ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸುದೀಪ್ ಮನೆಗೆ ತೆರಳಿ ಬರ್ತಡೆಗೆ ವಿಶೇಷ ಉಡುಗೊರೆ ಕೊಟ್ಟ ಶಿವಣ್ಣ ದಂಪತಿಗಳು

48

ಚಂದನವನದ ನಟನಾಗಿರುವ ಕಿಚ್ಚ ಸುದೀಪ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೌದು, ಭಾರತೀಯ ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಕಿಚ್ಚ ಸುದೀಪ್ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 49ನೇ ವಸಂತಕ್ಕೆ ಸುದೀಪ್​ ಕಾಲಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಿಚ್ಚ ಸುದೀಪ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.

 

ಕೊರೋನಾ ಕಾರಣದಿಂದ ಮನೆ ಬಳಿ ಬರಬೇಡಿ ಎಂದು ಕಿಚ್ಚ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ, ಈ ಬಾರಿ ಕಿಚ್ಚನ ಬರ್ತ್​ಡೇ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ತಡರಾತ್ರಿಯಿಂದಲೇ ಜೆಪಿ ನಗರದ ಕಿಚ್ಚನ ನಿವಾಸದ ಎದುರು ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಕಿಚ್ಚ ಸುದೀಪ್ ಹುಟ್ಟುಹಬ್ಬದ ದಿನವೇ ಶಿವಣ್ಣ ದಂಪತಿಗಳು ಅವರ ಮನೆಗೆ ತೆರಳಿ ಸರ್ಪ್ರೈಸ್ ನೀಡಿದ್ದಾರೆ. ಆದರೆ ಇದರ ಅಸಲಿ ಕಾರಣ ಬೇರೇನೇ ಇದೆ.

ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ ಅವರ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ, ಕಿಚ್ಚ ಸುದೀಪ್ ಇಂಜಿನಿಯರ್ ಪದವಿಯಲ್ಲಿ ಪೂರ್ಣ ಗೊಳಿಸಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಕಾಲೇಜು ದಿನಗಳಲ್ಲಿ ಅಂಡರ್ 17 ಹಾಗೂ ಅಂಡರ್ 19 ಕ್ರಿಕೆಟ್ ನಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸುವ ಮೂಲಕ ಕ್ರೀಡೆಯಲ್ಲಿದ್ದರು. ಇನ್ನು, ನಟನೆಯಲ್ಲಿ ಆಸಕ್ತಿ ಇದ್ದ ಕಾರಣ, ಹೀಗಾಗಿ ಮುಂಬೈನ ರೋಶನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ಗೆ ಸೇರಿಕೊಂಡು ತರಬೇತಿ ಪಡೆದುಕೊಂಡರು. ಬಳಿಕ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ ‘ಪ್ರೇಮದ ಕಾದಂಬರಿ’ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲ ನಟನೆಯ ಚಿತ್ರ ತಾಯವ್ವದ ಮೂಲಕ ಚಂದನವನಕ್ಕೆ ಪ್ರವೇಶಿಸಿದರು.

ತದನಂತರ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ 1999 ರಲ್ಲಿ ಮೂಡಿ ಬಂದ ಸ್ಪರ್ಶ ಚಿತ್ರದಲ್ಲಿ ಅದ್ಭುತ ನಟನಾಗಿ ಕಾಣಿಸಿಕೊಂಡರು. ಹೀಗೆ 2001 ರಲ್ಲಿ ತೆರೆಗೆ ಬಂದ ಹುಚ್ಚ ಯಾರು ಊಹಿಸದ ಪಾತ್ರ ಮಾಡಿದರು. ಇವರ ಸಿನಿ ಬದುಕಿಗೆ ಹುಚ್ಚ ಸಿನಿಮಾ ಬ್ರೇಕ್ ನೀಡಿತು. ಚಿತ್ರರಂಗದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೇ, ನಿರ್ದೇಶಕರಾಗಿ ಗುರುತಿಸಿಕೊಂಡರು.

