ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಧ್ರುವ ಸರ್ಜಾ ಪತ್ನಿ ಪ್ರೇರಣಾ ಗರ್ಭಿಣಿಯಾದ ಸುದ್ದಿ ತಿಳಿದು ಮೇಘನಾ ರಾಜ್ ಮಾಡಿರುವ ಕೆಲಸ ನೋಡಿ

2,599

ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ  ಸಾಮಾಜಿಕ ತಾಣದಲ್ಲಿ ಒಂದು ವಿಶೇಷ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ಇದು ಇವರ ಲೈಫ್​ಗೆ ಸಂಬಂಧಿಸಿದ ಖುಷಿ ವಿಷಯವೇ ಆಗಿದೆ. ಇನ್ನೂ ಒಂದು ವಿಶೇಷವೆಂದ್ರೆ ಈ ಸುದ್ದಿಯನ್ನ ಅಷ್ಟೇ ಸ್ಪೆಷಲ್  ಆಗಿಯೇ ಹೇಳಿದ್ದಾರೆ. ಸಿನಿಮಾ ಹೀರೋ ಅಂದ್ಮೇಲೆ ಸಿನಿಮಾ ರೀತಿಯಲ್ಲಿಯೇ ಯೋಚನೆ ಮಾಡ್ಬೇಕು ಅಲ್ವೇ. ಅಭಿಮಾನಿಗಳೂ ಅದನ್ನೇ ಬಯಸಿದ್ರೂ ಬಯಸಬಹುದು. ಈ ಹಿನ್ನೆಲೆಯಲ್ಲಿಯೇ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಅವರ ಒಂದು ಫೋಟೋ  ಶೂಟ್ ವೀಡಿಯೋ  ಸಾಮಾಜಿಕ ತಾಣದಲ್ಲಿ ಭಾರೀ ಗಮನ ಸಳೆಯುತ್ತಿದೆ.

 

ಸದ್ಯ ಸರ್ಜಾ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದ್ಫು ನಟ ಧ್ರುವ ಸರ್ಜಾ ಶೀಘ್ರದಲ್ಲಿಯೇ ತಂದೆಯಾಗಲಿದ್ದಾರೆ. ಹೌದು ಧ್ರುವ ಸರ್ಜಾ ಪತ್ನಿ ಗರ್ಭಿಣಿಯಾಗಿದ್ದು ಗರ್ಭಿಣಿ ಪತ್ನಿಯೊಡನೆ ಧ್ರುವ ಸರ್ಜಾ ಫೊಟೊಶೂಟ್ ಮಾಡಿಸಿಕೊಂಡಿದ್ದು ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಗರ್ಭಿಣಿ ಪತ್ನಿ ಪ್ರೇರಣಾ ಜೊತೆಗೆ ಮಗುವಿನ ಅಲ್ಟ್ರಾ ಸೌಂಡ್‌ ಚಿತ್ರವನ್ನು ಹಿಡಿದು ಕಾಣಿಸಿಕೊಂಡಿದ್ದಾರೆ ಧ್ರುವ ಸರ್ಜಾ.

 

ಇನ್ನು ಪತ್ನಿಯೊಟ್ಟಿಗಿನ ಚಿತ್ರಗಳನ್ನು ಕೊಲ್ಯಾಜ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿರುವ ಧ್ರುವ ಸರ್ಜಾ ಜೀವನದ ಹೊಸ ಹಂತಕ್ಕೆ ಹೋಗುತ್ತಿದ್ದೇವೆ. ಈ ಹಂತ ಬಹಳ ದಿವ್ಯವಾದ ಹಂತವಾಗಿದೆ. ಶೀಘ್ರದಲ್ಲಿ ಪುಟ್ಟ ಮಗುವಿನ ಆಗಮನವಾಗಲಿದ್ದು ಮಗುವನ್ನು ಹರಸಿ ಜೈ ಆಂಜನೇಯ ಎಂದಿದ್ದಾರೆ ಧ್ರುವ ಸರ್ಜಾ. ಇನ್ನು ಪ್ರೇರಾಣಾ ತಾಯಿಯಾಗುತ್ತಿರುವ ವಿಷಯ ಕೇಳಿ ಮೇಘನಾರಾಜ್ ಹೇಳಿದ್ದೇನು ಗೊತ್ತ.

