ಎಂಬಿಎ ವಿಧ್ಯಾಭ್ಯಾಸವನ್ನು ಮುಗಿಸಿದ್ದಾರೆ. ಇನ್ನು ಮೇಘಾ ಶೆಟ್ಟಿ ಎಂಬ ಹೆಸರು ಕೇಳಿದಾಕ್ಷಣ ಈಕೆ ಬಂಟರ ಹುಡುಗಿ ಇರಬೇಕು ಎಂದನಿಸುತ್ತಿದ್ದು ಅದು ನಿಜವೂ ಹೌದು. ಮೇಘಾ ಅವರ ತಂದೆ ಮಂಗಳೂರಿನವರು. ಆದರೆ ತಾಯಿ ಹುಬ್ಬಳ್ಳಿಯವರಾದ ಕಾರಣದಿಂದಾಗಿ ಮೇಘಾ ತುಳು ಭಾಷೆ ಕಲಿತಿಲ್ಲ. ಇನ್ನು ನಂತರದಲ್ಲಿ ಚಿತ್ರರಂಗದಲ್ಲಿನ ಆಸಕ್ತಿ ಅವರನ್ನು ಮೊದಲಿಗೆ ಟಿವಿ ಸೀರಿಯಲ್​ಗಳಿಗೆ ಕರೆತಂದಿದ್ದು ಸದ್ಯ ಇದೀಗ ಮೇಘಾ ಶೆಟ್ಟಿ ಕೆಲ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಸದ್ಯ ಇದೀಗ ಚಿತ್ರೀಕರಣ ನಡೆಯುವ ಸಮಯದಲ್ಲಿ ಅನು ಪಾತ್ರದಾರಿ ನಟಿ Megha shetty ಕಾಲು ಜಾರಿ ನದಿಗೆ ಬಿದ್ದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ನಟ ಅನಿರುದ್ಧ್ ಅವರನ್ನು ಆರ್ಯವರ್ಧನ್ ಪಾತ್ರದಿಂದ ಕೈಬಿಟ್ಟದ್ದು ತಂತ್ರಜ್ಞರಿಗೆ ಬೈದು ಹೊರ ನಡೆದ ಅನಿರುದ್ಧ್ ರವರನ್ಬು ಧಾರಾವಾಹಿ ತಂಡ ಕೈ ಬಿಟ್ಟಿತು. ಅತ್ತ ಕೂತು ಮಾತನಾಡಿ ನಾನು ಧಾರಾವಾಹಿಯಲ್ಲಿ ಮುಂದುವರೆಯುತ್ತೇನೆ ಎಂದು ಅನಿರುದ್ಧ್ ಎಷ್ಟೇ ಹೇಳಿದರೂ ಕೂಡ ಇದು ಮೊದಲೇನಲ್ಲ ಈ ಹಿಂದೆಯೂ ಅನಿರುದ್ಧ್ ಅವರು ಇದೇ ರೀತಿ ಮಾಡಿದ್ದಾರೆ. ನಮಗೆ ಸಾಕಾಗಿದ್ದು ಅವರನ್ನು ಮುಂದುವರೆಸಲು ಸಾಧ್ಯವೇ ಇಲ್ಲ ಎಂದಿದ್ದರು.

 

ಇನ್ನು ಅವರ ಮಾತಿನಂತೆಯೇ ಅನಿರುದ್ಧ್ ಅವರನ್ನು ಕೈ ಬಿಡಲಾಗಿದ್ದು ಇತ್ತ ಕತೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದು ಸಂಜು ಆಗಿ ಬಂದ ನಟ ಹರೀಶ್ ರಾಜ್ ಅವರೇ ನಿಜವಾದ ಆರ್ಯವರ್ಧನ್ ಎಂಬ ವಿಚಾರ ಅನುಗೆ ತಿಳಿಯುವುದು ಬಾಕಿ ಇದೆ. ಹೌದು ಸಂಜು ಗು ಕೂಡ ಹಳೆಯ ನೆನಪುಗಳು ಕಾಡುತ್ತಿದ್ದು ತನಗೂ ಕೂಡ ತಾನು ಆರ್ಯವರ್ಧನ್ ಎಂದು ತಿಳಿಯಬೇಕಿದೆ. ಒಟ್ಟಿನಲ್ಲಿ ಆರ್ಯವರ್ಧನ್ ಪಾತ್ರಕ್ಕೆ ಹೊಸ ಕಲಾವಿದರನ್ನು ತರಲು ಹರಸಾಹಸವನ್ನೇ ಮಾಡಬೇಕಾಯಿತು.  ಇತ್ತ ಉಳಿದ ಪಾತ್ರಧಾರಿಗಳು ಎಂದಿನಂತೆ ಧಾರಾವಾಹಿಯಲ್ಲಿ ತಮ್ಮ ತಮ್ಮ ಪಾತ್ರಗಳನ್ನು ಮಾಡಿಕೊಂಡು ಮುಂದೆ ಸಾಗುತ್ತಿದ್ದು ಆದರೆ ಈ ನಡುವೆ ಅನು ಚಿತ್ರೀಕರಣದ ವೇಳೆ ನದಿಗೆ ಜಾರಿ ಬಿದ್ದಿದ್ದು ವೀಡಿಯೋ ಇದೀಗ ವೈರಲ್ ಆಗಿದೆ.

ಹೌದು ಶ್ರೀರಂಗಪಟ್ಟಣದಲ್ಲಿ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದು ಅದೇ ಸಂದರ್ಭದಲ್ಲಿ ಮೇಘಾ ಶೆಟ್ಟಿ ಅವರು ಕಾಲು ಜಾರಿ ನದಿಗೆ ಬಿದ್ದಿದ್ದು ಸ್ವತಃ ಅವರೇ ವೀಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಅದೃಷ್ಟವಶಾತ್ ಮೇಘಾ ಶೆಟ್ಟಿ ಅವರಿಗೆ ಏನೂ ಕೂಡ ಅಪಾಯವಾಗಿಲ್ಲ. ಎಲ್ಲ ಸುರಕ್ಷತೆಯ ಕ್ರಮಗಳನ್ನು ಪಾಲಿಸಿದ್ದ ಕಾರಣ ಮೇಘಾ ಶೆಟ್ಟಿ ರವರ ಹೊಟ್ಟೆಗೆ ಹಗ್ಗವನ್ನು ಕಟ್ಟಿದ್ದ ಕಾರಣ ಅವರು ಬಿದ್ದ ಕೂಡಲೇ ಮೇಲೇಳಲು ಸಹಾಯವಾಗಿದೆ. ಬಹುಶಃ ಆರ್ಯವರ್ಧನ್ ಅಸ್ತಿ ಬಿಡುವ ಚಿತ್ರೀಕರಣ ಇದಾಗಿದ್ದು ಈ ಸಮಯದಲ್ಲಿ ಈ ಘಟನೆ ನಡೆದಿದ್ದು ವೀಡಿಯೋ ಹಂಚಿಕೊಂಡಿದ್ದಾರೆ.