ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹಬ್ಬದೂಟ ಮಾಡುತ್ತಿರುವ ಸುಮಲತಾ ಅಂಬರೀಶ್ ಅಭಿಷೇಕ್ ಅಂಬರೀಶ್…ವಿಡಿಯೋ

1,076

ನಟಿ ಸುಮಲತಾ ಅಂಬರೀಶ್ ಅವರ ಮನೆಯಲ್ಲಿ ಗಣೇಶ ಹಬ್ಬದ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ ಕನ್ನಡ ಸಿನಿಮಾರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡವರು ನಟಿ ಸುಮಲತಾ ಅಂಬರೀಶ್. ಒಬ್ಬ ನಟಿ ಮಾತ್ರವಲ್ಲದೇ ರಾಜಕಾರಣಿಯಾಗಿಯೂ ಖ್ಯಾತಿ ಗಳಿಸಿಕೊಂಡಿದ್ದಾರೆ. ಕಳೆದ ಆಗಸ್ಟ್ 27 ರಂದು ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬ ಸಂಭ್ರಮದಲ್ಲಿದ್ದರು. ತನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು.

ಹೌದು, ಸಿನಿಮಾರಂಗದ ನಟ ನಟಿಯರು, ಹಾಗೂ ಸುಮಲತಾರವರ ಆಪ್ತರು ಈ ಬರ್ತ್ಡೇ ಸೆಲೆಬ್ರೇಶನ್ ನಲ್ಲಿ ಭಾಗಿಯಾಗಿದ್ದರು. ಈ ಬರ್ತ್ಡೇ ಸೆಲೆಬ್ರೇಶನ್ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಂದಹಾಗೆ, ಸುಮಲತಾ ಅಂಬರೀಶ್ ಅವರ ಮನೆಯಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಹಬ್ಬದ ಸಂಭ್ರಮ ಸುಮಲತಾ ಅಂಬರೀಶ್ ಅವರ ಮನೆಯಲ್ಲಿ ಹೇಗಿತ್ತು ಎನ್ನುವುದರ ಮಾಹಿತಿ ಇಲ್ಲಿದೆ.

ನಟಿ ಸುಮಲತಾರವರ ಹಿನ್ನಲೆಯನ್ನು ಗಮನಿಸುವುದಾದರೆ, ತೆಲುಗು, ಮಲಯಾಳಂ, ಕನ್ನಡ, ತಮಿಳು ಸೇರಿದಂತೆ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಸುಮಲತಾ ಅಂಬರೀಶ್. ಸರಿ ಸುಮಾರು 220 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸಿನಿಮಾರಂಗದಲ್ಲಿ ನೆಲೆ ಕಂಡುಕೊಂಡವರು ಸುಮಲತಾ ಅಂಬರೀಶ್. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ಪಂಚಭಾಷಾ ನಟಿ.ಖ್ಯಾತ ನಟ ಮತ್ತು ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್‌ರವರ ಧರ್ಮಪತ್ನಿ. 1963 ರಲ್ಲಿ ಚೆನ್ನೈನಲ್ಲಿ ಜನಿಸಿದ ಸುಮಲತಾ ಬೆಳೆದಿದ್ದೆಲ್ಲ ಮುಂಬೈ ಮತ್ತು ಆಂಧ್ರಪ್ರದೇಶದಲ್ಲಿ.

ಬಾಲ್ಯದಲ್ಲೇ ಅಂದರೆ, ತಮ್ಮ 15 ನೇ ವಯಸ್ಸಿನಲ್ಲಿಯೇ ಆಂಧ್ರಪ್ರದೇಶ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾದರು. ಕನ್ನಡದಲ್ಲಿ ಡಾ.ರಾಜಕುಮಾರ್‌ರ ರವಿಚಂದ್ರ ಚಿತ್ರದಲ್ಲಿ ನಟಿಸುವ ಮೂಲಕ ತಮ್ಮ ಸಿನಿ ಬದುಕು ಆರಂಭಿಸಿದರು. ಹೌದು ಆಹುತಿ, ಅವತಾರ, ಪುರುಷ, ತಾಯಿ ಕನಸು, ಕರ್ಣ, ಕಥಾನಾಯಕ ಮುಂತಾದ ಚಿತ್ರಗಳಲ್ಲಿ ನಟಿಸಿದರು.

ಇನ್ನು ಈ `ಆಹುತಿ’ ಚಿತ್ರದ ಸಮಯದಲ್ಲಿ ಅಂಬರೀಶ್ ಅವರ ಜೊತೆಗೆ ಚಿಗುರೊಡೆಯಿತು. 1991 ರಲ್ಲಿ ವಿವಾಹವಾದರು. ಇವರ ಪುತ್ರ ಅಭಿಷೇಕ್ ಕೂಡ ಚಿತ್ರರಂಗದಲ್ಲಿ ನಟನಾಗಿ ಸಕ್ರಿಯವಾಗಿದ್ದಾರೆ. ಸುಮಲತಾ ಸುಮಾರು ಆರು ಭಾಷೆಗಳನ್ನು ಮಾತನಾಡುವ ಸಾಮರ್ಥ್ಯ ಇವರಿಗಿದೆ. ಸಿನಿಮಾರಂಗದ ಸಾಧನೆಗಾಗಿ ಸಾಕಷ್ಟು ಪ್ರಶಸ್ತಿಗಳು ಇವರಿಗೆ ಲಭಿಸಿದೆ.

ಇವರ ಪತಿ ರೆಬಲ್ ಸ್ಟಾರ್ ಅಂಬರೀಶ್ 2018, ನವೆಂಬರ್ 24 ರಂದು ಬೆಂಗಳೂರಿನಲ್ಲಿ ನಿ’ಧನರಾದರು. ಇದಾದ ಬಳಿಕ ಅಂಬಿ ಅಭಿಮಾನಿಗಳ ಮನವಿಯ ಮೇರೆಗೆ 2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಮೂಲಕ ರಾಜಕೀಯರಂಗದಲ್ಲಿಯೂ ಸುಮಲತಾ ಅಂಬರೀಶ್ ಅವರು ಸಕ್ರಿಯರಾಗಿದ್ದಾರೆ.

ಅಂದಹಾಗೆ, ಈ ಬಾರಿ ಗಣೇಶನ ಹಬ್ಬವನ್ನು ಸುಮಲತಾ ಅಂಬರೀಶ್ ಅವರ ಮನೆಯಲ್ಲಿ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಮನೆಯಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡಿದ್ದಾರೆ. ಜೊತೆಗೆ ತಮ್ಮ ಮುದ್ದಿನ ಮಗ ಅಭಿಷೇಕ್ ಅಂಬರೀಶ್ ಹಾಗೂ ಕುಟುಂಬದವರ ಜೊತೆಗೆ ಸೇರಿ ಹಬ್ಬದೂಟವನ್ನು ಸವಿದಿದ್ದಾರೆ. ಈ ಗಣೇಶ ಚತುರ್ಥಿ ಸೆಲೆಬ್ರೇಶನ್ ಹೇಗಿತ್ತು ಎಂದು ನೋಡಲು ಈ ಕೆಳಗಿನ ವಿಡಿಯೋವನ್ನು ನೋಡಿ.