ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬರ್ತಡೇ ಆಚರಿಸುವಾಗ ರಿಷಬ್ ಶೆಟ್ಟಿ ಮಗನ ಕಾಮಿಡಿ ನೋಡಿ…ವಿಡಿಯೋ

33
Join WhatsApp
Google News
Join Telegram
Join Instagram

ಕನ್ನಡದ ಕಾಂತಾರ (Kantara) ಚಿತ್ರದ ಮೂಲಕ ಇಡೀ ದೇಶಕ್ಕೆ ರೀಚ್ ಆಗಿ ದೊಡ್ಡ ಮಟ್ಟದ ಪ್ರಶಂಸೆ ಹಾಗೂ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ರಿಷಬ್ ಶೆಟ್ಟಿ (Rishab Shetty) ಕುರಿತು ಸಾಮಾಜಿಕ ಜಾಲತಾಣದಲ್ಲಿ (Social Media) ಚರ್ಚೆಗಳು ಜೋರಾಗಿವೆ. ಹೌದು ಕೇವಲ ಸಿನಿಮಾಗಳ (Moviea) ಕುರಿತಾಗಿ ಮಾತ್ರವಲ್ಲದೇ ವೈಯಕ್ತಿಕ ವಿಷಯಗಳ ಬಗ್ಗೆಯೂ ಕೂಡ ರಿಷಬ್ ಶೆಟ್ಟಿ ಸುದ್ದಿ ಮಾಡಿದ್ದಾರೆ.

ಹೌದು ಕಾಂತಾರ ಯಶಸ್ಸಿನ (Success) ಬೆನ್ನಲ್ಲೇ ರಿಷಬ್ ಶೆಟ್ಟಿ ಯವರು ತಮ್ಮ ಮಗಳ (Daughter) ಫೋಟೊವನ್ನು ರಿವೀಲ್ ಮಾಡಿದ್ದರು. ಹೌದು ಈ ಮೂಲಕ ರಿಷಬ್ ಶೆಟ್ಟಿ ಕುಟುಂಬದ ಬಗ್ಗೆ ಗೂಗಲ್‌ನಲ್ಲಿ (Google) ಹಲವರು ಹುಡುಕಿದ್ದರು. ಇನ್ನು ಚಿತ್ರದಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ (Pragati Shetty) ಕೂಡ ನಟಿಸಿದ್ದ ವಿಚಾರವೂ ಸಹ ವೈರಲ್ ಆಗಿ ಈ ಜೋಡಿ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ ಎಂಬುದೂ ಸಹ ಹೊರಬಿದ್ದಿತ್ತು.

ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ. ತಮ್ಮ ಪ್ರೀತಿ ಹೇಗೆ ಹುಟ್ಟಿತು ಎಂಬುದನ್ನು ಎಲ್ಲಿಯೂ ಕೂಡ ಹೆಚ್ಚಾಗಿ ಹೇಳಿಕೊಳ್ಳದ ಈ ಜೋಡಿ ಕಾಂತಾರ ಸಿನಿಮಾ ಸಮಯದಲ್ಲಿ ನಡೆದಿದ್ದ ಸಂದರ್ಶನಗಳಲ್ಲಿ(Interview) ಈ ವಿಷಯವನ್ನು ಬಹಿರಂಗಪಡಿಸಿತ್ತು. ಹೌದು ಪ್ರಗತಿ ಶೆಟ್ಟಿ ತನ್ನ ಹಾಗೂ ರಿಷಬ್ ಶೆಟ್ಟಿ ಪರಿಚಯ ಹೇಗಾಯ್ತು ಹಾಗೂ ಇಬ್ಬರ ನಡುವೆ ಸ್ನೇಹ ಹೇಗೆ ಬೆಳೆಯಿತು ಮತ್ತು ಅದಕ್ಕೆ ಕಾರಣವೇನು ಮತ್ತು ಪ್ರೀತಿ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ತಿಳಿಸಿದ್ದರು.

ಮೊದಲಿಗೆ ಹಲವು ಸಿನಿಮಾಗಳಲ್ಲಿ (Movies) ಬಣ್ಣ ಹಚ್ಚಿ ನಟನೆ ಮಾಡಿದ್ದ ರಿಷಬ್ ಶೆಟ್ಟಿ ಯವರು ಮೊದಲಿಗೆ ತಮ್ಮ ಗೆಳೆಯ ರಕ್ಷಿತ್ ಶೆಟ್ಟಿಗೆ(Rakshith Shetty) ರಿಕ್ಕಿ (Ricky) ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಜರ್ನಿ ಶುರು ಮಾಡಿದ್ದರು. ಹೌದು ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದ ತಾನು ಚಿತ್ರ ನೋಡಲು ಸ್ನೇಹಿತೆಯರೊಡನೆ ಚಿತ್ರಮಂದಿರಕ್ಕೆ ಬಂದಾಗ ತನ್ನ ಗೆಳತಿಯರು ರಿಷಬ್ ಶೆಟ್ಟಿಯವರನ್ನು ತೋರಿಸಿ ಅವರೇ ನಿರ್ದೇಶಕರು ಎಂದು ಹೇಳಿದರು. ಹೌದು ಆಗ ಅವರ ಹೆಸರೂ ಕೂಡ ತನಗೆ ತಿಳಿದಿರಲಿಲ್ಲ ಎಂದು ಪ್ರಗತಿ ಶೆಟ್ಟಿ ಹೇಳಿಕೊಂಡರು.

