ನಟಿ ರಕ್ಷಿತಾ ಪ್ರೇಮ್ ಮದುವೆಯಾದ ಬಳಿಕ ಸಿನಿಮಾರಂಗದಿಂದ ದೂರ ಉಳಿದದ್ದು ಯಾಕೆ, ಅಸಲಿ ಕಾರಣ ರಿವೀಲ್ ಮಾಡಿದ ನಟಿ? ಸಿನಿಮಾರಂಗದಲ್ಲಿ ಈಜಿ ಜಯಿಸುವುದು ಸುಲಭದ ಮಾತಲ್ಲ. ಏನೇ ಬಂದರೂ ಕೂಡ ಎದುರಿಸಿ ಮುನ್ನಡೆಯುವ ಧೈರ್ಯ ಇರಲೇಬೇಕು. ಈಗಾಗಲೇ ಈ ಸಿನಿಮಾರಂಗವು ಅನೇಕ ನಟ ನಟಿಯರಿಗೆ ಕರೆದು ಮಣೆ ಹಾಕಿದೆ. ಆದರೆ, ಕೆಲವರು ಅವಕಾಶಕ್ಕಾಗಿ ಕಾದು ಕುಳಿತರೆ ಇನ್ನು ಕೆಲವರು ಅವಕಾಶವಿದ್ದರೂ ಸಿನಿಮಾರಂಗದಿಂದ ದೂರ ಉಳಿದರು. ಈ ಸಿನಿ ಲೋಕದ ಬದುಕು ಒಂದೇ ರೀತಿ ಇರುವುದಿಲ್ಲ. ವೃತ್ತಿ ಜೀವನದಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯವಾಗಿರುತ್ತದೆ.
ಕೆಲವರು ತಮ್ಮ ತಂದೆ ತಾಯಿಯರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದ ಕಾರಣ, ಮಕ್ಕಳು ಕೂಡ ಅದೇ ಹಾದಿಯನ್ನು ತುಳಿದರು. ಇನ್ನು ಕೆಲವರು ಯಾವುದೇ ಸಿನಿ ಬ್ಯಾಕ್ ಗ್ರೌಂಡ್ ಇಲ್ಲದೇ ಎಂಟ್ರಿ ಕೊಟ್ಟು, ಇಂದು ಸ್ಟಾರ್ ಪಟ್ಟವನ್ನು ಅಲಂಕರಿಸಿದ್ದಾರೆ. ಸಿನಿಮಾರಂಗದ ಕುಟುಂಬದ ಹಿನ್ನಲೆಯಿಂದ ಬಂದವರು ನಟಿ ರಕ್ಷಿತಾ ಪ್ರೇಮ್ ಸಿನಿಮಾ ಮಾತ್ರವಲ್ಲದೇ, ರಾಜಕೀಯದಲ್ಲೂ ರಕ್ಷಿತಾ ಸಕ್ರಿಯರಾಗಿದ್ದ ನಟಿ ಒಂದು ಕಾಲದಲ್ಲಿ ಬಹುಬೇಡಿಕೆಯಲ್ಲಿದ್ದರು.
ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾ ರಂಗದಿಂದ ದೂರ ಉಳಿದು ಬಿಟ್ಟರು. ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ ಸಿನಿಮಾರಂಗದಿಂದ ದೂರ ಉಳಿಯಲು ಕಾರಣವೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.ನಟಿ ರಕ್ಷಿತಾ ಪ್ರೇಮ್ ಅವರ ಸಿನಿ ಬದುಕನ್ನು ಗಮನಿಸಿದರೆ, ಕನ್ನಡ ಮಾತ್ರವಲ್ಲದೇ ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಅದು ಅಲ್ಲದೇ ಖ್ಯಾತ ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್ ಮತ್ತು ನಟಿ ಮಮತಾರಾವ್ ರವರ ಮುದ್ದಿನ ಪುತ್ರಿ.
ನಟನೆಯೆನ್ನವುದು ರಕ್ತದಲ್ಲೇ ಬಂದಿರುವಂತಹದ್ದು. ನಟಿ ರಕ್ಷಿತಾ ಸಿನಿಮಾರಂಗದಲ್ಲಿ ಸಾಕಷ್ಟು ಹೆಸರು ಸಂಪಾದನೆ ಮಾಡಿಕೊಂಡರು. ಚಂದನವನದ ಬೇಡಿಕೆಯ ನಟಿ ರಕ್ಷಿತಾ ಪ್ರೇಮ್ ಅವರು, 2002 ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ ಅಪ್ಪುಸಿನಿಮಾದಲ್ಲಿ ನಾಯಕಿ ಕಾಣಿಸಿಕೊಳ್ಳುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು.