ಈಗಾಗಲೇ ಮೈ ಆಟೋಗ್ರಾಫ್,ವೀರ ಮದಕರಿ, ಕೆಂಪೇಗೌಡ, ಮಾಣಿಕ್ಯ ಸೇರಿದಂತೆ ಅನೇಕ ಚಿತ್ರಗಳನ್ನು ಮಾಡಿ ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆದರು. ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷಾ ಚಿತ್ರಗಳಲ್ಲಿಯೂ ಮಿಂಚಿರುವ ನಟ ಸುದೀಪ್, ಹಿಂದಿಯಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಫೂಂಕ್ ತೆಲುಗಿನ ಈಗ, ಬಾಹುಬಲಿ ಹಾಗೂ ತಮಿಳಿನ ಪುಲಿ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಿರೂಪಕಯಾಗಿಯೂ ಕಾಣಿಸಿಕೊಂಡಿದ್ದಾರೆ.

ಚಂದನವನದ ನಟ ಶಿವರಾಜ್ ಕುಮಾರ್ ದಂಪತಿಗಳು ಕಿಚ್ಚ ಮನೆಗೆ ಸರ್ಪ್ರೈಸ್ ಆಗಿ ಭೇಟಿ ಕೊಟ್ಟಿದ್ದು,ಈ ವೇಳೆಯಲ್ಲಿ ಕಿಚ್ಚ ಸುದೀಪ್ ಅವರು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಅದರ ಜೊತೆಗೆ ದುಬಾರಿ ಬೆಲೆಯ ಉಡುಗೊರೆಯನ್ನು ನೀಡಿದ್ದಾರೆ. ಈ ಬರ್ತ್ಡೇ ಸೆಲೆಬ್ರೇಶನ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಆದರೆ ಶಿವಣ್ಣ ದಂಪತಿಗಳು ಸುದೀಪ್ ಅವರ ಮನೆಗೆ ಹೋಗಲು ಅಸಲಿ ಕಾರಣ ಬೇರೇನೇ ಇದೆ.

ಕಳೆದ ವರ್ಷ ನಡೆದ ಅಪ್ಪು ಘಟನೆಯಿಂದ ದೊಡ್ಮನೆ ಕುಟುಂಬ ಸಂಪೂರ್ಣವಾಗಿ ಕುಗ್ಗಿ ಹೋಗಿತ್ತು.. ತಮಗಿಂತ ಚಿಕ್ಕವನನ್ನು ಕಳೆದುಕೊಂಡ ಶಿವಣ್ಣ ಕಣ್ಣೀರು ಕೂಡ ಹಾಕಿದ್ದರು. ಆ ವೇಳೆಯಲ್ಲಿ ಚಿತ್ರರಂಗದ ಕೆಲವು ನಟರು ತಮ್ಮನ ಸ್ಥಾನದಲ್ಲಿ ನಿಂತು ಧೈರ್ಯ ತುಂಬಿದರು. ಈ ಹಿಂದೆ, ಚಿತ್ರರಂಗದ ಕಾರ್ಯಕ್ರಮವೊಂದರಲ್ಲಿ ಹೇಳಿದಂತೆ ದರ್ಶನ್ ಅವರಲ್ಲಿ ಸುದೀಪ್ ಅವರಲ್ಲಿ ಯಶ್ ಅವರಲ್ಲಿ ಗಣೇಶ್ ಅವರಲ್ಲಿ ಪ್ರತಿಯೊಬ್ಬರಲ್ಲೂ ನಾನು ಅಪ್ಪುವನ್ನು ಕಾಣ್ತೇನೆ.. ಅವರು ಇಂತಹ ಸಮಯದಲ್ಲಿ ನಮಗೆ ನಮ್ಮ ಸ್ವಂತ ತಮ್ಮಂದಿರಂತೆ ಬೆಂಬಲವಾಗಿ ನಿಂತಿದ್ದಾರೆ.. ಇದಕ್ಕೆ ನಾನು ಏನು ಹೇಳಿದರೂ ಕಡಿಮೆಯೇ ಎಂದಿದ್ದರು ಶಿವಣ್ಣ. ಆ ಮಾತಿನಂತೆ ತಮ್ಮನಾದ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ದಿನ ಸರ್ಪ್ರೈಸ್ ಆಗಿ ಅವರ ಮನೆಗೆ ತೆರಳಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ಶಿವಣ್ಣ ದಂಪತಿಗಳು.