ಇನ್ನು ಉಳಿದವರು ಕಂಡಂತೆ (Ulidavaru Kandante) ಚಿತ್ರ ನೋಡಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದ ಪ್ರಗತಿ ಶೆಟ್ಟಿಯವರು ರಿಕ್ಕಿ ನೋಡಲು ಚಿತ್ರಮಂದಿರಕ್ಕೆ ಬಂದು ಸ್ನೇಹಿತೆಯರು ಹೇಳಿದ ಕಾರಣಕ್ಕಾಗಿ ರಿಷಬ್ ಶೆಟ್ಟಿ ಯವರ ಬಳಿ ತೆರಳಿ ಮಾತನಾಡಿ ಸೆಲ್ಫಿ ತೆಗೆದುಕೊಂಡಿದ್ದರು. ಹೌದು ಎಲ್ಲರೂ ರಕ್ಷಿತ್ ಶೆಟ್ಟಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಒಂಟಿಯಾಗಿ ನಿಂತಿದ್ದ ರಿಷಬ್ ಶೆಟ್ಟಿಯವರ ಬಳಿ ತೆರಳಿದೆವು ಮತ್ತು ಅವರೂ ಸಹ ನಮ್ಮ ಊರಿನ ಕಡೆಯವರಾದ ಕಾರಣ ನ್ನು ಅವರ ಬಳಿ ನಮ್ಮ ಊರಿನವರು ನೀವು ಅಲ್ಲಿಂದ ಬಂದು ಚಿತ್ರರಂಗದಲ್ಲಿ ಇಷ್ಟೆಲ್ಲಾ ಮಾಡುತ್ತಿರುವುದು ಹೆಮ್ಮೆ ಎನಿಸುತ್ತೆ ಎಂದು ಹೇಳಿದ್ದೆ ಅದೇ ಮೊದಲ ಬಾರಿಗೆ ಅವರ ಜೊತೆ ನಾನು ಮಾತನಾಡಿದ್ದು ಅವರ ಹೆಸರೂ ಕೂಡ ತಿಳಿದಿದ್ದು ಎಂದು ಪ್ರಗತಿ ಶೆಟ್ಟಿ ತಿಳಿಸಿದರು. ಇನ್ನು ಆ ದಿನದಂದು ಪ್ರಗತಿ ಶೆಟ್ಟಿ ರಿಷಬ್ ಜತೆ ಫೋಟೊ ತೆಗೆಸಿಕೊಂಡಿದ್ದು ಈ ಫೋಟೊವನ್ನು ಕಳೆದ ಬಾರಿಯ ವಿವಾಹ ವಾರ್ಷಿಕೋತ್ಸವದ ದಿನದಂದು ರಿಷಬ್ ಶೆಟ್ಟಿ ಹಂಚಿಕೊಂಡಿದ್ದರು.

ಈ ರೀತಿಯಾಗಿ ಚಿತ್ರಮಂದಿರದಲ್ಲಿ ಪ್ರಗತಿ ಹೇಳಿದ ಮಾತುಗಳಿಗೆ ಮಾರುಹೋದ ರಿಷಬ್ ಶೆಟ್ಟಿಯವರು ಪ್ರಗತಿಯ ಫೇಸ್‌ಬುಕ್ (Facebook) ಖಾತೆ ಹುಡುಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಬಳಿಕ ಇಬ್ಬರ ನಡುವೆ ಚಾಟಿಂಗ್ ನಡೆದು ಸ್ನೇಹ ಬೆಳೆದಿತ್ತು. ಹೀಗೆ ಆರಂಭವಾದ ಸ್ನೇಹ ಪ್ರೀತಿಗೆ ತಿರುಗಿ ಒಂದು ವರ್ಷದ ಒಳಗೇ ಇಬ್ಬರೂ ವಿವಾಹವಾದೆವು ಎಂದು ಪ್ರಗತಿ ಹೇಳಿಕೊಂಡಿದ್ದರು. ಸದ್ಯ ಈ ಇಬ್ಬರೂ ವಿವಾಹವಾಗಿ ಆರು ವರ್ಷಗಳು ಕಳೆದಿದ್ದು ಇಬ್ಬರು ಮಕ್ಕಳೂ ಸಹ ಇದ್ದಾರೆ. ಇದೀಗ ದಂಪತೊಗಳು ಮಗಳ ಹುಟ್ಟುಹಬ್ಬ ಆಚರಿಸಿದ್ದು ಈ ವಿಡಿಯೋವನ್ನ ಲೇಖನಿಯ ಕೆಳಗೆ ನೋಡಬಹುದು.