 

ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ 2019 ರ ನವೆಂಬರ್‌ ನಲ್ಲಿ ವಿವಾಹವಾಗಿದ್ದು ಈ ಜೋಡಿ ವಿವಾಹವಾದ ಕೆಲವೇ ತಿಂಗಳಲ್ಲಿ ಕೋವಿಡ್ ಬಂತು. ಆ ಬಳಿಕ ಧ್ರುವ ಸರ್ಜಾರ ಸಹೋದರ ಚಿರಂಜೀವಿ ಸರ್ಜಾ ಅಗಲಿಕೆ ಹೊಂದಿದರು. ಆ ನಂತರ ಚಿರಂಜೀವಿ ಸರ್ಜಾರ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದರು. ಇದೀಗ ಪ್ರೇರಣಾ ಮಗುವಿಗೆ ಜನ್ಮ ನೀಡಲು ತಯಾರಾಗಿದ್ದಾರೆ.

 

ಧ್ರುವ ಸರ್ಜಾರ ಅತ್ತಿಗೆ ಮೇಘನಾ ರಾಜ್ 2020ರ ಅಕ್ಟೋಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಣ್ಣನ ಮಗನನ್ನು ಅದ್ಧೂರಿಯಾಗಿ ಧ್ರುವ ಸರ್ಜಾ ಸ್ವಾಗತಿಸಿದ್ದರು. ದುಬಾರಿ ತೊಟ್ಟಿಲು ಅವನಿಗಾಗಿ ಉಡುಗೊರೆ ನೀಡಿದ್ದರು. ಇದೀಗ ಸ್ವಂತ ಮಗುವನ್ನು ಸ್ವಾಗತಿಸಲು ಧ್ರುವ ಸರ್ಜಾ ತಯಾರಾಗಿದ್ದಾರೆ.ತಾಯಿ ಆಗ್ತಿರೋ ಪ್ರೇರಣಾ ಹೊಟ್ಟೆ ಹಿಡಿದು ಧ್ರುವ ಸರ್ಜಾ ಫೋಜ್ ಕೊಟ್ಟಿದ್ದಾರೆ. ಇದು ಒಂದು ರೀತಿ ಆದರೆ ಪತಿ-ಪತ್ನಿ ತಮ್ಮ ಹೊಸ ಅತಿಥಿಯ ಆಗಮನದ ಸಂಭ್ರಮವನ್ನ ತಮ್ಮದೇ ರೀತಿಯಲ್ಲಿಯೇ ವ್ಯಕ್ತಪಡಿಸಿದ್ದಾರೆ.

 

ಅದು ಇಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತಿದೆ. ಈ ಎಲ್ಲ  ಫೋಟೋಗಳನ್ನೆ ಕೋಲಾಜ್ ಮಾಡಿಯೇ ಒಂದು ವೀಡಿಯೋ ತಯಾರಿಸಲಾಗಿದೆ. ಅದೇ ವೀಡಿಯೋವನ್ನೇ  ಧ್ರುವ ಸರ್ಜಾ ಪ್ರೇರಣಾ ಶಂಕರ್ ಇನ್​ಸ್ಟಾ ಗ್ರಾಮ್​ನ ಅಕೌಂಟ್​ನಲ್ಲಿಯೇ ಶೇರ್ ಮಾಡಲಾಗಿದೆ. ಅಂಬಾರಿ ಚಿತ್ರದ ಹಾಡನ್ನ ಈ ಒಂದು ವೀಡಿಯೋಗೆ ಹಿನ್ನೆಲೆಯಲ್ಲಿ ಬಳಸಲಾಗಿದೆ. ಸದ್ಯ ಈ ವಿಚಾರ ತಿಳಿಯುತ್ತಿದ್ದಂತೆ ನಟಿ ಮೇಘನಾ ರಾಜ್ ರವರು ಬಹಳ ಸಂತಸ ಪಟ್ಟಿದ್ದು ಪ್ರೇರಾಣಾ ಹಾಗೂ ಧ್ರುವ ಸರ್ಜಾ ರವರ ಬೇಬಿಬಂಪ್ ಫೋಟೋ ಹಂಚಿಕೊಂಡು ಶುಭ ಹಾರೈಸಿದ್ದಾರೆ.