ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹೆಂಡತಿಯ ಗೆಳತಿಯ ಸೀಮಂತದಲ್ಲಿ ಧ್ರುವ ಸರ್ಜಾ ಕಾಮಿಡಿ…ಕ್ಯೂಟ್ ವಿಡಿಯೋ

31
Join WhatsApp
Google News
Join Telegram
Join Instagram

ಕನ್ನಡ ಚಿತ್ರರಂಗದ(KFI) ಆಕ್ಷನ್ ಪ್ರಿನ್ಸ್ (Action ಧ್ರುವಸರ್ಜಾ (Dhruva Sarja) 2012 ರಲ್ಲಿ ತೆರೆಕಂಡ ಅದ್ಧೂರಿ (Addhuri) ಚಿತ್ರದಲ್ಲಿ ನಟಿಸುವ (Acting) ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು.ಬಳಿಕ 2013 ರಲ್ಲಿ ತೆರೆಕಂಡ ಬಹುದ್ಧೂರ್ (Bahaddur) ಚಿತ್ರದಲ್ಲಿ ಚಿತ್ರರಂಗದ ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ಸು ಕಂಡರು. ಇನ್ನು 2017ರಲ್ಲಿ ತೆರೆಗೆ ಬಂದ ಭರ್ಜರಿ (Bharjari) ಸಿನಿಮಾ ಕೂಡ ಶತದಿನ ಪೂರೈಸಿತು. ಇನ್ನು ಧ್ರುವ ಸರ್ಜಾ ನಟಿಸಿದ ಮೊದಲ ಮೂರು ಚಿತ್ರಗಳು ಮೆಗಾಹಿಟ್ ಆಗಿದ್ದು ವಿಶೇಷ.

ಇನ್ನು ಸ್ಯಾಂಡಲ್ ವುಡ್ (Sandalwood) ಕ್ಯೂಟ್ ಕಪಲ್ಸ್ ಎನಿಸಿಕೊಳ್ಳುವಂತಹ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣ (Prerana) ಇತ್ತೀಚಿಗಷ್ಟೇ ತಮ್ಮ ಸಾಮಾಜಿಕ ಜಾಲತಾಣವಾದ (Social Media) ಇನ್ಸ್ಟಾಗ್ರಾಮ್ನಲ್ಲಿ (Instagram) ಮಗು ಆಗಮಿಸಲಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡು ಬಹಳನೇ ಸಂತೋಷವನ್ನು ವ್ಯಕ್ತಪಡಿಸಿದರು. ಇನ್ನು ಮಗು ಜನಿಸುವ ಮೊದಲಯ ಪ್ರೇರಣ ರವರಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಸಹ ಮಾಡಲಾಗಿತ್ತು. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋವೊಂದು ವೈರಲ್ ಆಗುತ್ತಿದ್ದು ಇಲ್ಲಿ ಧ್ರುವ ದಂಪತಿಗಳು ಸ್ನೇಹಿತೆಯ ಸೀಮಂತಕ್ಕೆ ಆಗಮಿಸಿ ಶುಭ ಹಾರೈಸಿರುವ ಕ್ಷಣ ನೋಡಬಹುದು.

ಇನ್ನು 2018 ಡಿಸೆಂಬರ್ ನಲ್ಲಿ‌ ತನ್ನ ಬಾಲ್ಯದ ಗೆಳತಿ ಪ್ರೇರಣ ಅವರೊಂದಿಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಂತಹ ಧ್ರುವ ಸರ್ಜಾ ತಮ್ಮ ಎಂಗೇಜ್ಮೆಂಟ್ ಉಂಗುರ ದಿಂದಲೇ ಎಲ್ಲರ ಗಮನಸೆಳೆದಿದ್ದರು. ಹೌದು ಬಾಲ್ಯದಿಂದಲೂ ದ್ರುವ ಸರ್ಜಾ ಅವರನ್ನು ಚೆನ್ನಾಗಿ ಅರಿತುಕೊಂಡಿರುವ ಪ್ರೇರಣಾ ಅವರಿಗೆ ದೇವರ ಮೇಲೆ ಇರುವಂತಹ ಅಪಾರ ಭಕ್ತಿಯನ್ನರಿತು ಶಿವ ಪಾರ್ವತಿ ಗಣೇಶ ನಂದಿ ದೇವರುಗಳ ಡಿಸೈನ್ ಜೊತೆಗೆ 24 ಲಕ್ಷದ ವಜ್ರದ ಉಂಗುರವನ್ನು ತೊಡಿಸಿದ್ದರು.

ಸದ್ಯ ನಟ ಧ್ರುವ ಸರ್ಜಾ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಾರಣ ಅವರ ಮನೆಗೆ ಮಹಾಲಕ್ಷ್ಮೀ ಕಾಲಿಟ್ಟಿದ್ದಾಳೆ. ಹೌದು ಧ್ರುವ ಸರ್ಜಾ ಹೆಣ್ಣುಮಗುವಿನ ತಂದೆಯಾಗಿದ್ದು ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ ಅವರು ಬನಶಂಕರಿಯ ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ಸದ್ಯ ಈಗಾಗಲೇ ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ (Chiranjeevi Sarja) ಮೇಘನಾ ರಾಜ್ (Meghana Raj) ಪುತ್ರ ರಾಯನ್ ರಾಜ್ ಸರ್ಜಾ (Rayan Raj Sarja) ಎಂಬ ಪುಟ್ಟ ಕಂದನಿದ್ದಾನೆ. ಈಗ ರಾಯನ್‌ಗೆ ಒಬ್ಬಳು ತಂಗಿ ಸಿಕ್ಕಿದ್ದು ಚಿರು ಸರ್ಜಾ ಅವರ ಅಗಲಿಕೆಯ ನೋವು ಎಂದೂ ಕೂಡ ಮಾಸದ ವಿಚಾರ. ಈಗ ಧ್ರುವ ಸರ್ಜಾರ ಮಗು ಈ ಕುಟುಂಬಕ್ಕೆ ಖುಷಿ ನೀಡಿದೆ.