ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪವಿತ್ರ ಲೋಕೇಶ್ ಮಗನ ತುಂಟಾಟ ನೋಡಿ…ಕ್ಯೂಟ್ ವಿಡಿಯೋ

31
Join WhatsApp
Google News
Join Telegram
Join Instagram

ಚಿತ್ರಗಳಲ್ಲಿ ನಾಯಕ ನಾಯಕಿ (Hero & Heroine)ಪಾತ್ರ ಎಷ್ಟು ಮುಖ್ಯವಾಗಿರುತ್ತದೋ ಅದರಂತೆಯೇ ಅಷ್ಟೇ ಪ್ರಾಮುಖ್ಯತೆ ಪೋಷಕ ಪಾತ್ರಗಳು (Supporting Role) ಕೂಡ ಪಡೆದುಕೊಂಡಿರುತ್ತವೆ. ಇನ್ನು ಈಗಾಗಲೇ ಕನ್ನಡ ಸಿನಿಮಾರಂಗದಲ್ಲಿ (KFI) ಸಾಕಷ್ಟು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರ ಮನೆ ಮಾತಾಗಿರುವ ಕಲಾವಿದರುಗಳು ಪರಭಾಷೆಯಲ್ಲಿ ಕೂಡ ಮಿಂಚುತ್ತಿದ್ದಾರೆ. ಅಂತಹ ಖ್ಯಾತ ಕಲಾವಿದರಲ್ಲಿ ಕನ್ನಡದ ಪವಿತ್ರ ಲೋಕೇಶ್ (Pavithra Lokesh) ಕೂಡ ಒಬ್ಬರು.

ಕನ್ನಡ ಹಾಗೂ ತೆಲುಗು (Kannada & Telugu) ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪವಿತ್ರ ಲೋಕೇಶ್ ಅವರು ಇದೀಗ ಕನ್ನಡ ಮಾತ್ರವಲ್ಲದೇ ತೆಲುಗು ಚಿತ್ರರಂಗದ ಬಹು ಬೇಡಿಕೆಯ ಪೋಷಕ ನಟಿ ಎಂದರೆ ತಪ್ಪಾಗಲಾರದು. ಹೌದು 1979 ರಲ್ಲಿ ಮೈಸೂರಿನಲ್ಲಿ (Mysore) ಜನಿಸಿದ ಪವಿತ್ರಾ ಲೋಕೇಶ್ ರವರ ತಂದೆ ಕೂಡ ಖ್ಯಾತ ರಂಗಭೂಮಿ ಕಲಾವಿದರಾಗಿದ್ದು ಸುಮಾರು 16 ನೇ ವಯಸ್ಸಿನಲ್ಲಿ ನಟಿ ಪವಿತ್ರ ಲೋಕೇಶ್ ಅವರು ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ. ಇನ್ನು ಚಿಕ್ಕ ವಯಸ್ಸಿನಲ್ಲಿ ಬಂದ ಇವರು ಇದೀಗ ಚಿತ್ರರಂಗದ ಖ್ಯಾತ ಪೋಷಕ ನಟಿಯಾಗಿ ಯಶಸ್ಸನ್ನು ಪಡೆದಿದ್ದು ಇದೀಗ ದೊಡ್ಡ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ.

ಯಜಮಾನ(Yajamana) ಮಲ್ಲ (Malla) ಹೀಗೆ ಸಾಕಷ್ಟು ಸೂಪರ್ ಹಿಟ್ (Super Hit) ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಗಳ (Super Star) ಜೊತೆ ಅಭಿನಯಿಸಿರುವ ಪವಿತ್ರ ಲೋಕೇಶ್ ಕನ್ನಡ ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತ ಪೋಷಕ ನಟಿಯಾಗಿದ್ದಾರೆ. ಇನ್ನೂ ಹಲವಾರು ಸಿನಿಮಾಗಳಲ್ಲಿ (Movies) ಅಕ್ಕನ ಪಾತ್ರ ತಾಯಿ ಪಾತ್ರ ಅತ್ತಿಗೆ ಪಾತ್ರ ಹೀಗೆ ವಿವಿಧ ಪಾತ್ರಗಳಲ್ಲಿ ಜೀವ ತುಂಬುತ್ತ ಬಂದಿದ್ದು ತೆಲುಗು ಚಿತ್ರರಂಗದಲ್ಲಂತೂ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಸಹ ಹೊಂದಿದ್ದಾರೆ.

