ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಬಹುಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಮಣಿಯರ ಸಾಲಿಗೆ ಸಮಂತಾ ಸೇರಿಕೊಂಡಿದ್ದಾರೆ. ಟಾಲಿವುಡ್ ಮತ್ತು ಕಾಲಿವುಡ್ ಸ್ಟಾರ್ ನಟರ ಜೊತೆ ಅಭಿನಯಿಸಿರುವ ನಟಿ ಇವರು. ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಸಮಂತಾರವರಿಗೆ ಪುಷ್ಪ 2 ಸಿನಿಮಾದ ಬೇಡಿಕೆ ಹೆಚ್ಚಾಗಿದೆ.
ಹೀಗಾಗಿ ಸಮಂತಾರವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅಷ್ಟೇ ಅಲ್ಲದೇ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೀಗ ತನ್ನ ನ್ ನೆಚ್ಚಿನ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ನೀಡಿದ್ದಾರೆ. ನಟಿ ಸಮಂತಾಆ ಅವರು ನೀಡಿರುವ ಆ ಬ್ಯಾಡ್ ನ್ಯೂಸ್ ಏನು ಎನ್ನುವುದು ತಿಳಿಯಬೇಕಾದರೆ ಈ ಸ್ಟೋರಿ ಓದಿ. ಅಂದಹಾಗೆ, ನಟಿ ಸಮಂತಾರವರು ವೈವಾಹಿಕ ಜೀವನದಿಂದ ದೂರವಾದ ಬಳಿಕ ಹೆಚ್ಚು ಸುದ್ದಿ ಯಾಗುತ್ತಿದ್ದಾರೆ ಎನ್ನಬಹುದು.ನಟಿ ಸಮಂತಾ ಹಾಗೂ ನಾಗಚೈತನ್ಯ ಪ್ರೀತಿಸಿ ಮದುವೆಯಾದವರು. ಆದರೆ ಇದೀಗಇಬ್ಬರೂ ದೂರವಾಗಿದ್ದಾರೆ. ಅದಲ್ಲದೆ, ಮದುವೆಯಾಗುವ ಮೊದಲು ನಾಗ ಚೈತನ್ಯ ಹಾಗೂ ಸಮಂತಾರವರ ಜೋಡಿ ಸಿನಿ ಪರದೆಯ ಮೇಲೆ ಎಲ್ಲರಿಗೂ ಇಷ್ಟವಾಗಿ ಬಿಟ್ಟಿದ್ದರು.
ಹೀಗಿರುವಾಗ 2017 ರ ವೇಳೆಗೆ ಈ ಇಬ್ಬರೂ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಕಳೆದ ವರ್ಷ ಕೆಲವು ವೈಯಕ್ತಿಕ ಕಾರಣದಿಂದ ಈ ಇಬ್ಬರೂ ಬೇರೆ ಬೇರೆಯಾದರು. ತದನಂತರದಲ್ಲಿ ದಿನಗಳಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಅವಕಾಶಗಳು ಬಂದವು. ಅದಲ್ಲದೆ ಸಮಂತಾರವರ ಆಯ್ಕೆಗಳು ಬದಲಾದವು.. ಹೀಗಾಗಿ ಸಮಂತಾರವರು ಫೋಟೋ ಶೂಟ್, ಸಿನಿಮಾ ಎಂದೆಲ್ಲಾ ಬ್ಯುಸಿಯಾಗಿ ಬಿಟ್ಟಿದ್ದಾರೆ. ಸಾಕಷ್ಟು ಸಿನಿ ಪ್ರಾಜೆಕ್ಟ್ ಗಳಿಗೆ ಸಹಿ ಹಾಕಿದ್ದು, ಸದ್ಯಕ್ಕೆ ತನ್ನನ್ನು ತಾನು ಬ್ಯುಸಿಯಾಗಿಸಿಕೊಂಡಿದ್ದಾರೆ.
ಒಂದೆರಡು ದಿನಗಳ ಹಿಂದೆ, ಸಮಂತಾ ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ವಿಚಾರದ ಕುರಿತು ತೆಲುಗು ಮಾಧ್ಯಮದಲ್ಲಿ ಸುದ್ದಿಯಾಗಿತ್ತು. ನಾಗ ಚೈತನ್ಯ ಜೊತೆ ಮದುವೆಯ ನಂತರ ಸಮಂತಾಗೆ ಮಕ್ಕಳಾಗಿಲ್ಲ. ಮಕ್ಕಳು ಆಗದಂತೆ ತಡೆಯಲು ಆಪರೇಷನ್ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ನಾಗಚೈತನ್ಯ ಜೊತೆ ವಿಚ್ಛೇದನದ ನಂತರ ಮನೆಯಲ್ಲಿ 2ನೇ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರಂತೆ.
ಆ ಕಾರಣಕ್ಕೆ ಸಮಂತಾರವರು ಇಷ್ಟೊಂದು ದೊಡ್ಡ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿತ್ತು. ಮದುವೆಗೆ ಯಾರೂ ಬಲವಂತ ಮಾಡಬಾರದು ಎಂದು ಸಮಂತಾ ಆ ರೀತಿ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿತ್ತು. ಅದರ ಜೊತೆಗೆ ಇದೀಗ ತನ್ನ ಅಭಿಮಾನಿಗಳಿಗೆ ಮತ್ತೊಂದು ಬ್ಯಾಡ್ ನ್ಯೂಸ್ ನೀಡಿದ್ದಾರೆ. ನಟಿ ಸಮಂತಾ ಇದೀಗ ಸೋಶಿಯಲ್ ಮಿಡಿಯಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಆಗಾಗ ಫೋಟೋ ವಿಡಿಯೋಯೆಂದು ಆಕ್ಟಿವ್ ಆಗಿದ್ದ ನಟಿ ಸಮಂತಾ ಇದೀಗ ಸೋಶಿಯಲ್ ಮಿಡಿಯಾ ಉಪಯೋಗ ಕಡಿಮೆ ಮಾಡಿದ್ದಾರೆ.
ಅಂದಹಾಗೆ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ನಟಿ ಇತ್ತಿಚೆಗೆ ಯಾವುದೇ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿಲ್ಲ. ಜೊತೆಗೆ ನಟಿ ಸಮಂತಾ ಟ್ವಿಟರ್ ಖಾತೆಯ ಬಳಕೆಯನ್ನು ಸಹ ಕಡಿಮೆ ಮಾಡಿದ್ದಾರೆ. ನಟಿ ಇತ್ತೀಚೆಗೆ ತಮ್ಮ ಸಿನಿಮಾದ ಪೋಸ್ಟರ್ ಗಳು ಬಿಟ್ಟರೆ ತಮ್ಮ ವೈಯಕ್ತಿಕ ಫೋಟೋಗಳನ್ನು ಶೇರ್ ಮಾಡಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಪ್ಡೇಟ್ ನೀಡುತ್ತಿಲ್ಲ ಯಾಕೆ ಎನ್ನುವುದರ ಹಿಂದಿನ ಕಾರಣ ತಿಳಿದು ಬಂದಿಲ್ಲ. ಆದರೆ ನಟಿಯೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗದೇ ಇರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.