ತದನಂತರದಲ್ಲಿ ತೆಲುಗು ಮತ್ತು ತಮಿಳು ರಿಮೇಕ್ನಲ್ಲೂ ನಾಯಕಿಯಾಗಿ ಮಿಂಚಿ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡರು. ಇದಾದ ಬಳಿಕ ತೆರೆಕಂಡ ಕಲಾಸಿಪಾಳ್ಯ ಚಿತ್ರ ರಕ್ಷಿತಾ ಅವರ ನಟನಾ ಬದುಕಿಗೆ ಬ್ರೇಕ್ ನೀಡಿತು. ಇನ್ನು ಈ ಸಿನಿಮಾದಲ್ಲಿ ರಕ್ಷಿತಾ ಹಾಗೂ ದರ್ಶನ್ ಕೆಮಿಸ್ಟ್ರಿ ಸಿನಿಮಾದಲ್ಲಿ ವರ್ಕ್ ಔಟ್ ಆಗಿತ್ತು. ಸಿನಿ ಪರದೆಯ ಮೇಲಿನ ಈ ಜೋಡಿಯನ್ನು ಸಿನಿ ಪ್ರೇಕ್ಷಕರು ಒಪ್ಪಿದರು. ಸ್ಟಾರ್ ನಟರಾದ ಪುನೀತ್, ದರ್ಶನ್, ಸುದೀಪ್, ಶಿವರಾಜಕುಮಾರ್, ಉಪೇಂದ್ರ, ಶ್ರೀಮುರಳಿ ಸೇರಿದಂತೆ ಅನೇಕ ನಟರ ಜೊತೆಯಲ್ಲಿ ಸಿನಿಮಾ ಮಾಡಿದರು.
ಪರಭಾಷಾ ಚಿತ್ರದ ನಟರಾದ ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ, ಎನ್.ಟಿ.ಆರ್ ಜೊತೆಗೂ ತೆರೆ ಹಂಚಿಕೊಂಡರು. ಇನ್ನು, 2007 ರಲ್ಲಿ ನಿರ್ದೇಶಕ ಪ್ರೇಮ್ ಅವರನ್ನು ಪ್ರೀತಿಸಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಇಟ್ಟಿದ್ದರು. ಅದು ಅಲ್ಲದೇ, ಪ್ರೇಮ್ ಜೊತೆ ಮದುವೆಯಾದ ನಂತರ ನಟನೆಯಿಂದ ದೂರ ಉಳಿದರು.
ಮದುವೆಯಾದ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಆದರೆ ಸ್ವಲ್ಪ ವರ್ಷಗಳ ಬಳಿಕ ರಕ್ಷಿತಾ ತಮ್ಮ ಹೋಮ್ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಕೈಗೆತ್ತಿ ಕೊಂಡರು. ಶಿವರಾಜಕುಮಾರ್ರವರ ನೂರನೇ ಚಿತ್ರ ಜೋಗಯ್ಯವನ್ನು `ಪ್ರೇಮ್ ಪಿಕ್ಚರ್ಸ್’ ಅಡಿಯಲ್ಲಿ ನಿರ್ಮಾಣ ಮಾಡಿದರು. ಅಷ್ಟೇ ಅಲ್ಲದೇ, ಪ್ರೇಮ್ ನಟನೆಯ ಡಿ.ಕೆ ಚಿತ್ರವನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಹೊತ್ತು ಕೊಂಡರು. ರಕ್ಷಿತಾ ಪ್ರೇಮ್. ನಂತರದಲ್ಲಿ ಕಿರುತೆರೆಯಲ್ಲಿ ನಿರೂಪಕಿಯಾಗಿ `ಸ್ವಯಂವರ’ ಕಾರ್ಯಕ್ರಮ ನಿರೂಪಣೆ ಮಾಡುವ ಮೂಲಕ ಗಮನ ಸೆಳೆದರು.
ಅದು ಮಾತ್ರವಲ್ಲದೇ, ಕಾಮಿಡಿ ಕಿಲಾಡಿಗಳು ಸೇರಿದಂತೆ ಇನ್ನಿತ್ತರ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಏಕ್ ಲವ್ ಯಾ ಸಿನಿಮಾಕ್ಕೆ ಪ್ರೇಮ್ ಅವರೇ ನಿರ್ದೇಶನ ಮಾಡಿ, ರಕ್ಷಿತಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿದ್ದ ರಕ್ಷಿತಾ ಅವರು, ವೈವಾಹಿಕ ಜೀವನದ ಬಳಿಕ ಸಿನಿಮಾ ರಂಗದಿಂದ ದೂರ ಉಳಿದದ್ದು ಯಾಕೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
‘ಮದುವೆ ನಂತರ ಕುಟುಂಬದ ಜವಾಬ್ದಾರಿ ಹೆಚ್ಚಾಗಿ, ಮಗು ಜನಿಸಿದ ನಂತರ ಮಗುವಿನ ಪಾಲನೆ ಪೋಷಣೆಯಲ್ಲಿ ಬ್ಯುಸಿಯಾದೆ ಎಂದಿದ್ದಾರೆ ನಟಿ ರಕ್ಷಿತಾ ಪ್ರೇಮ್. ಈ ಕಾರಣವೇ ಸಿನಿಮಾ ರಂಗದಿಂದ ದೂರ ಉಳಿಯಿವಂತೆ ಮಾಡಿತ್ತು. ಸದ್ಯಕ್ಕೆ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಇವರು ಉತ್ತಮ ಸಿನಿಮಾಗಳನ್ನು ನೀಡುತ್ತಿದ್ದಾರೆ.