ಸದ್ಯ ತೆಲುಗು ಚಿತ್ರರಂಗದಲ್ಲಿ ಬರುತ್ತಿರುವ ಪ್ರತಿಯೊಂದು ಸಿನಿಮಾಗಳಲ್ಲಿಯೂ ಕೂಡ ಪವಿತ್ರಾ ಲೋಕೇಶ್ ಕಾಣಿಸಿಕೊಳ್ಳುತ್ತಿದ್ದು ನೈಜ ನಟನೆಗೆ ಅಭಿಮಾನಿಗಳು ಮಾರುಹೋಗಿದ್ದಾರೆ. ಇನ್ಜು ಪವಿತ್ರ ಲೋಕೇಶ್ ಅವರು ಮಿಸ್ಟರ್ ಅಭಿಷೇಕ್ (Mister Abhishek) ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದು ತದನಂತರ ಅವರು ಬಂಗಾರದ ಕಳಸ (Bangarada Kalasa) ಸಿನಿಮಾದಲ್ಲಿ ಕಾಣಿಸಿಕೊಂಡರು. ಆದರೆ ಈ ಸಿನಿಮಾಗಳು ಅವರಿಗೆ ಯಶಸ್ಸನ್ನು ತಂದುಕೊಡಲಿಲ್ಲ. ನಂತರ ಅವರು ಜನುಮದ ಜೋಡಿ ಎಂಬ ಸಿನಿಮಾದಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನು ಸಂಪಾದಿಸುತ್ತಾರೆ.

ಪವಿತ್ರಾ ಲೋಕೇಶ್ ಅವರ ಎತ್ತರವಾಗಿದ್ದ ಕಾರಣ ಅವರಿಗೆ ನಾಯಕಿಯಾಗಿ ನಟಿಸುವ ಅವಕಾಶಗಳು ಸಿಗಲಿಲ್ಲ. ಹೌದು ಹೀಗಾಗಿ ಅವರು ಪೋಷಕ ಪಾತ್ರಗಳಲ್ಲಿ ಮುಂದುವರೆದಿದ್ದು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿಯೂ ಕೂಡ ಸಾಕಷ್ಟು ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಹೌದು ಜೀವನ್ಮುಖಿ ಗುಪ್ತಗಾಮಿನಿ ಗೆಳತಿ ನೀತಿ ಚಕ್ರ ಧರಿತ್ರಿ ಪುನರ್ಜನ್ಮ ಹೀಗೆ ಅನೇಕ ಧಾರವಾಹಿಗಳಲ್ಲಿ ಪವಿತ್ರ ಅಭಿನಯಿಸಿದ್ದ 2007ರಲ್ಲಿ ಸುಚೇಂದ್ರ ಪ್ರಸಾದ್ (Suchendra Prasad) ಅವರನ್ನು ವಿವಾಹವಾದರು.

ಇನ್ನು ಸುಚೇಂದ್ರ ಪ್ರಸಾದ್ ಅವರು ಕೂಡ ರಂಗಭೂಮಿ ಚಿತ್ರರಂಗ ಹಾಗೂ ಕಿರುತೆರೆಯ ಕಲಾವಿದರಾಗಿದ್ದು ತಮ್ಮದೇ ಆದ ಹೆಸರನ್ನು ಕೂಡ ಸಂಪಾದಿಸಿದ್ದಾರೆ.ಇನ್ನು ಸುಚೇಂದ್ರ ಅವರು ಪವಿತ್ರ ಲೋಕೇಶ್ ಅವರನ್ನು ಎರಡನೇ ಮದುವೆಯಾಗಿದ್ದು ಪವಿತ್ರ ಅವರು ಸುಚೇಂದ್ರ ಅವರಿಗೆ ಎರಡನೇ ಪತ್ನಿಯಾಗಿದ್ದಾರೆ. ಮೊದಲ ಪತ್ನಿಗೆ 2006ರಲ್ಲಿ ಸುಚೇಂದ್ರ ಅವರು ವಿಚ್ಛೇದನ ನೀಡಿದ್ದು ಅದೇ ರೀತಿ ಪವಿತ್ರ ಅವರಿಗೂ ಕೂಡ ಸುಚೇಂದ್ರ ಅವರು ಎರಡನೇ ಪತಿ.

ಮೊದಲ ಪತಿ ಹೈದರಾಬಾದ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಈ ಜೋಡಿ ಬೇರೆಯಾಯಿತು. ಇನ್ನು
ಪವಿತ್ರ ಹಾಗೂ ಸುಚೇಂದ್ರ ಅವರಿಗೆ ಒರ್ವ ಮಗನಿದ್ದು ಅವರ ಕುಟುಂಬದ ಫೋಟೋವನ್ನು ನೀವು ಇಲ್ಲಿ ವೀಕ್ಷಿಸಬಹುದು. ಸದ್ಯ ಪವಿತ್ರಾ ಲೋಕೇಶ್ ತೆಲಗಿನ ನರೇಶ್ ರವರ ಜೊತೆ ವಿವಾಹವಾಗಲು ಸಜ್ಜಾಗಿದ್ದಾರೆ.